ಪಕ್ಷಪಾತ ಮಾಡದೇ ಎಲ್ಲರನ್ನೂ ಒಗ್ಗೂಡಿಸಿಕೊಂಡು ಜೇನುಕಲ್ಲಮ್ಮ ದೇವಸ್ಥಾನದ ಏಳಿಗೆಗೆ ಶ್ರಮಿಸಿದ್ದೇನೆ : ಕಲಗೋಡು ರತ್ನಾಕರ್

ಪಕ್ಷಪಾತ ಮಾಡದೇ ಎಲ್ಲರನ್ನೂ ಒಗ್ಗೂಡಿಸಿಕೊಂಡು ಜೇನುಕಲ್ಲಮ್ಮ ದೇವಸ್ಥಾನದ ಏಳಿಗೆಗೆ ಶ್ರಮಿಸಿದ್ದೇನೆ : ಕಲಗೋಡು ರತ್ನಾಕರ್

ಹೊಸನಗರ: ಸುಮಾರು 2012ರಿಂದ 2022ರವರೆವಿಗೆ ಜೇನುಕಲ್ಲಮ್ಮ ದೇವಸ್ಥಾನದ ವ್ಯವಸ್ತಾಪಕ ಸಮಿತಿಯ ಅಧ್ಯಕ್ಷನಾಗಿ ನಾನು ಸೇವೆ ಮಾಡಿದ್ದೇನೆ ಸಾಕಷ್ಟು ಹಣವನ್ನು ಸರ್ಕಾರದಿಂದ ಹಾಗೂ ದೇಣಿಗೆಯ ರೂಪದಲ್ಲಿ ಹಣ ತಂದು ಸಾಕಷ್ಟು ಅಭಿವೃದ್ಧಿ ಮಾಡಿದ್ದೇವೆ ನನ್ನ ಆಡಳಿತಾವಧಿಯಲ್ಲಿ ಯಾವುದೇ ಪಕ್ಷಪಾತ ಮಾಡದೇ ಎಲ್ಲ ಪಕ್ಷದವರನ್ನು ಎಲ್ಲ ಜಾತಿಯವರನ್ನು ಒಟ್ಟುಗೂಡಿಸಿಕೊಂಡು ದೇವಸ್ಥಾನದ ಏಳಿಗೆಗಾಗಿ  ಕೆಲಸ ಮಾಡಿದ್ದೇನೆ ಎಂದು ಜೇನುಕಲ್ಲಮ್ಮ ವ್ಯವಸ್ಥಾಪಕ ಮಂಡಳಿಯ ಮಾಜಿ ಅಧ್ಯಕ್ಷ ಹಾಗೂ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಕಲಗೋಡು ರತ್ನಾಕರ್‌ರವರು ಹೇಳಿದರು.

ಹೊಸನಗರದ ಪ್ರವಾಸಿ ಮಂದಿರದಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿ ಜೇನುಕಲ್ಲಮ್ಮ ದೇವಸ್ಥಾನದ ವ್ಯವಸ್ಥಾಪಕರ ಬಳಿ 16ಲಕ್ಷ ಹಣವಿದೆ ದೇವಸ್ತಾನದ ಅಭಿವೃದ್ದಿಗೆ ಹಣ ನೀಡುತ್ತಿಲ್ಲ ಎಂದು ಪತ್ರಿಕಾ ಘೋಷ್ಠಿಯಲ್ಲಿ ಮಾಜಿ ಶಾಸಕರು ಹಾಗೂ ಜೇನುಕಲ್ಲಮ್ಮ ವ್ಯವಸ್ಥಾಪಕ ಸಮಿತಿಯ ಅಧ್ಯಕ್ಷರಾದ ಬಿ.ಸ್ವಾಮಿರಾವ್‌ರವರು ನಮ್ಮ ವಿರುದ್ಧ ದೂರಿದ್ದು ಆದರೆ ನಾವು ಇವರಿಗೆ ಹಣ ಕೋಡಲು ಬರುವುದಿಲ್ಲ ನಾವು ಕಂದಾಯ ಇಲಾಖೆಯ ಖಜಾನೆಗೆ ಅಥವಾ ಶಾಸಕರಿಗೆ ಲೆಕ್ಕ ನೀಡಬೇಕೆ ಹೊರತು ಇವರು ಕೇಳಿದ ತಕ್ಷಣ ಹಣ ಕೊಡಲು ಬರುವುದಿಲ್ಲ ಎಂದರು.

