Headlines

ಶಿವಮೊಗ್ಗ | ಧರ್ಮ ಕೇಳಿ ವ್ಯಾಪಾರಿಯ ಮೇಲೆ ಹಲ್ಲೆ ಕೇಸ್‌ ಗೆ ಬಿಗ್ ಟ್ವಿಸ್ಟ್‌!

ಶಿವಮೊಗ್ಗ | ಧರ್ಮ ಕೇಳಿ ವ್ಯಾಪಾರಿಯ ಮೇಲೆ ಹಲ್ಲೆ ಕೇಸ್‌ ಗೆ ಬಿಗ್ ಟ್ವಿಸ್ಟ್‌

ಶಿವಮೊಗ್ಗದಲ್ಲಿ ಪಾತ್ರೆ ವ್ಯಾಪಾರಿ ಹರೀಶ್​​ ಮೇಲೆ ಜಾತಿ ಕೇಳಿ ಹಲ್ಲೆ(assault) ನಡೆಸಿದ ಆರೋಪ ಪ್ರಕರಣಕ್ಕೆ ಟ್ವಿಸ್ಟ್​ ಸಿಕ್ಕಿದೆ. ಹರೀಶ್ ಮೇಲಿನ ಪ್ರಕರಣವು ಕೋಮು ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ಘಟನೆ ಸಂಬಂಧ ಅರ್ಮಾನ (21), ನಿರಂಜನ್ (20) ಮತ್ತು ಓರ್ವ ಅಪ್ರಾಪ್ತ ಸೇರಿ ಮೂವರನ್ನು ಬಂಧಿಸಲಾಗಿದೆ.

ಆ ಬೆನ್ನಲ್ಲೇ ಹಲ್ಲೆ ನಡೆಸಿರೋದು ಅನ್ಯಕೋಮಿನ ಯುವಕರು ಮಾತ್ರವಲ್ಲ, ಗ್ಯಾಂಗ್​​ನಲ್ಲಿ ಹಿಂದೂಗಳು ಇದ್ದರು ಎಂಬ ವಿಷಯ ಬೆಳಕಿಗೆ ಬಂದಿದೆ.

ಘಟನೆ ಏನು?

ಹರೀಶ್ ತಡ ರಾತ್ರಿ ಊಟ ಮುಗಿಸಿ ವಾಕಿಂಗ್ ಮಾಡಿದ್ದಾರೆ. ಈ ವೇಳೆ ಅದೇ ಮಾರ್ಗವಾಗಿ ಬಂದ ಮೂವರು ದುಷ್ಕರ್ಮಿಗಳು ಹರೀಶ್‌ನ ತಡೆದು ನಿಲ್ಲಿಸಿ ನೀನು ಹಿಂದುನಾ? ಮುಸ್ಲಿಮಾ ಎಂದು ಎಂದು ಪ್ರಶ್ನೆ ಮಾಡಿದ್ದಾರೆ. ತಾನು ಹಿಂದೂ ಎಂದು ಹರೀಶ್ ಹೇಳುತ್ತಿದ್ದಂತೆ ಏಕಾಏಕಿ ಮೂವರು ಯುವಕರು ಹರೀಶ್ ಮೇಲೆ ಹಲ್ಲೆ ನಡೆಸಿದ್ದಾರೆ. ಹಲ್ಲೆ ನಡುವೆ ತಪ್ಪಿಸಿಕೊಂಡು ಓಡಿ ಹೋಗುತ್ತಿದ್ದಂತೆ ಮೂವರು ದುಷ್ಕರ್ಮಿಗಳು ಮತ್ತೆ ಅಟ್ಟಾಡಿಸಿಕೊಂಡು ಹರೀಶ್ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಸ್ವತಃ ಹರೀಶ್ ಹೇಳಿದ್ದಾರೆ.

ಘಟನೆ ಮಾಹಿತಿ ತಿಳಿಯುತ್ತಿದ್ದಂತೆ ಬಿಜೆಪಿ ಶಾಸಕ ಚನ್ನಬಸಪ್ಪ ಸ್ಥಳಕ್ಕೆ ಧಾವಿಸಿದ್ದಾರೆ. ಮಾರ್ನಮಿ ಬೈಲ್, ಜೆಸಿ ನಗರ, ಆರ್‌ಎಂಎಲ್ ನಗರ ಪ್ರದೇಶಗಳಲ್ಲಿ ಗಾಂಜಾ ಸೇವನೆಯಿಂದ ಹಲ್ಲೆಗಳಾಗುತ್ತಿವೆ. ಈ ಭಾಗದಲ್ಲಿ ಬಯಗ್ರಸ್ಥ ವಾತಾವರಣವಿದೆ ಪೊಲೀಸರಿಗೆ ದೂರ ನೀಡಿದರು ಪ್ರಯೋಜನ ಇಲ್ಲ ಎಂದು ಸ್ಥಳೀಯ ಆಕ್ರೋಶ ಹೊರಹಾಕಿದ್ದಾರೆ. ಇದೇ ವೇಳೆ ಪೊಲೀಸರಿಗೆ ದೂರ ನೀಡಲು ಭಯಭೀತಗೊಂಡ ಹರೀಶ್‌ಗೆ ಶಾಸಕ ಚನ್ನಬಸಪ್ಪ ಧೈರ್ಯ ತುಂಬಿ ದೂರು ಕೊಡಿಸಿದ್ದಾರೆ.

