Categories: crime news

ಆನಂದಪುರ ಪೊಲೀಸರ ಭರ್ಜರಿ ಕಾರ್ಯಾಚರಣೆ: ಟಯರ್ ಕದಿಯುತಿದ್ದ ಕಳ್ಳನ ಬಂಧನ, ಸಾವಿರಾರು ರೂ ಮೌಲ್ಯದ ಮಾಲು ಜಪ್ತಿ

ಆನಂದಪುರ ಪೊಲೀಸರ ಭರ್ಜರಿ ಕಾರ್ಯಾಚರಣೆ: ಟೈರ್ ಹಾಗೂ ರಿಮ್ ಕದ್ದ ಖದೀಮನ ಬಂಧನ, ಸಾವಿರಾರು ರೂ ಮೌಲ್ಯದ ಮಾಲು ಜಪ್ತಿ

Anandapura Police in Shivamogga district solved a Tata Intra stepney tyre theft case, arrested one accused, and recovered three stolen tyres and rims worth Rs. 45,000.

ಸಾಗರ ಗ್ರಾಮಾಂತರ ವೃತ್ತದ ಆನಂದಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಟಾಟಾ ಇಂಟ್ರಾ ವಾಹನಗಳ ಸ್ಟೆಪ್ನಿ ಟೈರ್ ಹಾಗೂ ರಿಮ್ ಕಳವು ಪ್ರಕರಣವನ್ನು ಪೊಲೀಸರು ಯಶಸ್ವಿಯಾಗಿ ಭೇದಿಸಿದ್ದಾರೆ. ಠಾಣಾಧಿಕಾರಿ ಪಿಎಸ್‌ಐ ಪ್ರವೀಣ್ ಎಸ್.ಪಿ. ಅವರ ನೇತೃತ್ವದ ತಂಡ ಭರ್ಜರಿ ಕಾರ್ಯಾಚರಣೆ ನಡೆಸಿ ಓರ್ವ ಆರೋಪಿಯನ್ನು ಬಂಧಿಸುವ ಮೂಲಕ ಕಳುವಾದ ವಸ್ತುಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

ಘಟನೆಯ ಹಿನ್ನೆಲೆ:

ಕಳೆದ ಫೆಬ್ರವರಿ 6ರಂದು ರಾತ್ರಿ ಆಚಾಪುರ ಗ್ರಾಮದ ಶಿವ ಶ್ರೇಯ ಎಂಟರ್‌ಪ್ರೈಸಸ್ ಮಳಿಗೆಯ ಮುಂಭಾಗ ನಿಲ್ಲಿಸಲಾಗಿದ್ದ ಮೂರು ಟಾಟಾ ಇಂಟ್ರಾ ವಾಹನಗಳಿಂದ ಖದೀಮರು ಸ್ಟೆಪ್ನಿ ಟೈರ್ ಹಾಗೂ ರಿಮ್‌ಗಳನ್ನು ಕಳವು ಮಾಡಿದ್ದರು. ಕಳುವಾದ ವಸ್ತುಗಳ ಒಟ್ಟು ಮೌಲ್ಯ 45 ಸಾವಿರ ರೂಪಾಯಿ ಎಂದು ಅಂದಾಜಿಸಲಾಗಿತ್ತು. ಈ ಕುರಿತು ಆನಂದಪುರ ಪೊಲೀಸ್ ಠಾಣೆಯಲ್ಲಿ ಬಿ.ಎನ್.ಎಸ್. ಕಲಂ 303(2) ಅನ್ವಯ ಪ್ರಕರಣ ದಾಖಲಾಗಿತ್ತು.

ತನಿಖೆ ಮತ್ತು ಬಂಧನ:

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾ ಮೇಲಾಧಿಕಾರಿಗಳ ಮಾರ್ಗದರ್ಶನದಲ್ಲಿ, ಠಾಣಾಧಿಕಾರಿ ಪಿಎಸ್‌ಐ ಪ್ರವೀಣ್ ಎಸ್.ಪಿ. ಅವರು ಹೆಡ್ ಕಾನ್ಸ್‌ಟೇಬಲ್ ಪ್ರಶಾಂತ್ ಹಾಗೂ ಕಾನ್ಸ್‌ಟೇಬಲ್ ಉಮೇಶ್ ಅವರನ್ನೊಳಗೊಂಡ ವಿಶೇಷ ತಂಡವನ್ನು ರಚಿಸಿ ತನಿಖೆ ಚುರುಕುಗೊಳಿಸಿದರು. ನಿಖರ ಮಾಹಿತಿಯ ಮೇರೆಗೆ ಕಾರ್ಯಾಚರಣೆಗಿಳಿದ ತಂಡ, ಜುಲೈ 3ರಂದು ಶಿವಮೊಗ್ಗ ನಗರದ ಟಿಪ್ಪು ನಗರ 5ನೇ ಕ್ರಾಸ್ ನಿವಾಸಿ ಸೋನು (27) ಎಂಬಾತನನ್ನು ಬಂಧಿಸಿದ್ದಾರೆ.