10 ವರ್ಷಗಳಲ್ಲಿ ಎಷ್ಟು ಅಭಿವೃದ್ಧಿಯಾಗಿದೆ:

ನನ್ನ 10ವರ್ಷಗಳ ಜೇನುಕಲ್ಲಮ್ಮ ದೇವಸ್ತಾನ ಸಮಿತಿಯ ಅಧ್ಯಕ್ಷನಾಗಿ ಸೇವೆ ಸಲ್ಲಿಸಿದ್ದು ಈ ಅವಧಿಯಲ್ಲಿ 5.50 ಕೋಟಿಯಷ್ಟು ಕೆಲಸ ಮಾಡಿಸಿದ್ದೇವೆ 3ಕೋಟಿಯಷ್ಟು ಹಣವನ್ನು ಸರ್ಕಾರದಿಂದ ತಂದು ಉತ್ತಮ ರಸ್ತೆ ಮಾಡಿಸಿದ್ದೇವೆ 70ಲಕ್ಷದಷ್ಟು ಹಣ ವ್ಯಯ ಮಾಡಿ ದೇವಸ್ತಾನ ಅಭಿವೃದ್ಧಿ ಪಡಿಸಿದ್ದೇವೆ ಊಟದ ವ್ಯವಸ್ಥಗೆ ಹಾಲ್ ಇರಲಿಲ್ಲ ಸಾರ್ವಜನಿಕರಿಗೆ ಊಟದ ಕೊಠಡಿ ನಿರ್ಮಿಸಿದ್ದೇವೆ ಈ ಜೇನುಕಲ್ಲಮ್ಮ ದೇವಸ್ಥಾನದ ಸರ್ವೆನಂಬರ್ 63ರ 27ಎಕರೆ ಪ್ರದೇಶ ಅರಣ್ಯ ಭೂಮಿಯಾಗಿದ್ದು ಮಾಜೀ ಕಂದಾಯ ಸಚಿವರಾದ ಕಾಗೋಡು ತಿಮ್ಮಪ್ಪನವರ ಕೃಪಕಟಾಕ್ಷದಿಂದ ಅರಣ್ಯ ಭೂಮಿಯ ಖಾತೆಯನ್ನು ಸರ್ಕಾರಿ ಭೂಮಿಯನ್ನಾಗಿ ಪರಿವರ್ತಿಸಿದ್ದೇವೆ ನೀರಿನ ವ್ಯವಸ್ಥೆಗಾಗಿ ಬೂರ್‌ವೇಲ್‌ಗಳನ್ನು ತೆಗೆಸಲಾಗಿದೆ ಒಂದು ಸುಂದರ ದೇವಸ್ತಾನವನ್ನಾಗಿ ಮಾಡಲು ಶ್ರಮಿಸಿದ್ದೇವೆ ನಮ್ಮ ಅವಧಿ 8ಲಕ್ಷ ವೆಚ್ಚದಲ್ಲಿ ಹಳೆಯ ಚಿನ್ನವನ್ನು ತೆಗೆದು ಎರಡು ದೇವಿಗೆ ಚಿನ್ನದ ಸರವನ್ನು ಮಾಡಿಸಿದ್ದೇವೆ ಅಂದು 28ಲಕ್ಷ ಹಣವನ್ನು ಕಂದಾಯ ಇಲಾಖೆಯ ಖಜಾನೆಗೆ ಜಮಾ ಮಾಡಲಾಗಿದೆ ಈ ದೇವಸ್ಥಾನವನ್ನು ಪ್ರವಾಸೋದ್ಯಮ ಮಾಡಬೇಕೆನ್ನುವ ಉದ್ದೇಶದಿಂದ ಹಾಗೂ ಕರ್ನಾಟಕ ರಾಜ್ಯದಲ್ಲಿಯೇ ಈ ದೇವಸ್ತಾನಕ್ಕೆ ಹೆಚ್ಚಿನ ಸಂಖ್ಯೆಯ ಭಕ್ತರೂ ಬಂದು ಪೂಜೆ ಸಲ್ಲಿಸುತ್ತಿರುವುದರಿಂದ ದೇವಸ್ತಾನದ ಏಳಿಗೆಗಾಗಿ ಶ್ರಮಿಸಿದ್ದೇವೆಯೇ ಹೊರತು ದೇವಸ್ತಾನದ ಗಂಟು ತಿನ್ನಲ್ಲೂ ಎಂದು ಸಂಚು ಮಾಡಿಲ್ಲ ಎಂದರು.

