SAGARA | ಒಮಿನಿ ಕಾರು ಹಾಗೂ ಅಡಿಕೆ ಕಳ್ಳತನವೆಸಗಿದ್ದ ಆರೋಪಿಯನ್ನು ಮಾಲು ಸಮೇತ ಬಂಧಿಸಿದ ಪೊಲೀಸರು
81 ಸಾವಿರ ರೂ. ಮೌಲ್ಯದ ಅಡಕೆ, ಕಾಳುಮೆಣಸು ಮತ್ತು ಗೇರು ಬೀಜಗಳನ್ನು ಕಳ್ಳತನ ಮಾಡಿದ ಆರೋಪಿಯನ್ನು ಮಾಲು ಸಹಿತ ಹಾಗೂ ಕೃತ್ಯಕ್ಕೆ ಬಳಸಿದ್ದ ಕಳ್ಳತನದ ಕಾರನ್ನು ಸಾಗರ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಶಿವಪ್ಪ ನಾಯಕ ನಗರ ನಿವಾಸಿಯಾದ ಮಹಮದ್ ಜಾಕೀರ್ (33) ಬಂಧಿತ ಆರೋಪಿಯಾಗಿದ್ದಾನೆ.
ಕಳೆದ ಫೆಬ್ರವರಿಯಲ್ಲಿ ಸಾಗರ ನಗರದ ಸೈಯದ್ ಷಫಾಜ್‍ರವರ ಅರೆಕಾನೆಟ್ ಎನ್ನುವ ಚಿಲ್ಲರೆ ಮಳಿಗೆಯಲ್ಲಿ ಅಡಕೆ, ಕಾಳುಮೆಣಸು, ಗೇರು ಬೀಜಗಳ ಕಳ್ಳತನವಾಗಿರುವ ಬಗ್ಗೆ ದೂರು ದಾಖಲಾಗಿತ್ತು ಹಾಗೇಯೆ ಮಾರ್ಚ್ 25ರಂದು ರಾಘವೇಂದ್ರ ಎನ್ನುವವರ ಕೆಎ-35-ಎಂ-3866 ಓಮಿನಿ ವಾಹನವನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಎಂದು ಪೇಟೆ ಠಾಣೆಯಲ್ಲಿ ದೂರು ನೀಡಿದ್ದರು.
ಎರಡೂ ಪ್ರಕರಣದ ತನಿಖೆ ಪ್ರಾರಂಭಿಸಿದ್ದ ಪೊಲೀಸರಿಗೆ ಆರೋಪಿಯಾಗಿರುವ ಶಿವಪ್ಪ ನಾಯಕ ನಗರ ನಿವಾಸಿಯಾದ ಮಹಮದ್ ಜಾಕೀರ್ (33)ನನ್ನು ಬಂಧಿಸಿ 81 ಸಾವಿರಕ್ಕೂ ಹೆಚ್ಚು ಮೌಲ್ಯದ ವಿವಿಧ ಮಾದರಿಯ ಅಡಕೆ, ಕಾಳುಮೆಣಸು, ಗೇರು ಬೀಜಗಳು ಹಾಗೂ ಕೃತ್ಯಕ್ಕೆ ಬಳಸಿದ ಕಳ್ಳತನವಾದ 2 ಲಕ್ಷ ಬೆಲೆಯ ಓಮಿನಿ ಕಾರು ಸಹಿತ ವಶಪಡಿಸಿಕೊಂಡಿದ್ದಾರೆ.
ಪ್ರಕರಣ ಕುರಿತಂತೆ ಮಂಗಳವಾರ ಸಾಗರ ಡಿ ವೈ ಎಸ್ ಪಿ ಗೋಪಾಲಕೃಷ್ಣ ನಾಯಕ್ ಮಾಹಿತಿ ನೀಡಿದ್ದಾರೆ