​ವೃತ್ತಿಯಲ್ಲಿ ಟೈಲ್ಸ್ ಕೆಲಸ ಮಾಡುತ್ತಿದ್ದ ಈತನೇ ಕಳ್ಳತನ ಎಸಗಿದ್ದಾಗಿ ತಿಳಿದುಬಂದಿದೆ. ಬಂಧಿತನಿಂದ ಪ್ರಕರಣಕ್ಕೆ ಸಂಬಂಧಿಸಿದ ₹45,000 ಮೌಲ್ಯದ ಮೂರು ಸ್ಟೆಪ್ನಿ ಟೈರ್ ಹಾಗೂ ರಿಮ್‌ಗಳನ್ನು ಪೊಲೀಸರು ಸಂಪೂರ್ಣವಾಗಿ ಜಪ್ತಿ ಮಾಡಿದ್ದಾರೆ.

​ಈ ಕಳವು ಪ್ರಕರಣವನ್ನು ಅತ್ಯಂತ ಚಾಕಚಕ್ಯತೆಯಿಂದ ಭೇದಿಸಿದ ಪಿಎಸ್‌ಐ ಪ್ರವೀಣ್ ಎಸ್.ಪಿ. ಮತ್ತು ಅವರ ಸಿಬ್ಬಂದಿ ವರ್ಗದ ಕಾರ್ಯವೈಖರಿಯನ್ನು ಶಿವಮೊಗ್ಗ ಜಿಲ್ಲಾ ಪೊಲೀಸ್ ಅಧೀಕ್ಷಕರು ಶ್ಲಾಘಿಸಿದ್ದಾರೆ.

