January 11, 2026

ರಸ್ತೆ ಬದಿಯಲ್ಲಿ ಅನಾಮಧೇಯ ಗಂಡು ಮಗು ಪತ್ತೆ: ಪೋಷಕರ ಪತ್ತೆಗೆ ಅಧಿಕಾರಿಗಳ ಮನವಿ

ರಸ್ತೆ ಬದಿಯಲ್ಲಿ ಅನಾಮಧೇಯ ಗಂಡು ಮಗು ಪತ್ತೆ: ಪೋಷಕರ ಪತ್ತೆಗೆ ಅಧಿಕಾರಿಗಳ ಮನವಿ

An anonymous baby boy was found abandoned near Mallapur village gate . Police rescued the child and appealed to trace the parents. Contact details inside.

ಶಿವಮೊಗ್ಗ, ಜನವರಿ 09:ಭದ್ರಾವತಿ ತಾಲ್ಲೂಕಿನ ಮಲ್ಲಾಪುರ ಗ್ರಾಮದ ಗೇಟ್ ಸಮೀಪ ರಸ್ತೆ ಬದಿಯಲ್ಲಿ ಅನಾಮಧೇಯ ಗಂಡು ಮಗು ಪತ್ತೆಯಾಗಿರುವ ಘಟನೆ ವರದಿಯಾಗಿದೆ. ಸಾರ್ವಜನಿಕರು ನೀಡಿದ ಮಾಹಿತಿಯ ಮೇರೆಗೆ ಹೊಳೆಹೊನ್ನೂರು ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಮಗುವನ್ನು ರಕ್ಷಣೆಗೊಳಪಡಿಸಿದ್ದಾರೆ.

ಡಿಸೆಂಬರ್ 16, 2025 ರಂದು ಈ ಕುರಿತು ಪೋಷಕರ ಪತ್ತೆಗೆ ಸಂಬಂಧಿಸಿದಂತೆ ದೂರು ದಾಖಲಿಸಲಾಗಿದ್ದು, ನಂತರ ಮಗುವನ್ನು ಮಕ್ಕಳ ಕಲ್ಯಾಣ ಸಮಿತಿ, ಶಿವಮೊಗ್ಗ ಇವರಿಗೆ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಗುವಿನ ಭವಿಷ್ಯ ಮತ್ತು ಪುನರ್ವಸತಿ ಹಿತದೃಷ್ಟಿಯಿಂದ, ಮಗುವಿನ ಪೋಷಕರು ಅಥವಾ ಸಂಬಂಧಿಕರು ಯಾರಾದರೂ ಇದ್ದಲ್ಲಿ, ಅಗತ್ಯ ದಾಖಲೆಗಳೊಂದಿಗೆ ಅಧೀಕ್ಷಕರು, ಸರ್ಕಾರಿ ಬಾಲಕರ ಬಾಲಮಂದಿರ, ಆಲ್ಕೊಳ, ಶಿವಮೊಗ್ಗ ಇವರ ಕಚೇರಿಯನ್ನು ನೇರವಾಗಿ ಸಂಪರ್ಕಿಸುವಂತೆ ಮನವಿ ಮಾಡಲಾಗಿದೆ. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 08182-295511 ಅನ್ನು ಸಂಪರ್ಕಿಸಬಹುದು.

About The Author

Exit mobile version