ಹಣಗೆರೆ ಬಳಿ ಭಯಾನಕ ರಸ್ತೆ ಅಪಘಾತ – ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾದ ಪ್ರಯಾಣಿಕರು
ಶಿವಮೊಗ್ಗ, ಹಣಗೆರೆಕಟ್ಟೆ ರಸ್ತೆಯ ಕುಣಜೆ ಗ್ರಾಮದ ಬಳಿ ನಿನ್ನೆ ಭಯಾನಕ ರಸ್ತೆ ಅಪಘಾತ ಸಂಭವಿಸಿದೆ. ಆದರೆ ಅದೃಷ್ಟವಶಾತ್ ಈ ದುರ್ಘಟನೆಯಲ್ಲಿ ಯಾರಿಗೂ ಪ್ರಾಣಾಪಾಯವಾಗದೇ ಪಾರಾಗಿದ್ದಾರೆ.
ಶಿವಮೊಗ್ಗದಿಂದ ಹಣಗೆರೆಕಟ್ಟೆ ಕಡೆಗೆ ತೆರಳುತ್ತಿದ್ದ ಖಾಸಗಿ ಬಸ್ ಒಂದಕ್ಕೆ ಎದುರಿನಿಂದ ಬಂದ ಸ್ವಿಫ್ಟ್ ಕಾರೊಂದು ಹಿಂಬದಿ ಭಾಗದಲ್ಲಿ ಡಿಕ್ಕಿ ಹೊಡೆದ ಪರಿಣಾಮ, ಬಸ್‌ನ ಹಿಂಬದಿ ನಾಲ್ಕು ಟಯರ್‌ಗಳು ಸಂಪೂರ್ಣವಾಗಿ ಕಿತ್ತು ಹೋಗಿವೆ. ಕಾರಿನ ಮುಂಭಾಗ ತೀವ್ರವಾಗಿ ಜಕಂಗೊಂಡಿದ್ದರೂ, ಗಂಭೀರ ಗಾಯವಾದ ಬಗ್ಗೆ ವರದಿಯಾಗಿಲ್ಲ.
ಘಟನೆ ವೇಳೆ ಬಸ್‌ನಲ್ಲಿ ಅನೇಕ ಪ್ರಯಾಣಿಕರಿದ್ದು, ಅವರಿಗೂ ಯಾವುದೇ ರೀತಿಯ ಅಪಾಯವಾಗಿಲ್ಲ , ಪ್ರಯಾಣಿಕರು ಸುರಕ್ಷಿತರಾಗಿದ್ದು, ದೊಡ್ಡ ದುರಂತವೊಂದು ತಪ್ಪಿದಂತಾಗಿದೆ.
ಕಾರು ತೆಲಂಗಾಣದ ರಿಜಿಸ್ಟ್ರೇಷನ್ ಹೊಂದಿದೆ. ಈ ಅಪಘಾತ ಕುಂಸಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ.