ಉತ್ತಮ ಆರೋಗ್ಯವೆನ್ನುವುದು ಶ್ರೀಮಂತರಿಗೆ ಮಾತ್ರ ಸೀಮಿತವೇ.!?

ಉತ್ತಮ ಆರೋಗ್ಯವೆನ್ನುವುದು ಶ್ರೀಮಂತರಿಗೆ ಮಾತ್ರ ಸೀಮಿತವೇ.!?

ನಾನೊಬ್ಬ ಮಾಧ್ಯಮ ವರ್ಗದ ಸಾಮಾನ್ಯ ಗೃಹಿಣಿ ಯಾಗಿದ್ದು ನನ್ನ ಕೆಲಸ ಪ್ರತಿದಿನ ನನ್ನ ಕುಟುಂಬ ಆರೋಗ್ಯವಂತವಾಗಿ ಮತ್ತು ಸಂತೋಷದಿಂದ ಇರುವಂತೆ ನೋಡಿಕೊಳ್ಳುವುದು. ಅದಕ್ಕಾಗಿ ನಾನು ಪ್ರತಿ ಗಳಿಗೆಯು ಶ್ರಮಿಸುತ್ತಿರುತ್ತೇನೆ.ಆದರೆ ಇತ್ತೀಚಿನ ದಿನಗಳಲ್ಲಿ ಕೆಲವು ಉತ್ತರವೇ ಸಿಗದ ಪ್ರಶ್ನೆಗಳು ನನ್ನನ್ನು ಸದಾ ಕಾಡುತ್ತಿರುತ್ತವೆ.

ಪ್ರತಿಯೊಬ್ಬರಿಗೂ ಒಳ್ಳೆಯ ಆರೋಗ್ಯ ಸಿಗಬೇಕೆಂದರೆ, ಒಳ್ಳೆಯ ಆಹಾರವೇ ಪ್ರಥಮ ಆದ್ಯತೆ. ಇದನ್ನು ಆಯುರ್ವೇದ ಗ್ರಂಥಗಳಲ್ಲೂ ಉಲ್ಲೆಖಿಸಿದ್ದಾರೆ.

ಈ ಹಿನ್ನಲೆಯಲ್ಲಿ ನನ್ನ ಕುಟುಂಬದ ಉತ್ತಮ ಆರೋಗ್ಯಕ್ಕಾಗಿ ಹೊರಗಿನ ತಿಂಡಿ ತಿನಿಸುಗಳನ್ನು ತರಿಸದೇ ಮನೆಯಲ್ಲೇ ಶುದ್ಧವಾಗಿ ತಿಂಡಿಗಳನ್ನು ತಯಾರಿಸುತ್ತಿರುತ್ತೇನೆ ಮಕ್ಕಳಿಗೆ ಇಷ್ಟವಾಗುವ ತಿನಿಸುಗಳನ್ನ ಯೂಟ್ಯೂಬ್ ನಲ್ಲಿ ನೋಡಿ ಮಾಡುತ್ತಿರುತ್ತೇನೆ. ಅದರಲ್ಲೂ ಒಂದು ಹೆಜ್ಜೆ ಮುಂದೆ ಹೋಗಿ ಆರೋಗ್ಯಯುತ ಮಾದರಿಯನ್ನು ಹುಡುಕುತ್ತಿರುತ್ತೇನೆ.

