Ripponpete | ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರವೆಸಗಿದ್ದ ಆರೋಪಿಯನ್ನು ಬಂಧಿಸಿದ ಪೊಲೀಸರು
ರಿಪ್ಪನ್‌ಪೇಟೆ : ಬಣ್ಣ ಬಣ್ಣದ ಮಾತುಗಳನ್ನಾಡಿ ಯುವತಿಯನ್ನು ಪ್ರೀತಿಸಿ ಮದುವೆ ಆಗುವುದಾಗಿ ನಂಬಿಸಿ ಯುವತಿಯ ಮೇಲೆ ಅತ್ಯಾಚಾರವೆಸಗಿ ಪರಾರಿಯಾಗಿದ್ದ ಆರೋಪಿಯನ್ನು ರಿಪ್ಪನ್‌ಪೇಟೆ ಪೊಲೀಸರು ಬಂಧಿಸಿ ಹೆಡೆಮುರಿ ಕಟ್ಟಿದ್ದಾರೆ.
ಕೋಡೂರು ಗ್ರಾಪಂ ವ್ಯಾಪ್ತಿಯ 24ನೇ ಮೈಲಿಕಲ್ಲಿನ ಪ್ರತಾಪ್ (26) ಬಂಧಿತ ಆರೋಪಿಯಾಗಿದ್ದಾನೆ.
ಕೋಡೂರು ಗ್ರಾಪಂ ವ್ಯಾಪ್ತಿಯ ಯುವತಿಯೊಬ್ಬಳ್ಳನ್ನು ಮದುವೆಯಾಗುವುದಗಿ ನಂಬಿಸಿ ನಿರಂತರ ಅತ್ಯಾಚಾರವೆಸಗಿ ಗರ್ಭಿಣಿಯನ್ನಾಗಿಸಿ ಗಂಡು ಮಗುವಿಗೆ ಜನ್ಮ ನೀಡಿದ ಮೇಲೆ ನಾನು ಯಾವುದೇ ಕಾರಣಕ್ಕೂ ಮದುವೆಯಾಗುವುದಿಲ್ಲ ಎಂದು ಪರಾರಿಯಾಗಿದ್ದ ಆರೋಪಿಯನ್ನು ರಿಪ್ಪನ್‌ಪೇಟೆ ಪಿಎಸ್‌ಐ ಪ್ರವೀಣ್ ನೇತೃತ್ವದ ತಂಡ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕಾರ್ಯಾಚರಣೆಯಲ್ಲಿ ಸಿಬ್ಬಂದಿಗಳಾದ ಶಿವಕುಮಾರ್ ನಾಯ್ಕ್ , ಉಮೇಶ್ ಹಾಗೂ ಮಧುಸೂಧನ್ ಇದ್ದರು.
ಘಟನೆಯ ಹಿನ್ನಲೆ :
ಯುವಕನ ಮೋಸದ ಬಲೆಗೆ ಆಗಷ್ಟೇ ಯೌವನಕ್ಕೆ ಕಾಲಿಟ್ಟಿದ್ದ ಆ ಯುವತಿಯು ಆತನ ಮಾತಿಗೆ ಮರುಳಾಗಿ ತನ್ನ ಸರ್ವಸ್ವವನ್ನೇ ಅತನಿಗೆ ಅರ್ಪಿಸಿದ್ದಳು.
ದೊಡ್ಡಪ್ಪನ ಮಗ ಸೋಮಶೇಖರ ನೊಂದಿಗೆ ಆರೋಪಿ ಪ್ರತಾಪನು ಯುವತಿಯ ಮನೆಗೆ ಬರುತ್ತಿದ್ದ ಹಿನ್ನಲೆಯಲ್ಲಿ ಪ್ರತಾಪ ಪರಿಚಯವಾಗಿದ್ದನು ಆಮೇಲೆ ಅವರಿಬ್ಬರೂ ಸಿಕ್ಕಾಗ ಮಾತನಾಡುತ್ತಿದ್ದರು ಹೀಗೆ ಸಲುಗೆ ಹೆಚ್ಚಾಗಿ ಇಬ್ಬರಲ್ಲಿ ಪ್ರೇಮಾಂಕುರವಾಗಿತ್ತು
ನಂತರ ಆರೋಪಿ ಪ್ರತಾಪ್ ಯುವತಿಗೆ ನಾನು ನಿನ್ನನ್ನು ಮದುವೆ ಯಾಗುತ್ತೇನೆ, ಅಂತ ಪುಸಲಾಯಿಸಿ ಯುವತಿ ಬೇಡವೆಂದರೂ ದೈಹಿಕ ಸಂಪರ್ಕ ಬೆಳೆಸಿದ್ದಾನೆ ಹೀಗೆ ಮೂರ್ನಾಲ್ಕು ಬಾರಿ ದೈಹಿಕ ಸಂಪರ್ಕ ಬೆಳೆಸಿದನು. ನಂತರ ಯುವತಿ 4 ತಿಂಗಳಾದರೂ ಋತುಮತಿ ಆಗದೇ ಇದ್ದುದ್ದರಿಂದ ಅನುಮಾನ ಬಂದು ಪ್ರತಾಪನಿಗೆ ಆಸ್ಪತ್ರೆಗೆ ತೋರಿಸೋಣ ಬಾ ಎಂದಿದ್ದಾಳೆ ನಂತರ ಈ ವಿಚಾರವನ್ನು ಯಾರಿಗಾದರೂ ಹೇಳಿದರೆ ನಿನ್ನನ್ನು ಹಾಗೂ ನಿನ್ನ ಅಪ್ಪನನ್ನು ಸಾಯಿಸುತ್ತೇನೆ ವಿಡಿಯೋ ಮಾಡಿ ಫೇಸ್ ಬುಕ್ ಗೆ ಹಾಕುತ್ತೇನೆ ಎಂದು ಬೆದರಿಕೆ ಹಾಕಿ ನಂತರ ಫೋನ್ ನಂಬರ್ ನ್ನು ಬ್ಲ್ಯಾಕ್ ಮಾಡಿರುತ್ತಾನೆ.
