Shiralakoppa | ಸಂತೆಯಲ್ಲಿ ನಿಗೂಢ ವಸ್ತು ಸ್ಫೋಟ ಪ್ರಕರಣ – ಶಿವಮೊಗ್ಗ ಎಸ್‌ಪಿ ಮಿಥುನ್ ಕುಮಾರ್ ಹೇಳಿದ್ದೇನು..!!??

Shiralakoppa | ಸಂತೆಯಲ್ಲಿ ನಿಗೂಢ ವಸ್ತು ಸ್ಫೋಟ ಪ್ರಕರಣ –  ಶಿವಮೊಗ್ಗ ಎಸ್‌ಪಿ ಮಿಥುನ್ ಕುಮಾರ್ ಹೇಳಿದ್ದೇನು..!!??


ಶಿವಮೊಗ್ಗ : ಶಿವಮೊಗ್ಗದ ಶಿರಾಳಕೊಪ್ಪದಲ್ಲಿ ಸಿಡಿಮದ್ದು ಸ್ಫೋಟಗೊಂಡು ಇಬ್ಬರು ವ್ಯಕ್ತಿಗಳು ಗಾಯಗೊಂಡಿದ್ದಾರೆ.

ಶಿರಾಳಕೊಪ್ಪದ ಬಸ್ ಸ್ಟ್ಯಾಂಡ್ ಬಳಿ ಈ ಘಟನೆ ನಡೆದಿದೆ. ಸಿಡಿಮದ್ದು ತಂದಿದ್ದ ದಂಪತಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಘಟನೆಯ ಬಗ್ಗೆ ಎಸ್ ಪಿ ಹೇಳಿದ್ದೇನು..??

ಇಂದು ಸಂತೆಗೆ ಉಮೇಶ್ ಮತ್ತು ಅವನ ಹೆಂಡತಿ ರೂಪರವರು ರಸ್ತೆ ಬದಿಯ ಅಂಗಡಿಯಾತ ಅಂತೋನಿ ಜೊತೆ ಕಂಬಳಿ ಖರೀದಿಸಿದ್ದಾರೆ. ಆ ಅವರೆಲ್ಲರೂ ಪರಸ್ಪರ ಪರಿಚಿತರು. ನಂತರ ಮಹಿಳೆ ರೂಪ ಮತ್ತು ಅವಳು ಪತಿ ಉಮೇಶ್ ಅಂಗಡಿಯವರಿಗೆ ಹೇಳಿ ಅರ್ಧ ಗಂಟೆ ಇಲ್ಲಿ ನಮ್ಮ ಬ್ಯಾಗ್ ಇಟ್ಟು ಸಂತೆಗೆ ಹೋಗಿ ವಾಪಸ್ ಬರುತ್ತೇನೆ ಎಂದಿದ್ದಾರೆ.

ಈ ಘಟನೆ ನಡೆದು ಸ್ವಲ್ಪ ಹೊತ್ತಿನ ನಂತರ ಆ ಬ್ಯಾಗ್ ಸ್ಫೋಟ ಗೊಂಡಿದೆ.  ಪ್ರಾಥಮಿಕ ವಿಚಾರಣೆ ವೇಳೆ ಬ್ಯಾಗ್​ನಲ್ಲಿ ಅವರು ಇಟ್ಟಿದ್ದ ಸಿಡಿ ಮದ್ದು ಪತ್ತೆಯಾಗಿದೆ. ಸದ್ಯ ಈ ಪ್ರಕರಣದಲ್ಲಿ ಇಬ್ಬರನ್ನು ವಶಕ್ಕೆ ಪಡೆಯಲಾಗಿದೆ

