ಕೆಸರು ರಸ್ತೆ ಇಲ್ಲದ ಸೊರಬ ತಾಲ್ಲೂಕು ಮಾಡುವುದು ನನ್ನ ಗುರಿ:ಕುಮಾರ್ ಬಂಗಾರಪ್ಪ
ಸೊರಬ: ಇಂದು ಮಾನ್ಯ ಶಾಸಕರು ಮತ್ತು ವಿಧಾನಮಂಡಲದ ಅಧೀನ ಶಾಸನ ರಚನಾ ಸಮಿತಿ ಅಧ್ಯಕ್ಷರಾದ ಶ್ರೀ ಎಸ್ ಕುಮಾರ್ ಬಂಗಾರಪ್ಪ ರವರು ಚಂದ್ರಗುತ್ತಿ ಜಿಲ್ಲಾ ಪಂಚಾಯತಿ ವ್ಯಾಪ್ತಿಯಲ್ಲಿ ಅನೇಕ ಅಭಿವೃದ್ಧಿ ಕಾಮಗಾರಿಯ ಉದ್ಘಾಟನೆ ಹಾಗೂ ಗುದ್ದಲಿ ಪೂಜೆ ನೆರವೇರಿಸಿದರು. ದ್ಯಾವಾಸ ಗ್ರಾಮದಲ್ಲಿನ ಸಮುದಾಯ ಭವನದ ಗುದ್ದಲಿ ಪೂಜೆ ಅಂದಾಜು ಮೊತ್ತ 15 ಲಕ್ಷ ರುಪಾಯಿಗಳು, ತೆಲಗುಂದ್ಲಿ ಗ್ರಾಮದ ಊರೊಳಗಿನ ರಸ್ತೆ ಅಭಿವ್ರುದ್ಧಿ ಕಾಮಗಾರಿಯ ಉದ್ಘಾಟನೆ ಅಂದಾಜು ಮೊತ್ತ 100 ಲಕ್ಷ ರುಪಾಯಿಗಳು, ಹಾಗೂ ಕ್ರಿಯಾತ್ಮಕ ನಲ್ಲಿ ಸಂಪರ್ಕ…


