ಅಪರೂಪದ ಖಾಯಿಲೆಯಿಂದ ಬಳಲುತ್ತಿರುವ ಮಗುವಿನ ಚಿಕಿತ್ಸೆಗೆ ಸ್ಪಂಧಿಸಿದ ಕಟ್ಟಡ ಕಾರ್ಮಿಕರು ಹಾಗೂ ಪೊಲೀಸರು
ಆದ್ಯಳ ಚಿಕಿತ್ಸೆಗೆ ಬೇಕು ಇನ್ನೂ ಲಕ್ಷಾಂತರ ರೂ ಹಣ – ನೆರವಿಗಾಗಿ ಪೋಸ್ಟ್ ಮ್ಯಾನ್ ನ್ಯೂಸ್ ಮನವಿ
ಅಪರೂಪದ ಖಾಯಿಲೆಯಿಂದ ಬಳಲುತ್ತಿರುವ ಮಗುವಿನ ಚಿಕಿತ್ಸೆಗೆ ಸ್ಪಂಧಿಸಿದ ಕಟ್ಟಡ ಕಾರ್ಮಿಕರು ಹಾಗೂ ಪೊಲೀಸರು
ಆದ್ಯಳ ಚಿಕಿತ್ಸೆಗೆ ಬೇಕು ಇನ್ನೂ ಲಕ್ಷಾಂತರ ರೂ ಹಣ – ನೆರವಿಗಾಗಿ ಪೋಸ್ಟ್ ಮ್ಯಾನ್ ನ್ಯೂಸ್ ಮನವಿ
ರಿಪ್ಪನ್ ಪೇಟೆ : ಅಪರೂಪದ ಖಾಯಿಲೆಯಿಂದ ಬಳಲುತ್ತಿರುವ ಗರ್ತಿಕೆರೆ ಗ್ರಾಮದ ಗಾರೆ ಕೆಲಸಗಾರ ಸತೀಶ್ ಪೂಜಾರ್ ರವರ ಐದು ವರ್ಷದ ಮಗಳು ಆದ್ಯ ಚಿಕಿತ್ಸೆಗೆ ತಾಲೂಕ್ ಕಟ್ಟಡ ಕಾರ್ಮಿಕರ ಸಂಘ ಹಾಗೂ ರಿಪ್ಪನ್ ಪೇಟೆ ಪೊಲೀಸರು ಸಹಾಯ ಹಸ್ತ ಚಾಚುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
“ಇದು ಬಹಳ ಅಪರೂಪದ ಜೆನೆಟಿಕಲ್ ಡಿಸಾರ್ಡೆರ್ ಆಗಿದ್ದು, ಮಗುವಿನ ದೇಹದಲ್ಲಿ ರಕ್ತ ಉತ್ಪಾದನೆಯಾಗುತ್ತಿಲ್ಲ ಇದಕ್ಕೆ ಸೂಕ್ತವಾದ ಚಿಕಿತ್ಸೆಯಿದ್ದು ಮಗು ಈ ಆರೋಗ್ಯ ಸಮಸ್ಯೆಯಿಂದ ಗುಣವಾಗುವ ಎಲ್ಲಾ ಸಾಧ್ಯತೆಗಳಿದೆ. ಆದ್ರೆ ಮಗುವಿನ ವೈದ್ಯಕೀಯ ಚಿಕಿತ್ಸೆಗೆ ಬೇಕಾದಂತಹ ಮೊತ್ತ ಕೇಳಿದರೆ ಮೈ ಜುಮ್ ಎನ್ನುತ್ತದೆ. ಈ ವೈದ್ಯಕೀಯ ಚಿಕಿತ್ಸೆಗೆ ಬೇಕಾಗಿರುವುದು ಸುಮಾರು ನಲವತ್ತು ಲಕ್ಷ ರೂಪಾಯಿ ಆದರೆ ಗಾರೆ ಕೆಲಸ ನಿರ್ವಹಿಸುವ ಮಗುವಿನ ತಂದೆ ತಾಯಿ ಎಲ್ಲವನ್ನೂ ಬಿಟ್ಟು, ಅವರ ಆಸ್ತಿಯನ್ನೆಲ್ಲಾ ಮಾರಿ, ಈ ಮಗುವನ್ನು ಉಳಿಸಿಕೊಳ್ಳುವ ಪ್ರಯತ್ನದಲ್ಲಿದ್ದಾರೆ.
