Headlines

ರಫ಼ಿ ರಿಪ್ಪನ್ ಪೇಟೆ

ನಾನು ಪೋಸ್ಟ್ ಮ್ಯಾನ್ ನ್ಯೂಸ್ ಮಾದ್ಯಮದ ಹಿಂದೆ ಇರುವ ಒಬ್ಬ ಸ್ಥಳೀಯ ಸುದ್ದಿಪ್ರೇಮಿ ಪತ್ರಕರ್ತ. ಕಳೆದ ಐದು ವರ್ಷಗಳಿಂದ ಒಂದು ಕನಸನ್ನು ಜೀವಂತವಾಗಿಟ್ಟಿದ್ದೇನೆ — ನಮ್ಮೂರ ಸುದ್ದಿಗಳು ಲೋಕದವರೆಗೆ ತಲುಪಬೇಕು ಎಂಬದು. ಸ್ಥಳೀಯ ಪತ್ರಿಕೆಗಳಿಂದ ಆರಂಭಿಸಿ, ರಾಜ್ಯಮಟ್ಟದ ನ್ಯೂಸ್ ಚಾನೆಲ್‌ಗಳ ಬೆಂಗಳೂರು ಕಚೇರಿಯವರೆಗೆ ಮಾಧ್ಯಮದ ಎಲ್ಲಾ ಹಂತಗಳಲ್ಲಿ ಕೆಲಸ ಮಾಡಿದ ಅನುಭವ ನನ್ನದಾಗಿದೆ. ಆದರೆ ಅಲ್ಲಿ ಒಂದು ಖಾಲಿ ಅನಿಸಿತು — ನಿಜವಾದ ಸ್ಥಳೀಯ ಧ್ವನಿಗೆ ವೇದಿಕೆ ಇಲ್ಲ. ಅದಕ್ಕೆ ಪರ್ಯಾಯವಾಗಿ ಹುಟ್ಟಿತು “ಪೋಸ್ಟ್ ಮ್ಯಾನ್ ನ್ಯೂಸ್.” ಇಲ್ಲಿ ಸುದ್ದಿ ಅಂದ್ರೆ ಸುದ್ದಿ ಮಾತ್ರ. ಯಾರ ಪರವೂ ಅಲ್ಲ, ಯಾವ ಪಕ್ಷದ ಪರವೂ ಅಲ್ಲ. ನನ್ನ ನಿಲುವು ಸ್ಪಷ್ಟ — ಸುದ್ದಿ ಹೇಳಬೇಕು, ತೀರ್ಪು ಕೊಡಬಾರದು. ಕೆಲವೊಮ್ಮೆ ಓದುಗರ ಪ್ರತಿಕ್ರಿಯೆಗಳು ಬೇರೆ ಬಣ್ಣ ತೊಡುತ್ತವೆ, ಆದರೆ ನನ್ನ ಪ್ರತಿಕ್ರಿಯೆ ಕೆಲಸದ ಮೂಲಕವೇ. ಪೋಸ್ಟ್ ಮ್ಯಾನ್ ನ್ಯೂಸ್ ಇಂದು ಕೇವಲ ಒಂದು ಪೇಜ್ ಅಲ್ಲ, ಅದು ಒಂದು ಚಳವಳಿಯಾಗಿದೆ — ಪೋಸ್ಟ್ ಮ್ಯಾನ್ ನ್ಯೂಸ್‌ನ ಉದ್ದೇಶ ಕೇವಲ ವರದಿ ಮಾಡುವುದು ಅಲ್ಲ; ನಮ್ಮೂರ ಘಟನೆಗಳು, ಪ್ರತಿಭೆಗಳು, ಸಮಸ್ಯೆಗಳು, ಸಾಧನೆಗಳು — ಇವುಗಳನ್ನು ಹೊರಲೋಕಕ್ಕೆ ತಲುಪಿಸುವ ಸೇತುವೆಯಾಗಿರಬೇಕು. ಹಣ ಪಡೆದು ಸುದ್ದಿ ಮಾಡುವ ಅಭ್ಯಾಸವೂ ಇಲ್ಲ, ಹವ್ಯಾಸವೂ ಇಲ್ಲ. ಮುಂದಿನ ಹಂತದಲ್ಲಿ ನಾವು ಔಟ್‌ಸೋರ್ಸ್ ವ್ಯವಸ್ಥೆ ಮೂಲಕ ಸ್ಥಳೀಯ ವರದಿಗಾರರನ್ನು, ಕಥೆಗಾರರನ್ನು ಸೇರಿಸಿಕೊಂಡು ಈ ವೇದಿಕೆಯನ್ನು ಇನ್ನಷ್ಟು ಜೀವಂತಗೊಳಿಸುವ ಉದ್ದೇಶದಲ್ಲಿದ್ದೇವೆ. ನಮ್ಮ ಗುರಿ ಒಂದೇ — ಸಣ್ಣ ಊರುಗಳ ಸತ್ಯ ಕತೆಗಳು ದೊಡ್ಡ ಮಟ್ಟದಲ್ಲಿ ಲೋಕದ ಕಿವಿಗೆ ತಲುಪಬೇಕು. - ರಫ಼ಿ ರಿಪ್ಪನ್ ಪೇಟೆ ಸಂಪಾದಕರು , ಪೋಸ್ಟ್ ಮ್ಯಾನ್ ನ್ಯೂಸ್

