Several two-wheeler riders were injured after losing control on a hazardous stretch of Kuvempu Road near a private hospital in Shivamogga. Traffic police intervened and restored smooth traffic movement.
ಏಕಾಏಕಿ ಜಾರಿಬಿದ್ದ ಬೈಕ್ ಸವಾರರು – ಒಂದೇ ಸ್ಥಳದಲ್ಲಿ ನಡೆದ ಅವಘಡ | ಕಾರಣವೇನು ಗೊತ್ತಾ..!!?
ಶಿವಮೊಗ್ಗ: ನಗರದ ಪ್ರಮುಖ ಮಾರ್ಗವಾದ ಕುವೆಂಪು ರಸ್ತೆಯಲ್ಲಿ ಅಚ್ಚರಿಯೊಂದು ವಾಹನ ಸವಾರರನ್ನು ಬೆಚ್ಚಿಬೀಳುವಂತೆ ಮಾಡಿದೆ. ನಂಜಪ್ಪ ಆಸ್ಪತ್ರೆ ಎದುರಿನ ರಸ್ತೆಗೆ ಪಕ್ಕದ ಮರದಿಂದ ದ್ರವ ರೂಪದ ಅಂಟು ಹರಿದುಬಂದ ಪರಿಣಾಮ, ದ್ವಿಚಕ್ರ ವಾಹನ ಸವಾರರು ಜಾರಿ ಬಿದ್ದು ಗಾಯಗೊಂಡ ಘಟನೆ ನಡೆದಿದೆ.
ಕಳೆದ ರಾತ್ರಿ ಸುರಿದ ಮಳೆಯ ಬಳಿಕ ಈ ಘಟನೆ ಬೆಳಕಿಗೆ ಬಂದಿದೆ. ಮಳೆ ನಿಲ್ಲುತ್ತಿದ್ದಂತೆ ಸಂಚಾರ ಆರಂಭಿಸಿದ ಐದಾರು ಬೈಕ್‌ಗಳು ಏಕಾಏಕಿ ನಿಯಂತ್ರಣ ತಪ್ಪಿ ಜಾರಿ ಬಿದ್ದಿವೆ. ಅಂಟು ಮಿಶ್ರಿತ ದ್ರವ ರಸ್ತೆಯ ಮೇಲೆ ಹಬ್ಬಿಕೊಂಡಿದ್ದರಿಂದ ಸವಾರರಿಗೆ ಅಪಾಯ ಎದುರಾದುದು ತಿಳಿದುಬಂದಿದೆ. ಅಪಘಾತದಲ್ಲಿ ಕೆಲವರು ಗಾಯಗೊಂಡಿದ್ದು, ಸ್ಥಳೀಯ ಅಂಗಡಿ ಮಾಲೀಕರು ಮತ್ತು ಸಾರ್ವಜನಿಕರು ಗಾಯಾಳುಗಳಿಗೆ ತಕ್ಷಣ ನೆರವು ನೀಡಿದರು.
ಘಟನೆಯ ಮಾಹಿತಿ ದೊರೆಯುತ್ತಿದ್ದಂತೆ ಸಂಚಾರ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿ ಮುನ್ನೆಚ್ಚರಿಕಾ ಕ್ರಮ ಕೈಗೊಂಡರು. ರಸ್ತೆಯ ಎರಡೂ ಬದಿಗಳಲ್ಲಿ ಬ್ಯಾರಿಕೇಡ್‌ಗಳನ್ನು ಅಳವಡಿಸಿ ವಾಹನಗಳು ನಿಧಾನವಾಗಿ ಸಂಚರಿಸುವಂತೆ ಸೂಚಿಸಿದರು. ಸಂಚಾರ ಪೊಲೀಸ್ ಇನ್ಸ್‌ಪೆಕ್ಟರ್ ದೇವರಾಜ್ ಅವರು ಮಹಾನಗರ ಪಾಲಿಕೆಗೆ ಮಾಹಿತಿ ನೀಡಿದ್ದು, ವಾಟರ್ ಟ್ಯಾಂಕರ್ ಮೂಲಕ ರಸ್ತೆಗೆ ನೀರು ಹಾಯಿಸಿ ಸ್ವಚ್ಛತಾ ಕಾರ್ಯ ನಡೆಸಲಾಯಿತು. ಇದರಿಂದ ರಸ್ತೆ ಮೇಲಿನ ಅಂಟು ತೆಗೆಯಲ್ಪಟ್ಟು ಸಂಚಾರ ಮತ್ತೆ ಸುಗಮಗೊಂಡಿತು.
ಮರದಿಂದ ದ್ರವ ರೂಪದ ಅಂಟು ರಸ್ತೆಗೆ ಬಿದ್ದು ವಾಹನ ಸವಾರರು ಜಾರಿ ಬೀಳುವ ಘಟನೆ ಇದೇ ಮೊದಲಲ್ಲ ಎನ್ನುವುದು ಗಮನಾರ್ಹ. 2021ರಲ್ಲಿಯೂ ಇದೇ ಪ್ರದೇಶದಲ್ಲಿ ಬೆಳಿಗ್ಗೆ ಸಮಯದಲ್ಲಿ ಹಲವು ವಾಹನಗಳು ಜಾರಿ ಬಿದ್ದು ಸವಾರರು ಗಾಯಗೊಂಡ ಘಟನೆ ವರದಿಯಾಗಿತ್ತು. ಮರುಮರು ಇಂತಹ ಘಟನೆಗಳು ನಡೆಯುತ್ತಿರುವುದರಿಂದ, ಸಂಬಂಧಪಟ್ಟ ಇಲಾಖೆಗಳು ಶಾಶ್ವತ ಪರಿಹಾರಕ್ಕೆ ಮುಂದಾಗಬೇಕೆಂಬ ಸಾರ್ವಜನಿಕರ ಒತ್ತಾಯ ಕೇಳಿಬರುತ್ತಿದೆ.
RIPPONPETE | ಈದ್ ಮಿಲಾದ್ ಸಮಿತಿಯ ಅಧ್ಯಕ್ಷರಾಗಿ ಇಸ್ಮಾಯಿಲ್, ಪ್ರಧಾನ ಕಾರ್ಯದರ್ಶಿಯಾಗಿ ಫಾರೂಕ್ ಆಯ್ಕೆ Ripponpete Eid Milad Committee…
ನಾಗರಹಳ್ಳಿ ನಾಗೇಂದ್ರಸ್ವಾಮಿ ದೇವಸ್ಥಾನದಲ್ಲಿ ನಾಗರ ಪಂಚಮಿ ಸಂಭ್ರಮ Nagarahalli Nagendra Swamy Temple in Hosanagara taluk celebrated Nagara…
ಬಜರಂಗದಳ ಕಾರ್ಯಕರ್ತರ ಮೇಲಿನ ಹಲ್ಲೆ ಖಂಡಿಸಿ ಆ.19ರಂದು ‘ಶಿಕಾರಿಪುರ ಚಲೋ’ ಹಾಗೂ ಬಂದ್‌ಗೆ ಕರೆ VHP and Bajrang Dal…
ತಾಯಿ-ಮಗಳ ಜೀವ ಉಳಿಸಿದ ಮೂವರು ಯುವಕರಿಗೆ ಪೊಲೀಸ್ ಇಲಾಖೆಯಿಂದ ಗೌರವ ಸನ್ಮಾನ Three youths rescued a mother and…
ರ‍್ಯಾಂಕ್ಸ್ ಇನ್ಸ್ಟಿಟ್ಯೂಟ್–ಜೆಸಿಐ ಹೊಸನಗರ ಡೈಮಂಡ್ ಸಹಯೋಗದಲ್ಲಿ ‘Gen Z Connect’ ತರಬೇತಿ ಯಶಸ್ವಿ Ranks Institute–JCI Hosanagara Diamond Hosts…
ಬೆಳ್ಳೂರು GHPSನಲ್ಲಿ ಸ್ವಾತಂತ್ರ್ಯ ಸಂಭ್ರಮ: ಶಾಲೆಗೆ ಕೊಡುಗೆಗಳ ಮಹಾಪೂರ! Satish Ripponpete donated a TV to GHPS Bellur…