ಈ ಮಗುವಿನ ಖಾಯಿಲೆ ಬಗ್ಗೆ ಕಟ್ಟಡ ಕಾರ್ಮಿಕ ಸಂಘಟನೆಯವರಿಗೆ ಮಾಹಿತಿ ಬಂದ ತಕ್ಷಣ ತಮ್ಮ ಜಿಲ್ಲಾ ಸಂಘಟನೆಯ ಪ್ರಮುಖರಿಗೆ ಮಾಹಿತಿ ಮುಟ್ಟಿಸಿ ತಮ್ಮ ಸಂಘಟನೆಯ ಸದಸ್ಯರೇ ಸ್ವಯಂಪ್ರೇರಿತವಾಗಿ ದೇಣಿಗೆಯನ್ನು ಒಟ್ಟು ಮಾಡಿ ಆ ನಂತರದಲ್ಲಿ ಸ್ಥಳೀಯ ಠಾಣೆಯ ಪಿಎಸೈ ಪ್ರವೀಣ್ ಎಸ್ ಪಿ ಗಮನಕ್ಕೆ ತಂದಿದ್ದಾರೆ. ಈಗಾಗಲೇ ಹಲವಾರು ಸಾಮಾಜಿಕ ಕಾರ್ಯಕ್ರಮಗಳ ಮೂಲಕ ಜನಮನ್ನಣೆ ಗಳಿಸಿರುವ ರಿಪ್ಪನ್ ಪೇಟೆ ಪಿಎಸೈ ಹಾಗೂ ಸಿಬ್ಬಂದಿಗಳು ತಮ್ಮ ಠಾಣೆ ವತಿಯಿಂದಲೂ ಸಹಾಯಧನವನ್ನು ನೀಡಿದ್ದಾರೆ.
ಮಂಗಳವಾರ ಬೆಳಿಗ್ಗೆ ಗರ್ತಿಕೆರೆಯ ಸತೀಶ್ ಪೂಜಾರಿರವರಿಗೆ ಕಟ್ಟಡ ಕಾರ್ಮಿಕರ ಸಂಘ ಹಾಗೂ ಪೊಲೀಸ್ ಠಾಣೆ ವತಿಯಿಂದ ಸಂಗ್ರಹಿಸಿದ್ದ ದೇಣಿಗೆ ಹಣವನ್ನು ಡಿವೈಎಸ್ಪಿ ಅರವಿಂದ್ ಕರಗುಜ್ಜಿ ಸಮ್ಮುಖದಲ್ಲಿ ಹಸ್ತಾಂತರಿಸಲಾಯಿತು.
ಈ ಸಂಧರ್ಭದಲ್ಲಿ ಮಾತನಾಡಿದ ಡಿವೈಎಸ್ಪಿ ಅರವಿಂದ್ ಕರಗುಜ್ಜಿ ಮಾನವೀಯ ನೆಲೆಯಲ್ಲಿ ಸಹಾಯ ಮಾಡುವ ಮಹತ್ಕಾರ್ಯಕ್ಕೆ ಇಲಾಖೆಯಿಂದ ಸದಾ ನೆರವು ನೀಡಲಾಗುವುದು ಎಂದರು.