ಇನ್ನೂ ಸ್ಫೋಟಕ್ಕೆ ಸಂಬಂಧಿಸಿದಂತೆ ಯಾವುದೇ ಸ್ಟೌವ್​ಗೂ ಸಂಬಂಧವಿಲ್ಲ. ಅಂಗಡಿಯಾತ ವ್ಯಾಪಾರಕ್ಕಾಗಿ ಸ್ಟೌವ್​ ಇಟ್ಟುಕೊಂಡಿದ್ದ ಅಷ್ಟೆ ಅದಕ್ಕೂ ಘಟನೆಗೂ ಸಂಬಂಧವಿಲ್ಲ. ಕಾಡುಹಂದಿ ಶಿಕಾರಿಗೆ ಬಳಸುವ ಸಿಡಿಮದ್ದಿನಿಂದ ಬ್ಲಾಸ್ಟ್ ಆಗಿದೆ ಎಂದು ತಿಳಿಸಿದ್ದಾರೆ.

ಸೂಕ್ಷ್ಮ ಪ್ರಕರಣಗಳಲ್ಲಿ ಸುಳ್ಳುಸುದ್ದಿ ಹರಡಿದರೆ  ಕೇಸ್​ ದಾಖಲಿಸಲಾಗುವುದು ಎಂದು ತಿಳಿಸಿದ್ದಾರೆ
ರಫ಼ಿ ರಿಪ್ಪನ್ ಪೇಟೆ

