ಬಿ ಆರ್ ಪಿ ಗೆ ಡ್ಯಾಂ ಗೆ ವಿಹಾರಕ್ಕೆ ಹೋಗಿದ್ದ ತಂದೆ- ಮಗ ನೀರಲ್ಲಿ ಮುಳುಗಿ ಸಾವು | ಶವ ಮೇಲಕ್ಕೆತ್ತಿದ ಈಶ್ವರ್ ಮಲ್ಪೆ –
ಶಿವಮೊಗ್ಗ: ಭದ್ರಾ ನದಿಗೆ ಇಳಿದಿದ್ದ ಮಗನನ್ನು ರಕ್ಷಿಸಲು ಹೋದ ತಂದೆಯು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಭದ್ರಾವತಿ ಬಳಿಯ ಬಿ ಆರ್ ಪಿ ಡ್ಯಾಂ ಬಳಿ ನಡೆದಿದೆ.
ಭದ್ರಾವತಿಯ ಭೂತನಗುಡಿಯ ನಿವಾಸಿ ಹಫೀಜ್ ಜಾಬರ್ ಮತ್ತು ಅವರ ಪುತ್ರ ಜಾವೇದ್ (14) ಹಾಗೂ ಕುಟುಂಬ ಬಿಆರ್ ಪಿಗೆ ವಿಹಾರಕ್ಕೆ ತೆರಳಿದ್ದರು ಊಟ ಮುಗಿಸಿ ಪುತ್ರ ಜಾವೇದ್ ಹಿನ್ನೀರಿನಲ್ಲಿ ಇಳಿದಾಗ ಆಳದ ಅಂದಾಜಿಲ್ಲದ ಕಾರಣ ನೀರು ಪಾಲಾಗಿದ್ದನು.ಇದನ್ನು ನೋಡಿದ ತಂದೆ ಮಗನನ್ನು ರಕ್ಷಿಸಲು ನೀರಿಗೆ ಇಳಿದು ಅವರೂ ನೀರುಪಾಲಾಗಿದ್ದರು ,ಸಂಜೆಯ ವೇಳೆ ಮಗ ಶವವಾಗಿ ಪತ್ತೆಯಾದರೆ ತಂದೆಯ ಬಗ್ಗೆ ಸುಳಿವು ಸಿಕ್ಕಿರಲಿಲ್ಲ.
ನೀರಿಗಿಳಿದು ಮುಳುಗಿದ ಮಗನನ್ನು ರಕ್ಷಿಸಲು ಹೋದ ತಂದೆಯೂ ನೀರುಪಾಲಾದ ಘಟನೆಯ ಹಿನ್ನೆಲೆಯಲ್ಲಿ ಮಲ್ಪೆಯ ಈಜು ತಜ್ಞ ಮಲ್ಪೆ ಈಶ್ವರ್ ಅವರನ್ನು ಕರೆಸಿ ಇಬ್ಬರ ಶವವನ್ನು ಹೊರ ತೆಗೆಯಲಾಗಿದೆ.
ವಿಧಿಯಾಟ ಎಂಬಂತೆ ತಂದೆ ಮಗ ಇಬ್ಬರೂ ನೀರು ಪಾಲಾಗಿದ್ದಾರೆ. ಇಬ್ಬರ ಶವಕ್ಕೆ ಹುಡುಕಾಟ ನಡೆಸಲಾಗಿ ಮಗನ ಶವ ಭಾನುವಾರ ರಾತ್ರಿ ೮ ಗಂಟೆಗೆ ಪತ್ತೆಯಾಗಿದೆ. ಅನುಭವಿ ಈಜುಗಾರರು ಎಷ್ಟು ಹುಡುಕಾಡಿದರೂ ಮತ್ತೊಂದು ಶವ ಸಿಗಲಿಲ್ಲ.
ಈಜು ತಜ್ಞ ಮಲ್ಪೆ ಈಶ್ವರ್ ಅವರನ್ನು ಕರೆಸಿ ರಾತ್ರಿ ೩ ಗಂಟೆಗೆ ನೀರಿನ ನೂರಾರು ಅಡಿ ಆಳದ ಬಂಡೆಯಡಿ ಸಿಲುಕಿಕೊಂಡಿದ್ದ ಶವವನ್ನು ಪತ್ತೆ ಹಚ್ಚಿ ಮೇಲಕ್ಕೆತ್ತಿ ಎಳೆತಂದಿದ್ದಾರೆ.
ಸೋಮವಾರ ಮಧ್ಯಾಹ್ನ ತಂದೆ ಮಗ ಇಬ್ಬರ ಅಂತ್ಯ ಸಂಸ್ಕಾರ ನಡೆದಿದ್ದು ನೂರಾರು ಮಂದಿ ಕಂಬನಿ ಮಿಡಿದಿದ್ದಾರೆ.
ಕಸ್ತೂರಿರಂಗನ್ ವರದಿ ವಿರೋಧಿ ಹೋರಾಟಕ್ಕೆ ಹೊಸನಗರ ತಾಲ್ಲೂಕು ವಕೀಲರ ಸಂಘದ ಸಂಪೂರ್ಣ ಬೆಂಬಲ Hosanagara Taluk Advocates Association extends…
ಅಕ್ರಮ ಬಂದೂಕಿನಿಂದ ಬೀದಿ ನಾಯಿಯ ಬರ್ಬರ ಹತ್ಯೆ - ಆರೋಪಿ ಅರೆಸ್ಟ್! Sagar police arrested a man accused…
ಉಚಿತ ಸೆಲ್‌ಫೋನ್ ರಿಪೇರಿ ತರಬೇತಿ: ನಿರುದ್ಯೋಗಿ ಯುವಕರಿಂದ ಅರ್ಜಿ ಆಹ್ವಾನ Free 31-day mobile phone repair training for…
ಹೊಸನಗರದಲ್ಲಿ ನಾಳೆ ಕಸ್ತೂರಿರಂಗನ್ ವರದಿ ವಿರೋಧಿಸಿ ಪಾದಯಾತ್ರೆ, ಬಹಿರಂಗ ಸಭೆ Farmers and agricultural workers will hold a…
ಸಾಗರ: ಕಸ್ತೂರಿ ರಂಗನ್ ವರದಿ ವಿರುದ್ಧ ರೈತರ ಆಕ್ರೋಶ; ಬ್ಯಾರಿಕೇಡ್ ಕಿತ್ತೆಸೆದು ಪ್ರತಿಭಟನೆ Farmers staged a massive protest…
ಇಂಡಿಯಾ ಪೋಸ್ಟ್‌ನಲ್ಲಿ 25,000ಕ್ಕೂ ಹೆಚ್ಚು ಹುದ್ದೆ: 10ನೇ ತರಗತಿ ಪಾಸಾದವರಿಗೆ ಅವಕಾಶ, ಪರೀಕ್ಷೆ ಇಲ್ಲದೆ ನೇಮಕಾತಿ India Post GDS…