ಫ್ಯಾನಿಗೆ ಕೊರಳೊಡ್ಡಲು ಮುಂದಾದ ವ್ಯಕ್ತಿ | ವೀಡಿಯೋ ಕಾಲ್ ನಲ್ಲಿ ಆತ್ಮ*ಹತ್ಯೆ ಬಗ್ಗೆ ಮಾಹಿತಿ | ಅಷ್ಟರಲ್ಲಿ ಮನೆಗೆ ಬಂದ ಪೊಲೀಸ್, ಆಗಿದ್ದೇನು?
ಶಿವಮೊಗ್ಗ: ಮನೆಯಲ್ಲಿ ಫ್ಯಾನಿಗೆ ನೇಣು ಬಿಗಿದುಕೊಳ್ಳಲು ಯತ್ನಿಸಿದ್ದ ವ್ಯಕ್ತಿಯನ್ನು ಪೊಲೀಸರು ರಕ್ಷಿಸಿದ್ದಾರೆ. ಶಿವಮೊಗ್ಗ ನಗರದ ಆಲ್ಕೊಳ ಬಡಾವಣೆಯ ಮನೆಯೊಂದರಲ್ಲಿ ಈ ಘಟನೆ ನಡೆದಿದೆ.
ಮನೆಯಲ್ಲಿ ಫ್ಯಾನಿಗೆ ನೇಣು ಬಿಗಿದುಕೊಳ್ಳುವುದಾಗಿ ವ್ಯಕ್ತಿಯೊಬ್ಬರು ತಮ್ಮ ಸಂಬಂಧಿಕರಿಗೆ ವಿಡಿಯೋ ಕಾಲ್‌ನಲ್ಲಿ ತಿಳಿಸಿದ್ದರು.
ಈ ಕುರಿತು ಮಾಹಿತಿ ಪಡೆದ 112 ಇಆರ್‌ಎಸ್‌ಎಸ್ ಸಿಬ್ಬಂದಿ ಜಗದೀಶ್ ಮತ್ತು ಚಾಲಕ ಮಂಜುನಾಥ್ ಕೂಡಲೆ ಆಲ್ಕೊಳ ಬಡಾವಣೆಯಲ್ಲಿರುವ ಮನೆಯತ್ತ ದೌಡಾಯಿಸಿದರು. ಮನೆಯಲ್ಲಿ ಆತ್ಮಹತ್ಯೆಗೆ ಯತ್ನಿಸುತ್ತಿದ್ದ ವ್ಯಕ್ತಿಯನ್ನು ಸಮಾಧಾನಪಡೆಸಿ ಮನವೊಲಿಸಲು ಯತ್ನಿಸಿ, ಕೊನೆಗೆ ಅವನನ್ನು ಸುರಕ್ಷಿತವಾಗಿ ರಕ್ಷಿಸಿದರು.
ತದನಂತರ ತುಂಗಾನಗರ ಠಾಣೆಯ ಸಿಬ್ಬಂದಿ ಪ್ರಭು ಮತ್ತು ಕಿರಣ್ ಕೂಡ ಸ್ಥಳಕ್ಕೆ ಆಗಮಿಸಿ, ವ್ಯಕ್ತಿಯೊಂದಿಗೆ ಮಾತನಾಡಿ ಸ್ಥಿತಿಗತಿಗಳನ್ನು ಸಮತೋಲನಕ್ಕೆ ತಂದರು.ಪೊಲೀಸರು ತಕ್ಷಣ ಕ್ರಮ ಕೈಗೊಂಡು ಒಂದು ಅಮೂಲ್ಯ ಜೀವ ಉಳಿಸಿರುವುದಕ್ಕೆ ಸಾರ್ವಜನಿಕರು ಪ್ರಶಂಸೆಯ ನುಡಿಗಳನ್ನಾಡಿದ್ದಾರೆ.
POSTMAN NEWS ಮನವಿ: ಜೀವನದಲ್ಲಿ ಏನೇ ಸಮಸ್ಯೆಗಳು ಬಂದರೂ, ಅದಕ್ಕೆ ಶಾಶ್ವತ ಪರಿಹಾರವಿಲ್ಲ ಎಂಬ ನಂಬಿಕೆ ಕಳೆದುಕೊಳ್ಳಬೇಡಿ. ಸಹಾಯ ಬೇಕಾದರೆ ಈ ನಂಬರನ್ನು ಸಂಪರ್ಕಿಸಿ – ಆತ್ಮಹತ್ಯೆ ತಡೆಗಟ್ಟುವ ಸಲಹಾ ಸಹಾಯವಾಣಿ: 9152987821 (ಸಹಾಯ) / 1800-599-0019 (ಸ್ನೇಹ).
ಕಾಲೇಜು ಸಮವಸ್ತ್ರದಲ್ಲೇ ಕೆರೆಯಲ್ಲಿ ಪತ್ತೆಯಾದ ಬಿಸಿಎ ವಿದ್ಯಾರ್ಥಿನಿಯ ಶವ ಶಿಕಾರಿಪುರ: ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ಪಟ್ಟಣದ ಹುಚ್ಚುರಾಯಸ್ವಾಮಿ ಕೆರೆಯಲ್ಲಿ ಬಿಸಿಎ…
ವಾಮಾಚಾರದ ಭಯ ಹುಟ್ಟಿಸಿ ಲಕ್ಷಾಂತರ ರೂ ಮೌಲ್ಯದ ಚಿನ್ನಾಭರಣ ವಂಚನೆ: ಕೆಲವೇ ಗಂಟೆಗಳಲ್ಲಿ ಆರೋಪಿ ಬಂಧನ Bhadravati police arrested…
ರಿಪ್ಪನ್‌ಪೇಟೆ: ವಾಹನದಿಂದ ಬಿದ್ದ ಕರುವನ್ನು ಕಿಲೋಮೀಟರ್‌ಗಟ್ಟಲೆ ಎಳೆದೊಯ್ದ ಚಾಲಕ; ಕರು ಸ್ಥಿತಿ ಚಿಂತಾಜನಕ , ಸ್ಥಳೀಯರ ಆಕ್ರೋಶ !! A…
ಈಸ್ಟ್‌ವೆಸ್ಟ್ ಬಸ್ ಮಾಲೀಕ ತಲ್ಕೀನ್ ಅಹ್ಮದ್ ನಿಧನ Talkeen Ahmed, owner of East West Bus institution and…
ಪತ್ರಕರ್ತನ ಮನೆಗೆ ಕನ್ನ ; ₹6.57 ಲಕ್ಷ ಮೌಲ್ಯದ ಚಿನ್ನಾಭರಣ, ನಗದು ಕಳವು Thieves broke into journalist Shi.…
ಚೋರಡಿ ಲಾಡ್ಜ್‌ನಲ್ಲಿ ಪೊಲೀಸರಿಗೆ ಚಾಕು ತೋರಿಸಿ ಐವರು ಪರಾರಿ; ಕುಂಸಿ ಠಾಣೆಯಲ್ಲಿ ಪ್ರಕರಣ ದಾಖಲು ಶಿವಮೊಗ್ಗ: ಅನುಮಾನಾಸ್ಪದವಾಗಿ ಲಾಡ್ಜ್‌ನಲ್ಲಿ ತಂಗಿದ್ದ…