Headlines

ರಿಪ್ಪನ್ ಪೇಟೆಯಲ್ಲಿ ತಂಬಾಕು ನಿಯಂತ್ರಣ ಕಾಯ್ದೆ ಜಾರಿಗೆ ವಿಶೇಷ ದಾಳಿ – 40 ಪ್ರಕರಣ ದಾಖಲು

ರಿಪ್ಪನ್ ಪೇಟೆಯಲ್ಲಿ ತಂಬಾಕು ನಿಯಂತ್ರಣ ಕಾಯ್ದೆ ಜಾರಿಗೆ ವಿಶೇಷ ದಾಳಿ – 40 ಪ್ರಕರಣ ದಾಖಲು ರಿಪ್ಪನ್‌ಪೇಟೆ : ಪಟ್ಟಣದಲ್ಲಿ ತಂಬಾಕು ನಿಯಂತ್ರಣ ಕಾಯ್ದೆ (COTPA) ಉಲ್ಲಂಘನೆ ವಿರುದ್ಧ ಆರೋಗ್ಯ ಇಲಾಖೆ ವತಿಯಿಂದ ವಿಶೇಷ ದಾಳಿ ನಡೆಯಿತು. ಈ ಸಂದರ್ಭದಲ್ಲಿ ಒಟ್ಟು 40 ಪ್ರಕರಣಗಳನ್ನು ದಾಖಲಿಸಿ, ₹5000 ದಂಡವನ್ನು ಸಂಗ್ರಹಿಸಲಾಯಿತು. ಈ ದಾಳಿ ಕಾರ್ಯಾಚರಣೆಗೆ ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಸುರೇಶ್ ನೇತೃತ್ವ ವಹಿಸಿದ್ದರು. ಶಿವಮೊಗ್ಗ ಜಿಲ್ಲಾ ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮದ ಜಿಲ್ಲಾ ಸಲಹೆಗಾರರಾದ ಹೇಮಂತ್ ರಾಜ್…

Read More

ನಿಟ್ಟೂರಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಭೆ – 6.5 ಕೋಟಿ ಅನುದಾನ ನೀಡಿದ ಶಾಸಕರಿಗೆ ಧನ್ಯವಾದ, ಹೊಸ ಪದಾಧಿಕಾರಿಗಳಿಗೆ ಸನ್ಮಾನ

ನಿಟ್ಟೂರಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಭೆ – 6.5 ಕೋಟಿ ಅನುದಾನ ನೀಡಿದ ಶಾಸಕರಿಗೆ ಧನ್ಯವಾದ, ಹೊಸ ಪದಾಧಿಕಾರಿಗಳಿಗೆ ಸನ್ಮಾನ ಹೊಸನಗರ, ನವೆಂಬರ್ 3: ಹೊಸನಗರ ತಾಲೂಕಿನ ನಿಟ್ಟೂರಿನಲ್ಲಿ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಘಟಕದ ವತಿಯಿಂದ ಕಾರ್ಯಕರ್ತರ ಸಭೆ ಜರುಗಿತು. ನಿಟ್ಟೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ವಿವಿಧ ಅಭಿವೃದ್ಧಿ ಕಾಮಗಾರಿಗಳಾದ ಹಸಿರೆಮಕ್ಕಿ–ಕೆ.ಬಿ. ಸರ್ಕಲ್ ರಸ್ತೆ, ರಾಮೇಶ್ವರ, ಮಹಾಗಣಪತಿ ಹಾಗೂ ವೀರಭದ್ರ ದೇವಸ್ಥಾನಗಳ ರಸ್ತೆ, ಕಾಲುಸಂಕ ನಿರ್ಮಾಣ ಹಾಗೂ ಶಾಲಾ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕರಾದ ಗೋಪಾಲಕೃಷ್ಣ ಬೇಳೂರು ರವರು ವಿಶೇಷ…

Read More

ಬಾಗಿಲು ಮುರಿದು ಮನೆಗೆ ನುಗ್ಗಿದ ವಾಮಾಚಾರಿಗಳು – ಅಡಿಕೆ ಎಲೆ ಮತ್ತು 11 ರೂಪಾಯಿ ಇಟ್ಟು ಮಾಡಿದ್ದೇನು..!??