ಶಿವಮೊಗ್ಗ : ರೈಲಿಗೆ ಸಿಲುಕಿ ವ್ಯಕ್ತಿ ಆತ್ಮಹತ್ಯೆ, ದೇಹ ಸಂಪೂರ್ಣ ಛಿದ್ರ-ಛಿದ್ರ

ಶಿವಮೊಗ್ಗ : ಪಶುವೈದ್ಯಕೀಯ ಕಾಲೇಜಿನ ಬಳಿ ಯುವಕನೋರ್ವ ರೈಲಿಗೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಂದು ಬೆಳಗಿನ ಜಾವ ನಡೆದಿದೆ. ಕಾಶಿಪುರದ ನಿವಾಸಿ ರಾಕೇಶ್ ರಾವ್ ಎಂಬುವನು ಆತ್ಮಹತ್ಯೆ ಮಾಡಿಕೊಂಡಿದ್ದು ಆತನ ಮೃತ ದೇಹ ರೈಲ್ವೆ ಹಳಿಯ ಮೇಲೆ ಛಿದ್ರ- ಛಿದ್ರವಾಗಿ ಬಿದ್ದಿದೆ. ಹೆಂಡತಿ ಜೊತೆಗಿರಲಿಲ್ಲ ಹಾಗೂ ಮಾನಸಿಕ ಅಸ್ವಸ್ಥತೆಯ ಅಕ್ಕನನ್ನು ಹೊಂದಿದ್ದ ರಾಕೇಶ್ ರಾವ್ ಬೇಸತ್ತು ಈ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ತಿಳಿದು ಬಂದಿದೆ. ನಿನ್ನೆ ರಾತ್ರಿಯೇ ಮನೆಬಿಟ್ಟು ಹೋಗಿದ್ದ ರಾಕೇಶ್ ಇಂದು ಹೆಣವಾಗಿ ಪತ್ತೆಯಾಗಿದ್ದಾನೆ. ಇಂದು…

