Home guard | ಗೃಹರಕ್ಷಕ ದಳದಲ್ಲಿ ಖಾಲಿ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ – ರಿಪ್ಪನ್‌ಪೇಟೆ, ಆನಂದಪುರ,ಹೊಸನಗರ ಘಟಕದಲ್ಲಿದೆ ಖಾಲಿ ಹುದ್ದೆ.!!

ಗೃಹರಕ್ಷಕ ದಳದಲ್ಲಿ ಖಾಲಿ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ – ರಿಪ್ಪನ್‌ಪೇಟೆ, ಆನಂದಪುರ,ಹೊಸನಗರ ಘಟಕದಲ್ಲಿದೆ ಖಾಲಿ ಹುದ್ದೆ…
ಸರ್ಕಾರದ ಸ್ವತಂತ್ರವಾದ ಶಿಸ್ತುಬದ್ದ ಹಾಗೂ ಸಮವಸ್ತ್ರದಾರಿ ಸ್ವಯಂಸೇವಕರನ್ನು ಒಳಗೊಂಡ ಸ್ವಯಂ ಸೇವಾ ಸಂಸ್ಥೆಯಾದ ಗೃಹರಕ್ಷಕ ದಳದ ಘಟಕಗಳಲ್ಲಿ ಖಾಲಿ ಇರುವ ಪುರುಷ ಮತ್ತು ಮಹಿಳಾ ಗೃಹರಕ್ಷಕರ ಖಾಲಿ ಸ್ಥಾನಗಳನ್ನು ತುಂಬಲು ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದೆ.

ರಿಪ್ಪನ್‌ಪೇಟೆಯಲ್ಲಿ 11 ಹುದ್ದೆ , ಹೊಸನಗರದಲ್ಲಿ 11 ಹುದ್ದೆ ಸೇರಿದಂತೆ ಜಿಲ್ಲಾದ್ಯಂತ ಪುರುಷ ಒಟ್ಟು 171 ಮತ್ತು ಮಹಿಳೆ 08 ಸ್ಥಾನಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಡಿ.8 ರೊಳಗೆ ಸಲ್ಲಿಸಬಹುದು.

ಅರ್ಜಿಗಳು ಸಮಾದೇಷ್ಟರ ಕಾರ್ಯಾಲಯ, ಗೃಹರಕ್ಷಕ ದಳ, ಶಾಂತ ಮ್ಯಾನ್ಶನ್, ಎರಡನೇ ಮಹಡಿ, ಗಾಂಧಿನಗರ ಮುಖ್ಯ ರಸ್ತೆ, ಶಿವಮೊಗ್ಗ ಹಾಗೂ ಕೆಳಗೆ ತಿಳಿಸಲಾದ ಗೃಹರಕ್ಷಕ ದಳ ಘಟಕ/ಉಪ ಘಟಕಗಳ ಕಚೇರಿಗಳಲ್ಲಿ ದೊರೆಯಲಿದೆ.

ಎಲ್ಲೆಲ್ಲಿ ಎಷ್ಟು ಹುದ್ದೆ..?? ಸಂಪರ್ಕಿಸಬೇಕಾದ ಘಟಕಾಧಿಕಾರಿಗಳ ದೂರವಾಣಿ ಸಂಖ್ಯೆ..

🔵 ರಿಪ್ಪನ್‍ಪೇಟೆ ಪುರುಷ 11 ಹುದ್ದೆ, ಸಂಪರ್ಕಿಸಬೇಕಾದ  ಘಟಕಾಧಿಕಾರಿ ಟಿ.ಶಶಿಧರಾಚಾರ್ಯ -9741477689

🔵 ಹೊಸನಗರ ಪುರುಷ 11 ಹುದ್ದೆ, ಘಟಕಾಧಿಕಾರಿ ಕೆ.ಅಶೋಕ್ -9241434669.

🔵 ಶಿವಮೊಗ್ಗದಲ್ಲಿ ಪುರುಷ 39, ಮಹಿಳೆ 06 ಸಂಪರ್ಕಿಸಬೇಕಾದ ಘಟಕಾಧಿಕಾರಿ ಜಿ.ಇ.ಶಿವಾನಂದಪ್ಪ ಮೊ.ಸಂ: -9880705966

🔵 ಕುಂಸಿ ಪುರುಷ 5 ಹುದ್ದೆ ಘಟಕಾಧಿಕಾರಿ ಪಿ.ಆರ್. ರಾಘವೇಂದ್ರ -9916573291,

🔵 ಹಾರನಹಳ್ಳಿ ಪುರುಷ 8 ಘಟಕಾಧಿಕಾರಿ ಸಿ.ಮಧು -9686631428.

