ಮೇ 16 ರಿಂದ ಹೊಸನಗರ ತಾಲೂಕಿನ ನಗರ ಮಾಅಸುಂಷಾ ವಲಿಯುಲ್ಲಾ ದರ್ಗಾದಲ್ಲಿ ಉರೂಸ್ ಸಮಾರಂಭ :
ಹೊಸನಗರ: ತಾಲೂಕಿನ ಐತಿಹಾಸಿಕ ಬಿದನೂರು ನಗರದ ಶಾಂತಿಕೆರೆ ಸಮೀಪ ಇರುವ ಹಜರತ್ ಶೇಖುಲ್‌ಅಕ್ಬರ್‌ಅನ್ವರ್ ಮಾಅಸುಂಷಾ ವಲೀಯುಲ್ಲಾ ದರ್ಗಾದ ಉರೂಸ್ ಸಮಾರಂಭ ಮೇ 16ರಿಂದ ಪ್ರಾರಂಭಗೊಳ್ಳಲಿದೆ ಎಂದು ದರ್ಗಾ ಸಮಿತಿ ಅಧ್ಯಕ್ಷರಾದ ಜಿ ಮಹಮ್ಮದ್ ಸಾಬ್ ಹಾಗೂ ಉಪಾಧ್ಯಕ್ಷ ಅರ್ ಎ ಚಾಬುಸಾಬ್ ಜಂಟಿ ಪತ್ರೀಕಾ ಗೋಷ್ಟಿಯಲ್ಲಿ ತಿಳಿಸಿದರು.
ನಗರದ ದರ್ಗಾ ಆವರಣದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿ ಮೇ 16 , 17 , 18 ಹಾಗೂ 19 ರಂದು ಉರೂಸ್ ಸಂಭ್ರಮ ನಡೆಯಲಿದೆ. ಮೇ 16ರಂದು ತೀರ್ಥಹಳ್ಳಿಯ ಮುರಾ ತಂಗಳ್ ಹಾಗೂ ಅಸ್ಸಯ್ಯಿದ್ ಶಹೀದುದ್ದೀನ್ ಅಲ್-ಬುಖಾರಿ ಶಿವಮೊಗ್ಗ ನೇತೃತ್ವದಲ್ಲಿ ಚಾಲನೆಗೊಳ್ಳಲಿರುವ ಉರೂಸ್‌ನ್ನುಕೂರ ತಂಗಳ್ ಪುತ್ರರಾದ ಮಶ್ಹೂದ್ ತಂಗಳ್ ಉದ್ಘಾಟಿಸಲಿರುವರು.
ಈ ಕಾರ್ಯಕ್ರಮಕ್ಕೆ ರಾಜ್ಯ ವಕ್ಪ ಸಚಿವರಾದ ಜಮೀರ್ ಆಹಮದ್ ಖಾನ್ , ರಾಜ್ಯ ವಕ್ಫ ಅಧ್ಯಕ್ಷರು ಹಾಗೂ ರಾಜ್ಯದ ಮಾಜಿ ವಕ್ಪ್ ಅಧ್ಯಕ್ಷರು ಮತ್ತು ರಾಜ್ಯ ವಕ್ಪ ಕೌನ್ಸಿಲ್ ಉಪಾಧ್ಯಕ್ಷರಾದ ಶಾಫಿ ಸಹದಿ ಹಾಗೂ ಜನಪ್ರತಿನಿಧಿಗಳು ಸೇರಿದಂತೆ ವಿವಿಧ ಕ್ಷೇತ್ರದ ಗಣ್ಯರು ಆಗಮಿಸುವ ನಿರೀಕ್ಷೆಯಿದೆ ಎಂದು ತಿಳಿಸಿದರು.
ರಾಜ್ಯದ ವಿವಿಧೆಡೆಯಿಂದ ಆಗಮಿಸುವ ಭಕ್ತಾದಿಗಳಿಗೆ ಅನುಕೂಲವಾಗುವಂತೆ ಸುವ್ಯವಸ್ಥೆಗಳನ್ನು ಕೈಗೊಳ್ಳಲಾಗಿದೆ. ಉರೂಸ್ ಸಮಾರಂಭವನ್ನು ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಸಮಾಜದ ಪ್ರಮುಖರ ಸಹಕಾರವನ್ನು ಕೋರಲಾಗಿದೆ ಎಂದರು.
ಈ ಸಂಧರ್ಭದಲ್ಲಿ ದರ್ಗಾ ಸಮಿತಿ ಕಾರ್ಯದರ್ಶಿ ಕಚ್ಚಿಗೆಬೈಲು ಸಾದಿಕ್ ಅಲಿ,ಖಜಾಂಚಿ ನಿಟ್ಟೂರು ಅಬ್ದುಲ್ಲಾ , ಸದಸ್ಯರಾದ ಜಿ ರಹಮಾನ್ ಸಾಬ್ , ಈಸೂಬ್ ಸಾಬ್ ಬುಖಾರಿ , ಇಬ್ರಾಹಿಂ ಸಾಬ್ ಮತ್ತಿತರರು ಉಪಸ್ಥಿತರಿದ್ದರು.