Read More

ಶಿಕಾರಿಪುರದಲ್ಲಿ ವಿಶ್ವಕರ್ಮ ಸಮುದಾಯ ಭವನ ಉಧ್ಘಾಟಿಸಿದ ಬಿ ಎಸ್ ಯಡಿಯೂರಪ್ಪ

ಶಿಕಾರಿಪುರದ : ನಗರದ ವಿನಾಯಕ ನಗರದಲ್ಲಿ ವಿಶ್ವಕರ್ಮ ಸಮುದಾಯ ಭವನವನ್ನು ನಿಕಟ ಪೂರ್ವ ಮುಖ್ಯಮಂತ್ರಿಗಳಾದ ಬಿ. ಎಸ್ ಯಡಿಯೂರಪ್ಪನವರು ಮತ್ತು ಸಂಸದರಾದ ಬಿ. ವೈ ರಾಘವೇಂದ್ರ ಅವರು ಲೋಕಾರ್ಪಣೆಗೊಳಿಸಿದರು. ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಬಿ ಎಸ್ ಯಡಿಯೂರಪ್ಪ 50 ಲಕ್ಷ ವೆಚ್ಚದಲ್ಲಿ ನಿರ್ಮಾಣ ವಾಗಿರುವ ವಿಶ್ವಕರ್ಮ ಸಮುದಾಯ ಭವನ ನಿರ್ಮಾಣಗಿದೆ. ಈ ಪುಣ್ಯ ಸಮಯ ನವರಾತ್ರಿ ಸಮಯದಲ್ಲಿ ನಮ್ಮ ಕೆಟ್ಟ ಗುಣವನ್ನು ದೂರಮಾಡಿ ಸಮಾಜಕ್ಕೆ ಪೂರಕವಾದ ಕೆಲಸವನ್ನು ಮಾಡೋಣ. ಹಿಂದು ಧರ್ಮಕ್ಕೆ ಅಪಾರ ಕೊಡುಗೆಯನ್ನು ವಿಶ್ವಕರ್ಮ…

Read More

ಸಾಗರ : ಸಿಗಂದೂರಿನಲ್ಲಿ ಶರನ್ನವರಾತ್ರಿ : ಅವಧೂತ ವಿನಯ್ ಗುರೂಜಿಯಿಂದ ಆಶಿರ್ವಚನ

ಸಾಗರ: ತಾಲ್ಲೂಕಿನ ಶ್ರೀ ಕ್ಷೇತ್ರ ಸಿಗಂದೂರು ದೇವಸ್ಥಾನದಲ್ಲಿ ಅಕ್ಟೋಬರ್ 07 ರಿಂದ 15ರ ವರೆಗೆ ನವರಾತ್ರಿ ಉತ್ಸವ ನಡೆಯಲಿದೆ ಎಂದು ಶ್ರೀ ಕ್ಷೇತ್ರದ ಧರ್ಮಾಧಿಕಾರಿ ಡಾ.ಎಸ್ ರಾಮಪ್ಪನವರು ತಿಳಿಸಿದರು. ನವರಾತ್ರಿ ಉತ್ಸವದ ಹಿನ್ನೆಲೆಯಲ್ಲಿ ಶ್ರೀ ಕ್ಷೇತ್ರಕ್ಕೆ ಅಕ್ಟೋಬರ್ 07ರಂದು ಗೌರಿಗದ್ದೆಯ ಅರಿವಿನ ಗುರು ಅವದೂತ ಶ್ರೀ ವಿನಯ್ ಗುರೂಜಿ ಆಗಮಿಸಲಿದ್ದು ಅಂಧಕಾರದಿಂದ ಬೆಳಕಿನೆಡೆಗೆ ಎಂಬ ವಿಶೇಷ ಆಶೀರ್ವಚನ ನೀಡಲಿದ್ದಾರೆ. ನವರಾತ್ರಿ ಉತ್ಸವದ ಅಂಗವಾಗಿ ಶ್ರೀ ದೇವಿಗೆ ವಿಶೇಷ ಪೂಜೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ನವರಾತ್ರಿ ಹಿನ್ನೆಲೆಯಲ್ಲಿ…

Read More

ಶಿವಮೊಗ್ಗ : ನಾಪತ್ತೆಯಾಗಿದ್ದ ಜಿಲ್ಲಾಧಿಕಾರಿ ಕಛೇರಿಯ ನೌಕರ ಗಿರಿರಾಜ್ ಧರ್ಮಸ್ಥಳದಲ್ಲಿ ಪತ್ತೆ :