🔵 ಭದ್ರಾವತಿ ಪುರುಷ 17, ಮಹಿಳೆ 2 ಘಟಕಾಧಿಕಾರಿ ಜಗದೀಶ್ -9900283490.

🔵 ಬಿ.ಆರ್.ಪಿ. ಪುರುಷ 6, ಘಟಕಾಧಿಕಾರಿ ಪಿ.ಮಹೇಶ -9986760750,

🔵 ಹೊಳೆಹೊನ್ನೂರು ಪುರುಷ 11 ಘಟಕಾಧಿಕಾರಿ ಹೆಚ್.ಎಸ್.ಸುನೀಲ್ ಕುಮಾರ್ -8105840345.

🔵 ತೀರ್ಥಹಳ್ಳಿ ಪುರುಷ 10, ಘಟಕಾಧಿಕಾರಿ ಹೆಚ್.ಪಿ.ರಾಘವೇಂದ್ರ -9535388472.

🔵 ಸಾಗರ ಪುರುಷ 13 ಘಟಕಾಧಿಕಾರಿ ಎಂ.ರಾಘವೇಂದ್ರ -9632614031.

🔵 ಜೋಗ ಪುರುಷ 5 ಘಟಕಾಧಿಕಾರಿ ಡಿ.ಸಿದ್ದರಾಜು -9449699459.

🔵 ಆನಂದಪುರ ಪುರುಷ 7 ಘಟಕಾಧಿಕಾರಿ ಎಂ.ರಾಘವೇಂದ್ರ -9632614031.

🔵 ಶಿಕಾರಿಪುರ ಪುರುಷ 9 ಡಾ.ಸಂತೋಷ್ ಎಸ್ ಶೆಟ್ಟಿ -9845402789.

🔵 ಶಿರಾಳಕೊಪ್ಪ ಪುರುಷ 5 ಘಟಕಾಧಿಕಾರಿ ಸೈಯದ್ ಇಸಾಕ್ -8861492078.

🔵 ಸೊರಬ ಪುರುಷ 14 ಘಟಕಾಧಿಕಾರಿ ಬಿ.ರೇವಣಪ್ಪ -9945066084.


ಗೃಹರಕ್ಷಕರಾಗಲು ಭಾರತೀಯ ಪ್ರಜೆಯಾಗಿರಬೇಕು. 19 ವರ್ಷ ಮೇಲ್ಪಟ್ಟು 45 ಕ್ಕಿಂತ ಕಡಿಮೆ ವಯಸ್ಸಿನವರಾಗಿರಬೇಕು. 10ನೇ ತರಗತಿ ಉತ್ತೀರ್ಣರಾಗಿರಬೇಕು. ವೈದ್ಯಕೀಯವಾಗಿ ಸಶಕ್ತರಾಗಿರಬೇಕು. ಪೊಲೀಸ್ ಠಾಣೆಯಲ್ಲಿ ಯಾವುದೇ ಕ್ರಿಮಿನಲ್ ಮೊಕದ್ದಮೆ/ಆರೋಪ ಅಥವಾ ಅಪರಾಧಿ ಎಂದು ನಿರ್ಣಯಿಸಲಾಗಿರದಿದ್ದಲ್ಲಿ/ದಾಖಲಾಗಿರದಿದ್ದಲ್ಲಿ ಅಂತಹವರು ಹಾಗೂ ಘಟಕ ಇರುವ ಸ್ಥಳದಿಂದ ಸುಮಾರು 8 ರಿಂದ 12 ಕಿ.ಮೀ ಅಂತರದಲ್ಲಿರುವವರು ಅರ್ಜಿಗಳನ್ನು ಸಲ್ಲಿಸಬಹುದು ಎಂದು ಗೃಹರಕ್ಷಕದಳ ಜಿಲ್ಲಾ ಗೌರವ ಸಮಾದೇಷ್ಟರು ತಿಳಿಸಿದ್ದಾರೆ.
ರಫ಼ಿ ರಿಪ್ಪನ್ ಪೇಟೆ

