ಹೊಸನಗರಕ್ಕೆ ಖಡಕ್ ಸರ್ಕಲ್ ಇನ್ಸ್ ಪೆಕ್ಟರ್ ಮುತ್ತನಗೌಡ ವರ್ಗಾವಣೆ
ಹೊಸನಗರದ ನೂತನ ಸರ್ಕಲ್ ಇನ್ಸ್‌ಪೆಕ್ಟರ್ ಆಗಿ ಹಾವೇರಿ ಡಿಎಸ್ ಬಿ ಘಟಕದ ಖಡಕ್ ಹಾಗೂ ಜನಸ್ನೇಹಿ ಸರ್ಕಲ್ ಇನ್ಸ್ ಪೆಕ್ಟರ್ ಮುತ್ತನಗೌಡ ಗೌಡಪ್ಪಗೌಡರ್ ಅವರನ್ನು ನೇಮಿಸಿ ಆದೇಶ ಹೊರಡಿಸಲಾಗಿದೆ.
ಹೊಸನಗರ ಸರ್ಕಲ್ ಇನ್ಸ್ ಪೆಕ್ಟರ್ ಗುರಣ್ಣ ಹೆಬ್ಬಾಳ್ ಸೇರಿದಂತೆ ಜಿಲ್ಲೆಯ ಹಲವು ಪೊಲೀಸ್ ಇನ್ಸ್ ಪೆಕ್ಟರ್ ಗಳ ವರ್ಗಾವಣೆ ಮಾಡಲಾಗಿತ್ತು. ಗುರಣ್ಣ ಹೆಬ್ಬಾಳ್ ರವರು ಬೆಂಗಳೂರಿನ ಲೋಕಾಯುಕ್ತಕ್ಕೆ ವರ್ಗಾವಣೆಗೊಂಡಿದ್ದಾರೆ. ಅಗಸ್ಟ್ 2023 ರಿಂದ ಹೊಸನಗರದ ಸರ್ಕಲ್ ಇನ್ಸ್ ಪೆಕ್ಟರ್ ಆಗಿ ಜನಸ್ನೇಹಿಯಾಗಿ ಕಾರ್ಯನಿರ್ವಹಿಸಿ ತಾಲೂಕಿನಾದ್ಯಂತ ಶಾಂತಿ ಸುವ್ಯವಸ್ಥೆ ಕಾಪಾಡುವಲ್ಲಿ ಗುರಣ್ಣ ಹೆಬ್ಬಾಳ್ ಪ್ರಮುಖ ಪಾತ್ರ ವಹಿಸಿದ್ದರು , ಮುತ್ತಿನಕೆರೆ ವೃದ್ದೆಯ ಕೊಲೆ ಪ್ರಕರಣವನ್ನು ಏಳು ದಿನಗಳಲ್ಲಿ ಪತ್ತೆ ಹಚ್ಚಿ ಆರೋಪಿಯ ಹೆಡೆಮುರಿ ಕಟ್ಟಿದ್ದರು.
ಇನ್ನೂ ಮುತ್ತನಗೌಡ ಗೌಡಪ್ಪಗೌಡರ್ ರವರು ಹಾವೇರಿ ವಿಭಾಗದಲ್ಲಿ ಉತ್ತಮ ಆಡಳಿತ ನೀಡಿ ಜನಸ್ನೇಹಿ, ಸಮಾಜಮುಖಿ ಕಾರ್ಯಗಳಲ್ಲಿ ಗುರುತಿಸಿಕೊಂಡು ಸಾರ್ವಜನಿಕ ವಾಗಿ ಉತ್ತಮ ಬಾಂದವ್ಯ ಹೊಂದಿದ್ದರು.ಹೊಸನಗರಕ್ಕೆ ಖಡಕ್ ಸರ್ಕಲ್ ಮುತ್ತನಗೌಡ ವರ್ಗಾವಣೆ ಮಾಹಿತಿ ತಿಳಿಯುತ್ತಿದ್ದಂತೆ ಹೊಸನಗರ ತಾಲೂಕಿನ ಪ್ರಮುಖ ಪಟ್ಟಣಗಳಾದ ನಗರ ಮತ್ತು ರಿಪ್ಪನ್ ಪೇಟೆ ಯಲ್ಲಿ ಹಗಲಿರುಳು ನಡೆಯುತ್ತಿರುವ ಮರಳು ಮಾಫಿಯಾ. ಅಕ್ರಮ ಮದ್ಯ ಮಾರಾಟ. ಮತ್ತು ಗಾಂಜಾದ ಮಾಫಿಯಾ ನಡೆಸುವ ಕಳ್ಳಕಾಕರ ಎದೆಯಲ್ಲಿ ನಡುಕ ಹುಟ್ಟಿದೆ.