ಉದಾಹರಣೆಗೆ ಕರಿಯುವ ಪದಾರ್ಥಗಳಿಗೆ ಯಾವ ಅಡುಗೆ ಎಣ್ಣೆ ಬಳಸಿದರೆ ಉತ್ತಮ ಎಂದೆಲ್ಲ, ಅದಕ್ಕಾಗಿ ಈಗ ನಾನು ರೀಫೈಂಡ್ ಆಯಿಲ್ ಬಿಟ್ಟು ಕಡಲೆ ಬೀಜದ ಎಣ್ಣೆಗೆ ಬದಲಾಗಿದ್ದೇನೆ. ಹೀಗೆ ಬದಲಾಗುತ್ತಾ ಹೋದಂತೆಲ್ಲಾ ಅವುಗಳ ಬೆಲೆಯಲ್ಲೂ ತುಂಬಾ ವ್ಯತ್ಯಾಸಗಳು ಸಿಗುತ್ತವೆ.ಅಡಿಗೆ ಎಣ್ಣೆಯ ಬೆಲೆ ಕಡಿಮೆ ಎಂದರೆ 180 ರೂ ಹಾಗೂ ಹೆಲ್ದಿ ಎಣ್ಣೆಗೆ 350 ರೂ ಇದೆ , ಅಡಿಗೆಗೆ ಬಳಸುವ ಉಪ್ಪು 25 ರೂ ಗೆ ಸಿಗುತ್ತದೆ ಹೆಲ್ದಿ ಉಪ್ಪು ಬೇಕಾದರೇ ಪಾವತಿಸಬೇಕು, ಇನ್ನೂ ಸಕ್ಕರೆ kg ಗೆ 50 ಕ್ಕೆ ಸಿಗುತ್ತದೆ ಹೆಲ್ದಿ ಸಕ್ಕರೆ ಬೇಕಾದರೇ 150 ರೂ , ಬೆಲ್ಲ kg ಗೆ 50 ಹೆಲ್ದಿ ಬೆಲ್ಲಕ್ಕೆ 100 ರೂ ತೆರಬೇಕಾಗುತ್ತದೆ.ಇದು ಕೇವಲ ದಿನಸಿ ಪದ್ಧರ್ಥಗಳಿಗೆ ಸೀಮಿತವಲ್ಲ ಹಣ್ಣು,ತರಕಾರಿ , ಸೊಪ್ಪುಗಳ ದರದಲ್ಲೂ ಇದೆ ಪರಿಸ್ಥಿತಿ. ಆರ್ಗಾನಿಕ್(organic) ಆಗಿ ಬೆಳೆದಿದ್ದು ಜಾಸ್ತಿ ಬೆಲೆ, ಕಲಬೆರಕೆ ಆಗಿರೋದು ಕಡಿಮೆ ಬೆಲೆ.

ಖಾದ್ಯ ತೈಲ್ಯದ ಜತೆಗೆ ಖನಿಜ ತೈಲ ಸೇರಿಸುವುದರಿಂದ ಕ್ಯಾನ್ಸರ್ ಅಪಾಯ ಇರುತ್ತದೆ.ಸೀಸದ ಕ್ರೋಮೇಟ್‌ಅನ್ನು ಅರಿಶಿಣಪುಡಿ ಮತ್ತು ಮಸಾಲೆ ಪದಾರ್ಥಗಳಿಗೆ ಸೇರಿಸಲಾಗುತ್ತದೆ. ಇದು ರಕ್ತಹೀನತೆ, ಪಾರ್ಶ್ವವಾಯು, ಮೆದುಳಿನ ಹಾನಿ, ಗರ್ಭಪಾತಕ್ಕೆ ಕಾರಣವಾಗಬಹುದು. ನೀರಿಗೆ ಸೀಸ ಸೇರಿಸಿದರೆ ನಿದ್ರಾಹೀನತೆ, ಮಲಬದ್ಧತೆ, ರಕ್ತಹೀನತೆ ಮತ್ತು ಮಾನಸಿಕ ಸಮಸ್ಯೆ ತಲೆದೋರಬಹುದು.ನೀರು ಮತ್ತು ಮದ್ಯಸಾರಕ್ಕೆ ಕೋಬಾಲ್ಟ್ ಸೇರಿಸಿದರೆ ಹೃದಯ ಸಂಬಂಧಿ ಸಮಸ್ಯೆ ಕಾಣಿಸಿಕೊಳ್ಳಬಹುದು. ಪಾದರಸದಿಂದ ಪಾರ್ಶ್ವವಾಯು ಜತೆಗೆಮೆದುಳಿಗೆ ಹಾನಿ ಉಂಟಾಗಬಹುದು ಎನ್ನುತ್ತಾರೆ ವೈದ್ಯರು.

ಕಲಬೆರಕೆ ಇಲ್ಲದ ಅಡುಗೆ ಎಣ್ಣೆ ಖರೀದಿಸಲು ಹೋದರೆ ಬೆಲೆ ಜಾಸ್ತಿ ನಮ್ಮ ತಿಂಗಳ ಬಜೆಟ್ ಮೀರಿ ಹೋಗುವಂತದ್ದು,  ಬೆಲೆ ಜಾಸ್ತಿ ಅಂತ ಕೈ ಬಿಟ್ಟರೆ, ಆರೋಗ್ಯ ಸಮಸ್ಯೆ ಕಾಡುವುದೇನೋ ಅನ್ನುವ ಭಯ. ಈಗ ನೀವ್ ಹೇಳಬಹುದು ಇನ್ಶೂರೆನ್ಸ್ ಇದೆಯಲ್ಲಾ ಅಂತ ದುಡಿದ ದುಡ್ಡೆಲ್ಲಾ ಇನ್ಶೂರೆನ್ಸ್ ಗೆ ಹಾಕಿದರೆ ಹೇಗೆ ? ಇರಲಿ ಮಾಡಿಸೋಣ ಅಂತ ಇನ್ಶೂರೆನ್ಸ್ ಮಾಡಿಸಿದರೆ ಕಾಯಿಲೆ ಬಂದಾಗ ಕ್ಲೇಮ್ ಮಾಡುತ್ತಾರೆ ಹೊರತು ಖಾಯಿಲೆ ಅನುಭವಿಸೋರು ನಾವೇ ತಾನೇ..!?

