ಭಕ್ತರ ಸದೀಚ್ಛೆ ಧರ್ಮಪಥದಲ್ಲಿರಲಿ : ಹೊಂಬುಜಾ ಶ್ರೀಗಳು
ರಿಪ್ಪನ್‌ಪೇಟೆ : ಅತಿಶಯ ಶ್ರೀಕ್ಷೇತ್ರ ಹೊಂಬುಜದಲ್ಲಿ ಪರಂಪರಾಗತ ವಾರ್ಷಿಕ ರಥೋತ್ಸವ ಮಹೋತ್ಸವವು ಆರು ದಿನಗಳ ಪರ್ಯಂತ ವಿವಿಧ ಜಿನಾಗಮ ಶಾಸ್ತೋಕ್ತ ಪೂಜೆ, ಆರಾಧನೆ, ಉತ್ಸವಾದಿಗಳು ಪೀಠಾಧೀಶರಾದ ಪರಮಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಮಹಾಸ್ವಾಮಿಗಳವರ ದಿವ್ಯ ಸಾನಿಧ್ಯ, ನೇತೃತ್ವ ಮತ್ತು ಮಾರ್ಗದರ್ಶನದಲ್ಲಿ ವಿಜೃಂಭಣೆಯಿಂದ ನೆರವೇರಿತು.
ನಿತ್ಯವಿಧಿ ಸಹಿತ ಪೂಜಾ ವಿಧಾನಗಳು, ಕುಂಕುಮೋತ್ಸವವು ಸಾಂಗವಾಗಿ ಏರ್ಪಟ್ಟಿತ್ತು. ಕುಮದ್ವತಿ ತೀರ್ಥದಲ್ಲಿ ಉತ್ಸವ ಮೂರ್ತಿಯ ಅವಭೃತ ಸ್ನಾನದ ಬಳಿಕ ಸಾಲಾಂಕೃತ ಪಲ್ಲಕ್ಕಿ ಆ ಬಳಿಕ ಗಜವಾಹನದಲ್ಲಿ ಶ್ರೀ ದೇವರ ಬಿಂಬವನ್ನು ಜಿನಾಲಯಕ್ಕೆ ಸ್ವಸ್ತಿಶ್ರೀ ಸ್ವಾಮೀಜಿಯವರು ಬರಮಾಡಿಕೊಂಡರು. ಅಷ್ಟಾವಧಾನದ ನಂತರ ಧ್ವಜಾವರೋಹಣಗೈದು ಶ್ರೀ ಪದ್ಮಾವತಿ ದೇವಿ ಬಿಂಬವನ್ನು ಜಿನಾಲಯದಲ್ಲಿ ಪೂಜಿಸಲಾಯಿತು.
ಮಹಾಪೂಜೆಯ ಮಹಾಮಂಗಳಾರತಿ ಸಂದರ್ಭದಲ್ಲಿ ಭಕ್ತರು ಶ್ರೀ ಪದ್ಮಾವತಿ ಮತಾಕೀ ಜೈ, ಶ್ರೀ ಪಾರ್ಶ್ವನಾಥ ಕೀ ಜೈ, ಶ್ರೀ ಜೈನ ಧರ್ಮಕೀ ಜೈ ಎಂದು ಭಕ್ತಿಪೂರ್ವಕ ಜಯಕಾರ ಮೊಳಗಿಸಿದರು.
ಧರ್ಮ ಸಂದೇಶ :
ಪರಮಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಯವರು ರಥೋತ್ಸವದಲ್ಲಿ ಪಾಲ್ಗೊಂಡ ಭಕ್ತರು ತಮ್ಮ ಜೀವನದಲ್ಲಿ ನಿತ್ಯವೂ ಧರ್ಮಪಥದಲ್ಲಿ ಸಾಗಿದಾಗ ಇಷ್ಟಾರ್ಥ, ಸದೀಚ್ಛೆ ಲಭಿಸುತ್ತದೆ ಎಂಬ ಧರ್ಮ ಸಂದೇಶ ನೀಡಿದರು.
ಗ್ರಾಮಸ್ಥರಿಂದ ಭಕ್ತಾಧಿಗಳಿಗೆ ಮಜ್ಜಿಗೆ ವಿತರಣೆ :
ಹುಂಚ ಜಾತ್ರೆ ಮಹಾರಥೋತ್ಸವದ ಪ್ರಯುಕ್ತ ಶ್ರೀ ಮುತ್ತೇಶ್ವರ ಸ್ವಾಮಿ ಸೇವಾ ಸಮಿತಿ ಮತ್ತು ಗ್ರಾಮಸ್ಥರು ಸೇರಿ ಉಚಿತ ಮಜ್ಜಿಗೆ ವಿತರಣಾ ಕಾರ್ಯಕ್ರಮ ನೆರವೇರಿತು.