ಯುವತಿ ಗರ್ಭಿಣಿಯಾದ ವಿಷಯ ತಿಳಿಯುತಿದ್ದಂತೆ ನಾನು ಆ ಮಗುವಿಗೆ ಕಾರಣನಲ್ಲ ಬೇರೆ ಯಾರೋ ಇರಬೇಕು ಎಂದು ಸುಳ್ಳು ಹೇಳಲು ಶುರು ಮಾಡಿದ್ದು ಹಾಗೂ ಹೀಗೂ 6 ತಿಂಗಳು ಕಳೆದಿರುತ್ತೆ.
ಯುವತಿಯ ದೇಹದಲ್ಲಿ ಬದಲಾವಣೆಯಾದಾಗ ಕುಟುಂಬಸ್ಥರ ಗಮನಕ್ಕೆ ಈ ವಿಚಾರ ಬಂದ ಹಿನ್ನಲೆಯಲ್ಲಿ ಯುವತಿ ಎಲ್ಲಾ ವಿಷಯ ಹೇಳಿದ್ದಾಳೆ.
ಕುಟುಂಬಸ್ಥರು ಆತನ ಬಳಿ ವಿಚಾರಿಸಿದಾಗ ಮಗುವಿಗೆ ಕಾರಣ ಯಾರೋ ಇರಬೇಕು ಎಂದು ಉಢಾಫೆಯಾಗಿ ಉತ್ತರ ಕೊಟ್ಟಿರುತ್ತಾನೆ. ನಂತರ ಯುವತಿಗೆ ಏಳೂವರೆ ತಿಂಗಳಿಗೆ ಹೊಟ್ಟೆ ನೋವು ಜಾಸ್ತಿಯಾಗಿ ಹೊಸನಗರ ಆಸ್ಪತ್ರೆಯಲ್ಲಿ ಗಂಡು ಮಗು ಜನನವಾಗಿರುತ್ತೆ. ಮಗು ತೂಕ ಕಡಿಮೆಯಿದ್ದುದ್ದರಿಂದ ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸೇರಿಸಿ ಆಗ ಕುಟುಂಬಸ್ಥರು ದೂರು ಕೊಡಲು ಹೊರಟಾಗ ಆರೋಪಿ ಪ್ರತಾಪ್ ಮೆಗಾನ್ ಆಸ್ಪತ್ರೆಗೆ ಬಂದು ಇದಕ್ಕೆಲ್ಲ ನಾನೇ ಕಾರಣ ನಾನು ಮದುವೆಯಾಗುತ್ತೇನೆ ದೂರು ಕೊಡುವುದು ಬೇಡ ಎಂದು ತಿಳಿಸಿದ್ದಾನೆ ಆ ಹಿನ್ನಲೆಯಲ್ಲಿ ದೂರು ಕೊಟ್ಟಿರಲಿಲ್ಲ.
ಇದಾದ ನಂತರ ಪ್ರತಾಪ್ ಊರು ಬಿಟ್ಟು ಬೆಂಗಳೂರು ಗೆ ಹೋಗಿ ಅಲ್ಲಿಯೇ ಇದು ಫೋನ್ ಸ್ವಿಚ್ ಆಫ್ ಮಾಡಿಕೊಂಡು ಪರಾರಿಯಾಗಿದ್ದನು ಈ ಹಿನ್ನಲೆಯಲ್ಲಿ ರಿಪ್ಪನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರ ಪ್ರಕರಣ ದಾಖಲಾಗಿತ್ತು.
ಯುವತಿಯನ್ನು ನಂಬಿಸಿ ಮೋಸ ಮಾಡಿದ್ದ ಯುವಕನನ್ನು ರಿಪ್ಪನ್‌ಪೇಟೆ ಪೊಲೀಸರು ಬಂಧಿಸಿ ಹೆಡೆಮುರಿ ಕಟ್ಟಿದ್ದಾರೆ.
