ಕಾಲೇಜಿಗೆ ತೆರಳಿದ್ದ ಯುವತಿ ನಾಪತ್ತೆ – ಪತ್ತೆಗೆ ಸಹಕರಿಸಲು ಪೊಲೀಸರ ಮನವಿ
young-woman-who-went-to-college-goes-missing-police-appeal-for-help-in-finding-her
ಕಾಲೇಜಿಗೆ ತೆರಳುವುದಾಗಿ ಮನೆಯಿಂದ ಹೊರಟಿದ್ದ 19 ವರ್ಷದ ಯುವತಿಯೊಬ್ಬಳು ನಾಪತ್ತೆಯಾಗಿರುವ ಘಟನೆ ತೀರ್ಥಹಳ್ಳಿ ತಾಲ್ಲೂಕಿನ ಮಾಳೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಮಾಳೂರು ಠಾಣಾ ವ್ಯಾಪ್ತಿಯ ಬಗ್ಗೊಡಿಗೆ ಗ್ರಾಮದ ಕೊರೊಡಿ ಆನಂದ್ ಹೆಚ್.ಎಸ್. ಎಂಬುವವರ ಮಗಳು ಈಶಾನ್ಯ ಎಂಬ 19 ವರ್ಷದ ಯುವತಿ ಶಿವಮೊಗ್ಗದ ವಸುಂಧರ ಹಾಸ್ಟೆಲ್‌ನಲ್ಲಿದ್ದುಕೊಂಡು ನಗರದ ಸ.ಪ್ರ.ದ.ಕಾಲೇಜಿನಲ್ಲಿ 2ನೇ ವರ್ಷದ ಬಿ.ಕಾಂ. ವ್ಯಾಸಂಗ ಮಾಡುತ್ತಿದ್ದು, ಮನೆಯಿಂದ ಕಾಲೇಜ್‌ಗೆ ಹೋಗುವುದಾಗಿ ನ. 10 ರಂದು ಹೊರಟವಳು ಕಾಣೆಯಾಗಿದ್ದಾಳೆ.
ಈಕೆಯ ಚಹರೆ 5 ಅಡಿ ಎತ್ತರ, ದೃಢವಾದ ಮೈಕಟ್ಟು, ದುಂಡುಮುಖ,ಎಣ್ಣೆ ಕಪ್ಪು ಮೈ ಬಣ್ಣ, ತಲೆಯಲ್ಲಿ ಸುಮಾರು 14 ಇಂಚು ಉದ್ದದ ಕಪ್ಪು ಕೂದಲಿದ್ದು, ಎಡ ತುಟಿಯ ಮೇಲ್ಭಾಗ ರಾಗಿ ಕಾಳು ಗಾತ್ರದ ಕಪ್ಪುಮಚ್ಚೆ ಇರುತ್ತದೆ. ಕನ್ನಡ ಮಾತನಾಡಲು, ಓದಲು ಬರೆಯಲು ತಿಳಿದಿದ್ದು, ಮನೆಯಿಂದ ಹೋಗುವಾಗ ಕೆಂಪು ಬಣ್ಣದ ಚೂಡಿದಾರ್ ಬಿಳಿ ಬಣ್ಣದ ವೇಲ್ ಧರಿಸಿರುತ್ತಾಳೆ ಹಾಗೂ ಒಂದು ಕಪ್ಪು ಬಣ್ಣದ ಸ್ಕೂಲ್ ಬ್ಯಾಗ್ ತೆಗೆದುಕೊಂಡು ಹೋಗಿರುತ್ತಾಳೆ.
ಈ ಯುವತಿಯ ಪತ್ತೆಯಾದಲ್ಲಿ ಎಸ್.ಪಿ. ಶಿವಮೊಗ್ಗ -08182-261400, ಡಿವೈಎಸ್‌ಪಿ ತೀರ್ಥಹಳ್ಳಿ 08181 – 220388, ಸಿಪಿಐ ಮಾಳೂರುವೃತ್ತ :- 9480803333/ಪಿಎಸ್‌ಐ ಆಗುಂಬೆ ರವರಿಗೆ :- 9480803314, ಕಂಟ್ರೋಲ್ ರೂ ಶಿವಮೊಗ್ಗ – 9480803300, ಇವರುಗಳನ್ನು ಸಂಪರ್ಕಿಸಿ ಮಾಹಿತಿಯನ್ನು ನೀಡುವಂತೆ ಪೊಲೀಸ್ ಪ್ರಕಟಣೆ ತಿಳಿಸಿದೆ.
young-woman-who-went-to-college-goes-missing-police-appeal-for-help-in-finding-her
ಕಾಲೇಜು ಸಮವಸ್ತ್ರದಲ್ಲೇ ಕೆರೆಯಲ್ಲಿ ಪತ್ತೆಯಾದ ಬಿಸಿಎ ವಿದ್ಯಾರ್ಥಿನಿಯ ಶವ ಶಿಕಾರಿಪುರ: ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ಪಟ್ಟಣದ ಹುಚ್ಚುರಾಯಸ್ವಾಮಿ ಕೆರೆಯಲ್ಲಿ ಬಿಸಿಎ…
ವಾಮಾಚಾರದ ಭಯ ಹುಟ್ಟಿಸಿ ಲಕ್ಷಾಂತರ ರೂ ಮೌಲ್ಯದ ಚಿನ್ನಾಭರಣ ವಂಚನೆ: ಕೆಲವೇ ಗಂಟೆಗಳಲ್ಲಿ ಆರೋಪಿ ಬಂಧನ Bhadravati police arrested…
ರಿಪ್ಪನ್‌ಪೇಟೆ: ವಾಹನದಿಂದ ಬಿದ್ದ ಕರುವನ್ನು ಕಿಲೋಮೀಟರ್‌ಗಟ್ಟಲೆ ಎಳೆದೊಯ್ದ ಚಾಲಕ; ಕರು ಸ್ಥಿತಿ ಚಿಂತಾಜನಕ , ಸ್ಥಳೀಯರ ಆಕ್ರೋಶ !! A…
ಈಸ್ಟ್‌ವೆಸ್ಟ್ ಬಸ್ ಮಾಲೀಕ ತಲ್ಕೀನ್ ಅಹ್ಮದ್ ನಿಧನ Talkeen Ahmed, owner of East West Bus institution and…
ಪತ್ರಕರ್ತನ ಮನೆಗೆ ಕನ್ನ ; ₹6.57 ಲಕ್ಷ ಮೌಲ್ಯದ ಚಿನ್ನಾಭರಣ, ನಗದು ಕಳವು Thieves broke into journalist Shi.…
ಚೋರಡಿ ಲಾಡ್ಜ್‌ನಲ್ಲಿ ಪೊಲೀಸರಿಗೆ ಚಾಕು ತೋರಿಸಿ ಐವರು ಪರಾರಿ; ಕುಂಸಿ ಠಾಣೆಯಲ್ಲಿ ಪ್ರಕರಣ ದಾಖಲು ಶಿವಮೊಗ್ಗ: ಅನುಮಾನಾಸ್ಪದವಾಗಿ ಲಾಡ್ಜ್‌ನಲ್ಲಿ ತಂಗಿದ್ದ…