RIPPONPETE | ಗವಟೂರು ಬಳಿಯಲ್ಲಿ ಹಿಟ್ ಆಂಡ್ ರನ್ ಗೆ ಬೈಕ್ ಸವಾರ ಸಾವು
ರಿಪ್ಪನ್‌ಪೇಟೆ : ಇಲ್ಲಿನ ಗವಟೂರು ಬಳಿಯಲ್ಲಿ ಬೆಳ್ಳಂಬೆಳ್ಳಗ್ಗೆ ಬೈಕ್ ಗೆ ಅಪರಿಚಿತ ವಾಹನವೊಂದು ಡಿಕ್ಕಿಯಾದ ಪರಿಣಾಮ ಬೈಕ್ ಸವಾರ ಮೃತಪಟ್ಟ ಘಟನೆ ನಡೆದಿದೆ.
ಗವಟೂರು ಸಮೀಪದ ಬಿಳಿಕಿ ನಿವಾಸಿ ಸಂಜೀವ್ ಪೂಜಾರಿ (65) ಮೃತ ದುರ್ಧೈವಿಯಾಗಿದ್ದಾರೆ.
ಟಿವಿಎಸ್ ಎಕ್ಸೆಲ್ ಬೈಕ್ ನಲ್ಲಿ ಇಂದು ಬೆಳಿಗ್ಗೆ ಮನೆಯಿಂದ ರಿಪ್ಪನ್‌ಪೇಟೆ ಹೊರಡುತಿದ್ದಾಗ ಗವಟೂರು ಸರ್ಕಾರಿ ಶಾಲೆಯ ಸಮೀಪದಲ್ಲಿ ಅಪರಿಚಿತ ವಾಹನವೊಂದು ಡಿಕ್ಕಿಯಾಗಿ ಬೈಕ್ ಸವಾರನಿಗೆ ತೀವ್ರ ಗಾಯಗಳಾಗಿತ್ತು.
ಈ ಸಂಧರ್ಭದಲ್ಲಿ ಬೆಳಿಗ್ಗಿನ ರೌಂಡ್ಸ್ ನಲ್ಲಿದ್ದ ಪಟ್ಟಣದ ಪಿಎಸ್‌ಐ ಅದೇ ಮಾರ್ಗವಾಗಿ ಬರುತಿದ್ದಾಗ ಗಾಯಾಳುವನ್ನು ಗಮನಿಸಿ ತನ್ನ ಖಾಸಗಿ ವಾಹನದಲ್ಲಿ ಗಾಯಾಳುವನ್ನು ರಿಪ್ಪನ್‌ಪೇಟೆ ಆಸ್ಪತ್ರೆಗೆ ದಾಖಲಿಸಿದ್ದಾರೆ ಆದರೆ ಗಾಯಾಳುವಿಗೆ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಆಂಬುಲೆನ್ಸ್ ಗೆ ಶಿಫ್ಟ್ ಮಾಡುವಾಗ ಗಾಯಾಳುವಿನ ಪ್ರಾಣಪಕ್ಷಿ ಹಾರಿ ಹೋಗಿದೆ.
ಮೃತ ಸಂಜೀವ್ ಪೂಜಾರಿ ಪತ್ನಿ ಹಾಗೂ ಮೂವರು ಪುತ್ರಿಯರನ್ನು ಅಗಲಿದ್ದಾರೆ.
ರಿಪ್ಪನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಹಿಟ್ ಅಂಡ್ ರನ್ ಮಾಡಿರುವ ವಾಹನದ ಪತ್ತೆಗೆ ಮುಂದಾಗಿದ್ದಾರೆ.
ಕಾಲೇಜು ಸಮವಸ್ತ್ರದಲ್ಲೇ ಕೆರೆಯಲ್ಲಿ ಪತ್ತೆಯಾದ ಬಿಸಿಎ ವಿದ್ಯಾರ್ಥಿನಿಯ ಶವ ಶಿಕಾರಿಪುರ: ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ಪಟ್ಟಣದ ಹುಚ್ಚುರಾಯಸ್ವಾಮಿ ಕೆರೆಯಲ್ಲಿ ಬಿಸಿಎ…
ವಾಮಾಚಾರದ ಭಯ ಹುಟ್ಟಿಸಿ ಲಕ್ಷಾಂತರ ರೂ ಮೌಲ್ಯದ ಚಿನ್ನಾಭರಣ ವಂಚನೆ: ಕೆಲವೇ ಗಂಟೆಗಳಲ್ಲಿ ಆರೋಪಿ ಬಂಧನ Bhadravati police arrested…
ರಿಪ್ಪನ್‌ಪೇಟೆ: ವಾಹನದಿಂದ ಬಿದ್ದ ಕರುವನ್ನು ಕಿಲೋಮೀಟರ್‌ಗಟ್ಟಲೆ ಎಳೆದೊಯ್ದ ಚಾಲಕ; ಕರು ಸ್ಥಿತಿ ಚಿಂತಾಜನಕ , ಸ್ಥಳೀಯರ ಆಕ್ರೋಶ !! A…
ಈಸ್ಟ್‌ವೆಸ್ಟ್ ಬಸ್ ಮಾಲೀಕ ತಲ್ಕೀನ್ ಅಹ್ಮದ್ ನಿಧನ Talkeen Ahmed, owner of East West Bus institution and…
ಪತ್ರಕರ್ತನ ಮನೆಗೆ ಕನ್ನ ; ₹6.57 ಲಕ್ಷ ಮೌಲ್ಯದ ಚಿನ್ನಾಭರಣ, ನಗದು ಕಳವು Thieves broke into journalist Shi.…
ಚೋರಡಿ ಲಾಡ್ಜ್‌ನಲ್ಲಿ ಪೊಲೀಸರಿಗೆ ಚಾಕು ತೋರಿಸಿ ಐವರು ಪರಾರಿ; ಕುಂಸಿ ಠಾಣೆಯಲ್ಲಿ ಪ್ರಕರಣ ದಾಖಲು ಶಿವಮೊಗ್ಗ: ಅನುಮಾನಾಸ್ಪದವಾಗಿ ಲಾಡ್ಜ್‌ನಲ್ಲಿ ತಂಗಿದ್ದ…