ಬಾಗಿಲು ಮುರಿದು ಮನೆಗೆ ನುಗ್ಗಿದ ವಾಮಾಚಾರಿಗಳು – ಅಡಿಕೆ ಎಲೆ ಮತ್ತು 11 ರೂಪಾಯಿ ಇಟ್ಟು ಮಾಡಿದ್ದೇನು..!?? ಶಿವಮೊಗ್ಗ: ನಗರದ ತುಂಗಾ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಚ್ಚರಿ ಹುಟ್ಟಿಸುವ ಘಟನೆ ನಡೆದಿದ್ದು, ಮನೆಯ ಬಾಗಿಲು ಮುರಿದು ಅತಿಕ್ರಮ ಪ್ರವೇಶ ಮಾಡಿ ವಾಮಾಚಾರದ ಕೃತ್ಯ ನಡೆಸಿದ ಘಟನೆ ಬೆಳಕಿಗೆ ಬಂದಿದೆ. ಘಟನೆ ಅಕ್ಟೋಬರ್ 31, 2025 ರಂದು ಮಧ್ಯಾಹ್ನ 1ರಿಂದ 2ರ ನಡುವಿನ ಸಮಯದಲ್ಲಿ ನಡೆದಿದೆ. ದೂರುದಾರ ಮಹಿಳೆಯು ಮನೆಯಲ್ಲಿ ಇರದ ಸಮಯದಲ್ಲಿ, ಕೆಲವರು ಬಾಗಿಲು ಮುರಿದು…

Read More

ಅಡಿಕೆ ಗೊನೆ ಕೀಳುವಾಗ ವಿದ್ಯುತ್ ಶಾಕ್‌ — ಕಾರ್ಮಿಕನ ದುರ್ಮರಣ

ಅಡಿಕೆ ಗೊನೆ ಕೀಳುವಾಗ ವಿದ್ಯುತ್ ಶಾಕ್‌ — ಕಾರ್ಮಿಕನ ದುರ್ಮರಣ ತೀರ್ಥಹಳ್ಳಿ: ತಾಲೂಕಿನ ಬಸವಾನಿ ಸಮೀಪದ ಲಕ್ಷ್ಮೀಪುರ ಗ್ರಾಮದಲ್ಲಿ ಅಡಿಕೆ ಗೊನೆ ಕೀಳುವಾಗ ವಿದ್ಯುತ್ ಶಾಕ್ ತಗುಲಿ ಕಾರ್ಮಿಕನೊಬ್ಬ ಸ್ಥಳದಲ್ಲೇ ಸಾವನ್ನಪ್ಪಿದ ದುರ್ಘಟನೆ ಶನಿವಾರ ಸಂಜೆ ನಡೆದಿದೆ. ಮೃತನನ್ನು ಕೊಪ್ಪ ತಾಲ್ಲೂಕಿನ ದೋರಗಲ್ಲು ಗ್ರಾಮದ ಸತೀಶ್ (50) ಎಂದು ಗುರುತಿಸಲಾಗಿದೆ. ಸತೀಶ್ ಹಲವು ವರ್ಷಗಳಿಂದ ಈ ಭಾಗದಲ್ಲಿ ಗೊನೆಗಾರನಾಗಿ ಕೆಲಸ ಮಾಡುತ್ತಿದ್ದು, ಲಕ್ಷ್ಮೀಪುರದ ರೈತರಿಬ್ಬರ ಅಡಿಕೆ ತೋಟದಲ್ಲಿ ಗೊನೆ ಕೀಳುವ ವೇಳೆ ಆತನ ಕೈಯಲ್ಲಿ ಇದ್ದ ದೋಟಿ…