ಶಿವಮೊಗ್ಗ : ಕಳೆದ 11 ದಿನಗಳಿಂದ ಜಿಲ್ಲಾಧಿಕಾರಿ ಕಚೇರಿಯಿಂದ  ಐಎಎಸ್ ಅಧಿಕಾರಿ ವಿರುದ್ಧ ಆರೋಪಿಸಿ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆಂದು ಡೆತ್ ನೋಟ್ ವಾಟ್ಸಪ್ ಮೆಸೇಜ್ ಮಾಡಿದ್ದ ಜಿಲ್ಲಾಧಿಕಾರಿ ಕಚೇರಿ ನೌಕರ ಗಿರಿರಾಜ್ ಧರ್ಮಸ್ಥಳದಲ್ಲಿ ಪತ್ತೆಯಾಗಿದ್ದಾರೆ. ಧರ್ಮಸ್ಥಳದ ಕಟ್ಟೆಯೊಂದರ ಮೇಲೆ ಸುಸ್ತಾಗಿ ಮಲಗಿದ್ದ ಗಿರಿರಾಜ್ ರವರನ್ನ ಆಡಳಿತ ಮಂಡಳಿಯೋರ್ವರು ಗುರುತು ಹಿಡಿದು ಮೊಬೈಲ್ ಆನ್ ಮಾಡಿದಂತೆ ಮೊಬೈಲ್ ಟ್ರೇಸ್ ಔಟ್ ಆಗಿದೆ ಎನ್ನಲಾಗಿದೆ. ಅವರನ್ನ ಉಪಚರಿಸಿ ಧರ್ಮಸ್ಥಳದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದರಿಂದ ಗಿರಿರಾಜ್ ಮಿಸ್ಸಿಂಗ್ ಕೇಸ್ ಜೀವಂತವಾಗಿ ಸಿಗುವ…

Read More

ದೇವರ ಮೊರೆಹೋದ ಶರಾವತಿ ಸಂತ್ರಸ್ಥರು : ಕಲ್ಲುಕೊಪ್ಪ ದಿಂದ ಧರ್ಮಸ್ಥಳದ ವರೆಗೆ ಪಾದಯಾತ್ರೆ !

ತೀರ್ಥಹಳ್ಳಿ : ತಾಲೂಕಿನಾದ್ಯಂತ ಇತ್ತೀಚಿಗೆ ಅತೀ ಹೆಚ್ಚು ಸುದ್ದಿ ಮಾಡಿದ್ದೂ ಎಂದರೆ ಅದು ಶರಾವತಿ ಸಂತ್ರಸ್ತರ ಹೋರಾಟ. ಹೌದು ಈಗಾಗಲೇ ತಾಲೂಕಿನ ಹಣಗೇರೆ ಕಟ್ಟೆ ಸಮೀಪ ಕಲ್ಲುಕೊಪ್ಪದಿಂದ ತೀರ್ಥಹಳ್ಳಿಯವರೆಗೆ ಪಾದಯಾತ್ರೆ ಮಾಡಿ ರಾಜ್ಯಾದ್ಯಂತ ಸುದ್ದಿ ಮಾಡಿದ್ದ ಶರಾವತಿ ಮುಳುಗಡೆ ಸಂತ್ರಸ್ತರು ಈಗ ದೇವರ ಮೊರೆ ಹೋಗಿದ್ದಾರೆ.   ಕಲ್ಲುಕೊಪ್ಪದಿಂದ ಸುಮಾರು 21 ಜನ  ಧರ್ಮಸ್ಥಳಕ್ಕೆ ಕಾಲ್ನಡಿಗೆ ಮೂಲಕ ಪಾದಯಾತ್ರೆ ಸಂಚರಿಸಲಿದ್ದಾರೆ. ಬರಿ ಕಾಲಿನಲ್ಲಿ ಅಂದಾಜು 200 ಕಿ ಮೀ ನೆಡೆದು ಧರ್ಮಸ್ಥಳದ  ಮಂಜುನಾಥನಿಗೆ ಪ್ರಾರ್ಥನೆ ಸಲ್ಲಿಸಲಿದ್ದಾರೆ.  ಸಂಕ್ಲಾಪುರ ಮತ್ತು…