ಈ ದೇವಸ್ಥಾನ ಕಮಿಟಿಯಲ್ಲಿ ಶಾಸಕರು ಗೌರವಾಧ್ಯಕ್ಷರಾಗಿರುತ್ತಾರೆ ಅದರೇ ನಮ್ಮ ಶಾಸಕರಾದ ಬೇಳೂರು ಗೋಪಾಲಕೃಷ್ಣರವರು ಶಾಸಕರಾಗಿ ಒಂದುವರೆ ವರ್ಷ ಕಳೆಯುತ್ತಾ ಬಂದಿದ್ದು ಇಲ್ಲಿಯವರೆವಿಗೆ ದೇವಸ್ತಾನಕ್ಕೆ ಕರೆದು ಒಂದು ಶಾಲು ಹಾಕಿಲ್ಲ ಗೌರವಯುತವಾಗಿ ನಡೆದುಕೊಂಡಿಲ್ಲ ಮುಂದಿನ ದಿನದಲ್ಲಿ ಶಾಸಕರಾದ ಬೇಳೂರು ಗೋಪಾಲಕ್ರಷ್ಣರವರು ತುರ್ತು ಸಭೆ ಕರೆಯಲಿದ್ದಾರೆ ಎಂದರು.

ಮೂರು ಗ್ರಾಮಪಂಚಾಯತಿಗೆ ಒಂದೇ ದೇವಸ್ತಾನ:

ಹೊಸನಗರ ತಾಲ್ಲೂಕಿನ ಜೇನುಕಲ್ಲಮ್ಮ ದೇವಸ್ತಾನ ಮಾರುತಿಪುರ, ಚಿಕ್ಕ ಜೇನಿ ಹಾಗೂ ಕೋಡೂರು ಮೂರು ಗ್ರಾಮ ಪಂಚಾಯತಿಗೆ ಒಳ ಪಡುತ್ತದೆ ಈ ಮೂರು ಗ್ರಾಮ ಪಂಚಾಯತಿಯ ಅದ್ಯಕ್ಷರು ಈ ದೇವಸ್ತಾನದ ಸಮಿತಿಯ ಸದಸ್ಯರಾಗಿರುತ್ತಾರೆ ಅದರೇ ಸೌಜನ್ಯಕ್ಕೂ ಇವರನ್ನು ಕಾರ್ಯಕ್ರಮಗಳಿಗೆ ಕರೆಯುವುದಿಲ್ಲ ಇವರಿಗೆ ಬೇಕಾದವರಿಗೆ ಮಾತ್ರ ಆಹ್ವಾನ ನೀಡುತ್ತಾರೆ ಎಂದು ದೂರಿದರು.

ಮಾಜಿ ಶಾಸಕ ಹರತಾಳು ಹಾಲಪ್ಪನವರಿಂದ ಒಡಕು:

ಮಾಜಿ ಶಾಸಕರಾದ ಹರತಾಳು ಹಾಲಪ್ಪನವರು ಶಾಸಕರಾಗಿದ್ದಾಗ ನೂತನ ದೇವಸ್ತಾನ ಕಮಿಟಿ ರಚಿಸಲಾಯಿತ್ತು ಹಿಂದಿನ ಕಮಿಟಿಯಲ್ಲಿ ನಾನು ಅಧ್ಯಕ್ಷನಾಗಿದ್ದಾಗ ಯಾವುದೇ ಜಾತಿಯತೆ ಪಕ್ಷ ಬೇದವಿಲ್ಲದೇ ಎಲ್ಲ ಗ್ರಾಮದ ಸದಸ್ಯರನ್ನು ಒಳಗೊಂಡ ಸಮಿತಿ ಇತ್ತು ಆ ಕಮಿಟಿಯನ್ನು ರದ್ದು ಪಡಿಸಿದ ಶಾಸಕ ಹರತಾಳು ಹಾಲಪ್ಪನವರು 2012ರ ಕಮಿಟಿಯನ್ನು ರದ್ದು ಪಡಿಸಿ ಹೊಸ ಕಮಿಟಿ ರಚಿಸಿ ಬಿ.ಸ್ವಾಮಿರಾವ್‌ರವರನ್ನು ಅಧ್ಯಕ್ಷರನ್ನಾಗಿ ಮಾಡಲಾಯಿತ್ತು ಅದರೆ ಅವರಿಗೆ ಬೇಕಾದವರನ್ನು ಮಾತ್ರ ಸಮಿತಿಯಲ್ಲಿ ಇಟ್ಟುಕೊಳ್ಳಲಾಯಿತ್ತು ಇದಕ್ಕೆ ನಾವು ತಕರಾರು ಮಾಡಿದಾಗ 5ಜನರ ಪಟ್ಟಿ ಕಳುಹಿಸಿಕೊಡಿ ಎಂದು ಹೇಳಿದರು ನಾವು ಐದು ಜನರ ಪಟ್ಟಿ ಕಳುಹಿಸಿಕೊಟ್ಟರೇ ಇಲ್ಲಿಯವರೆಗೂ ನೂತನ ಸಮಿತಿಯಲ್ಲಿ 5 ಜನರನ್ನು ಸೇರಿಸಿಕೊಳ್ಳದೇ ಹಳೆಯ ಸಮಿತಿಯವರನ್ನೇ ಮುಂದುವರೆಸಿದ್ದು ಇಷ್ಟಲ್ಲ ಜಂಜಾಟಕ್ಕೆ ಕಾರಣವಾಗಿದೆ ಎಂದರು.