ನಾನು ಪೋಸ್ಟ್ ಮ್ಯಾನ್ ನ್ಯೂಸ್ ಮಾದ್ಯಮದ ಹಿಂದೆ ಇರುವ ಒಬ್ಬ ಸ್ಥಳೀಯ ಸುದ್ದಿಪ್ರೇಮಿ ಪತ್ರಕರ್ತ. ಕಳೆದ ಐದು ವರ್ಷಗಳಿಂದ ಒಂದು ಕನಸನ್ನು ಜೀವಂತವಾಗಿಟ್ಟಿದ್ದೇನೆ — ನಮ್ಮೂರ ಸುದ್ದಿಗಳು ಲೋಕದವರೆಗೆ ತಲುಪಬೇಕು ಎಂಬದು. ಸ್ಥಳೀಯ ಪತ್ರಿಕೆಗಳಿಂದ ಆರಂಭಿಸಿ, ರಾಜ್ಯಮಟ್ಟದ ನ್ಯೂಸ್ ಚಾನೆಲ್‌ಗಳ ಬೆಂಗಳೂರು ಕಚೇರಿಯವರೆಗೆ ಮಾಧ್ಯಮದ ಎಲ್ಲಾ ಹಂತಗಳಲ್ಲಿ ಕೆಲಸ ಮಾಡಿದ ಅನುಭವ ನನ್ನದಾಗಿದೆ. ಆದರೆ ಅಲ್ಲಿ ಒಂದು ಖಾಲಿ ಅನಿಸಿತು — ನಿಜವಾದ ಸ್ಥಳೀಯ ಧ್ವನಿಗೆ ವೇದಿಕೆ ಇಲ್ಲ. ಅದಕ್ಕೆ ಪರ್ಯಾಯವಾಗಿ ಹುಟ್ಟಿತು “ಪೋಸ್ಟ್ ಮ್ಯಾನ್ ನ್ಯೂಸ್.” ಇಲ್ಲಿ ಸುದ್ದಿ ಅಂದ್ರೆ ಸುದ್ದಿ ಮಾತ್ರ. ಯಾರ ಪರವೂ ಅಲ್ಲ, ಯಾವ ಪಕ್ಷದ ಪರವೂ ಅಲ್ಲ. ನನ್ನ ನಿಲುವು ಸ್ಪಷ್ಟ — ಸುದ್ದಿ ಹೇಳಬೇಕು, ತೀರ್ಪು ಕೊಡಬಾರದು. ಕೆಲವೊಮ್ಮೆ ಓದುಗರ ಪ್ರತಿಕ್ರಿಯೆಗಳು ಬೇರೆ ಬಣ್ಣ ತೊಡುತ್ತವೆ, ಆದರೆ ನನ್ನ ಪ್ರತಿಕ್ರಿಯೆ ಕೆಲಸದ ಮೂಲಕವೇ. ಪೋಸ್ಟ್ ಮ್ಯಾನ್ ನ್ಯೂಸ್ ಇಂದು ಕೇವಲ ಒಂದು ಪೇಜ್ ಅಲ್ಲ, ಅದು ಒಂದು ಚಳವಳಿಯಾಗಿದೆ — ಪೋಸ್ಟ್ ಮ್ಯಾನ್ ನ್ಯೂಸ್‌ನ ಉದ್ದೇಶ ಕೇವಲ ವರದಿ ಮಾಡುವುದು ಅಲ್ಲ; ನಮ್ಮೂರ ಘಟನೆಗಳು, ಪ್ರತಿಭೆಗಳು, ಸಮಸ್ಯೆಗಳು, ಸಾಧನೆಗಳು — ಇವುಗಳನ್ನು ಹೊರಲೋಕಕ್ಕೆ ತಲುಪಿಸುವ ಸೇತುವೆಯಾಗಿರಬೇಕು. ಹಣ ಪಡೆದು ಸುದ್ದಿ ಮಾಡುವ ಅಭ್ಯಾಸವೂ ಇಲ್ಲ, ಹವ್ಯಾಸವೂ ಇಲ್ಲ. ಮುಂದಿನ ಹಂತದಲ್ಲಿ ನಾವು ಔಟ್‌ಸೋರ್ಸ್ ವ್ಯವಸ್ಥೆ ಮೂಲಕ ಸ್ಥಳೀಯ ವರದಿಗಾರರನ್ನು, ಕಥೆಗಾರರನ್ನು ಸೇರಿಸಿಕೊಂಡು ಈ ವೇದಿಕೆಯನ್ನು ಇನ್ನಷ್ಟು ಜೀವಂತಗೊಳಿಸುವ ಉದ್ದೇಶದಲ್ಲಿದ್ದೇವೆ. ನಮ್ಮ ಗುರಿ ಒಂದೇ — ಸಣ್ಣ ಊರುಗಳ ಸತ್ಯ ಕತೆಗಳು ದೊಡ್ಡ ಮಟ್ಟದಲ್ಲಿ ಲೋಕದ ಕಿವಿಗೆ ತಲುಪಬೇಕು. - ರಫ಼ಿ ರಿಪ್ಪನ್ ಪೇಟೆ ಸಂಪಾದಕರು , ಪೋಸ್ಟ್ ಮ್ಯಾನ್ ನ್ಯೂಸ್

Share
Published by
ರಫ಼ಿ ರಿಪ್ಪನ್ ಪೇಟೆ

Recent Posts

ಸಿಎಂ ಡಿಕೆಶಿ ಮನವೊಲಿಕೆ : ರಾಜೀನಾಮೆ ನಿರ್ಧಾರ ಕೈಬಿಟ್ಟ ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ

ಸಿಎಂ ಡಿಕೆಶಿ ಸಲಹೆಗೆ ಮನ್ನಣೆ : ರಾಜೀನಾಮೆ ನಿರ್ಧಾರ ಕೈಬಿಟ್ಟ ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ Sagar MLA Beluru…

7 hours ago

ಮದ್ಯದ ಅಮಲಿನಲ್ಲಿ ತಂದೆ-ಮಗನ ನಡುವೆ ಗಲಾಟೆ: ಕತ್ತು ಹಿಸುಕಿ ತಂದೆಯನ್ನೇ ಕೊಂದ ಪುತ್ರ!

