ಭಾರತೀಯ ಸೇನೆಯಿಂದ ಆಪರೇಷನ್ ಸಿಂಧೂರ್, ಪಹಲ್ಗಾಮ್ ದಾಳಿಗೆ ಪ್ರತೀಕಾರ – ಮಿಡ್ ನೈಟ್ ಆಪರೇಷನ್ ನಲ್ಲಿ 9 ಉಗ್ರ ನೆಲೆಗಳ ಮೇಲೆ ದಾಳಿ, 100 ಕ್ಕೂ ಹೆಚ್ಚು ಉಗ್ರರು ಸಾವು
ಭಾರತೀಯ ಸೇನೆಯು ಇಂದು ಬೆಳಗಿನ ಜಾವ “ಆಪರೇಷನ್ ಸಿಂಧೂರ್” ಎಂಬ ದಿಟ್ಟ ಕಾರ್ಯಾಚರಣೆಯನ್ನು ಪಾಕ್‌ನ ಉಗ್ರರ ತಾಣಗಳ ಮೇಲೆ ನಡೆಸಿದೆ. ಆದರಂತೆ ಇಂದು ಮುಂಜಾನೆ ಅಂದರೆ, ಬೆಳಗಿನ 1:28 ರಿಂದ 1:51 ರವರೆಗೆ ನಡೆದ ಬೃಹತ್ ಕಾರ್ಯಾಚರಣೆಯಲ್ಲಿ ಭಾರತೀಯ ಸೇನೆಯ ವಾಯುಪಡೆಯು ಪಾಕ್‌ನ ಉಗ್ರರ ಅಡುಗುತಾಣಗಳನ್ನು ನಾಶ ಮಾಡಿದ್ದು, ಬರೋಬ್ಬರಿ 23 ನಿಮಿಷಗಳಲ್ಲಿ 9 ಉಗ್ರರ ಕಂಟ್ರೋಲ್ ರೂಮ್‌ಗಳ ಮೇಲೆ ದಾಳಿ ಮಾಡಿ ಸುಮಾರು 100 ಕ್ಕೂ ಹೆಚ್ಚು ಉಗ್ರರನ್ನು ಹೊಡೆದುರುಳಿಸಿದೆ. ಪಾಕ್ ಬಹವಾಲ್‌ಪುರ್ ಒಂದರಲ್ಲೇ ಸುಮಾರು 50 ಉಗ್ರರು ಹತರಾಗಿದ್ದು ಪಾಕ್‌ನ ಸರ್ಕಾರಿ ಆಸ್ಪತ್ರೆಗಳು ತುಂಬಿ ತುಳುಕುತ್ತಿವೆ.
ಭಾರತದ ದಾಳಿ ಬಳಿಕ ಪಾಕಿಸ್ಥಾನ ಸೇನೆಯಿಂದ ಗಡಿಯಲ್ಲಿ ಅಪ್ರಚೋದಿತ ಗುಂಡಿನ ದಾಳಿ ನಡೆಸಿದೆ,ಇದಕ್ಕೆ ತೀಕ್ಷ ಪ್ರತಿಕ್ರಿಯೆ ವ್ಯಕ್ತಪಡಿಸಿದ ಭಾರತೀಯ ಸೇನೆ ಪಾಕ್ ಮಿಲಿಟರಿ ಪೋಸ್ಟ್‌ಗಳ ಮೇಲೆ ದಾಳಿ ಮಾಡಿ ಧ್ವಂಸಗೊಳಿಸಿದೆ.
5 ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ ಉಗ್ರರ ನೆಲೆಗಳು ಹಾಗೂ 4 ಪಾಕ್‌ನಲ್ಲಿನ ಉಗ್ರರ ನೆಲೆಗಳನ್ನು ಟಾರ್ಗೆಟ್ ಮಾಡಿ ಡ್ರೋನ್ ಹಾಗೂ ಫೈಟರ್ ಜೆಟ್‌ಗಳ ಮೂಲಕ ದಾಳಿ ಮಾಡಿ ಧ್ವಂಸ ಮಾಡಲಾಗಿದೆ.