ಜನ ಸ್ನೇಹಿ ಹಾಗೂ ಖಡಕ್ ಪಿಐ ಮುತ್ತನಗೌಡ ರವರು ಹಾವೇರಿಯಲ್ಲಿ ಕಾರ್ಯನಿರ್ವಹಿಸಿರುವ ಹಾಗೇಯೇ ಹೊಸನಗರದಲ್ಲೂ ಕಾರ್ಯ ನಿರ್ವಹಿಸಿ ಕಳ್ಳಕಾಕರಿಗೆ ಹಾಗೂ ಸಮಾಜಘಾತುಕ ಶಕ್ತಿಗಳಿಗೆ ಕಡಿವಾಣ ಹಾಕುತ್ತಾರೆ ಎನ್ನುವ ನಿರೀಕ್ಷೆಯಲ್ಲಿದ್ದಾರೆ ಹೊಸನಗರ ತಾಲೂಕಿನ ಜನತೆ…
ಸಾಗರದ ಇಂದಿರಗಾಂಧಿ ಕಾಲೇಜಿನ ಸೀಮಾ ಕೌಸರ್ ಗೆ ಪಿಎಚ್.ಡಿ ಪದವಿ Seema Kausar, Head and Associate Professor of…
ಅಪ್ರಾಪ್ತ ವಿದ್ಯಾರ್ಥಿನಿಗೆ ಕಿರುಕುಳ ಆರೋಪ: ಪಿಯು ಕಾಲೇಜು ಪ್ರಾಂಶುಪಾಲರ ವಿರುದ್ಧ ಪೋಕ್ಸೋ, ಅಟ್ರಾಸಿಟಿ ಪ್ರಕರಣ Shivamogga police have registered…
ಕಾರ್ಮಿಕರ ಕಾರ್ಡ್ ಹೆಸರಿನಲ್ಲಿ ವಂಚನೆ ಆರೋಪ: ರಿಪ್ಪನ್‌ಪೇಟೆಯಲ್ಲಿ ಕಾರ್ಮಿಕರ ಆಕ್ರೋಶ Workers in Ripponpete allege money was collected…
ಹುಂಚದ ಶವಾಗಾರಕ್ಕೆ 6 ವರ್ಷವಾದರೂ ಉದ್ಘಾಟನೆ ಭಾಗ್ಯ ಇಲ್ಲ – ಮುಹೂರ್ತ ಸಿಕ್ಕಿಲ್ಲವೋ, ಅಥವಾ ಸತ್ತವರೇ ಎದ್ದು ಬಂದು ರಿಬ್ಬನ್…
ಈದ್ ಮಿಲಾದ್ ಹಬ್ಬ: ಸೌಹಾರ್ದತೆ ಕಾಪಾಡಲು ಪಿಎಸ್‌ಐ ರಾಜುರೆಡ್ಡಿ ಕರೆ Ripponpete PSI Rajureddy appeals for peaceful and…
13 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಬೈಕ್ ಕಳ್ಳ ಕೊನೆಗೂ ಪೊಲೀಸರ ಬಲೆಗೆ Bhadravati New Town Police have arrested a…