Read More

ರಿಪ್ಪನ್ ಪೇಟೆ : ಜಿಂಕೆಯ ಅಕ್ರಮ ಬೇಟೆ, ಮಾಲು ಸಹಿತ ಆರೋಪಿಗಳ ಬಂಧನ

ರಿಪ್ಪನ್ ಪೇಟೆ: ಸಮೀಪದ ಆಲುವಳ್ಳಿ ಗ್ರಾಮದ ಮನ್ನಾ ಜಂಗಲಿ ಎಂಬಲ್ಲಿ ಬುಧವಾರ ಸಂಜೆ ಬೇಟೆಗಾರರು ಅಕ್ರಮವಾಗಿ ಜಿಂಕೆಯನ್ನು ಹತ್ಯೆ ಮಾಡಿರುವ ಘಟನೆ ನಡೆದಿದೆ. ಸಂಜೆ 4 ಗಂಟೆಯ ಸಮಯದಲ್ಲಿ ಆಲುವಳ್ಳಿ ಗ್ರಾಮದ ಮನ್ನಾಜಂಗಲಿ ಯ ಜೋಡು ಕೆರೆಯ ಆಸುಪಾಸಿನಲ್ಲಿ ಸ್ವಚ್ಛಂದವಾಗಿ ವಿಹರಿಸುತ್ತಿದ್ದ ಗಂಡು ಜಿಂಕೆಯನ್ನು ಮೂರು ಜನ ಮಾಂಸ ಭಕ್ಷಣೆಯ ಉದ್ದೇಶಕ್ಕಾಗಿ ಹತ್ಯೆ ಮಾಡಲಾಗಿದೆ. ಖಚಿತ ಮಾಹಿತಿ ಅರಿತ ಅರಣ್ಯ ಇಲಾಖೆಯ ಅಧಿಕಾರಿಗಳು ಎಸಿಎಫ್ ಮಾರ್ಗದರ್ಶನದಂತೆ ದಾಳಿ ನಡೆಸಿ ಜಿಂಕೆಯ ಕಳೆಬರ ಸಹಿತ ಹತ್ಯೆಯಲ್ಲಿ ಭಾಗಿಯಾದ ಸಾಗರ…

Read More

ಕುಂಸಿ : ಅಕ್ರಮವಾಗಿ ಕಸಾಯಿಖಾನೆಗೆ ಸಾಗಿಸುತ್ತಿದ್ದ ಜಾನುವಾರುಗಳ ರಕ್ಷಣೆ

ಕುಂಸಿ : ಪಟ್ಟಣದ ಇಂದಿರಾ ಕಾಲೋನಿ ಮೊದಲ ಕ್ರಾಸ್ ಬಳಿ ಅಕ್ರಮವಾಗಿ ಎರಡು ಎತ್ತುಗಳು ಒಂದು ಆಕಳು ಮತ್ತು 3 ಕೋಣಗಳನ್ನು ಶಿವಮೊಗ್ಗದ ಕಸಾಯಿಖಾನೆಗೆ ಸಾಗಿಸುವಾಗ ಪೊಲೀಸರು ತಡೆದು ಮೂಕ ಪ್ರಾಣಿಗಳನ್ನು ರಕ್ಷಿಸಿದ್ದಾರೆ. ಸಾಗರ ರಸ್ತೆಯಲ್ಲಿ ಜಾನುವಾರುಗಳನ್ನು  KA 14 B 0941 ಅಶೋಕ್ ಲೇಲ್ಯಾಂಡ್ ದೋಸ್ತ್ ವಾಹನದಲ್ಲಿ ತುಂಬಿಸಿಕೊಂಡು ಶಿವಮೊಗ್ಗದ ಕಡೆ ಹೋಗುವಾಗ ಗಸ್ತಿನಲ್ಲಿರುವ ಪೊಲೀಸರು ತಡೆದು ವಿಚಾರಿಸಲು ಹೋದಾಗ ಪೊಲೀಸರನ್ನು ಕಂಡು ವಾಹನದ ಚಾಲಕ ಕುಂಸಿಯ ಇಂದಿರಾ ಕಾಲೋನಿಯ ಮೊದಲ ಕ್ರಾಸ್ ಕಡೆ ತಿರುಗಿಸಿದ್ದಾನೆ.ಚಾಲಕನ…

Read More

ತೀರ್ಥಹಳ್ಳಿ : ಕಾಲು ಜಾರಿ ನದಿಗೆ ಬಿದ್ದು ಮಹಿಳೆ ಸಾವು !