Read More

ಸಮಟಗಾರು ಸರ್ಕಾರಿ ಶಾಲೆಯಲ್ಲಿ ಸ್ಮಾರ್ಟ್ ಕ್ಲಾಸ್ ಉದ್ಘಾಟನೆ

ಸಮಟಗಾರು ಸರ್ಕಾರಿ ಶಾಲೆಯಲ್ಲಿ ಸ್ಮಾರ್ಟ್ ಕ್ಲಾಸ್ ಉದ್ಘಾಟನೆ “ಗೋವಿಂದ ಬಾಬು ಪೂಜಾರಿಯಂತಹ ಹೃದಯವಂತರು ಸಮಾಜದ ನಿಜವಾದ ಶಕ್ತಿ” — ಆರಗ ಜ್ಞಾನೇಂದ್ರ ಹುಂಚ : ಇಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸಮಟಗಾರಿನಲ್ಲಿ ಇಂದು ಶ್ರೀ ವರಲಕ್ಷ್ಮಿ ಚಾರಿಟಬಲ್ ಟ್ರಸ್ಟ್ (ರಿ) ಉಪ್ಪುಂದ ಅವರ ಆಶ್ರಯದಲ್ಲಿ ಸ್ಥಾಪಿಸಲಾದ ಸುಸಜ್ಜಿತ ಸ್ಮಾರ್ಟ್ ಕ್ಲಾಸ್ ವ್ಯವಸ್ಥೆಯ ಉದ್ಘಾಟನಾ ಸಮಾರಂಭ ಭವ್ಯವಾಗಿ ನೆರವೇರಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮಾನ್ಯ ಶಾಸಕರಾದ ಆರಗ ಜ್ಞಾನೇಂದ್ರರವರು, “ಗೋವಿಂದ ಬಾಬು ಪೂಜಾರಿಯವರ ಸಾಮಾಜಿಕ ಸೇವಾ ಮನೋಭಾವ…

Read More

ಮಾಲೀಕನ ಸಾವಿನ ದುಃಖ ತಾಳಲಾರದೆ ಪ್ರಾಣ ತ್ಯಜಿಸಿದ ಸಾಕು ನಾಯಿ

ಮಾಲೀಕನ ಸಾವಿನ ದುಃಖ ತಾಳಲಾರದೆ ಪ್ರಾಣ ತ್ಯಜಿಸಿದ ಸಾಕು ನಾಯಿ ಭದ್ರಾವತಿ: ನಾಯಿ — ನಿಷ್ಠೆ, ಪ್ರೀತಿ ಮತ್ತು ಬದ್ಧತೆಯ ಪ್ರತೀಕ. ಮಾಲೀಕನಿಗಾಗಿ ಜೀವವನ್ನೇ ಪಣಕ್ಕಿಡುವ ಈ ಪ್ರಾಣಿ, ಕೆಲವೊಮ್ಮೆ ಅವನಿಂದ ದೂರವಾಗುವುದನ್ನೇ ಸಹಿಸಲಾರದು. ಭದ್ರಾವತಿಯಲ್ಲಿ ನಡೆದ ಈ ಹೃದಯವಿದ್ರಾವಕ ಘಟನೆ ಅದಕ್ಕೆ ಜೀವಂತ ಉದಾಹರಣೆ. ನಗರದ ಹುತ್ತಾಕಾಲನಿಯ ಜಿಂಕ್‌ಲೈನ್ ಪ್ರದೇಶದ ನಿವಾಸಿ ಲಾರೆನ್ಸ್ (61) ಪೈಂಟರ್ ಕೆಲಸ ಮಾಡುತ್ತಿದ್ದು, ಮೆದುಳಿನ ಕಾಯಿಲೆಯಿಂದ ಬಳಲುತ್ತಿದ್ದರು. ಇತ್ತೀಚೆಗೆ ಅವರು ನಿಧನರಾದರು. ಆಸ್ಪತ್ರೆಯಿಂದ ಅವರ ಮೃತದೇಹವನ್ನು ಮನೆಗೆ ತರಲಾಗುತ್ತಿದ್ದಂತೆಯೇ, ಮನೆಯ…