ಕಟ್ಟಡಕ್ಕೆ ಒಂದು ನೈಯಪೈಸೆ ಹಾಕಿಲ್ಲ:

ನೂತನ ಸಮಿತಿ ರಚನೆಯಾದ ತಕ್ಷಣ ನಾವು ಸರ್ಕಾರದಿಂದ ಆರು ಕೋಟಿ ಹಣ ತಂದು ದೇವಸ್ತಾನ ಕಟ್ಟುತ್ತೇವೆ ಎಂದು ಹೇಳಿದವರು ಇಂದಿಗೂ ಒಂದು ನೈಯಪೈಸೆ ಹಣ ಸರ್ಕಾರದಿಂದ ತಂದಿಲ್ಲ ನಾವು ಧೇಣಿಗೆ ರೂಪದ ಹಣ ಹಾಗೂ ನಾವು ಅಂದು ತಂದಿರುವ ಹಣದಲ್ಲಿ ದೇವಸ್ತಾನದ ಕಟ್ಟಡ ಕಾಮಗಾರಿ ಕೆಲಸ ನಡೆಸುತ್ತಿದ್ದಾರೆ ಮುಂದಿನ ದಿನದಲ್ಲಿ ನಮ್ಮ ಶಾಸಕರ ಮೂಲಕ ಸರ್ಕಾರದಿಂದ ಹಣ ತರುವ ವ್ಯವಸ್ತೆ ಮಾಡುತ್ತೇವೆ ಎಂದರು.

ಈ ಪತ್ರಿಕಾ ಘೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಚಂದ್ರಮೌಳಿ ಗೌಡ, ಗ್ಯಾರಂಟಿ ಯೋಜನೆಯ ಅಧ್ಯಕ್ಷ ಚಿದಂಬರ, ಮಾರುತಿಪುರ ಗ್ರಾಮ ಪಂಚಾಯತಿ ಅಧ್ಯಕ್ಷಣಿ ದೀಪಿಕಾ, ಶಂಕರ ಶೆಟ್ಟಿ, ಎಂ.ಪಿ ಸುರೇಶ್, ಚಂದ್ರಪ್ಪ, ಸಂತೋಷ,  ಉಮೇಶ್ ಇನ್ನೂ ಮುಂತಾದವರು ಉಪಸ್ಥಿತರಿದ್ದರು.