ರಫ಼ಿ ರಿಪ್ಪನ್ ಪೇಟೆನಾನು ಪೋಸ್ಟ್ ಮ್ಯಾನ್ ನ್ಯೂಸ್ ಮಾದ್ಯಮದ ಹಿಂದೆ ಇರುವ ಒಬ್ಬ ಸ್ಥಳೀಯ ಸುದ್ದಿಪ್ರೇಮಿ ಪತ್ರಕರ್ತ. ಕಳೆದ ಐದು ವರ್ಷಗಳಿಂದ ಒಂದು ಕನಸನ್ನು ಜೀವಂತವಾಗಿಟ್ಟಿದ್ದೇನೆ — ನಮ್ಮೂರ ಸುದ್ದಿಗಳು ಲೋಕದವರೆಗೆ ತಲುಪಬೇಕು ಎಂಬದು. ಸ್ಥಳೀಯ ಪತ್ರಿಕೆಗಳಿಂದ ಆರಂಭಿಸಿ, ರಾಜ್ಯಮಟ್ಟದ ನ್ಯೂಸ್ ಚಾನೆಲ್‌ಗಳ ಬೆಂಗಳೂರು ಕಚೇರಿಯವರೆಗೆ ಮಾಧ್ಯಮದ ಎಲ್ಲಾ ಹಂತಗಳಲ್ಲಿ ಕೆಲಸ ಮಾಡಿದ ಅನುಭವ ನನ್ನದಾಗಿದೆ. ಆದರೆ ಅಲ್ಲಿ ಒಂದು ಖಾಲಿ ಅನಿಸಿತು — ನಿಜವಾದ ಸ್ಥಳೀಯ ಧ್ವನಿಗೆ ವೇದಿಕೆ ಇಲ್ಲ. ಅದಕ್ಕೆ ಪರ್ಯಾಯವಾಗಿ ಹುಟ್ಟಿತು “ಪೋಸ್ಟ್ ಮ್ಯಾನ್ ನ್ಯೂಸ್.” ಇಲ್ಲಿ ಸುದ್ದಿ ಅಂದ್ರೆ ಸುದ್ದಿ ಮಾತ್ರ. ಯಾರ ಪರವೂ ಅಲ್ಲ, ಯಾವ ಪಕ್ಷದ ಪರವೂ ಅಲ್ಲ. ನನ್ನ ನಿಲುವು ಸ್ಪಷ್ಟ — ಸುದ್ದಿ ಹೇಳಬೇಕು, ತೀರ್ಪು ಕೊಡಬಾರದು. ಕೆಲವೊಮ್ಮೆ ಓದುಗರ ಪ್ರತಿಕ್ರಿಯೆಗಳು ಬೇರೆ ಬಣ್ಣ ತೊಡುತ್ತವೆ, ಆದರೆ ನನ್ನ ಪ್ರತಿಕ್ರಿಯೆ ಕೆಲಸದ ಮೂಲಕವೇ. ಪೋಸ್ಟ್ ಮ್ಯಾನ್ ನ್ಯೂಸ್ ಇಂದು ಕೇವಲ ಒಂದು ಪೇಜ್ ಅಲ್ಲ, ಅದು ಒಂದು ಚಳವಳಿಯಾಗಿದೆ — ಪೋಸ್ಟ್ ಮ್ಯಾನ್ ನ್ಯೂಸ್‌ನ ಉದ್ದೇಶ ಕೇವಲ ವರದಿ ಮಾಡುವುದು ಅಲ್ಲ; ನಮ್ಮೂರ ಘಟನೆಗಳು, ಪ್ರತಿಭೆಗಳು, ಸಮಸ್ಯೆಗಳು, ಸಾಧನೆಗಳು — ಇವುಗಳನ್ನು ಹೊರಲೋಕಕ್ಕೆ ತಲುಪಿಸುವ ಸೇತುವೆಯಾಗಿರಬೇಕು. ಹಣ ಪಡೆದು ಸುದ್ದಿ ಮಾಡುವ ಅಭ್ಯಾಸವೂ ಇಲ್ಲ, ಹವ್ಯಾಸವೂ ಇಲ್ಲ. ಮುಂದಿನ ಹಂತದಲ್ಲಿ ನಾವು ಔಟ್‌ಸೋರ್ಸ್ ವ್ಯವಸ್ಥೆ ಮೂಲಕ ಸ್ಥಳೀಯ ವರದಿಗಾರರನ್ನು, ಕಥೆಗಾರರನ್ನು ಸೇರಿಸಿಕೊಂಡು ಈ ವೇದಿಕೆಯನ್ನು ಇನ್ನಷ್ಟು ಜೀವಂತಗೊಳಿಸುವ ಉದ್ದೇಶದಲ್ಲಿದ್ದೇವೆ. ನಮ್ಮ ಗುರಿ ಒಂದೇ — ಸಣ್ಣ ಊರುಗಳ ಸತ್ಯ ಕತೆಗಳು ದೊಡ್ಡ ಮಟ್ಟದಲ್ಲಿ ಲೋಕದ ಕಿವಿಗೆ ತಲುಪಬೇಕು. - ರಫ಼ಿ ರಿಪ್ಪನ್ ಪೇಟೆ ಸಂಪಾದಕರು , ಪೋಸ್ಟ್ ಮ್ಯಾನ್ ನ್ಯೂಸ್