Headlines

ಬುಲೆರೋ-ಬೈಕ್ ಮುಖಾಮುಖಿ ಡಿಕ್ಕಿ : ಗರ್ತಿಕೆರೆ ಮೂಲದ ಯುವಕ ಸ್ಥಳದಲ್ಲೇ ಸಾವು

ಬುಲೆರೋ-ಬೈಕ್ ಮುಖಾಮುಖಿ ಡಿಕ್ಕಿ : ಗರ್ತಿಕೆರೆ ಮೂಲದ ಯುವಕ ಸ್ಥಳದಲ್ಲೇ ಸಾವು

ತೀರ್ಥಹಳ್ಳಿ ಪಟ್ಟಣದ ಬಾಳೆಬೈಲು ಸಮೀಪದಲ್ಲಿ ಇಂದು ಸಂಜೆ ನಡೆದ ದುರಂತ ಅಪಘಾತದಲ್ಲಿ ಬೈಕ್ ಹಾಗೂ ಬುಲೆರೋ ವಾಹನ ಮುಖಾಮುಖಿಯಾಗಿದ್ದು, ಬೈಕ್ ಸವಾರ ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾನೆ.

ಗರ್ತಿಕೆರೆ ಸಮೀಪದ ನಿಟ್ಟೂರು ಗ್ರಾಮದ ನಿವಾಸಿ ಚರಣ್ (23) ಎಂಬ ಯುವಕನೇ ದುರ್ದೈವಿ. ಈತ ತೀರ್ಥಹಳ್ಳಿಯಿಂದ ಮನೆಗೆ ವಾಪಸ್ಸಾಗುವ ವೇಳೆ ಅಪಘಾತ ಸಂಭವಿಸಿದೆ. ಚರಣ್ ರಿಪ್ಪನ್‌ಪೇಟೆ ಸರ್ಕಾರಿ ಪದವಿ ಕಾಲೇಜಿನಲ್ಲಿ ಪದವಿ ವ್ಯಾಸಾಂಗ ಮುಗಿಸಿದ್ದನು.

ಇನ್ನೂ ಚರಣ್ ಮೃತದೇಹ ತೀರ್ಥಹಳ್ಳಿ ಪಟ್ಟಣದ ಜೆ.ಸಿ. ಆಸ್ಪತ್ರೆಯ ಶವಗಾರದಲ್ಲಿ ಇರಿಸಲಾಗಿದ್ದು, ಈ ಸಂಬಂಧ ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version