ಇದನ್ನೆಲ್ಲಾ ನೋಡಿದಾಗ ನನಗೆ ಕಾಡುವ ಕೊನೆಯ ಪ್ರಶ್ನೆ ಉತ್ತಮ ಆರೋಗ್ಯ ಅನ್ನುವುದು ಶ್ರೀಮಂತರಿಗೆ ಮಾತ್ರಾನಾ!!?? ಬಡವ ಕಲಬೆರಕೆ ಆಹಾರ ಸೇವಿಸಿ ಸಾಯಬೇಕಾ..!??

ಈ ಬಗ್ಗೆ ಸಂಬಂಧಪಟ್ಟ ಇಲಾಖೆಯವರು ಆಹಾರ ಸಾಮಾಗ್ರಿಗಳಲ್ಲಿ ಮಾಡುವ ಕಲಬೆರಕೆಯನ್ನು ನಿಲ್ಲಿಸಲು ಕಠಿಣ ಕಾನೂನು ತರಬೇಕು ಮತ್ತು ಕಲಬೆರಕೆ ಇಲ್ಲದ ಆಹಾರ ಸಾಮಾಗ್ರಿಗಳ ಮೇಲಿನ ತೆರಿಗೆಯನ್ನು ಕಡಿತಗೊಳಿಸಿದರೆ ಅವು ಎಲ್ಲಾ ವರ್ಗದ ಜನರಿಗೂ ಸಿಗಬಹುದೇನೋ , ಬಡವರು ಕೂಡಾ ಅಲ್ಪಸ್ವಲ್ಪ ಆರೋಗ್ಯವಂತವರಾಗುತ್ತಾರೆ ಎನ್ನುವ ಸಣ್ಣ ಭರವಸೆ ಅಷ್ಟೇ….