ರಫ಼ಿ ರಿಪ್ಪನ್ ಪೇಟೆ

ನಾನು ಪೋಸ್ಟ್ ಮ್ಯಾನ್ ನ್ಯೂಸ್ ಮಾದ್ಯಮದ ಹಿಂದೆ ಇರುವ ಒಬ್ಬ ಸ್ಥಳೀಯ ಸುದ್ದಿಪ್ರೇಮಿ ಪತ್ರಕರ್ತ. ಕಳೆದ ಐದು ವರ್ಷಗಳಿಂದ ಒಂದು ಕನಸನ್ನು ಜೀವಂತವಾಗಿಟ್ಟಿದ್ದೇನೆ — ನಮ್ಮೂರ ಸುದ್ದಿಗಳು ಲೋಕದವರೆಗೆ ತಲುಪಬೇಕು ಎಂಬದು. ಸ್ಥಳೀಯ ಪತ್ರಿಕೆಗಳಿಂದ ಆರಂಭಿಸಿ, ರಾಜ್ಯಮಟ್ಟದ ನ್ಯೂಸ್ ಚಾನೆಲ್‌ಗಳ ಬೆಂಗಳೂರು ಕಚೇರಿಯವರೆಗೆ ಮಾಧ್ಯಮದ ಎಲ್ಲಾ ಹಂತಗಳಲ್ಲಿ ಕೆಲಸ ಮಾಡಿದ ಅನುಭವ ನನ್ನದಾಗಿದೆ. ಆದರೆ ಅಲ್ಲಿ ಒಂದು ಖಾಲಿ ಅನಿಸಿತು — ನಿಜವಾದ ಸ್ಥಳೀಯ ಧ್ವನಿಗೆ ವೇದಿಕೆ ಇಲ್ಲ. ಅದಕ್ಕೆ ಪರ್ಯಾಯವಾಗಿ ಹುಟ್ಟಿತು “ಪೋಸ್ಟ್ ಮ್ಯಾನ್ ನ್ಯೂಸ್.” ಇಲ್ಲಿ ಸುದ್ದಿ ಅಂದ್ರೆ ಸುದ್ದಿ ಮಾತ್ರ. ಯಾರ ಪರವೂ ಅಲ್ಲ, ಯಾವ ಪಕ್ಷದ ಪರವೂ ಅಲ್ಲ. ನನ್ನ ನಿಲುವು ಸ್ಪಷ್ಟ — ಸುದ್ದಿ ಹೇಳಬೇಕು, ತೀರ್ಪು ಕೊಡಬಾರದು. ಕೆಲವೊಮ್ಮೆ ಓದುಗರ ಪ್ರತಿಕ್ರಿಯೆಗಳು ಬೇರೆ ಬಣ್ಣ ತೊಡುತ್ತವೆ, ಆದರೆ ನನ್ನ ಪ್ರತಿಕ್ರಿಯೆ ಕೆಲಸದ ಮೂಲಕವೇ. ಪೋಸ್ಟ್ ಮ್ಯಾನ್ ನ್ಯೂಸ್ ಇಂದು ಕೇವಲ ಒಂದು ಪೇಜ್ ಅಲ್ಲ, ಅದು ಒಂದು ಚಳವಳಿಯಾಗಿದೆ — ಪೋಸ್ಟ್ ಮ್ಯಾನ್ ನ್ಯೂಸ್‌ನ ಉದ್ದೇಶ ಕೇವಲ ವರದಿ ಮಾಡುವುದು ಅಲ್ಲ; ನಮ್ಮೂರ ಘಟನೆಗಳು, ಪ್ರತಿಭೆಗಳು, ಸಮಸ್ಯೆಗಳು, ಸಾಧನೆಗಳು — ಇವುಗಳನ್ನು ಹೊರಲೋಕಕ್ಕೆ ತಲುಪಿಸುವ ಸೇತುವೆಯಾಗಿರಬೇಕು. ಹಣ ಪಡೆದು ಸುದ್ದಿ ಮಾಡುವ ಅಭ್ಯಾಸವೂ ಇಲ್ಲ, ಹವ್ಯಾಸವೂ ಇಲ್ಲ. ಮುಂದಿನ ಹಂತದಲ್ಲಿ ನಾವು ಔಟ್‌ಸೋರ್ಸ್ ವ್ಯವಸ್ಥೆ ಮೂಲಕ ಸ್ಥಳೀಯ ವರದಿಗಾರರನ್ನು, ಕಥೆಗಾರರನ್ನು ಸೇರಿಸಿಕೊಂಡು ಈ ವೇದಿಕೆಯನ್ನು ಇನ್ನಷ್ಟು ಜೀವಂತಗೊಳಿಸುವ ಉದ್ದೇಶದಲ್ಲಿದ್ದೇವೆ. ನಮ್ಮ ಗುರಿ ಒಂದೇ — ಸಣ್ಣ ಊರುಗಳ ಸತ್ಯ ಕತೆಗಳು ದೊಡ್ಡ ಮಟ್ಟದಲ್ಲಿ ಲೋಕದ ಕಿವಿಗೆ ತಲುಪಬೇಕು. - ರಫ಼ಿ ರಿಪ್ಪನ್ ಪೇಟೆ ಸಂಪಾದಕರು , ಪೋಸ್ಟ್ ಮ್ಯಾನ್ ನ್ಯೂಸ್

Recent Posts

ರಿಪ್ಪನ್‌ಪೇಟೆಯ ನಿವೃತ್ತ ಶಿಕ್ಷಕ, ಶಿಕ್ಷಣ ಪ್ರೇಮಿ ಬಿ. ಶೇಖರಪ್ಪ ಮಾಸ್ಟರ್ ನಿಧನ; ರಂಭಾಪುರಿ ಜಗದ್ಗುರುಗಳಿಂದ ಸಂತಾಪ

ರಿಪ್ಪನ್‌ಪೇಟೆಯ ನಿವೃತ್ತ ಶಿಕ್ಷಕ, ಶಿಕ್ಷಣ ಪ್ರೇಮಿ ಬಿ. ಶೇಖರಪ್ಪ ಮಾಸ್ಟರ್ ನಿಧನ; ರಂಭಾಪುರಿ ಜಗದ್ಗುರುಗಳಿಂದ ಸಂತಾಪ Retired teacher and…

9 hours ago

ಸಾಗರೋತ್ತರದಲ್ಲೂ ಹುಟ್ಟೂರಿನ ಕಳಕಳಿ | ನೊಂದವರ ಬಾಳಲ್ಲಿ ಬೆಳಕಾದ ರಿಪ್ಪನ್‌ಪೇಟೆಯ ಜಿಸಿಸಿ ಯುವಪಡೆಗೆ ಶಾಸಕರಿಂದ ವಿಶೇಷ ಸನ್ಮಾನ

