Headlines

ಯಡಿಯೂರಪ್ಪ ಅಭಿಮಾನೋತ್ಸವಕ್ಕೆ ಕೆ ಎಸ್ ಈಶ್ವರಪ್ಪಗೆ ಆಹ್ವಾನ

ಯಡಿಯೂರಪ್ಪ ಅಭಿಮಾನೋತ್ಸವಕ್ಕೆ ಕೆ ಎಸ್ ಈಶ್ವರಪ್ಪಗೆ ಆಹ್ವಾನ

MP B.Y. Raghavendra invited former Deputy CM K.S. Eshwarappa and ex-Speaker D.H. Shankaramurthy to participate in the grand BSY Abhimanotsava celebrating B.S. Yediyurappa’s 50 years in politics at Chitradurga.

ಶಿವಮೊಗ್ಗ : ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ಅರ್ಧ ಶತಮಾನದ ರಾಜಕೀಯ ಜೀವನಕ್ಕೆ ಅಭಿನಂದನೆ ಸಲ್ಲಿಸುವ ಉದ್ದೇಶದಿಂದ ಚಿತ್ರದುರ್ಗದಲ್ಲಿ ಆಯೋಜಿಸಲಾಗಿರುವ ಬೃಹತ್ “ಬಿಎಸ್‌ವೈ ಅಭಿಮಾನೋತ್ಸವ” ಕಾರ್ಯಕ್ರಮಕ್ಕೆ ಮಾಜಿ ಉಪಮುಖ್ಯಮಂತ್ರಿ K. S ಈಶ್ವರಪ್ಪ ಅವರಿಗೂ ಅಧಿಕೃತ ಆಹ್ವಾನ ನೀಡಲಾಗಿದೆ.

ಈ ಸಂಬಂಧ ಸಂಸದ B. Y. ರಾಘವೇಂದ್ರ ಇಂದು ಶಿವಮೊಗ್ಗದಲ್ಲಿರುವ ಈಶ್ವರಪ್ಪ ನಿವಾಸಕ್ಕೆ ಭೇಟಿ ನೀಡಿ, ನಾಳೆ ಚಿತ್ರದುರ್ಗದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಆಹ್ವಾನಿಸಿದರು. ಇದೇ ವೇಳೆ ಮಾಜಿ ಸಭಾಪತಿ D. H. ಶಂಕರಮೂರ್ತಿ ಅವರಿಗೂ ಆಹ್ವಾನ ನೀಡಲಾಯಿತು.

ಚಿತ್ರದುರ್ಗದಲ್ಲಿ ನಡೆಯಲಿರುವ ಈ ಅಭಿಮಾನೋತ್ಸವ ಕಾರ್ಯಕ್ರಮದಲ್ಲಿ ನಾಡಿನ ವಿವಿಧ ಮಠಾಧೀಶರು, ಸ್ವಾಮೀಜಿಗಳು, ಧಾರ್ಮಿಕ ಮುಖಂಡರು ಹಾಗೂ ಕೇಂದ್ರ ಗೃಹ ಸಚಿವರು ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ ಎಂದು ತಿಳಿದುಬಂದಿದೆ.

About The Author

Exit mobile version