– ಸಂಗೀತ ಎಂ ಎನ್    
       ರಿಪ್ಪನಪೇಟೆ

ರಫ಼ಿ ರಿಪ್ಪನ್ ಪೇಟೆ

ನಾನು ಪೋಸ್ಟ್ ಮ್ಯಾನ್ ನ್ಯೂಸ್ ಮಾದ್ಯಮದ ಹಿಂದೆ ಇರುವ ಒಬ್ಬ ಸ್ಥಳೀಯ ಸುದ್ದಿಪ್ರೇಮಿ ಪತ್ರಕರ್ತ. ಕಳೆದ ಐದು ವರ್ಷಗಳಿಂದ ಒಂದು ಕನಸನ್ನು ಜೀವಂತವಾಗಿಟ್ಟಿದ್ದೇನೆ — ನಮ್ಮೂರ ಸುದ್ದಿಗಳು ಲೋಕದವರೆಗೆ ತಲುಪಬೇಕು ಎಂಬದು. ಸ್ಥಳೀಯ ಪತ್ರಿಕೆಗಳಿಂದ ಆರಂಭಿಸಿ, ರಾಜ್ಯಮಟ್ಟದ ನ್ಯೂಸ್ ಚಾನೆಲ್‌ಗಳ ಬೆಂಗಳೂರು ಕಚೇರಿಯವರೆಗೆ ಮಾಧ್ಯಮದ ಎಲ್ಲಾ ಹಂತಗಳಲ್ಲಿ ಕೆಲಸ ಮಾಡಿದ ಅನುಭವ ನನ್ನದಾಗಿದೆ. ಆದರೆ ಅಲ್ಲಿ ಒಂದು ಖಾಲಿ ಅನಿಸಿತು — ನಿಜವಾದ ಸ್ಥಳೀಯ ಧ್ವನಿಗೆ ವೇದಿಕೆ ಇಲ್ಲ. ಅದಕ್ಕೆ ಪರ್ಯಾಯವಾಗಿ ಹುಟ್ಟಿತು “ಪೋಸ್ಟ್ ಮ್ಯಾನ್ ನ್ಯೂಸ್.” ಇಲ್ಲಿ ಸುದ್ದಿ ಅಂದ್ರೆ ಸುದ್ದಿ ಮಾತ್ರ. ಯಾರ ಪರವೂ ಅಲ್ಲ, ಯಾವ ಪಕ್ಷದ ಪರವೂ ಅಲ್ಲ. ನನ್ನ ನಿಲುವು ಸ್ಪಷ್ಟ — ಸುದ್ದಿ ಹೇಳಬೇಕು, ತೀರ್ಪು ಕೊಡಬಾರದು. ಕೆಲವೊಮ್ಮೆ ಓದುಗರ ಪ್ರತಿಕ್ರಿಯೆಗಳು ಬೇರೆ ಬಣ್ಣ ತೊಡುತ್ತವೆ, ಆದರೆ ನನ್ನ ಪ್ರತಿಕ್ರಿಯೆ ಕೆಲಸದ ಮೂಲಕವೇ. ಪೋಸ್ಟ್ ಮ್ಯಾನ್ ನ್ಯೂಸ್ ಇಂದು ಕೇವಲ ಒಂದು ಪೇಜ್ ಅಲ್ಲ, ಅದು ಒಂದು ಚಳವಳಿಯಾಗಿದೆ — ಪೋಸ್ಟ್ ಮ್ಯಾನ್ ನ್ಯೂಸ್‌ನ ಉದ್ದೇಶ ಕೇವಲ ವರದಿ ಮಾಡುವುದು ಅಲ್ಲ; ನಮ್ಮೂರ ಘಟನೆಗಳು, ಪ್ರತಿಭೆಗಳು, ಸಮಸ್ಯೆಗಳು, ಸಾಧನೆಗಳು — ಇವುಗಳನ್ನು ಹೊರಲೋಕಕ್ಕೆ ತಲುಪಿಸುವ ಸೇತುವೆಯಾಗಿರಬೇಕು. ಹಣ ಪಡೆದು ಸುದ್ದಿ ಮಾಡುವ ಅಭ್ಯಾಸವೂ ಇಲ್ಲ, ಹವ್ಯಾಸವೂ ಇಲ್ಲ. ಮುಂದಿನ ಹಂತದಲ್ಲಿ ನಾವು ಔಟ್‌ಸೋರ್ಸ್ ವ್ಯವಸ್ಥೆ ಮೂಲಕ ಸ್ಥಳೀಯ ವರದಿಗಾರರನ್ನು, ಕಥೆಗಾರರನ್ನು ಸೇರಿಸಿಕೊಂಡು ಈ ವೇದಿಕೆಯನ್ನು ಇನ್ನಷ್ಟು ಜೀವಂತಗೊಳಿಸುವ ಉದ್ದೇಶದಲ್ಲಿದ್ದೇವೆ. ನಮ್ಮ ಗುರಿ ಒಂದೇ — ಸಣ್ಣ ಊರುಗಳ ಸತ್ಯ ಕತೆಗಳು ದೊಡ್ಡ ಮಟ್ಟದಲ್ಲಿ ಲೋಕದ ಕಿವಿಗೆ ತಲುಪಬೇಕು. - ರಫ಼ಿ ರಿಪ್ಪನ್ ಪೇಟೆ ಸಂಪಾದಕರು , ಪೋಸ್ಟ್ ಮ್ಯಾನ್ ನ್ಯೂಸ್

Recent Posts

ರಿಪ್ಪನ್‌ಪೇಟೆಯಲ್ಲಿ ಅರಣ್ಯಾಧಿಕಾರಿಗಳ ದಾಳಿ : 21 ಕೆ.ಜಿ. ಜಿಂಕೆ ಮಾಂಸ ವಶ, ಆರೋಪಿಗಳು ಪರಾರಿ

ರಿಪ್ಪನ್‌ಪೇಟೆಯಲ್ಲಿ ಅರಣ್ಯಾಧಿಕಾರಿಗಳ ದಾಳಿ : 21 ಕೆ.ಜಿ. ಜಿಂಕೆ ಮಾಂಸ ವಶ, ಆರೋಪಿಗಳು ಪರಾರಿ Forest Flying Squad officials…

5 hours ago

ರಿಪ್ಪನ್‌ಪೇಟೆಯ ನಿವೃತ್ತ ಶಿಕ್ಷಕ, ಶಿಕ್ಷಣ ಪ್ರೇಮಿ ಬಿ. ಶೇಖರಪ್ಪ ಮಾಸ್ಟರ್ ನಿಧನ; ರಂಭಾಪುರಿ ಜಗದ್ಗುರುಗಳಿಂದ ಸಂತಾಪ