ಸಾಗರೋತ್ತರದಲ್ಲೂ ಹುಟ್ಟೂರಿನ ಕಳಕಳಿ | ನೊಂದವರ ಬಾಳಲ್ಲಿ ಬೆಳಕಾದ ರಿಪ್ಪನ್‌ಪೇಟೆಯ ಜಿಸಿಸಿ ಯುವಪಡೆಗೆ ಶಾಸಕರಿಂದ ವಿಶೇಷ ಸನ್ಮಾನ ​ಮಾನವೀಯತೆಯೆಂಬುದು ಕೇವಲ…

9 hours ago

ಮಕ್ಕಳ ಶೈಕ್ಷಣಿಕ ಪ್ರಗತಿಗೆ ಹೆಚ್ಚು ಒತ್ತು ನೀಡಿ – ಶಾಸಕ ಬೇಳೂರು ಗೋಪಾಲಕೃಷ್ಣ

ಮಕ್ಕಳ ಶೈಕ್ಷಣಿಕ ಪ್ರಗತಿಗೆ ಹೆಚ್ಚು ಒತ್ತು ನೀಡಿ - ಶಾಸಕ ಬೇಳೂರು ಗೋಪಾಲಕೃಷ್ಣ ರಿಪ್ಪನ್‌ಪೇಟೆಯಲ್ಲಿ ಈದ್ ಮಿಲಾದ್ ಅಂಗವಾಗಿ ಸೌಹಾರ್ಧ…

9 hours ago

ರಿಪ್ಪನ್‌ಪೇಟೆ ಗಣೇಶೋತ್ಸವ ರಾಜ್ಯಕ್ಕೇ ಮಾದರಿಯಾಗಲಿ: ಶಾಂತಿ ಸಮಿತಿ ಸಭೆಯಲ್ಲಿ ಎಎಸ್ ಪಿ ಡಾ. ಭಾನುಪ್ರಕಾಶ್ ಕರೆ

ರಿಪ್ಪನ್‌ಪೇಟೆ ಗಣೇಶೋತ್ಸವ ರಾಜ್ಯಕ್ಕೇ ಮಾದರಿಯಾಗಲಿ: ಶಾಂತಿ ಸಮಿತಿ ಸಭೆಯಲ್ಲಿ ಎಎಸ್ ಪಿ ಡಾ.ಭಾನುಪ್ರಕಾಶ್ ಕರೆ Thirthahalli DySP Dr. Bhanuprakash…

11 hours ago

ರಿಪ್ಪನ್‌ಪೇಟೆಯ ಹೆಮ್ಮೆಯ ವಿದ್ಯಾದೇಗುಲಕ್ಕೆ 100 ವರ್ಷ; ಸೆ.10ರಂದು ಹಳೆಯ ವಿದ್ಯಾರ್ಥಿಗಳ ಮಹತ್ವದ ಸಭೆ

ರಿಪ್ಪನ್‌ಪೇಟೆಯ ಹೆಮ್ಮೆಯ ವಿದ್ಯಾದೇಗುಲಕ್ಕೆ 100 ವರ್ಷ; ಸೆ.10ರಂದು ಹಳೆಯ ವಿದ್ಯಾರ್ಥಿಗಳ ಮಹತ್ವದ ಸಭೆ ಶತಮಾನೋತ್ಸವ ಆಚರಣೆಗೆ ಭರ್ಜರಿ ಸಿದ್ಧತೆ :…

15 hours ago

ಗಣೇಶೋತ್ಸವ ಹಿನ್ನೆಲೆ: ಸೆ.4ರಂದು ರಿಪ್ಪನ್‌ಪೇಟೆಯಲ್ಲಿ ಎಎಸ್‌ಪಿ ಭಾನುಪ್ರಕಾಶ್ ನೇತೃತ್ವದಲ್ಲಿ ಶಾಂತಿ ಸಭೆ

ಗಣೇಶೋತ್ಸವ ಹಿನ್ನೆಲೆ: ಸೆ.4ರಂದು ರಿಪ್ಪನ್‌ಪೇಟೆಯಲ್ಲಿ ಎಎಸ್‌ಪಿ ಭಾನುಪ್ರಕಾಶ್ ನೇತೃತ್ವದಲ್ಲಿ ಶಾಂತಿ ಸಭೆ A peace meeting for Ganesh festival…

2 days ago