ಕಟ್ಟಡ ಕಾರ್ಮಿಕರ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಸುಂದರ್ ಬಾಬು ಮಾತನಾಡಿ ನಮ್ಮ ಕಟ್ಟಡ ಕಾರ್ಮಿಕರ ಸಂಘದ ಸಕ್ರೀಯ ಕಾರ್ಯಕರ್ತ ಸತೀಶ್ ಪೂಜಾರ ಮಗಳಿಗೆ ಚಿಕಿತ್ಸೆ ನೀಡುವ ಸಲುವಾಗಿ ಲಕ್ಷಾಂತರ ರೂ ಅವಶ್ಯಕತೆ ಇದ್ದು ಸಂಘಟನೆ ಹಾಗೂ ಪೊಲೀಸ್ ಇಲಾಖೆ ವತಿಯಿಂದ ಸುಮಾರು ಎರಡು ಲಕ್ಷ ಸಹಾಯ ಮಾಡಿದ್ದೇವೆ ಚಿಕಿತ್ಸೆಗೆ ಇನ್ನೂ ಹ್ಱ್ಣ ಬೇಕಾಗಿದೆ ಹಾಗಾಗಿ ಸಾರ್ವಜನಿಕರು ತಮ್ಮ ಕೈಲಾದ ಸಹಾಯವನ್ನು ಮಾಡುವ ಮೂಲಕ ಮಗುವಿನ ಚಿಕಿತ್ಸೆಗೆ ನೆರವಾಗಬೇಕಾಗಿ ಕೇಳಿಕೊಂಡರು.
ಈ ಸಂಧರ್ಭದಲ್ಲಿ ಪಿಎಸೈ ಪ್ರವೀಣ್ ಎಸ್ ಪಿ ,ಗ್ರಾಪಂ ಉಪಾಧ್ಯಕ್ಷರದ ಸುಧೀಂದ್ರ ಪೂಜಾರಿ ಕಟ್ಟಡ ಕಾರ್ಮಿಕರ ಸಂಘದ ಜಿಲ್ಲಾಧ್ಯಕ್ಷರಾದ ಸಂಜಯ್ ಕುಮಾರ್ , ಹೊಸನಗರ ತಾಲೂಕ್ ಅಧ್ಯಕ್ಷ ಮಹಮ್ಮದ್ ಹುಸೇನ್ , ಹುಂಚ ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷ ಶಂಕರ್ ಆಚಾರ್ , ಪ್ರಭಾಕರ್ ಆಚಾರ್ , ರವೀಂದ್ರ ಕೆರೆಹಳ್ಳಿ , ಜಿ ಡಿ ಮಲ್ಲಿಕಾರ್ಜುನ್ ಹಾಗೂ ಇನ್ನಿತರರಿದ್ದರು.
ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಗರ್ತಿಕೆರೆ ಗ್ರಾಮದ ಗಾರೆ ಕೆಲಸ ನಿರ್ವಹಿಸುವ ಬಡ ಕುಟುಂಬದ ಐದು ವರ್ಷದ ಮಗು ಆದ್ಯ ಳಿಗೆ ಅಪರೂಪದ ಖಾಯಿಲೆ ಬಂದೆರೆಗಿದ್ದು ಆಕೆಯ ಚಿಕಿತ್ಸೆಗೆ ಅವಳ ಪೋಷಕರು ಸಾಕಷ್ಟು ಹೋರಾಟ ನಡೆಸುತಿದ್ದಾರೆ.
ಈಗಾಗಲೇ ಪೊಲೀಸ್ ಇಲಾಖೆ ಹಾಗೂ ಕಟ್ಟಡ ಕಾರ್ಮಿಕರ ಸಂಘಟನೆ ತಮ್ಮ ಕೈಲಾದ ಆರ್ಥಿಕ ನೆರವು ನೀಡಿದ್ದು ಇನ್ನೂ ಲಕ್ಷಾಂತರ ರೂ ಹಣದ ಅವಶ್ಯಕತೆ ಇದೆ ಹಾಗಾಗಿ ಸಾರ್ವಜನಿಕರು ಹಾಗೂ ಸಹೃದಯಿಗಳು ತಮ್ಮ ಕೈಲಾದ ಸಹಾಯ ಮಾಡುವ ಮೂಲಕ ಬಡ ಕುಟುಂಬದ ನೆರವಿಗೆ ನಿಲ್ಲಬೇಕಾಗಿ ಪೋಸ್ಟ್ ಮ್ಯಾನ್ ನ್ಯೂಸ್ ಮನವಿ ಮಾಡಿಕೊಳ್ಳುತ್ತದೆ.
