ಪೆಟ್ರೋಲ್ ಬಂಕ್ ಪಾಲುದಾರಿಕೆ ಕೊಡುವುದಾಗಿ 17 ಜನರಿಗೆ ಮೋಸ!? – ತೀರ್ಥಹಳ್ಳಿಯ ಮಹಿಳೆ ವಿರುದ್ಧ ಕೇಸ್ ದಾಖಲು !
ತೀರ್ಥಹಳ್ಳಿ : ಪೆಟ್ರೋಲ್ ಬಂಕ್ ಪಾರ್ಟ್ನರ್‌ಶಿಪ್ ಕೊಡುವುದಾಗಿ ಹೇಳಿ ಕೋಟಿ, ಕೋಟಿ ಲೂಟಿ ಮಾಡಿದ ಆರೋಪ ತೀರ್ಥಹಳ್ಳಿಯ ಆರತಿ ಮತ್ತು ಆಕೆಯ ಪತಿಯ ವಿರುದ್ಧ ಕೇಳಿ ಬಂದಿದೆ.ತೀರ್ಥಹಳ್ಳಿಯ ಗೋಮತಿ ಪೆಟ್ರೋಲ್ ಬಂಕ್ ಓನರ್ ಆರತಿ ಮೇಲೆ ದೂರು ದಾಖಲಾಗಿದೆ.
ಗೋಮತಿ ಪೆಟ್ರೋಲ್ ಬಂಕ್ ಓನರ್ ಆಗಿರುವ ಆರತಿ ಅವರು ಬಂಕ್ ತೋರಿಸಿ ಜನರಿಗೆ ಮಕ್ಮಲ್ ಟೋಪಿ ಹಾಕಿದ್ದಾರೆ. ಪೆಟ್ರೋಲ್ ಬಂಕ್ನಲ್ಲಿ ಪಾರ್ಟ್ನರ್‌ಶಿಪ್ ಕೊಡುತ್ತೇನೆಂದು ನಂಬಿಸಿ 4 ಲಕ್ಷದಿಂದ 50 ಲಕ್ಷ ರೂಪಾಯಿ ತನಕ ವಂಚಿಸಿರುವ ಆರೋಪ ಕೇಳಿ ಬಂದಿದೆ.
ತೀರ್ಥಹಳ್ಳಿ ತಾ. ಲಿಂಗಾಪುರ ಮುಡುಬ ಮೂಲದ ಆರತಿ ವಿಶಾಲ್ ಮತ್ತು ಆಕೆಯ ಪತಿ ಕಳೆದ 2 ವರ್ಷಗಳಿಂದ ತೀರ್ಥಹಳ್ಳಿ & ಶಿವಮೊಗ್ಗದಲ್ಲಿ 17 ಜನರಿಗೆ ವಂಚಿಸಿದ್ದಾರೆ. ಬ್ಯಾಂಕ್ ಖಾತೆ ಮೂಲಕ ಹಣ ಸ್ವೀಕರಿಸಿ ವಂಚಿಸಿದ್ದಾರೆ. ಪಡೆದ ಹಣಕ್ಕೆ ಚೆಕ್ ಮತ್ತಿತರ ದಾಖಲೆಗಳನ್ನು ನೀಡಿದ್ದಾರೆ. ಹಣ ಪಾವತಿ ಸಂಬಂಧ ವಿಚಾರಿಸಿದವರಿಗೆ ಆವಾಜ್ ಹಾಕಿದ್ದಾರೆ ಎನ್ನಲಾಗಿದೆ. ಜನರು ತಾವು ಹಣ ಕೊಟ್ಟಿದ್ದಲ್ಲದೆ, ತಮ್ಮ ಸ್ನೇಹಿತರಿಂದಲೂ ಹಣ ಕೊಡಿಸಿದ್ದ್ದು, ಮರುಪಾವತಿಗೆ ಕೇಳಿದಾಗ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ವಂಚನೆಗೆ ಒಳಗಾದವರು ಕಾನೂನು ಹೋರಾಟಕ್ಕೆ ಮುಂದಾಗಿದ್ದಾರೆ. ಇದೀಗ ಆರತಿ ಮತ್ತು ಪತಿಯ ವಿರುದ್ಧ ವಿವಿಧ ಠಾಣೆಗಳಲ್ಲಿ FIR ದಾಖಲಾಗಿದೆ.
ಕಾಲೇಜು ಸಮವಸ್ತ್ರದಲ್ಲೇ ಕೆರೆಯಲ್ಲಿ ಪತ್ತೆಯಾದ ಬಿಸಿಎ ವಿದ್ಯಾರ್ಥಿನಿಯ ಶವ ಶಿಕಾರಿಪುರ: ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ಪಟ್ಟಣದ ಹುಚ್ಚುರಾಯಸ್ವಾಮಿ ಕೆರೆಯಲ್ಲಿ ಬಿಸಿಎ…
ವಾಮಾಚಾರದ ಭಯ ಹುಟ್ಟಿಸಿ ಲಕ್ಷಾಂತರ ರೂ ಮೌಲ್ಯದ ಚಿನ್ನಾಭರಣ ವಂಚನೆ: ಕೆಲವೇ ಗಂಟೆಗಳಲ್ಲಿ ಆರೋಪಿ ಬಂಧನ Bhadravati police arrested…
ರಿಪ್ಪನ್‌ಪೇಟೆ: ವಾಹನದಿಂದ ಬಿದ್ದ ಕರುವನ್ನು ಕಿಲೋಮೀಟರ್‌ಗಟ್ಟಲೆ ಎಳೆದೊಯ್ದ ಚಾಲಕ; ಕರು ಸ್ಥಿತಿ ಚಿಂತಾಜನಕ , ಸ್ಥಳೀಯರ ಆಕ್ರೋಶ !! A…
ಈಸ್ಟ್‌ವೆಸ್ಟ್ ಬಸ್ ಮಾಲೀಕ ತಲ್ಕೀನ್ ಅಹ್ಮದ್ ನಿಧನ Talkeen Ahmed, owner of East West Bus institution and…
ಪತ್ರಕರ್ತನ ಮನೆಗೆ ಕನ್ನ ; ₹6.57 ಲಕ್ಷ ಮೌಲ್ಯದ ಚಿನ್ನಾಭರಣ, ನಗದು ಕಳವು Thieves broke into journalist Shi.…
ಚೋರಡಿ ಲಾಡ್ಜ್‌ನಲ್ಲಿ ಪೊಲೀಸರಿಗೆ ಚಾಕು ತೋರಿಸಿ ಐವರು ಪರಾರಿ; ಕುಂಸಿ ಠಾಣೆಯಲ್ಲಿ ಪ್ರಕರಣ ದಾಖಲು ಶಿವಮೊಗ್ಗ: ಅನುಮಾನಾಸ್ಪದವಾಗಿ ಲಾಡ್ಜ್‌ನಲ್ಲಿ ತಂಗಿದ್ದ…