ರಫ಼ಿ ರಿಪ್ಪನ್ ಪೇಟೆ

ನಾನು ಪೋಸ್ಟ್ ಮ್ಯಾನ್ ನ್ಯೂಸ್ ಮಾದ್ಯಮದ ಹಿಂದೆ ಇರುವ ಒಬ್ಬ ಸ್ಥಳೀಯ ಸುದ್ದಿಪ್ರೇಮಿ ಪತ್ರಕರ್ತ. ಕಳೆದ ಐದು ವರ್ಷಗಳಿಂದ ಒಂದು ಕನಸನ್ನು ಜೀವಂತವಾಗಿಟ್ಟಿದ್ದೇನೆ — ನಮ್ಮೂರ ಸುದ್ದಿಗಳು ಲೋಕದವರೆಗೆ ತಲುಪಬೇಕು ಎಂಬದು. ಸ್ಥಳೀಯ ಪತ್ರಿಕೆಗಳಿಂದ ಆರಂಭಿಸಿ, ರಾಜ್ಯಮಟ್ಟದ ನ್ಯೂಸ್ ಚಾನೆಲ್‌ಗಳ ಬೆಂಗಳೂರು ಕಚೇರಿಯವರೆಗೆ ಮಾಧ್ಯಮದ ಎಲ್ಲಾ ಹಂತಗಳಲ್ಲಿ ಕೆಲಸ ಮಾಡಿದ ಅನುಭವ ನನ್ನದಾಗಿದೆ. ಆದರೆ ಅಲ್ಲಿ ಒಂದು ಖಾಲಿ ಅನಿಸಿತು — ನಿಜವಾದ ಸ್ಥಳೀಯ ಧ್ವನಿಗೆ ವೇದಿಕೆ ಇಲ್ಲ. ಅದಕ್ಕೆ ಪರ್ಯಾಯವಾಗಿ ಹುಟ್ಟಿತು “ಪೋಸ್ಟ್ ಮ್ಯಾನ್ ನ್ಯೂಸ್.” ಇಲ್ಲಿ ಸುದ್ದಿ ಅಂದ್ರೆ ಸುದ್ದಿ ಮಾತ್ರ. ಯಾರ ಪರವೂ ಅಲ್ಲ, ಯಾವ ಪಕ್ಷದ ಪರವೂ ಅಲ್ಲ. ನನ್ನ ನಿಲುವು ಸ್ಪಷ್ಟ — ಸುದ್ದಿ ಹೇಳಬೇಕು, ತೀರ್ಪು ಕೊಡಬಾರದು. ಕೆಲವೊಮ್ಮೆ ಓದುಗರ ಪ್ರತಿಕ್ರಿಯೆಗಳು ಬೇರೆ ಬಣ್ಣ ತೊಡುತ್ತವೆ, ಆದರೆ ನನ್ನ ಪ್ರತಿಕ್ರಿಯೆ ಕೆಲಸದ ಮೂಲಕವೇ. ಪೋಸ್ಟ್ ಮ್ಯಾನ್ ನ್ಯೂಸ್ ಇಂದು ಕೇವಲ ಒಂದು ಪೇಜ್ ಅಲ್ಲ, ಅದು ಒಂದು ಚಳವಳಿಯಾಗಿದೆ — ಪೋಸ್ಟ್ ಮ್ಯಾನ್ ನ್ಯೂಸ್‌ನ ಉದ್ದೇಶ ಕೇವಲ ವರದಿ ಮಾಡುವುದು ಅಲ್ಲ; ನಮ್ಮೂರ ಘಟನೆಗಳು, ಪ್ರತಿಭೆಗಳು, ಸಮಸ್ಯೆಗಳು, ಸಾಧನೆಗಳು — ಇವುಗಳನ್ನು ಹೊರಲೋಕಕ್ಕೆ ತಲುಪಿಸುವ ಸೇತುವೆಯಾಗಿರಬೇಕು. ಹಣ ಪಡೆದು ಸುದ್ದಿ ಮಾಡುವ ಅಭ್ಯಾಸವೂ ಇಲ್ಲ, ಹವ್ಯಾಸವೂ ಇಲ್ಲ. ಮುಂದಿನ ಹಂತದಲ್ಲಿ ನಾವು ಔಟ್‌ಸೋರ್ಸ್ ವ್ಯವಸ್ಥೆ ಮೂಲಕ ಸ್ಥಳೀಯ ವರದಿಗಾರರನ್ನು, ಕಥೆಗಾರರನ್ನು ಸೇರಿಸಿಕೊಂಡು ಈ ವೇದಿಕೆಯನ್ನು ಇನ್ನಷ್ಟು ಜೀವಂತಗೊಳಿಸುವ ಉದ್ದೇಶದಲ್ಲಿದ್ದೇವೆ. ನಮ್ಮ ಗುರಿ ಒಂದೇ — ಸಣ್ಣ ಊರುಗಳ ಸತ್ಯ ಕತೆಗಳು ದೊಡ್ಡ ಮಟ್ಟದಲ್ಲಿ ಲೋಕದ ಕಿವಿಗೆ ತಲುಪಬೇಕು. - ರಫ಼ಿ ರಿಪ್ಪನ್ ಪೇಟೆ ಸಂಪಾದಕರು , ಪೋಸ್ಟ್ ಮ್ಯಾನ್ ನ್ಯೂಸ್

