Headlines

₹1.50 ಕೋಟಿ ಮೌಲ್ಯದ ಅಡಿಕೆಯೊಂದಿಗೆ ಲಾರಿ ಸಮೇತ ಚಾಲಕ ನಾಪತ್ತೆ

₹1.50 ಕೋಟಿ ಮೌಲ್ಯದ ಅಡಿಕೆಯೊಂದಿಗೆ ಲಾರಿ ಸಮೇತ ಚಾಲಕ ನಾಪತ್ತೆ

A lorry carrying arecanut worth ₹1.5 crore from Shivamogga to Bengaluru goes missing as driver and accomplice allegedly abscond with the load; police investigation underway.

ಶಿವಮೊಗ್ಗ: ಲಾರಿಯಲ್ಲಿ ಸಾಗಿಸುತ್ತಿದ್ದ ಸುಮಾರು ₹1.50 ಕೋಟಿ ಮೌಲ್ಯದ ಅಡಿಕೆಯನ್ನು ಚಾಲಕ ಹಾಗೂ ಆತನ ಸಹಚರರು ಲಪಟಾಯಿಸಿ ಪರಾರಿಯಾದ ಘಟನೆ ಶಿವಮೊಗ್ಗದಲ್ಲಿ ಬೆಳಕಿಗೆ ಬಂದಿದೆ.

ಶಿವಮೊಗ್ಗದ ಮ್ಯಾಮ್‌ಕೋಸ್‌ನಿಂದ ಬೆಂಗಳೂರಿನ ಯಶವಂತಪುರಕ್ಕೆ ಸಾಗಿಸಲು 350 ಚೀಲ ಅಡಿಕೆ ಲೋಡ್ ಮಾಡಲಾಗಿತ್ತು. ಆದರೆ ನಿಗದಿತ ಸ್ಥಳಕ್ಕೆ ತಲುಪಿಸುವ ಬದಲು ಚಾಲಕ ಮತ್ತು ಆತನ ಸಹಚರರು ಲಾರಿಯೊಂದಿಗೆ ಪರಾರಿಯಾಗಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಕಳುವಾದ ಅಡಿಕೆಯ ಒಟ್ಟು ಅಂದಾಜು ಮೌಲ್ಯ ₹1,50,21,760 ಎಂದು ತಿಳಿದುಬಂದಿದೆ. ಈ ಸಂಬಂಧ ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

About The Author

Exit mobile version