ನಾನು ಪೋಸ್ಟ್ ಮ್ಯಾನ್ ನ್ಯೂಸ್ ಮಾದ್ಯಮದ ಹಿಂದೆ ಇರುವ ಒಬ್ಬ ಸ್ಥಳೀಯ ಸುದ್ದಿಪ್ರೇಮಿ ಪತ್ರಕರ್ತ. ಕಳೆದ ಐದು ವರ್ಷಗಳಿಂದ ಒಂದು ಕನಸನ್ನು ಜೀವಂತವಾಗಿಟ್ಟಿದ್ದೇನೆ — ನಮ್ಮೂರ ಸುದ್ದಿಗಳು ಲೋಕದವರೆಗೆ ತಲುಪಬೇಕು ಎಂಬದು. ಸ್ಥಳೀಯ ಪತ್ರಿಕೆಗಳಿಂದ ಆರಂಭಿಸಿ, ರಾಜ್ಯಮಟ್ಟದ ನ್ಯೂಸ್ ಚಾನೆಲ್‌ಗಳ ಬೆಂಗಳೂರು ಕಚೇರಿಯವರೆಗೆ ಮಾಧ್ಯಮದ ಎಲ್ಲಾ ಹಂತಗಳಲ್ಲಿ ಕೆಲಸ ಮಾಡಿದ ಅನುಭವ ನನ್ನದಾಗಿದೆ. ಆದರೆ ಅಲ್ಲಿ ಒಂದು ಖಾಲಿ ಅನಿಸಿತು — ನಿಜವಾದ ಸ್ಥಳೀಯ ಧ್ವನಿಗೆ ವೇದಿಕೆ ಇಲ್ಲ. ಅದಕ್ಕೆ ಪರ್ಯಾಯವಾಗಿ ಹುಟ್ಟಿತು “ಪೋಸ್ಟ್ ಮ್ಯಾನ್ ನ್ಯೂಸ್.” ಇಲ್ಲಿ ಸುದ್ದಿ ಅಂದ್ರೆ ಸುದ್ದಿ ಮಾತ್ರ. ಯಾರ ಪರವೂ ಅಲ್ಲ, ಯಾವ ಪಕ್ಷದ ಪರವೂ ಅಲ್ಲ. ನನ್ನ ನಿಲುವು ಸ್ಪಷ್ಟ — ಸುದ್ದಿ ಹೇಳಬೇಕು, ತೀರ್ಪು ಕೊಡಬಾರದು. ಕೆಲವೊಮ್ಮೆ ಓದುಗರ ಪ್ರತಿಕ್ರಿಯೆಗಳು ಬೇರೆ ಬಣ್ಣ ತೊಡುತ್ತವೆ, ಆದರೆ ನನ್ನ ಪ್ರತಿಕ್ರಿಯೆ ಕೆಲಸದ ಮೂಲಕವೇ. ಪೋಸ್ಟ್ ಮ್ಯಾನ್ ನ್ಯೂಸ್ ಇಂದು ಕೇವಲ ಒಂದು ಪೇಜ್ ಅಲ್ಲ, ಅದು ಒಂದು ಚಳವಳಿಯಾಗಿದೆ — ಪೋಸ್ಟ್ ಮ್ಯಾನ್ ನ್ಯೂಸ್‌ನ ಉದ್ದೇಶ ಕೇವಲ ವರದಿ ಮಾಡುವುದು ಅಲ್ಲ; ನಮ್ಮೂರ ಘಟನೆಗಳು, ಪ್ರತಿಭೆಗಳು, ಸಮಸ್ಯೆಗಳು, ಸಾಧನೆಗಳು — ಇವುಗಳನ್ನು ಹೊರಲೋಕಕ್ಕೆ ತಲುಪಿಸುವ ಸೇತುವೆಯಾಗಿರಬೇಕು. ಹಣ ಪಡೆದು ಸುದ್ದಿ ಮಾಡುವ ಅಭ್ಯಾಸವೂ ಇಲ್ಲ, ಹವ್ಯಾಸವೂ ಇಲ್ಲ. ಮುಂದಿನ ಹಂತದಲ್ಲಿ ನಾವು ಔಟ್‌ಸೋರ್ಸ್ ವ್ಯವಸ್ಥೆ ಮೂಲಕ ಸ್ಥಳೀಯ ವರದಿಗಾರರನ್ನು, ಕಥೆಗಾರರನ್ನು ಸೇರಿಸಿಕೊಂಡು ಈ ವೇದಿಕೆಯನ್ನು ಇನ್ನಷ್ಟು ಜೀವಂತಗೊಳಿಸುವ ಉದ್ದೇಶದಲ್ಲಿದ್ದೇವೆ. ನಮ್ಮ ಗುರಿ ಒಂದೇ — ಸಣ್ಣ ಊರುಗಳ ಸತ್ಯ ಕತೆಗಳು ದೊಡ್ಡ ಮಟ್ಟದಲ್ಲಿ ಲೋಕದ ಕಿವಿಗೆ ತಲುಪಬೇಕು. - ರಫ಼ಿ ರಿಪ್ಪನ್ ಪೇಟೆ ಸಂಪಾದಕರು , ಪೋಸ್ಟ್ ಮ್ಯಾನ್ ನ್ಯೂಸ್