Recent Posts

ಸರ್ಕಾರಿ ಬಸ್ ಸಮಯ ಬದಲಾವಣೆಗೆ ಆಗ್ರಹ: ವಿದ್ಯಾರ್ಥಿಗಳು, ಉದ್ಯೋಗಿಗಳ ಪ್ರತಿಭಟನೆ

ಸರ್ಕಾರಿ ಬಸ್ ಸಮಯ ಬದಲಾವಣೆಗೆ ಆಗ್ರಹ: ವಿದ್ಯಾರ್ಥಿಗಳು, ಉದ್ಯೋಗಿಗಳ ಪ್ರತಿಭಟನೆ Students and employees protest in Thirthahalli demanding…

3 hours ago

ಮೆಗ್ಗಾನ್ ನೂತನ ಹೃದ್ರೋಗ ಆಸ್ಪತ್ರೆಗೆ ಸಚಿವ ಮಧು ಬಂಗಾರಪ್ಪ ದಿಢೀರ್ ಭೇಟಿ; ₹6 ಕೋಟಿ ಅನುದಾನದ ಭರವಸೆ

ಮೆಗ್ಗಾನ್ ನೂತನ ಹೃದ್ರೋಗ ಆಸ್ಪತ್ರೆಗೆ ಸಚಿವ ಮಧು ಬಂಗಾರಪ್ಪ ದಿಢೀರ್ ಭೇಟಿ; ₹6 ಕೋಟಿ ಅನುದಾನದ ಭರವಸೆ Shivamogga Minister…

3 hours ago

ದಸರಾ ಕ್ರೀಡಾಕೂಟದ ಕರಾಟೆಯಲ್ಲಿ ರಿಪ್ಪನ್‌ಪೇಟೆಯ ನಿಯಾಜ್ ನಾಸಿರ್‌ಗೆ ಚಿನ್ನದ ಗೆಲುವು

ದಸರಾ ಕ್ರೀಡಾಕೂಟದ ಕರಾಟೆಯಲ್ಲಿ ರಿಪ್ಪನ್‌ಪೇಟೆಯ ನಿಯಾಜ್ ನಾಸಿರ್‌ಗೆ ಚಿನ್ನದ ಗೆಲುವು Ripponpete’s Niyaz Nasir wins first place in…

3 hours ago

ಹೆದ್ದಾರಿಪುರದಲ್ಲಿ ರಾಜಾರೋಷವಾಗಿ ಅಕ್ರಮ ಮದ್ಯ ಮಾರಾಟ : ಕಾಸು ತಿಂದು ಮೌನಕ್ಕೆ ಜಾರಿತೇ ಅಬಕಾರಿ ಇಲಾಖೆ !?

ಹೆದ್ದಾರಿಪುರದಲ್ಲಿ ರಾಜಾರೋಷವಾಗಿ ಅಕ್ರಮ ಮದ್ಯ ಮಾರಾಟ : ಕಾಸು ತಿಂದು ಮೌನಕ್ಕೆ ಜಾರಿತೇ ಅಬಕಾರಿ ಇಲಾಖೆ !? Illegal liquor…

9 hours ago

ಕೋಡೂರು ಶಾಲೆಯಲ್ಲಿ ಸಂಭ್ರಮದ ಕೃಷ್ಣ-ರಾಧಾ ವೇಷ ಸ್ಪರ್ಧೆ: ಭಾವೈಕ್ಯತೆಗೆ ಸಾಕ್ಷಿಯಾದ ಮುದ್ದುಕೃಷ್ಣರು

ಕೋಡೂರು ಶಾಲೆಯಲ್ಲಿ ಸಂಭ್ರಮದ ಕೃಷ್ಣ-ರಾಧಾ ವೇಷ ಸ್ಪರ್ಧೆ: ಭಾವೈಕ್ಯತೆಗೆ ಸಾಕ್ಷಿಯಾದ ಮುದ್ದುಕೃಷ್ಣರು Krishna-Radha fancy dress competition at Koduru…

10 hours ago

ತುಂಗಾ ನದಿಗೆ ಹಾರಿದ 19 ವರ್ಷದ ಯುವತಿ; ಅಗ್ನಿಶಾಮಕ ಸಿಬ್ಬಂದಿಯಿಂದ ರಕ್ಷಣೆ

ತುಂಗಾ ನದಿಗೆ ಹಾರಿದ 19 ವರ್ಷದ ಯುವತಿ; ಅಗ್ನಿಶಾಮಕ ಸಿಬ್ಬಂದಿಯಿಂದ ರಕ್ಷಣೆ 19-year-old woman jumps into Tunga River…

1 day ago