ತೀರ್ಥಹಳ್ಳಿ :  ನದಿಯನ್ನು ದಾಟುವಾಗ ಆಯತಪ್ಪಿ ಕಾಲು ಜಾರಿ ಬಿದ್ದು ಮಹಿಳೆಯೊಬ್ಬರು ಸಾವನ್ನಪಿದ ಘಟನೆ ತಾಲೂಕಿನ ನೆರಟೂರು ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ನೆಡೆದಿದೆ.  ಮೃತಪಟ್ಟ ಮಹಿಳೆಯನ್ನು ಜಸೋಪ್ರಿನ್ ಮಚಾದೋ (36) ಎಂದು ಗುರುತಿಸಲಾಗಿದೆ. ಮಗನೊಂದಿಗೆ ಅಂಗಡಿಗೆ ಹೋಗಿ ವಾಪಸಾಗುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದ್ದು ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  ವರದಿ : ಪ್ರಶಾಂತ್ ಮೇಗರವಳ್ಳಿ

Read More

ಕುಮಾರಸ್ವಾಮಿ ನಾಲ್ಕು ದಿನ ಆರ್​​ಎಸ್​​​ಎಸ್​​ ಶಾಖೆಗೆ ಬಂದು ಆಮೇಲೆ ಟೀಕಿಸಲಿ: ನಳಿನ್ ಕುಮಾರ್ ಕಟೀಲ್

ಶಿವಮೊಗ್ಗ: ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಶಾಖೆಗೆ ಒಂದು ವಾರ ಬರುವಂತೆ ಬಿಜೆಪಿಯ ರಾಜ್ಯಾಧ್ಯಕ್ಷ ನಳಿನ್ ಕುಮಾರ್​ ಕಟೀಲ್ ಆಹ್ವಾನಿಸಿದ್ದಾರೆ. ನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಯಾವುದೇ ಸಂಘ- ಸಂಸ್ಥೆಯನ್ನು ಟೀಕೆ ಮಾಡುವ ಮುನ್ನ ಮೊದಲು ಅದರ ಬಗ್ಗೆ ತಿಳಿದುಕೊಳ್ಳಬೇಕು ಎಂದರು. ಕುಮಾರಸ್ವಾಮಿ ನಾಲ್ಕು ದಿನ ಶಾಖೆಗೆ ಬರಲಿ, ಆಮೇಲೆ ಸಂಘದ ಬಗ್ಗೆ ಟೀಕೆ ಮಾಡಲಿ. ಅವರು ಅಧಿಕಾರದಲ್ಲಿದ್ದಾಗ ಅವರ ಕುಟುಂಬದವರಿಗೆ ಸಹಾಯ ಮಾಡಿಕೊಂಡು ಬಂದವರು. ಅವರಿಗೆ ರಾಷ್ಟ್ರಭಕ್ತಿ, ದೇಶದ ಪರಿಕಲ್ಪನೆ, ಚಿಂತನೆಗಳಿಲ್ಲ. ಪಾರ್ಟಿಯನ್ನೇ…

Read More

ತೀರ್ಥಹಳ್ಳಿ : ಅಕ್ರಮ ಮಧ್ಯ ಮಾರಾಟ ಪ್ರಶ್ನಿಸಿದ್ದ ಗ್ರಾಪಂ ಪಿಡಿಓ ಮೇಲೆ ಹಲ್ಲೆ : ಆರೋಪಿ ವಶಕ್ಕೆ

ತೀರ್ಥಹಳ್ಳಿ: ತಾಲೂಕಿನ ಮೇಳಿಗೆ ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದ ಕೆಳಕೆರೆ ನಾಗೇಶ್ ಎನ್ನುವ ವ್ಯಕ್ತಿಗೆ ಮದ್ಯ ಮಾರಾಟ ಮಾಡಬೇಡಿ ಎಂದಿದ್ದಕ್ಕೆ ಅಲ್ಲಿನ ಪಿಡಿಓ ಮೇಲೆ ಹಲ್ಲೆ ನೆಡೆಸಿದ್ದ ಕೆಳಕೆರೆ ನಾಗೇಶ್ ನನ್ನು ತೀರ್ಥಹಳ್ಳಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮೇಳಿಗೆ ಗ್ರಾಮಪಂಚಾಯಿತಿ ವ್ಯಾಪ್ತಿಯ ಕೆಳಕೆರೆ ಗ್ರಾಮದಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ನಾಗೇಶ್ ಗೆ ಮಹಿಳಾ ಪಿಡಿಓ ಅದರ ಬಗ್ಗೆ ಪ್ರಶ್ನಿಸಿದ್ದಾರೆ.  ಇದಕ್ಕೆ ನಾಗೇಶ್ ಪಿಡಿಓ ಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಅವರ ಮೇಲೆ ಹಲ್ಲೆ…

Read More
Exit mobile version