Headlines

ಕಮಲಾಕರ ಭಟ್ಟನಿಗೆ ಹೊಸ ಸಂಕಷ್ಟ: ಅಪ್ರಾಪ್ತ ಬಾಲಕಿಯ ಮೇಲೆ ದೌರ್ಜನ್ಯ ಆರೋಪ | ಪೋಕ್ಸೋ ಪ್ರಕರಣ ದಾಖಲು

Astrologer Kamalakar Bhatt, already jailed in the Vasanth Naik murder case, has now been booked under the POCSO Act in Shivamogga for alleged sexual assault on a minor, deepening his legal troubles.

ಕಮಲಾಕರ ಭಟ್ಟನಿಗೆ ಹೊಸ ಸಂಕಷ್ಟ: ಅಪ್ರಾಪ್ತ ಬಾಲಕಿಯ ಮೇಲೆ ದೌರ್ಜನ್ಯ ಆರೋಪ | ಪೋಕ್ಸೋ ಪ್ರಕರಣ ದಾಖಲು

ಶಿವಮೊಗ್ಗ: ಸಿದ್ದಾಪುರ ತಾಲೂಕು ಅವರಗುಪ್ಪಾದ ವಸಂತ್ ನಾಯ್ಕ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ಜ್ಯೋತಿಷಿ ಕಮಲಾಕರ ಭಟ್ಟನ ವಿರುದ್ಧ ಇದೀಗ ಮತ್ತೊಂದು ಗಂಭೀರ ಪ್ರಕರಣ ದಾಖಲಾಗಿದೆ. ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಹಿನ್ನೆಲೆಯಲ್ಲಿ ಶಿವಮೊಗ್ಗದ ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪೊಕ್ಸೊ ಕಾಯ್ದೆಯಡಿ ದೂರು ದಾಖಲಿಸಲಾಗಿದೆ.

ಈಗಾಗಲೇ ವಸಂತ್ ನಾಯ್ಕ ಕೊಲೆ ಪ್ರಕರಣದಲ್ಲಿ ಕಮಲಾಕರ ಭಟ್ಟನ ಸಹವರ್ತಿ ಸುಚಿತ್ರಾ ಸೇರಿದಂತೆ ಐವರು ಜೈಲು ವಾಸದಲ್ಲಿದ್ದಾರೆ. ಇಂತಹ ಸಂದರ್ಭದಲ್ಲಿ ಕಮಲಾಕರ ಭಟ್ಟನ ವಿರುದ್ಧ ಮತ್ತೊಂದು ಕೇಸು ದಾಖಲಾಗಿರುವುದರಿಂದ, ಅವರ ಜೈಲಿನಿಂದ ಹೊರಬರುವ ಸಾಧ್ಯತೆ ಇನ್ನಷ್ಟು ದೂರವಾಗುವಂತೆ ಕಾಣುತ್ತಿದೆ.

ಪೊಲೀಸ್ ಮೂಲಗಳ ಪ್ರಕಾರ, ಅಪ್ರಾಪ್ತ ವಯಸ್ಸಿನ ಬಾಲಕಿಯ ಮೈಕೈ ಮುಟ್ಟಿ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪದ ಮೇಲೆ ಈ ದೂರು ದಾಖಲಾಗಿದೆ. ಇತ್ತ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಕೆಲ ದಿನಗಳಿಂದ ಪೊಲೀಸ್ ಕಸ್ಟಡಿಯಲ್ಲಿ ಇದ್ದ ಕಮಲಾಕರ ಭಟ್ಟನನ್ನು ಪೊಲೀಸರು ತೀವ್ರವಾಗಿ ವಿಚಾರಣೆ ನಡೆಸಿದ್ದರು. ವಿಚಾರಣೆ ವೇಳೆ, ಕೊಲೆ ನಡೆದ ಸಮಯದಲ್ಲಿ ತಾನು ಸ್ಥಳದಲ್ಲಿರಲಿಲ್ಲ ಎಂದು ಹೇಳಿದ್ದ ಭಟ್ಟ, ತನ್ನ ಮೊಬೈಲ್ ಲೊಕೇಶನ್ ಪರಿಶೀಲಿಸುವಂತೆ ಪೊಲೀಸರಿಗೆ ಸವಾಲು ಹಾಕಿದ್ದರು.

ಪೊಲೀಸರು ಮೊಬೈಲ್ ಲೊಕೇಶನ್ ಪರಿಶೀಲಿಸಿದಾಗ, ಕೊಲೆ ನಡೆದ ಸಮಯದಲ್ಲಿ ಅವರು ಅವರಗುಪ್ಪದಲ್ಲಿ ಇರಲಿಲ್ಲ ಎಂಬುದು ಬೆಳಕಿಗೆ ಬಂದಿದ್ದು, ಅವರು ಸಿದ್ದಾಪುರ ತಾಲೂಕು ಪ್ರದೇಶದಲ್ಲಿದ್ದರು ಎನ್ನಲಾಗಿದೆ. ಇದರಿಂದ ಕೊಲೆ ಪ್ರಕರಣದಲ್ಲಿ ಜಾಮೀನು ಅಥವಾ ಬಿಡುಗಡೆಗೆ ನಿರೀಕ್ಷೆಯಲ್ಲಿದ್ದ ಕಮಲಾಕರ ಭಟ್ಟನಿಗೆ, ಇದೀಗ ದಾಖಲಾಗಿರುವ ಪೊಕ್ಸೊ ಕೇಸು ಮತ್ತಷ್ಟು ಸಂಕಷ್ಟ ತಂದೊಡ್ಡಿದೆ.

About The Author

Exit mobile version