Read More

ನೆತ್ತಿಗೇರಿದ ಅಧಿಕಾರದ ಅಮಲು – ಸಾಗರ ನಗರಸಭೆ ಆಯುಕ್ತ ನಾಗಪ್ಪರಿಂದ ಬೀದಿ ವ್ಯಾಪಾರಿಗಳಿಗೆ ಅವಾಚ್ಯ ನಿಂದನೆ – ವಿಡಿಯೋ ವೈರಲ್

ನೆತ್ತಿಗೇರಿದ ಅಧಿಕಾರದ ಅಮಲು – ಸಾಗರ ನಗರಸಭೆ ಆಯುಕ್ತ ನಾಗಪ್ಪರಿಂದ ಬೀದಿ ವ್ಯಾಪಾರಿಗಳಿಗೆ ಅವಾಚ್ಯ ನಿಂದನೆ – ವಿಡಿಯೋ ವೈರಲ್ ಸಾಗರ: ನಗರಸಭೆ ಆಯುಕ್ತ ನಾಗಪ್ಪನವರು ಬೀದಿ ಬದಿ ವ್ಯಾಪಾರಿಗಳಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮಾಹಿತಿಯ ಪ್ರಕಾರ, ನಿನ್ನೆ ರಾತ್ರಿ ಸಾಗರದ ರಾಣಿ ಚೆನ್ನಮ್ಮ ವೃತ್ತದ ಬಳಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ನಿಮಿತ್ತ ಸ್ಥಳ ಖಾಲಿ ಮಾಡಿಸುವ ವೇಳೆ ನಾಗಪ್ಪನವರು ಸ್ಥಳಕ್ಕೆ ಬಂದು ವ್ಯಾಪಾರಿಗಳಿಗೆ ಜಾಗ ತೆರವುಗೊಳಿಸಲು ಸೂಚಿಸಿದ್ದಾರೆ. ಈ…

Read More

ಗಾಂಜಾ ವಶ – ನಾಲ್ವರ ಬಂಧನ

ಗಾಂಜಾ ವಶ – ನಾಲ್ವರ ಬಂಧನ ನ್ಯಾಮತಿ – ಹೊನ್ನಾಳಿ – ಶಿವಮೊಗ್ಗ ರಸ್ತೆ ಬದಿಯ ಕಲ್ಪಿಗಿರಿ ರಂಗನಾಥ ಸ್ವಾಮಿ ದೇವಸ್ಥಾನಕ್ಕೆ ಹೋಗುವ ಮಾರ್ಗದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಐವರು ಆರೋಪಿಗಳನ್ನು ನ್ಯಾಮತಿ ಠಾಣೆಯ ಪೊಲೀಸರು ಬಂಧಿಸಿ ಅಂದಾಜು 13.20 ಮೌಲ್ಯದ 3.1 ಕೆ.ಜಿ.ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ. ಶಿವಮೊಗ್ಗದ ಅರ್ಬಾಜ್ ಖಾನ್ (27), ಮಹಮ್ಮದ್ ಹುಸೈನ್ ರಝಾ (23), ಜಾಫರ್ ಸಾದಿಕ್ (22), ಮಹಮ್ಮದ್ ರೋಹೀತ್ (31) ಹಾಗೂ ನ್ಯಾಮತಿ ತಾಲ್ಲೂಕಿನ  ಹೊಸಜೋಗ ಗ್ರಾಮದ ಶಂಕರನಾಯ್ಕ (29) ಬಂಧಿತರು….

Read More

ಉದ್ಯೋಗದಲ್ಲಿ ಕನ್ನಡಿಗರಿಗೆ ಶೇಕಡಾ ತೊಂಬತ್ತರಷ್ಟು ಮೀಸಲಾತಿ ನೀಡಲಿ – ಶಾಸಕ ಬೇಳೂರು ಗೋಪಾಲಕೃಷ್ಣ