Share
Published by
ರಫ಼ಿ ರಿಪ್ಪನ್ ಪೇಟೆ

Recent Posts

ಚಾಲಕನ ನಿಯಂತ್ರಣ ತಪ್ಪಿ ಶಾಲಾ ಬಸ್ ಅಪಘಾತ – ತಪ್ಪಿದ ಭಾರಿ ಅನಾಹುತ

ಚಾಲಕನ ನಿಯಂತ್ರಣ ತಪ್ಪಿ ಶಾಲಾ ಬಸ್ ಅಪಘಾತ – ತಪ್ಪಿದ ಭಾರಿ ಅನಾಹುತ A school bus lost control…

3 hours ago

ಶಿಕ್ಷಕರ ಗೌರವದ ಹೆಸರಿನಲ್ಲಿ ರಾಜಕೀಯ ಬೇಡ; ಬಿಜೆಪಿ ವಿರುದ್ಧ ಕಾಂಗ್ರೆಸ್ ವಾಗ್ದಾಳಿ

ಶಿಕ್ಷಕರ ಗೌರವದ ಹೆಸರಿನಲ್ಲಿ ರಾಜಕೀಯ ಬೇಡ; ಬಿಜೆಪಿ ವಿರುದ್ಧ ಕಾಂಗ್ರೆಸ್ ವಾಗ್ದಾಳಿ Congress leaders in Sagar have hit…

5 hours ago

ಶಿಕ್ಷಣ ಸೇವೆಗೆ ಸಂದ ಪ್ರತಿಷ್ಠಿತ ಗೌರವ; ಅರಸಾಳಿನ ಸುಮಾ ಎಸ್.ಗೆ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ

ಶಿಕ್ಷಣ ಸೇವೆಗೆ ಸಂದ ಪ್ರತಿಷ್ಠಿತ ಗೌರವ; ಅರಸಾಳಿನ ಸುಮಾ ಎಸ್.ಗೆ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ Summa S.…

8 hours ago

ರಿಪ್ಪನ್‌ಪೇಟೆ ಸುತ್ತಮುತ್ತ ನಾಳೆ ಕರೆಂಟ್ ಇಲ್ಲ! ಯಾವೆಲ್ಲ ಪ್ರದೇಶಗಳಿಗೆ ವಿದ್ಯುತ್ ವ್ಯತ್ಯಯ? ಈ ಸುದ್ದಿ ನೋಡಿ

ರಿಪ್ಪನ್‌ಪೇಟೆ ಸುತ್ತಮುತ್ತ ನಾಳೆ ಕರೆಂಟ್ ಇಲ್ಲ! ಯಾವೆಲ್ಲ ಪ್ರದೇಶಗಳಿಗೆ ವಿದ್ಯುತ್ ವ್ಯತ್ಯಯ? ಈ ಸುದ್ದಿ ನೋಡಿ Power outage in…

13 hours ago

ಹಿರಿಯ ನಾಗರಿಕರಿಂದ ನಿವೃತ್ತ ಸರ್ಕಾರಿ ನೌಕರರಿಗೆ ವಿಶೇಷ ಸನ್ಮಾನ

ಹಿರಿಯ ನಾಗರಿಕರಿಂದ ನಿವೃತ್ತ ಸರ್ಕಾರಿ ನೌಕರರಿಗೆ ವಿಶೇಷ ಸನ್ಮಾನ Retired government employees were specially honoured by senior…

15 hours ago

ದೇಶದ ಅಭಿವೃದ್ಧಿಯಲ್ಲಿ ಶಿಕ್ಷಕರ ಪಾತ್ರ ಅತ್ಯಂತ ಮಹತ್ವದ್ದು: ಶಾಸಕ ಬೇಳೂರು ಗೋಪಾಲಕೃಷ್ಣ

ದೇಶದ ಅಭಿವೃದ್ಧಿಯಲ್ಲಿ ಶಿಕ್ಷಕರ ಪಾತ್ರ ಅತ್ಯಂತ ಮಹತ್ವದ್ದು: ಶಾಸಕ ಬೇಳೂರು ಗೋಪಾಲಕೃಷ್ಣ ಶಾಲೆ ಬಿಟ್ಟ ಮಕ್ಕಳನ್ನು ಮರಳಿ ಕರೆತಂದರೆ ₹10…

1 day ago