ಹೆಚ್ಚಿನ ಮಾಹಿತಿಗೆ ಈ ನಂಬರ್ ಗೆ ಕರೆ ಮಾಡಿ :
9480280780
9686898630
ಆದ್ಯಳ ತಾಯಿ ಅಮೃತ ರವರ ಬ್ಯಾಂಕ್ ಡಿಟೇಲ್ಸ್ :
AMRUTHA
account NUMBER : 40560110143
IFSC CODE : SBIN004174
ಫೋನ್ ಪೇ ನಂಬರ್ : 9686898630
ಗೂಗಲ್ ಪೇ ನಂಬರ್ : 9480280780
ಈ ಕೆಳಗಿನ ಮಗುವಿನ ತಂದೆ ಸತೀಶ್ ಆಚಾರ್ ರವರ ಕ್ಯೂ ಆರ್ ಕೋಡ್ ಬಳಸಿ ಸಹಾಯ ಮಾಡಿ :
ಕೋಡೂರು ಶಾಲೆಯಲ್ಲಿ ಸಂಭ್ರಮದ ಕೃಷ್ಣ-ರಾಧಾ ವೇಷ ಸ್ಪರ್ಧೆ: ಭಾವೈಕ್ಯತೆಗೆ ಸಾಕ್ಷಿಯಾದ ಮುದ್ದುಕೃಷ್ಣರು Krishna-Radha fancy dress competition at Koduru…
ತುಂಗಾ ನದಿಗೆ ಹಾರಿದ 19 ವರ್ಷದ ಯುವತಿ; ಅಗ್ನಿಶಾಮಕ ಸಿಬ್ಬಂದಿಯಿಂದ ರಕ್ಷಣೆ 19-year-old woman jumps into Tunga River…
ಪೊಲೀಸರ ದಿಢೀರ್ ದಾಳಿ – ಅಕ್ರಮ ಕಸಾಯಿ ಖಾನೆಯಿಂದ ಮಾಂಸ ವಶಕ್ಕೆ , ಪ್ರಕರಣ ದಾಖಲು Police conduct a…
ರಿಪ್ಪನ್‌ಪೇಟೆ ಸರ್ಕಾರಿ ಶಾಲೆ ಶತಮಾನೋತ್ಸವ ಸಮಿತಿಗೆ ಅಧ್ಯಕ್ಷರಾಗಿ ನಿರೂಪ್ ಕುಮಾರ್ , ಕಾರ್ಯಾಧ್ಯಕ್ಷರಾಗಿ ಸುರೇಶ್ ಸಿಂಗ್ ಆಯ್ಕೆ Ripponpete Government…
ಕಾಲೇಜು ಸಮವಸ್ತ್ರದಲ್ಲೇ ಕೆರೆಯಲ್ಲಿ ಪತ್ತೆಯಾದ ಬಿಸಿಎ ವಿದ್ಯಾರ್ಥಿನಿಯ ಶವ ಶಿಕಾರಿಪುರ: ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ಪಟ್ಟಣದ ಹುಚ್ಚುರಾಯಸ್ವಾಮಿ ಕೆರೆಯಲ್ಲಿ ಬಿಸಿಎ…
ವಾಮಾಚಾರದ ಭಯ ಹುಟ್ಟಿಸಿ ಲಕ್ಷಾಂತರ ರೂ ಮೌಲ್ಯದ ಚಿನ್ನಾಭರಣ ವಂಚನೆ: ಕೆಲವೇ ಗಂಟೆಗಳಲ್ಲಿ ಆರೋಪಿ ಬಂಧನ Bhadravati police arrested…