ಆಯತಪ್ಪಿ ಬಾವಿಗೆ ಬಿದ್ದ ಮಹಿಳೆಯನ್ನು ರಕ್ಷಿಸಿದ ಅಗ್ನಿಶಾಮಕ ಸಿಬ್ಬಂದಿಗಳು
ತೀರ್ಥಹಳ್ಳಿ : ಬಾವಿಗೆ ಬಿದ್ದಿದ್ದ ಮಹಿಳೆಯನ್ನು ಅಗ್ನಿಶಾಮಕ ದಳದ ಸಿಬ್ಬಂದಿಗಳು ರಕ್ಷಿಸಿದ ಘಟನೆ ತಾಲೂಕಿನ ಕುಡುಮಲ್ಲಿಗೆಯಲ್ಲಿ ಸೋಮವಾರ(ಅ.7) ನಡೆದಿದೆ.
ಇಂದಿರಾನಗರದ ಚೌಡಿಕಟ್ಟಿ ಹತ್ತಿರದ ಸರ್ಕಾರಿ ಬಾವಿಗೆ ಗುಲಾಬಿ ಪೂಜಾರ್ತಿ (58) ಎಂಬ ಮಹಿಳೆ ಆಯತಪ್ಪಿ ಬಾವಿಗೆ ಬಿದ್ದಿದ್ದಾರೆ.
ಬಾವಿಯಲ್ಲಿ ಇದ್ದಂತಹ ಗಟ್ಟಿ ಮುಟ್ಟಾದ ಗಿಡವನ್ನು ಹಿಡಿದು ಮಹಿಳೆ ಕುಳಿತಿದ್ದಾರೆ. ಸೋಮವಾರ ಮಧ್ಯಾಹ್ನ ಬಾವಿಗೆ ಬಿದ್ದಿದ್ದು ಸಂಜೆಯ ವೇಳೆ ಸ್ಥಳೀಯರಿಗೆ ವಿಷಯ ತಿಳಿದಿದೆ.
ವಿಷಯ ತಿಳಿದು ತೀರ್ಥಹಳ್ಳಿ ಅಗ್ನಿಶಾಮಕ ಠಾಣೆಯ ಸಿಬ್ಬಂದಿಗಳಿಗೆ ಮಾಹಿತಿ ನೀಡಿದ್ದಾರೆ. ಘಟನಾ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಾಕ ದಳದ ಸಿಬ್ಬಂದಿಗಳು ಮಹಿಳೆಯನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ಗುಲಾಬಿಯವರಿಗೆ ಸಣ್ಣ ಪುಟ್ಟ ಪೆಟ್ಟಾಗಿದ್ದು ನಂತರ ತೀರ್ಥಹಳ್ಳಿ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.
ಅಗ್ನಿಶಾಮಕ ದಳದ ಸಿಬ್ಬಂದಿಗಳಾದ ಸಂತೋಷ್ ಶೆಟ್ಟಿ, ಚಾಲಕರಾದ ಪ್ರಶಾಂತ್ ಕುಮಾರ್ ಹಾಗೂ ಶರತ್ ಎಂ, ಶಶಿಕುಮಾರ್, ನಿಂಗಪ್ಪ ಇಟ್ಟಣ್ಣನವರ್ ಸೇರಿ ಸ್ಥಳೀಯರು ಈ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.
ಕಾಲೇಜು ಸಮವಸ್ತ್ರದಲ್ಲೇ ಕೆರೆಯಲ್ಲಿ ಪತ್ತೆಯಾದ ಬಿಸಿಎ ವಿದ್ಯಾರ್ಥಿನಿಯ ಶವ ಶಿಕಾರಿಪುರ: ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ಪಟ್ಟಣದ ಹುಚ್ಚುರಾಯಸ್ವಾಮಿ ಕೆರೆಯಲ್ಲಿ ಬಿಸಿಎ…
ವಾಮಾಚಾರದ ಭಯ ಹುಟ್ಟಿಸಿ ಲಕ್ಷಾಂತರ ರೂ ಮೌಲ್ಯದ ಚಿನ್ನಾಭರಣ ವಂಚನೆ: ಕೆಲವೇ ಗಂಟೆಗಳಲ್ಲಿ ಆರೋಪಿ ಬಂಧನ Bhadravati police arrested…
ರಿಪ್ಪನ್‌ಪೇಟೆ: ವಾಹನದಿಂದ ಬಿದ್ದ ಕರುವನ್ನು ಕಿಲೋಮೀಟರ್‌ಗಟ್ಟಲೆ ಎಳೆದೊಯ್ದ ಚಾಲಕ; ಕರು ಸ್ಥಿತಿ ಚಿಂತಾಜನಕ , ಸ್ಥಳೀಯರ ಆಕ್ರೋಶ !! A…
ಈಸ್ಟ್‌ವೆಸ್ಟ್ ಬಸ್ ಮಾಲೀಕ ತಲ್ಕೀನ್ ಅಹ್ಮದ್ ನಿಧನ Talkeen Ahmed, owner of East West Bus institution and…
ಪತ್ರಕರ್ತನ ಮನೆಗೆ ಕನ್ನ ; ₹6.57 ಲಕ್ಷ ಮೌಲ್ಯದ ಚಿನ್ನಾಭರಣ, ನಗದು ಕಳವು Thieves broke into journalist Shi.…
ಚೋರಡಿ ಲಾಡ್ಜ್‌ನಲ್ಲಿ ಪೊಲೀಸರಿಗೆ ಚಾಕು ತೋರಿಸಿ ಐವರು ಪರಾರಿ; ಕುಂಸಿ ಠಾಣೆಯಲ್ಲಿ ಪ್ರಕರಣ ದಾಖಲು ಶಿವಮೊಗ್ಗ: ಅನುಮಾನಾಸ್ಪದವಾಗಿ ಲಾಡ್ಜ್‌ನಲ್ಲಿ ತಂಗಿದ್ದ…