ರಿಪ್ಪನ್‌ಪೇಟೆಯ ನಿವೃತ್ತ ಶಿಕ್ಷಕ, ಶಿಕ್ಷಣ ಪ್ರೇಮಿ ಬಿ. ಶೇಖರಪ್ಪ ಮಾಸ್ಟರ್ ನಿಧನ; ರಂಭಾಪುರಿ ಜಗದ್ಗುರುಗಳಿಂದ ಸಂತಾಪ Retired teacher and…

18 hours ago

ಸಾಗರೋತ್ತರದಲ್ಲೂ ಹುಟ್ಟೂರಿನ ಕಳಕಳಿ | ನೊಂದವರ ಬಾಳಲ್ಲಿ ಬೆಳಕಾದ ರಿಪ್ಪನ್‌ಪೇಟೆಯ ಜಿಸಿಸಿ ಯುವಪಡೆಗೆ ಶಾಸಕರಿಂದ ವಿಶೇಷ ಸನ್ಮಾನ

ಸಾಗರೋತ್ತರದಲ್ಲೂ ಹುಟ್ಟೂರಿನ ಕಳಕಳಿ | ನೊಂದವರ ಬಾಳಲ್ಲಿ ಬೆಳಕಾದ ರಿಪ್ಪನ್‌ಪೇಟೆಯ ಜಿಸಿಸಿ ಯುವಪಡೆಗೆ ಶಾಸಕರಿಂದ ವಿಶೇಷ ಸನ್ಮಾನ ​ಮಾನವೀಯತೆಯೆಂಬುದು ಕೇವಲ…

18 hours ago

ಮಕ್ಕಳ ಶೈಕ್ಷಣಿಕ ಪ್ರಗತಿಗೆ ಹೆಚ್ಚು ಒತ್ತು ನೀಡಿ – ಶಾಸಕ ಬೇಳೂರು ಗೋಪಾಲಕೃಷ್ಣ

ಮಕ್ಕಳ ಶೈಕ್ಷಣಿಕ ಪ್ರಗತಿಗೆ ಹೆಚ್ಚು ಒತ್ತು ನೀಡಿ - ಶಾಸಕ ಬೇಳೂರು ಗೋಪಾಲಕೃಷ್ಣ ರಿಪ್ಪನ್‌ಪೇಟೆಯಲ್ಲಿ ಈದ್ ಮಿಲಾದ್ ಅಂಗವಾಗಿ ಸೌಹಾರ್ಧ…

18 hours ago

ರಿಪ್ಪನ್‌ಪೇಟೆ ಗಣೇಶೋತ್ಸವ ರಾಜ್ಯಕ್ಕೇ ಮಾದರಿಯಾಗಲಿ: ಶಾಂತಿ ಸಮಿತಿ ಸಭೆಯಲ್ಲಿ ಎಎಸ್ ಪಿ ಡಾ. ಭಾನುಪ್ರಕಾಶ್ ಕರೆ

ರಿಪ್ಪನ್‌ಪೇಟೆ ಗಣೇಶೋತ್ಸವ ರಾಜ್ಯಕ್ಕೇ ಮಾದರಿಯಾಗಲಿ: ಶಾಂತಿ ಸಮಿತಿ ಸಭೆಯಲ್ಲಿ ಎಎಸ್ ಪಿ ಡಾ.ಭಾನುಪ್ರಕಾಶ್ ಕರೆ Thirthahalli DySP Dr. Bhanuprakash…

20 hours ago

ರಿಪ್ಪನ್‌ಪೇಟೆಯ ಹೆಮ್ಮೆಯ ವಿದ್ಯಾದೇಗುಲಕ್ಕೆ 100 ವರ್ಷ; ಸೆ.10ರಂದು ಹಳೆಯ ವಿದ್ಯಾರ್ಥಿಗಳ ಮಹತ್ವದ ಸಭೆ

ರಿಪ್ಪನ್‌ಪೇಟೆಯ ಹೆಮ್ಮೆಯ ವಿದ್ಯಾದೇಗುಲಕ್ಕೆ 100 ವರ್ಷ; ಸೆ.10ರಂದು ಹಳೆಯ ವಿದ್ಯಾರ್ಥಿಗಳ ಮಹತ್ವದ ಸಭೆ ಶತಮಾನೋತ್ಸವ ಆಚರಣೆಗೆ ಭರ್ಜರಿ ಸಿದ್ಧತೆ :…

24 hours ago