POSTMANNEWS

ನೈಜ ಸುದ್ದಿ ನೇರ ಬಿತ್ತರ..

ಸಿ ಎ ಪರೀಕ್ಷೆ : ಪ್ರಥಮ ಪ್ರಯತ್ನದಲ್ಲೇ ಅರಸಾಳುವಿನ ಮನು ಆಚಾರ್ ಉತ್ತೀರ್ಣ

ಸಿ ಎ ಪರೀಕ್ಷೆ : ಪ್ರಥಮ ಪ್ರಯತ್ನದಲ್ಲೇ ಅರಸಾಳುವಿನ ಮನು ಆಚಾರ್ ಉತ್ತೀರ್ಣ

ರಿಪ್ಪನ್‌ಪೇಟೆ : ಇಲ್ಲಿನ ಅರಸಾಳು ಗ್ರಾಮದ ಪ್ರತಿಭಾನ್ವಿತ ವಿದ್ಯಾರ್ಥಿ ಮನು ಚಾರ್ಟರ್ಡ್ ಅಕೌಂಟೆಂಟ್(CA) ಪರೀಕ್ಷೆಯಲ್ಲಿ ಮೊದಲ ಪ್ರಯತ್ನದಲ್ಲೇ ತೇರ್ಗಡೆಯಾಗುವ ಮೂಲಕ ಅಪ್ರತಿಮ ಸಾಧನೆಗೈದಿದ್ದಾರೆ.

ಅರಸಾಳು ನಿವಾಸಿ ಮೂರ್ತಿ ಆಚಾರ್ ಮತ್ತು ಮಮತಾ ದಂಪತಿಗಳ ಪುತ್ರನಾದ ಮನು ಹೈಸ್ಕೂಲ್ ಶಿಕ್ಷಣವನ್ನು ಪಟ್ಟಣದ ರಾಮಕೃಷ್ಣ ವಿದ್ಯಾಲಯದಲ್ಲಿ ಮತ್ತು ನಂದನ ಪದವಿಪೂರ್ವ ಕಾಲೇಜಿನ ಪದವಿಪೂರ್ವ ಶಿಕ್ಷಣವನ್ನು ಪಡೆದು ಬೆಂಗಳೂರಿನಲ್ಲಿ ಪದವಿ ಪಡೆದು ಈಗ ಕೇವಲ ನಾಲ್ಕ ವರ್ಷದಲ್ಲಿ ಮೊದಲ ಪ್ರಯತ್ನದಲ್ಲಿಯೇ ಸಿ.ಎ ಪರೀಕ್ಷೆ ಉತ್ತೀರ್ಣರಾಗಿದ್ದಾರೆ.

ಸಿ.ಎ. ಆಗಬೇಕೆಂಬುದು ಹಲವಾರು ವಿದ್ಯಾರ್ಥಿಗಳ ಕನಸು. ಸಾಮಾನ್ಯ ಕೃಷಿ ಕುಟುಂಬದ ಈ ಛಲಗಾರ ತನ್ನ ಕನಸನ್ನು ನನಸು ಮಾಡುವಲ್ಲಿ ಸಫಲನಾಗಿದ್ದಾನೆ. ಇದರೊಂದಿಗೆ ಮನೆಯವರಿಗೆ, ಗುರುವೃಂದಕ್ಕೆ, ಸಮುದಾಯಕ್ಕೆ ಕೀರ್ತಿ ತಂದಿದ್ದಾನೆ.

ಮನು ಜೀವನ ಉಜ್ವಲ ಮತ್ತು ಯಶಸ್ವಿಯಾಗಲಿ ಎಂದು ಪಾಲಕರು, ಊರ ಹಿರಿಯರು ,ರಿಪ್ಪನ್‌ಪೇಟೆ ರಾಮಕೃಷ್ಣ ವಿದ್ಯಾಸಂಸ್ಥೆಯ ಆಡಳಿತ ಮಂಡಳಿ ಹಾಗೂ ಶಿಕ್ಷಕರು,ಶಿವಮೊಗ್ಗ ನಂದನ ಪದವಿಪೂರ್ವ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಉಪನ್ಯಾಸಕರು ಮತ್ತು ಸಿಬ್ಬಂದಿ ವರ್ಗದವರು ಅಭಿನಂದನೆ ಸಲ್ಲಿಸಿದ್ದಾರೆ.

ಮೊದಲ ಯತ್ನದಲ್ಲಿಯೇ ಸಿ ಎ ಪರೀಕ್ಷೆಯನ್ನು ಉತ್ತೀರ್ಣರಾದ ಪ್ರತಿಭಾನ್ವಿತ ವಿದ್ಯಾರ್ಥಿ ಮನು ರವರಿಗೆ ಪೋಸ್ಟ್ ಮ್ಯಾನ್ ಸುದ್ದಿ ಬಳಗದ ವತಿಯಿಂದ ಆತ್ಮೀಯ ಅಭಿನಂದನೆಗಳು.

About The Author

One comment
Shankarananda jois

ಅರಸಾಳು ಮೂರ್ತಿ ಆಚಾರ್ ರವರ ಮಗ ಮನು ಆಚಾರ್ ಅವರ ಸಾಧನೆ ಗೆ ಹ್ರುತ್ಪೂರ್ವಕ ಅಭಿನಂದನೆಗಳು
ಅವರಿಗೆ ಮುಂದಿನ ಜೀವನ ಯಾವಾಗಲೂ ಚನ್ನಾಗಿ ಇರಲಿ ಎಂದು ಹಾರೈಸುತ್ತೇವೆ
ಶಂಕರಾನಂದ ಜೋಯ್ಸ್ ಶಿವಮೊಗ್ಗ ಕೋಟೆ ಶ್ರೀ ಚಂಡಿಕಾ ದುರ್ಗಾಪರಮೇಶ್ವರೀ ದೇವಸ್ಥಾನ

Leave a Reply

Your email address will not be published. Required fields are marked *

Exit mobile version