ನಿಯಂತ್ರಣ ತಪ್ಪಿ ಕೆರೆಗೆ ಉರುಳಿದ ಕಾರು – ಅತ್ತೆ ,ಸೊಸೆ ಇಬ್ಬರು ಸ್ಥಳದಲ್ಲಿಯೇ ಸಾವು
ಶಿವಮೊಗ್ಗ : ಕಾರೊಂದು ನಿಯಂತ್ರಣ ತಪ್ಪಿ ಕೆರೆಗೆ ಬಿದ್ದ ಪರಿಣಾಮ ಇಬ್ಬರು ಮಹಿಳೆಯರು ಸಾವನ್ನಪ್ಪಿರುವ ಘಟನೆ ಹೊಳಲ್ಕೆರೆ ಸಮೀಪದ ಬೊಮ್ಮನ ಕಟ್ಟೆ ಬಳಿ ನಡೆದಿದೆ.
ಮೃತರನ್ನು ಅನಿತಾ (30) ಮತ್ತು ರತ್ನಮ್ಮ (55) ವರ್ಷ ಎಂದು ಗುರುತಿಸಲಾಗಿದೆ.
ಮೃತರು ಹೊಳಲ್ಕೆರೆಯ ತಾಳ್ಯ ನಿವಾಸಿಗಳು. ತಮ್ಮ ಪತಿಯ ಜೊತೆ ಅನಿತಾ ಹಾಗೂ ಅವರ ಅತ್ತೆ ರತ್ನಮ್ಮ ಊರಿಗೆ ಬರುತ್ತಿದ್ದರು.
ಈ ವೇಳೆ ರಸ್ತೆಗೆ ಅಡ್ಡಬಂದ ನಾಯಿಗೆ ಕಾರು ಡಿಕ್ಕಿಯಾಗುವುದನ್ನ ತಪ್ಪಿಸಲು ಹೋಗಿ ಕಾರು ಕೆರೆಗೆ ಉರುಳಿದೆ. ಕೆರೆ ಏರಿ ಮೇಲೆಯೇ ಘಟನೆ ನಡೆದಿದ್ದರಿಂದ ಚಾಲಕನಿಗೆ ಕಾರು ಕಂಟ್ರೋಲ್‌ಗೆ ಸಿಗದೇ ಕೆರೆಗೆ ಸೀದಾ ಕಾರು ಇಳಿದಿದೆ. ಇನ್ನು ಕಾರು ಕೆರೆಗೆ ಬಿದ್ದ ಬೆನ್ನಲ್ಲೆ, ಆಘಾತಕ್ಕೊಳಗಾದ ಅನಿತಾ ಮತ್ತು ರತ್ನಮ್ಮ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.
ಈ ವಿಚಾರವಾಗಿ ಹೊಳೆಲ್ಕೆರೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಪರಿಶೀಲನೆ ನಡೆಸುತಿದ್ದಾರೆ.
ಗಣೇಶೋತ್ಸವ ಹಿನ್ನೆಲೆ: ಸೆ.4ರಂದು ರಿಪ್ಪನ್‌ಪೇಟೆಯಲ್ಲಿ ಎಎಸ್‌ಪಿ ಭಾನುಪ್ರಕಾಶ್ ನೇತೃತ್ವದಲ್ಲಿ ಶಾಂತಿ ಸಭೆ A peace meeting for Ganesh festival…
ನೀರಿನಲ್ಲಿ ಅಡಗಿ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಲು ಯತ್ನ ; ಸಿನಿಮೀಯ ರೀತಿಯಲ್ಲಿ ರೌಡಿಶೀಟರ್‌ನನ್ನು ಬಂಧಿಸಿದ ಪೊಲೀಸರು Bhadravathi police dramatically…
ಅಜಾಗರೂಕ ಚಾಲನೆಯಿಂದ ಕೆರೆಗೆ ನುಗ್ಗಿದ ಲಾರಿ! ತಪ್ಪಿದ ಭಾರಿ ದುರಂತ A container lorry allegedly driven recklessly under…
ರಿಪ್ಪನ್‌ಪೇಟೆ ಶಾಲಾ ಮಕ್ಕಳ ಕ್ರೀಡಾಕೂಟದಲ್ಲಿ ಅನಾಹುತ; ಡಿಸ್ಕಸ್ ತಲೆಗೆ ಬಿದ್ದು ಶಿಕ್ಷಕ ಗಂಭೀರ ಗಾಯ A physical education teacher…
ನೆಲ್ಲಿಬೀಡು ಟಿಪ್ಪರ್ – ಬೈಕ್ ಅಪಘಾತ: ಮಗಳ ಸಾವಿನ ಬಳಿಕ ಚಿಕಿತ್ಸೆ ಫಲಿಸದೆ ತಂದೆಯೂ ಮೃತ್ಯು A tragic tipper-bike…
ಬಾಲಕ ಓಡಿಸಿದ ಬೊಲೆರೊ, ದಂಡ ಕಟ್ಟಿದ ತಂದೆ! ₹26,500 ಫೈನ್ A Shivamogga court fined a father ₹26,500…