Headlines

ಹಾಲಿನ ಬಾಟಲ್ ಇಟ್ಟು, ನವಜಾತ ಶಿಶುವನ್ನು ಚೀಲದಲ್ಲಿ ಬಸ್ ನಿಲ್ದಾಣದಲ್ಲಿ ಬಿಟ್ಟ ಹೆತ್ತವರು: ರಿಪ್ಪನ್‌ಪೇಟೆಯಲ್ಲಿ ಕರುಳು ಹಿಂಡುವ ಘಟನೆ

ಹಾಲಿನ ಬಾಟಲ್ ಇಟ್ಟು, ನವಜಾತ ಶಿಶುವನ್ನು ಚೀಲದಲ್ಲಿ ಬಸ್ ನಿಲ್ದಾಣದಲ್ಲಿ ಬಿಟ್ಟ ಹೆತ್ತವರು: ರಿಪ್ಪನ್‌ಪೇಟೆಯಲ್ಲಿ ಕರುಳು ಹಿಂಡುವ ಘಟನೆ

ಅನಾಥವಾಗಿದ್ದ ನವಜಾತ ಶಿಶುವಿನ ರಕ್ಷಣೆ ಮಾಡಿದ ರಿಪ್ಪನ್ ಪೇಟೆ ಪೊಲೀಸರು

A 10–15-day-old newborn baby girl was found abandoned in a bag with a milk bottle at a bus stop near Gavaturu Hole, Ripponpet. Police rescued the infant and shifted her to Meggan Hospital in Shivamogga for further care.

​ರಿಪ್ಪನ್‌ಪೇಟೆ: ನವಜಾತ ಹೆಣ್ಣು ಶಿಶುವೊಂದನ್ನು ಬಸ್ ನಿಲ್ದಾಣದಲ್ಲಿ ಅನಾಥವಾಗಿ ಬಿಟ್ಟು ಹೋದ ಘಟನೆ ಸಮೀಪದ ಗವಟೂರು ಹೊಳೆ ಬಳಿ ನಡೆದಿದೆ.

​ಸುಮಾರು 10 ರಿಂದ 15 ದಿನಗಳ ಪ್ರಾಯದ ಈ ಹೆಣ್ಣು ಮಗುವನ್ನು ಕೈಚೀಲವೊಂದರಲ್ಲಿ ಬಟ್ಟೆಯಲ್ಲಿ ಸುತ್ತಿ, ಜೊತೆಗೆ ಒಂದು ಹಾಲಿನ ಬಾಟಲ್ ಇಟ್ಟು ಅಪರಿಚಿತರು ಗವಟೂರು ಹೊಳೆ ಸಮೀಪದ ನಿರ್ಜನ ಪ್ರದೇಶದಲ್ಲಿರುವ ಬಸ್ ನಿಲ್ದಾಣದಲ್ಲಿ ಬಿಟ್ಟು ಹೋಗಿದ್ದಾರೆ.

ರಾತ್ರಿ 9 ಗಂಟೆಯ ಸಮಯದಲ್ಲಿ ಬಸ್ ನಿಲ್ದಾಣದ ಹಿಂಭಾಗದ ನಿವಾಸಿಯೊಬ್ಬರಿಗೆ ಮಗುವಿನ ಅಳುವಿನ ಶಬ್ದ ಕೇಳಿಸಿದ್ದು, ಪರಿಶೀಲಿಸಿದಾಗ ಈ ಘಟನೆ ಬೆಳಕಿಗೆ ಬಂದಿದೆ. ತಕ್ಷಣವೇ ಅವರು ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

​ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ರಿಪ್ಪನ್‌ಪೇಟೆ ಠಾಣೆಯ ಪಿಎಸ್‌ಐ ರಾಜುರೆಡ್ಡಿ ಹಾಗೂ ಸಿಬ್ಬಂದಿ, ಮಗುವನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. 1.6 ಕೆ.ಜಿ ತೂಕವಿರುವ ಮಗು ಸದ್ಯ ಆರೋಗ್ಯವಾಗಿದೆ ಎಂದು ತಿಳಿದುಬಂದಿದೆ. ರಿಪ್ಪನ್‌ಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ಮಗುವಿಗೆ ಪ್ರಾಥಮಿಕ ಆರೈಕೆ ನೀಡಿ, ಹೆಚ್ಚಿನ ಚಿಕಿತ್ಸೆ ಹಾಗೂ ಪಾಲನೆಗಾಗಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಕಳುಹಿಸಿಕೊಡಲಾಗಿದೆ.

​ಮಗುವನ್ನು ಯಾರು ಮತ್ತು ಯಾವ ಕಾರಣಕ್ಕಾಗಿ ಇಲ್ಲಿ ಬಿಟ್ಟು ಹೋಗಿದ್ದಾರೆ ಎಂಬುದು ಇನ್ನೂ ತಿಳಿದುಬಂದಿಲ್ಲ. ಈ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ. Mp

About The Author

Exit mobile version