January 11, 2026

ಮೆಗ್ಗಾನ್ ಆಸ್ಪತ್ರೆ ಐಸಿಯು ಮಕ್ಕಳ ವಿಭಾಗದಲ್ಲಿ ಬೆಂಕಿ ಅವಘಡ : ತಪ್ಪಿದ ಭಾರಿ ಅನಾಹುತ

ಶಿವಮೊಗ್ಗ : ಶಾರ್ಟ್ ಸರ್ಕ್ಯೂಟ್ ನಿಂದ ಶಿವಮೊಗ್ಗ ಸರ್ಕಾರಿ ಮೆಗ್ಗಾನ್ ಆಸ್ಪತ್ರೆ ಮಕ್ಕಳ ವಿಭಾಗದ ಐಸಿಯುನಲ್ಲಿ ಬೆಂಕಿ ಹತ್ತಿಕೊಂಡ ಘಟನೆ ನಡೆದಿದೆ.
ನವಜಾತ ಶಿಶುಗಳ ವಾರ್ಡ ನ ಐಸಿಯು ವಿಭಾಗದಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡಿದೆ. ತಕ್ಷಣ ಅಲ್ಲಿದ್ದ ರೋಗಿಗಳನ್ನು ಪಕ್ಕದ ಕಟ್ಟಡಕ್ಕೆ ಸ್ಥಳಾಂತರಿಸಲಾಗಿದೆ. ಸದ್ಯ ಯಾವುದೇ ಪ್ರಾಣಾಪಾಯವಾಗಿಲ್ಲ.ಐಸಿಯು ನಲ್ಲಿ ಮೂರು ಜನ ಹಾಗೂ ಜನರಲ್ ವಾರ್ಡಿನಲ್ಲಿ 10 ರಿಂದ 15 ಜನ ಇದ್ದರು ಎಂದು ಹೇಳಲಾಗುತ್ತಿದೆ.

ಬೆಂಕಿ ಅವಘಡದಲ್ಲಿ ರೋಗಿಗಳಿಗೆ ತಪಾಸಣೆ ಮಾಡುವ ಹಾಗೂ ಚಿಕಿತ್ಸೆ ನೀಡುತ್ತಿದ್ದ ಸಲಕರಣೆಗಳು ಸುಟ್ಟು ಕರಕಲಾಗಿದೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿಗಳು ಬೆಂಕಿ ನಂದಿಸಿದರು ಪೊಲೀಸರು ಭೇಟಿ ನೀಡಿ
ಪರಿಶೀಲನೆ ನಡೆಸಿದರು ಈ ಹಿಂದೆಯೂ ಸಹ ಮೆಗ್ಗಾನ್
ಆಸ್ಪತ್ರೆಯಲ್ಲಿ ಇದೆ ರೀತಿಯಾದ ಅವಘಡ ಸಂಭವಿಸಿತ್ತು.

About The Author

Leave a Reply

Your email address will not be published. Required fields are marked *

Exit mobile version