Headlines

ರಿಪ್ಪನ್‌ಪೇಟೆಯಲ್ಲಿ ನವಚೇತನ ವೇದಿಕೆ ವತಿಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ| health camp

ರಿಪ್ಪನ್‌ಪೇಟೆಯಲ್ಲಿ ನವಚೇತನ ವೇದಿಕೆ ವತಿಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ
<
ರಿಪ್ಪನ್‌ಪೇಟೆ : ಕೆ.ಎಸ್. ಹೆಗ್ಡೆ ಆಸ್ಪತ್ರೆ,ಮಂಗಳೂರು ಹಾಗೂ ಸಾಗರದ ನವಚೇತನ ವೇದಿಕೆ (ರಿ.) ಇವರ ಜಂಟಿ ಆಶ್ರಯದಲ್ಲಿ ಶನಿವಾರ ಮಧ್ಯಾಹ್ನ 2.00 ರಿಂದ 5.00 ರವರೆಗೆ ಪಟ್ಟಣದ ಭೂಪಾಳಂ ಚಂದ್ರಶೇಖರಯ್ಯ ಸಭಾಂಗಣ ಹಿಂದೂ ಮಹಾಸಭಾ ಪ್ರಾಂಗಣದಲ್ಲಿ “ಉಚಿತ ಆರೋಗ್ಯ ತಪಾಸಣಾ ಶಿಬಿರ”ವನ್ನು ಏರ್ಪಡಿಸಲಾಗಿದೆ ಎಂದು ನವಚೇತನ ವೇದಿಕೆಯ ಪ್ರಶಾಂತ್ ಕೆ ಜಿ ಶಿವಪ್ಪ ಹೇಳಿದ್ದಾರೆ.

ಈ ಶಿಬಿರದಲ್ಲಿ ಖ್ಯಾತ ವೈದ್ಯರುಗಳಾದ ಡಾ| ವಾಧೀಶ ಭಟ್ (ಕಿವಿ ಮೂಗು ಗಂಟಲು ತಜ್ಞರು) ಡಾ| ಶ್ರೀಧೀಶ್ ಕೆ. (ಎಲುಬು ಮತ್ತು ಕೀಲು ತಜ್ಞರು)ಡಾ। ನೇಹಾಲ್ ಕೆ. ಎಮ್ (ವೈದ್ಯಕೀಯ ತಜ್ಞರು)
ಡಾ| ಡಾನಿಯ ಹಮೀದ್ (ಮಕ್ಕಳ ತಜ್ಞರು) ಡಾ ಸಂಜಿತಾ ಕಾಮತ್ (ಶಸ್ತ್ರಚಿಕಿತ್ಸಾ ತಜ್ಞರು) ಆಗಮಿಸಲಿದ್ದು ಶಿಬಿರದ ಪ್ರಯೋಜನ ಪಡೆದುಕೊಳ್ಳುವಂತೆ ತಿಳಿಸಿದ್ದಾರೆ.

ಈ ಶಿಬಿರದಲ್ಲಿ ವೈದ್ಯರು ಸೂಚಿಸಿದವರಿಗೆ ರಕ್ತದ ಒತ್ತಡ ಮತ್ತು ಮಧುಮೇಹ ಪರೀಕ್ಷೆ ಹಾಗೂ ಇ ಸಿ ಜಿ ಪರೀಕ್ಷೆಗಳನ್ನು ಉಚಿತವಾಗಿ ಮಾಡಲಾಗುವುದು. ಸಾಮಾನ್ಯ ಔಷಧಗಳನ್ನು ಉಚಿತವಾಗಿ ನೀಡಲಾಗುವುದು.


ಶಿಬಿರದಲ್ಲಿ ವೈದ್ಯಕೀಯ ಚಿಕಿತ್ಸೆ, ಶ್ವಾಸಕೋಶ ಸಂಬಂಧಿ ಚಿಕಿತ್ಸೆ, ಶಸ್ತ್ರಚಿಕಿತ್ಸೆ, ಹೃದಯ ಚಿಕಿತ್ಸೆ, ಕಿವಿ ಮೂಗು ಗಂಟಲು ಚಿಕಿತ್ಸೆ, ಎಲುಬು ಮತ್ತು ಕೀಲು ಚಿಕಿತ್ಸೆ, ಮಕ್ಕಳ ಚಿಕಿತ್ಸೆ, ಮಕ್ಕಳ ಶಸ್ತ್ರಚಿಕಿತ್ಸೆ, ಬೆನ್ನುಮೂಳೆ ಚಿಕಿತ್ಸೆ, ಮೊಣಕಾಲಿನ ಚಿಕಿತ್ಸೆ, ಕ್ಯಾನ್ಸರ್ ಚಿಕಿತ್ಸೆ, ಅಪೆಂಡಿಕ್ಸ್, ಅಲ್ಸರ್, ಥೈರಾಯಿಡ್, ಹರ್ನಿಯಾ ಚಿಕಿತ್ಸೆ, ಗರ್ಭಕೋಶದ ಗಡ್ಡೆ,ಮೂಲವ್ಯಾಧಿ,ಸಂಧಿವಾತ, ಉದರ ಸಂಬಂಧಿ ಖಾಯಿಲೆ, ನರ ಸಂಬಂಧಿ ಚಿಕಿತ್ಸೆಗಳ ತಪಾಸಣೆ ನಡೆಸಲಾಗುವುದು.

ಬನ್ನಿ ತಜ್ಞ ವೈದ್ಯರಿಂದ ತಪಾಸಣೆ ಮಾಡಿಸಿಕೊಳ್ಳಿ ಮತ್ತು ವೈದ್ಯರು ತಪಾಸಣೆ ಮಾಡಿರುವ ಹಳೆ ಚೀಟಿ ಇದ್ದಲ್ಲಿ ತಪ್ಪದೇ ತನ್ನಿ. ಆಯುಷ್ಮಾನ್ ಯೋಜನೆಯಡಿ ಅರ್ಹ ರೋಗಿಗಳಿಗೆ ಸಾಮಾನ್ಯ ವಾರ್ಡ್‌ನಲ್ಲಿ ಉಚಿತ ಚಿಕಿತ್ಸೆ ನೀಡಲಾಗುವುದು ಎಂದರು.


ಶಿಬಿರದಲ್ಲಿ ಕ್ಷೇಮ ಹೆಲ್ತ್ ಕಾರ್ಡ್ ನೋಂದಾವಣೆ ಮಾಡಲಾಗುವುದು

ಈ ವಿಮಾ ಯೋಜನೆಯ ನೊಂದಾವಣೆಗೆ ಬೇಕಾಗುವ ದಾಖಲೆಗಳು: 1. ರೇಷನ್ ಕಾರ್ಡಿನ ಜೆರಾಕ್ಸ್2. ವಿಮಾ ಯೋಜನೆಗೆ ಸೇರುವ ಎಲ್ಲಾ ಸದಸ್ಯರ ಆಧಾರ್ ