Headlines

ಬಕೆಟ್‌ನಲ್ಲಿ ಮುಳುಗಿ ಮಗು ಸಾವು; ಶಾಕ್‌ನಿಂದ ತಾಯಿ ಆತ್ಮಹತ್ಯೆ – ಬೆಂಗಳೂರು ದಾರುಣ ಘಟನೆ

ಬಕೆಟ್‌ನಲ್ಲಿ ಮುಳುಗಿ ಮಗು ಸಾವು; ಶಾಕ್‌ನಿಂದ ತಾಯಿ ಆತ್ಮಹತ್ಯೆ – ಬೆಂಗಳೂರು ದಾರುಣ ಘಟನೆ

A tragic incident in Bengaluru where a child drowned in a water bucket, and the mother died by suicide after the shock. Police have registered a case and are investigating.

ಬೆಂಗಳೂರು: ಒಣಹಾಕಿದ್ದ ಬಟ್ಟೆ ತರಲು ತೆರಳಿದ್ದ ವೇಳೆ ನೀರಿನ ಬಕೆಟ್‌ನಲ್ಲಿ ಮುಳುಗಿ ಮಗು ಸಾವನ್ನಪ್ಪಿದ ಘಟನೆ ಕಂಡು ಶಾಕ್‌ಗೆ ಒಳಗಾದ ತಾಯಿ ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ ಚಂದ್ರಾಲೇಔಟ್ ಠಾಣಾ ವ್ಯಾಪ್ತಿಯ ಭೈರವೇಶ್ವರ ನಗರದಲ್ಲಿ ನಡೆದಿದೆ.

ಅಗಸ್ಯ ಮೃತ ಮಗು. ಪ್ರತಿಭಾ (29) ಮೃತ ತಾಯಿ. ಘಟನೆ ಸಂಭವಿಸಿದ ವೇಳೆ ಮನೆಯಲ್ಲಿ ತಾಯಿ ಮತ್ತು ಮಗು ಮಾತ್ರ ಇದ್ದರು. ಪ್ರತಿಭಾ ಹಾಗೂ ಅವರ ಪತಿ ಮಹಂತೇಶ್ ಇಬ್ಬರೂ ಸಾಫ್ಟ್‌ವೇರ್ ಉದ್ಯೋಗಿಗಳಾಗಿದ್ದು, ಪ್ರತಿಭಾ ವರ್ಕ್ ಫ್ರಂ ಹೋಂ ಮಾಡುತ್ತಿದ್ದರು. ಮಹಂತೇಶ್ ಕೆಲಸದ ನಿಮಿತ್ತ ಹೊರಗಡೆ ತೆರಳಿದ್ದರು.

ರಾತ್ರಿ ಮನೆಗೆ ವಾಪಸ್ಸಾದ ಮಹಂತೇಶ್, ಪತ್ನಿ ಬಾಗಿಲು ತೆರೆಯದ ಹಿನ್ನೆಲೆಯಲ್ಲಿ ತಮ್ಮ ಬಳಿ ಇದ್ದ ಕೀಲಿಯಿಂದ ಬಾಗಿಲು ತೆರೆದಿದ್ದಾರೆ. ಒಳಗೆ ಪ್ರವೇಶಿಸಿದಾಗ ಪ್ರತಿಭಾ ನೇಣಿಗೆ ಶರಣಾಗಿರುವುದು ಹಾಗೂ ಮಗು ಹಾಸಿಗೆಯ ಮೇಲೆ ಮಲಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಪರಿಶೀಲಿಸಿದಾಗ ಮಗು ಕೂಡ ಮೃತಪಟ್ಟಿರುವುದು ದೃಢಪಟ್ಟಿದೆ.

ಘಟನಾ ಸ್ಥಳದಲ್ಲಿ ಪತ್ನಿ ಬರೆದಿಟ್ಟಿದ್ದ ಡೆತ್ ನೋಟ್ ಪತ್ತೆಯಾಗಿದ್ದು, ಅದರ ಪಕ್ಕದಲ್ಲೇ ಖಾಲಿಯಾದ 15 ಮಾತ್ರೆಗಳ ಶೀಟ್ ಸಿಕ್ಕಿದೆ. ಡೆತ್ ನೋಟ್‌ನಲ್ಲಿ, “ನಾನು ಬಟ್ಟೆ ತರಲು ಟೆರೆಸ್‌ಗೆ ಹೋಗಿದ್ದಾಗ ಮಗು ಆಟವಾಡುತ್ತಾ ಬಚ್ಚಲು ಮನೆಗೆ ಹೋಗಿ ಬಕೆಟ್‌ನಲ್ಲಿ ಮುಳುಗಿ ಸತ್ತಿದೆ. ನನ್ನ ಮಗುವಿನ ಸಾವಿಗೆ ನಾನೇ ಕಾರಣ. ಹೀಗಾಗಿ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ” ಎಂದು ಪ್ರತಿಭಾ ಉಲ್ಲೇಖಿಸಿದ್ದಾರೆ.

ಪ್ರಾಥಮಿಕವಾಗಿ ಪ್ರತಿಭಾ ಮಾತ್ರೆ ನುಂಗಿ ಹಾಗೂ ಕೈ ಕತ್ತರಿಸಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದರೆ, ಬಳಿಕ ನೇಣಿಗೆ ಶರಣಾಗಿರುವುದು ತಿಳಿದುಬಂದಿದೆ.

ಈ ಸಂಬಂಧ ಚಂದ್ರಾಲೇಔಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

About The Author

Exit mobile version