ಹೆದ್ದಾರಿಪುರ ಗ್ರಾಪಂ ಅಧ್ಯಕ್ಷರಾಗಿ ನಾಗರತ್ನ ಅವುರೋಧ ಆಯ್ಕೆ
ಹೆದ್ದಾರಿಪುರ ಗ್ರಾ.ಪಂ. ಅಧ್ಯಕ್ಷೆಯಾಗಿ ನಾಗರತ್ನ ಸಂತೋಷ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ಕಳೆದ ಒಂದು ತಿಂಗಳಿಂದ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ನಾಗರತ್ನ ಮಾತ್ರ ನಾಮಪತ್ರ ಸಲ್ಲಿಸಿದ್ದರು.
ಅಧ್ಯಕ್ಷೆಯಾಗಿ ನಾಗರತ್ನ ಆಯ್ಕೆಯಾಗುತ್ತಿದ್ದಂತೆ ಹೊಸನಗರ ತಾಲ್ಲೂಕು ಬಿಜೆಪಿ ಪ್ರಧಾನ ಕಾರ್ಯದರ್ಶಿ ನಾಗಾರ್ಜುನ ಸ್ವಾಮಿ, ಹುಂಚ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ವಿನಾಯಕ, ಸಂಚಾಲಕ ಸುಣಕಲ್ ಶ್ರೀಧರ, ಶಕ್ತಿಕೇಂದ್ರದ ಕಾರ್ಯದರ್ಶಿ ಗಿರೀಶ್ ಜಂಬಳ್ಳಿ ನೂತನ ಅಧ್ಯಕ್ಷರಿಗೆ ಶುಭ ಕೋರಿದರು
ಹೆದ್ದಾರಿಪುರ ಗ್ರಾಮ ಪಂಚಾಯಿತ್ ಸದಸ್ಯರಾದ ಲಿಂಗರಾಜ್, ಶ್ರೇಯಸ್, ವಿಶುಕುಮಾರ್, ಷಣ್ಮುಖ, ಪ್ರವೀಣ್, ನಾಗರತ್ನ, ಸುಮಿತ್ರಮ್ಮ, ಚಂದ್ರಶೇಖರ ಮಳವಳ್ಳಿ, ಶೇಖರಪ್ಪ ಕಣಬಂದೂರು, ವಿನಮತಿ ರಾಘವೇಂದ್ರ, ನಾಸಿಮಾ ರಫೀಕ್, ಇನ್ನಿತರರು, ಪಕ್ಷದ ಮುಖಂಡರು ಪಾಲ್ಗೊಂಡು ನೂತನ ಅಧ್ಯಕ್ಷರನ್ನು ಅಭಿನಂದಿಸಿ ಶುಭಕೋರಿದರು.



