An unidentified man allegedly harassed a woman through a WhatsApp video call by behaving obscenely. A case has been registered at Shivamogga CEN Police Station and an investigation is underway.
ವಾಟ್ಸ್‌ಆ್ಯಪ್ ವಿಡಿಯೋ ಕಾಲ್ ಟ್ರ್ಯಾಪ್: ಮಹಿಳೆಯನ್ನು ಮೋಸಗೊಳಿಸಿ ಅಸಭ್ಯ ವರ್ತನೆ
ವಾಟ್ಸ್‌ಆ್ಯಪ್ ವಿಡಿಯೋ ಕಾಲ್‌ನಲ್ಲಿ ಅಸಭ್ಯ ಕೃತ್ಯ: ಅಪರಿಚಿತನಿಂದ ಮಹಿಳೆಗೆ ಲೈಂಗಿಕ ಕಿರುಕುಳ
ಶಿವಮೊಗ್ಗ: ಅಪರಿಚಿತ ವ್ಯಕ್ತಿಯೊಬ್ಬ ವಾಟ್ಸ್‌ಆ್ಯಪ್ ವಿಡಿಯೋ ಕಾಲ್ ಮೂಲಕ ಮಹಿಳೆಗೆ ಅಸಭ್ಯವಾಗಿ ವರ್ತಿಸಿ ಖಾಸಗಿ ಅಂಗ ಪ್ರದರ್ಶಿಸಿದ್ದಾನೆ ಎಂಬ ಆರೋಪದಡಿ ಶಿವಮೊಗ್ಗದ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಘಟನೆಯ ವಿವರ:
ಶಿವಮೊಗ್ಗದ ಮಹಿಳೆಯೊಬ್ಬರಿಗೆ (ಮಹಿಳೆಯ ಹೆಸರು ಹಾಗೂ ಊರು ಗೌಪ್ಯ) ಅಪರಿಚಿತ ಮೊಬೈಲ್ ಸಂಖ್ಯೆಯಿಂದ ವಾಟ್ಸ್‌ಆ್ಯಪ್ ಸಂದೇಶ ಬಂದಿದೆ. “ನಾನು ನಿಮಗೆ ಪರಿಚಯವಿರುವ ವ್ಯಕ್ತಿ. ವಿಡಿಯೋ ಕಾಲ್ ಸ್ವೀಕರಿಸಿದರೆ ನಾನು ಯಾರು ಎಂದು ತಿಳಿಯುತ್ತದೆ” ಎಂದು ನಂಬಿಸಿದ ಆ ವ್ಯಕ್ತಿ ನಂತರ ವಿಡಿಯೋ ಕಾಲ್ ಮಾಡಿದ್ದಾನೆ.
ಮೊದಲ ಎರಡು ಬಾರಿ ಕರೆ ಬಂದಾಗ ಮಹಿಳೆ ತನ್ನ ಮುಖ ಕಾಣದಂತೆ ಕ್ಯಾಮೆರಾ ತಿರುಗಿಸಿ ಕರೆ ಸ್ವೀಕರಿಸಿದ್ದರು. ಆ ವೇಳೆ ಆ ವ್ಯಕ್ತಿ ತನ್ನ ಮುಖವನ್ನು ತೋರಿಸಿರಲಿಲ್ಲ. ಅನುಮಾನಗೊಂಡ ಮಹಿಳೆ ಎಚ್ಚೆತ್ತು, ಸಾಕ್ಷ್ಯ ಸಂಗ್ರಹಕ್ಕಾಗಿ ರಾತ್ರಿ ಮೊಬೈಲ್‌ನಲ್ಲಿ ಸ್ಕ್ರೀನ್ ರೆಕಾರ್ಡಿಂಗ್ ಆನ್ ಮಾಡಿಕೊಂಡು ಅದೇ ಸಂಖ್ಯೆಗೆ ವಿಡಿಯೋ ಕಾಲ್ ಮಾಡಿದ್ದಾರೆ. ಆಗ ಆ ವ್ಯಕ್ತಿ ಅಸಭ್ಯವಾಗಿ ವರ್ತಿಸಿ ತನ್ನ ಖಾಸಗಿ ಅಂಗಗಳನ್ನು ಪ್ರದರ್ಶಿಸಿದ್ದಾನೆ. ಇದನ್ನು ಮಹಿಳೆ ಸಾಕ್ಷ್ಯವಾಗಿ ದಾಖಲಿಸಿಕೊಂಡಿದ್ದಾರೆ.
ಈ ಹಿನ್ನೆಲೆ ಮಹಿಳೆಗೆ ಕಿರುಕುಳ ನೀಡಿದ ವ್ಯಕ್ತಿಯನ್ನು ಬಂಧಿಸುವಂತೆ ಶಿವಮೊಗ್ಗದ ಸಿಇಎನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಚಾಲಕನ ನಿಯಂತ್ರಣ ತಪ್ಪಿ ಶಾಲಾ ಬಸ್ ಅಪಘಾತ – ತಪ್ಪಿದ ಭಾರಿ ಅನಾಹುತ A school bus lost control…
ಶಿಕ್ಷಕರ ಗೌರವದ ಹೆಸರಿನಲ್ಲಿ ರಾಜಕೀಯ ಬೇಡ; ಬಿಜೆಪಿ ವಿರುದ್ಧ ಕಾಂಗ್ರೆಸ್ ವಾಗ್ದಾಳಿ Congress leaders in Sagar have hit…
ಶಿಕ್ಷಣ ಸೇವೆಗೆ ಸಂದ ಪ್ರತಿಷ್ಠಿತ ಗೌರವ; ಅರಸಾಳಿನ ಸುಮಾ ಎಸ್.ಗೆ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ Summa S.…
ರಿಪ್ಪನ್‌ಪೇಟೆ ಸುತ್ತಮುತ್ತ ನಾಳೆ ಕರೆಂಟ್ ಇಲ್ಲ! ಯಾವೆಲ್ಲ ಪ್ರದೇಶಗಳಿಗೆ ವಿದ್ಯುತ್ ವ್ಯತ್ಯಯ? ಈ ಸುದ್ದಿ ನೋಡಿ Power outage in…
ಹಿರಿಯ ನಾಗರಿಕರಿಂದ ನಿವೃತ್ತ ಸರ್ಕಾರಿ ನೌಕರರಿಗೆ ವಿಶೇಷ ಸನ್ಮಾನ Retired government employees were specially honoured by senior…
ದೇಶದ ಅಭಿವೃದ್ಧಿಯಲ್ಲಿ ಶಿಕ್ಷಕರ ಪಾತ್ರ ಅತ್ಯಂತ ಮಹತ್ವದ್ದು: ಶಾಸಕ ಬೇಳೂರು ಗೋಪಾಲಕೃಷ್ಣ ಶಾಲೆ ಬಿಟ್ಟ ಮಕ್ಕಳನ್ನು ಮರಳಿ ಕರೆತಂದರೆ ₹10…