ಬಿಜೆಪಿ ಶಾಸಕ ಚನ್ನಬಸಪ್ಪ ನೇತೃತ್ವದಲ್ಲಿ ಪೊಲೀಸ್ ಠಾಣೆಗೆ ಮುತ್ತಿಗೆ

ಇದರ ಬೆನ್ನಲ್ಲೇ ಶಾಸಕ ಚನ್ನಬಸಪ್ಪ ನೇರವಾಗಿ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿದ್ದಾರೆ. ಶಿವಮೊಗ್ಗದಲ್ಲಿ ದೂರು ನೀಡಲು ಭಯಗ್ರಸ್ತ ವಾತಾವರಣ ಇದೆ. ಅಮಾಯಕರ ಮೇಲೆ ಹಲ್ಲೆಗಳಾಗುತ್ತಿದೆ ಪೊಲೀಸರು ಏನು ಮಾಡುತ್ತಿಲ್ಲ ಎಂದು ಶಾಸಕರು ಆಕ್ರೋಶ ಹೊರಹಾಕಿದ್ದಾರೆ. ಶಾಸಕರು ಬಂದು ದೂರು ಕೊಡಿಸ ಬೇಕಾ? ನೀವೇನು ಮಾಡುತ್ತಿದ್ದೀರಿ ಎಂದು ಪೊಲೀಸರ ವಿರುದ್ಧ ಶಾಸಕ ಚನ್ನಬಸಪ್ಪ ಕಿಡಿ ಕಾರಿದ್ದಾರೆ.

ಘಟನೆ ಸಂಬಂಧ ಆಕ್ರೋಶ ಹೊರಹಾಕಿದ್ದ ಶಾಸಕ ಚನ್ನಬಸಪ್ಪ, ಈ ಭಾಗದ ಜನರು ಪೊಲೀಸರಿಗೆ ದೂರು ನೀಡಲು ಭಯ ಪಡಬೇಕಾದ ವಾತಾವರಣಸೃಷ್ಟಿಯಾಗಿದೆ. ದೊಡ್ಡಪೇಟೆ ಪೊಲೀಸರು ಆರೋಪಿಗಳ ಬಂಧನ ಮಾಡುವುದು ಬಿಟ್ಟು ದೂರು ಕೊಟ್ಟವರ ಮಾಹಿತಿ ಲೀಕ್ ಮಾಡುತ್ತಾರೆ. ದೂರು ಕೊಟ್ಟವರ ಮಾಹಿತಿ ಪಡೆದ ಆರೋಪಿಗಳು ಅವರ ಮನೆ ಮೇಲೆ ದಾಳಿ ಮಾಡುತ್ತಾರೆ.

ಗರದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹೆದಿಗೆಟ್ಟು ಹೋಗಿದ್ದು, ಪೊಲೀಸ್ ಇಲಾಖೆ ಸತ್ತು ಹೋಗಿದೆ ಎಂದು ಕಿಡಿ ಕಾರಿದ್ದರು. ಜೊತೆಗೆ ಈ ಪ್ರಕರಣವನ್ನು ಜಿಲ್ಲಾ ಪೊಲೀಸ್ ಗಂಭೀರವಾಗಿ ತೆಗೆದುಕೊಂಡಿಲ್ಲ ಎಂದು ಆರೋಪಿಸಿ ಗೃಹ ಸಚಿವ ಪರಮೇಶ್ವರ್ ಮತ್ತು ಡಿಜಿ ಐಜಿಪಿ ಸಲೀಂ ಮತ್ತು ಅಪರ ಪೊಲೀಸ್ ಮಹಾನಿರ್ದೇಶಕ ಹಿತೇಂದ್ರ ಅವರನ್ನು ಭೇಟಿ ಮಾಡಿ ಘಟನೆ ಕುರಿತು ಚರ್ಚಿಸಿದ್ದರು.

Exit mobile version