ಮದ್ಯದ ಅಮಲಿನಲ್ಲಿ ತಂದೆ-ಮಗನ ನಡುವೆ ಗಲಾಟೆ: ಕತ್ತು ಹಿಸುಕಿ ತಂದೆಯನ್ನೇ ಕೊಂದ ಪುತ್ರ! A 55-year-old man was allegedly…

11 hours ago

ಬೇಳೂರುಗೆ ಸಚಿವ ಸ್ಥಾನ ಸಿಗದಿದ್ದಕ್ಕೆ ಆಕ್ರೋಶ: ಹೆದ್ದಾರಿಯಲ್ಲಿ ಟೈರ್ ಗೆ ಬೆಂಕಿ , ಕಾಂಗ್ರೆಸ್‌ನಲ್ಲಿ ರಾಜೀನಾಮೆ ಪರ್ವ

ಬೇಳೂರುಗೆ ಸಚಿವ ಸ್ಥಾನ ಸಿಗದಿದ್ದಕ್ಕೆ ಆಕ್ರೋಶ: ಹೆದ್ದಾರಿಯಲ್ಲಿ ಟೈರ್ ಗೆ ಬೆಂಕಿ , ಕಾಂಗ್ರೆಸ್‌ನಲ್ಲಿ ರಾಜೀನಾಮೆ ಪರ್ವ Supporters of…

11 hours ago

ಗುಡ್ಡ ಬಗೆದು ಇಲಿ ಹಿಡಿದ ಹೈಕಮಾಂಡ್: ನಾರಿಶಕ್ತಿಯ ಬೆನ್ನಿಗೆ ಚೂರಿ, ನಿಷ್ಠಾವಂತರಿಗೆ ಬರೀ ಕಪ್ಪೆಚಿಪ್ಪು!

ಗುಡ್ಡ ಬಗೆದು ಇಲಿ ಹಿಡಿದ ಹೈಕಮಾಂಡ್: ನಾರಿಶಕ್ತಿಯ ಬೆನ್ನಿಗೆ ಚೂರಿ, ನಿಷ್ಠಾವಂತರಿಗೆ ಬರೀ ಕಪ್ಪೆಚಿಪ್ಪು! ಅಧಿಕಾರದ ದರ್ಪದಲ್ಲಿ ನೈತಿಕತೆಯೇ ಬಲಿ,…

23 hours ago

ಡಿ.ಕೆ. ಶಿವಕುಮಾರ್ ಸಂಪುಟ ವಿಸ್ತರಣೆ: 19 ನೂತನ ಸಚಿವರ ಪ್ರಮಾಣವಚನ, ಲೋಕಭವನದಲ್ಲಿ ಸರಳ ಸಮಾರಂಭ

ಡಿ.ಕೆ. ಶಿವಕುಮಾರ್ ಸಂಪುಟ ವಿಸ್ತರಣೆ: 19 ನೂತನ ಸಚಿವರ ಪ್ರಮಾಣವಚನ, ಲೋಕಭವನದಲ್ಲಿ ಸರಳ ಸಮಾರಂಭ Karnataka Cabinet Expansion 2026:…

1 day ago

ಸಚಿವ ಸ್ಥಾನ ಕೈತಪ್ಪಿದ ಬೆನ್ನಲ್ಲೇ ಬೇಳೂರು ಗೋಪಾಲಕೃಷ್ಣ ಅಸಮಾಧಾನ: “ನಾಳೆಯೇ ಶಾಸಕ ಸ್ಥಾನಕ್ಕೆ ರಾಜೀನಾಮೆ” ಘೋಷಣೆ

ಸಚಿವ ಸ್ಥಾನ ಕೈತಪ್ಪಿದ ಬೆನ್ನಲ್ಲೇ ಬೇಳೂರು ಗೋಪಾಲಕೃಷ್ಣ ಅಸಮಾಧಾನ: "ನಾಳೆಯೇ ಶಾಸಕ ಸ್ಥಾನಕ್ಕೆ ರಾಜೀನಾಮೆ" ಘೋಷಣೆ Sagar MLA Beluru…

1 day ago