ಈ ನಡುವೆ ಪಾಕ್‌ನಿಂದ ಪ್ರತಿದಾಳಿ ಸಾಧ್ಯತೆ ಹಿನ್ನೆಲೆ ಶ್ರೀನಗರ ಏರ್‌ಪೋರ್ಟ್ ಬಂದ್ ಆಗಿದೆ ನಾಗರೀಕ ವಿಮಾನ ಸೇವೆ ಸಂಪೂರ್ಣ ಬಂದ್ ಮಾಡಿ ಸಂಪೂರ್ಣ ಏರ್‌ಪೋರ್ಟ್‌ನ್ನು ತನ್ನ ವಶಕ್ಕೆ ಪಡೆದುಕೊಂಡಿದೆ.ರಾಜಸ್ಥಾನ ಗಡಿ ಪ್ರದೇಶದಲ್ಲಿ ಭಾರತೀಯ ವಾಯುಸೇನೆ ಸಮರಾಭ್ಯಾಸ ನಡೆಸಲಿದೆ.
ಸೇನಾ ದಾಳಿ ಹಿನ್ನೆಲೆಯಲ್ಲಿ 3 ಸೇನಾ ಪಡೆಯ ಮುಖ್ಯಸ್ಥರೊಡನೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಜಂಟಿ ಸಭೆ ನಡೆಸಲಿದ್ದಾರೆ,ನಂತರ ಅಜಿತ್ ಧೋವಲ್ ಕೂಡ ಸಭೆ ನಡೆಸಲಿದ್ದು, ದಾಳಿ ಕುರಿತು ಜಂಟಿ ಸುದ್ದಿಗೋಷ್ಠಿ ನಡೆಸಲಿದೆ.
ಬಹಲಾಮ್ ಪುರ್ ಆಸ್ಪತ್ರೆಯಲ್ಲಿ ಗಾಯಗೊಂಡ ಉಗ್ರರಿಗೆ ಚಿಕಿತ್ಸೆ ನೀಡುಲಾಗುತ್ತಿದೆ, ಮತ್ತೊಂದೆಡೆ ಉಗ್ರರ ಹೆಣಗಳ ರಾಶಿ ಬಿದ್ದಿವೆ ಎಂದು ವರದಿಯಾಗಿದೆ.
ರೈತರ ಹೆಸರಿಗೂ ಗೌರವದ ಅಂಕಿತ ಬೇಕು: ‘Fr’ ಸೇರಿಸಲು ಸರ್ಕಾರಕ್ಕೆ ಮನವಿ Kalluru Meghraj urges the Karnataka government…
ಕುಡಿಯುವ ನೀರಿಗಾಗಿ ಬಾಳೂರು ಗ್ರಾಮಸ್ಥರ ಆಕ್ರೋಶ; ಗ್ರಾ.ಪಂ. ಕಚೇರಿ ಎದುರು ಪ್ರತಿಭಟನೆ Residents of Baluru and Kaleshwara villages…
ಬಟಾಣಿಜಡ್ಡು, ತಮ್ಮಡಿಕೊಪ್ಪ ಭಾಗದಲ್ಲಿ ಆನೆಗಳ ಸಂಚಾರ – ತೋಟಗಳಿಗೆ ಹಾನಿ , ಜನರಿಗೆ ಅರಣ್ಯ ಇಲಾಖೆ ಎಚ್ಚರಿಕೆ Wild elephant…
ಕಾರಿನಲ್ಲಿ ಗಾಂಜಾ ಮಾರಾಟ: ಇಬ್ಬರ ಬಂಧನ, 1.42 ಕೆಜಿ ಗಾಂಜಾ ಹಾಗೂ ಕಾರು ಜಪ್ತಿ Two people were arrested…
ಎಣ್ಣೆ ಮತ್ತಿನಲ್ಲಿ ಅಪಾಯಕಾರಿ ಆಟೋ ಚಾಲನೆ: ಚಾಲಕನ ಬಂಧನ, ವಾಹನ ಪೊಲೀಸ್ ವಶಕ್ಕೆ Shivamogga West Traffic Police registered…
ಅರಸಾಳು ಬಳಿ ರೈಲ್ವೆ ಹಳಿಯ ಮೇಲೆ ಉರುಳಿದ ಮರ; ಮಾರ್ಗ ಮಧ್ಯೆ ನಿಂತ ತಾಳಗುಪ್ಪ-ಬೆಂಗಳೂರು ರೈಲು! ಪ್ರಯಾಣಿಕರ ಪರದಾಟ The…