ಈ ಸಂದರ್ಭದಲ್ಲಿ ಗ್ರಾಮದ ಸ್ನೇಹಿತರು ಹಿರಿಯರು ಪಾಲ್ಗೊಂಡಿದ್ದರು, ಶ್ರೀಕಾಂತ್ ಚಂದನ್ ಪುಂಡಲೀಕ ಬಾಬು, ಉಲ್ಲಾಸ, ವಿನಯ್ , ಮನು, ಧನುಶ್, ಗುರುರಾಜ,ಸಂಪತ್, ಮತ್ತಿತರರು ಉಪಸ್ಥಿತರಿದ್ದರು ಮತ್ತು ನಾಗಭೂಷಣ ಭಟ್ ಮತ್ತು ಜಯಕರ್ನಾಟಕ ಸಂಘಟನೆ, ಅನ್ಮೋಲ್ ಕಿರಣ್ ಅವರು ಸಲಹೆ ಸಹಾಯ ನೀಡಿದರು,
ರಫ಼ಿ ರಿಪ್ಪನ್ ಪೇಟೆನಾನು ಪೋಸ್ಟ್ ಮ್ಯಾನ್ ನ್ಯೂಸ್ ಮಾದ್ಯಮದ ಹಿಂದೆ ಇರುವ ಒಬ್ಬ ಸ್ಥಳೀಯ ಸುದ್ದಿಪ್ರೇಮಿ ಪತ್ರಕರ್ತ. ಕಳೆದ ಐದು ವರ್ಷಗಳಿಂದ ಒಂದು ಕನಸನ್ನು ಜೀವಂತವಾಗಿಟ್ಟಿದ್ದೇನೆ — ನಮ್ಮೂರ ಸುದ್ದಿಗಳು ಲೋಕದವರೆಗೆ ತಲುಪಬೇಕು ಎಂಬದು. ಸ್ಥಳೀಯ ಪತ್ರಿಕೆಗಳಿಂದ ಆರಂಭಿಸಿ, ರಾಜ್ಯಮಟ್ಟದ ನ್ಯೂಸ್ ಚಾನೆಲ್‌ಗಳ ಬೆಂಗಳೂರು ಕಚೇರಿಯವರೆಗೆ ಮಾಧ್ಯಮದ ಎಲ್ಲಾ ಹಂತಗಳಲ್ಲಿ ಕೆಲಸ ಮಾಡಿದ ಅನುಭವ ನನ್ನದಾಗಿದೆ. ಆದರೆ ಅಲ್ಲಿ ಒಂದು ಖಾಲಿ ಅನಿಸಿತು — ನಿಜವಾದ ಸ್ಥಳೀಯ ಧ್ವನಿಗೆ ವೇದಿಕೆ ಇಲ್ಲ. ಅದಕ್ಕೆ ಪರ್ಯಾಯವಾಗಿ ಹುಟ್ಟಿತು “ಪೋಸ್ಟ್ ಮ್ಯಾನ್ ನ್ಯೂಸ್.” ಇಲ್ಲಿ ಸುದ್ದಿ ಅಂದ್ರೆ ಸುದ್ದಿ ಮಾತ್ರ. ಯಾರ ಪರವೂ ಅಲ್ಲ, ಯಾವ ಪಕ್ಷದ ಪರವೂ ಅಲ್ಲ. ನನ್ನ ನಿಲುವು ಸ್ಪಷ್ಟ — ಸುದ್ದಿ ಹೇಳಬೇಕು, ತೀರ್ಪು ಕೊಡಬಾರದು. ಕೆಲವೊಮ್ಮೆ ಓದುಗರ ಪ್ರತಿಕ್ರಿಯೆಗಳು ಬೇರೆ ಬಣ್ಣ ತೊಡುತ್ತವೆ, ಆದರೆ ನನ್ನ ಪ್ರತಿಕ್ರಿಯೆ ಕೆಲಸದ ಮೂಲಕವೇ. ಪೋಸ್ಟ್ ಮ್ಯಾನ್ ನ್ಯೂಸ್ ಇಂದು ಕೇವಲ ಒಂದು ಪೇಜ್ ಅಲ್ಲ, ಅದು ಒಂದು ಚಳವಳಿಯಾಗಿದೆ — ಪೋಸ್ಟ್ ಮ್ಯಾನ್ ನ್ಯೂಸ್‌ನ ಉದ್ದೇಶ ಕೇವಲ ವರದಿ ಮಾಡುವುದು ಅಲ್ಲ; ನಮ್ಮೂರ ಘಟನೆಗಳು, ಪ್ರತಿಭೆಗಳು, ಸಮಸ್ಯೆಗಳು, ಸಾಧನೆಗಳು — ಇವುಗಳನ್ನು ಹೊರಲೋಕಕ್ಕೆ ತಲುಪಿಸುವ ಸೇತುವೆಯಾಗಿರಬೇಕು. ಹಣ ಪಡೆದು ಸುದ್ದಿ ಮಾಡುವ ಅಭ್ಯಾಸವೂ ಇಲ್ಲ, ಹವ್ಯಾಸವೂ ಇಲ್ಲ. ಮುಂದಿನ ಹಂತದಲ್ಲಿ ನಾವು ಔಟ್‌ಸೋರ್ಸ್ ವ್ಯವಸ್ಥೆ ಮೂಲಕ ಸ್ಥಳೀಯ ವರದಿಗಾರರನ್ನು, ಕಥೆಗಾರರನ್ನು ಸೇರಿಸಿಕೊಂಡು ಈ ವೇದಿಕೆಯನ್ನು ಇನ್ನಷ್ಟು ಜೀವಂತಗೊಳಿಸುವ ಉದ್ದೇಶದಲ್ಲಿದ್ದೇವೆ. ನಮ್ಮ ಗುರಿ ಒಂದೇ — ಸಣ್ಣ ಊರುಗಳ ಸತ್ಯ ಕತೆಗಳು ದೊಡ್ಡ ಮಟ್ಟದಲ್ಲಿ ಲೋಕದ ಕಿವಿಗೆ ತಲುಪಬೇಕು. - ರಫ಼ಿ ರಿಪ್ಪನ್ ಪೇಟೆ ಸಂಪಾದಕರು , ಪೋಸ್ಟ್ ಮ್ಯಾನ್ ನ್ಯೂಸ್