ಉದ್ಯೋಗದಲ್ಲಿ ಕನ್ನಡಿಗರಿಗೆ ಶೇಕಡಾ ತೊಂಬತ್ತರಷ್ಟು ಮೀಸಲಾತಿ ನೀಡಲಿ – ಶಾಸಕ ಬೇಳೂರು ಗೋಪಾಲಕೃಷ್ಣ ರಿಪ್ಪನ್‌ಪೇಟೆ : ಕರ್ನಾಟಕ ರಾಜ್ಯದಲ್ಲಿ ಹಲವು ಕ್ಷೇತ್ರಗಳಲ್ಲಿ ಕನ್ನಡಿಗರಿಗೆ ಅವಕಾಶಗಳು ಕಡಿಮೆಯಾಗುತ್ತಿವೆ. ಹೊರ ರಾಜ್ಯದವರು ಕೆಲಸ ಪಡೆಯುತ್ತಿರುವುದಕ್ಕೆ ಕಾರಣ ನಮ್ಮದೇ ನಿರ್ಲಕ್ಷ್ಯ. ಸರ್ಕಾರದ ನಿಯಮಗಳಲ್ಲಿ ಕನ್ನಡಕ್ಕೆ ಆದ್ಯತೆ ನೀಡುವ ಶಿಫಾರಸು ಈಗಾಗಲೇ ಮಾಡಲಾಗಿದೆ. ಕೈಗಾರಿಕೆ, ಬ್ಯಾಂಕ್, ಶಿಕ್ಷಣ, ಆರೋಗ್ಯ, ಮಾಹಿತಿ ತಂತ್ರಜ್ಞಾನ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲೂ ಸ್ಥಳೀಯ ಯುವಕರಿಗೆ ಶೇ. 90 ಉದ್ಯೋಗಾವಕಾಶ ಒದಗಿಸಿದರೆ ನಾಡು ನಿಜವಾದ ಅರ್ಥದಲ್ಲಿ ಅಭಿವೃದ್ಧಿಯಾಗುತ್ತದೆ,” ಎಂದು ಸಾಗರ…

Read More

ರಿಪ್ಪನ್‌ಪೇಟೆಯಲ್ಲಿ ಕನ್ನಡ ತಾಯಿ ಭುವನೇಶ್ವರಿಯ ಅದ್ದೂರಿ ಮೆರವಣಿಗೆ | ಮನಸೆಳೆದ ಜಾನಪದ ಕಲಾ ಮೆರುಗು

ರಿಪ್ಪನ್‌ಪೇಟೆಯಲ್ಲಿ ಕನ್ನಡ ತಾಯಿ ಭುವನೇಶ್ವರಿಯ ಅದ್ದೂರಿ ಮೆರವಣಿಗೆ | ಮನಸೆಳೆದ ಜಾನಪದ ಕಲಾ ಮೆರುಗು ರಿಪ್ಪನ್‌ಪೇಟೆಯಲ್ಲಿ ಇಂದು ಕನ್ನಡ ರಾಜ್ಯೋತ್ಸವದ ಅಂಗವಾಗಿ ಕಸ್ತೂರಿ ಕನ್ನಡ ಸಂಘದ ವತಿಯಿಂದ ಕನ್ನಡ ತಾಯಿ ಭುವನೇಶ್ವರಿ ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಭವ್ಯವಾಗಿ ನಡೆಯಿತು. ಕನ್ನಡ ತಾಯಿ ಭುವನೇಶ್ವರಿಯ ಮೆರವಣಿಗೆಗೆ ಪಟ್ಟಣದ ಪಿಎಸ್ಐ ರಾಜುರೆಡ್ಡಿ ಚಾಲನೆ ನೀಡಿದರು. ನೂರಾರು ಪುಟಾಣಿ ಮಕ್ಕಳು ಭುವನೇಶ್ವರಿ ವೇಷದಲ್ಲಿ ಮೆರವಣಿಗೆಯಲ್ಲಿ ಭಾಗವಹಿಸಿ ಜನರ ಮನಸೆಳೆದರು. ಡೊಳ್ಳು ಕುಣಿತ, ಪಟಾಕಿ ಪ್ರದರ್ಶನಗಳು ಕಾರ್ಯಕ್ರಮಕ್ಕೆ ವಿಶೇಷ ಮೆರಗು ನೀಡಿದವು….

Read More
Exit mobile version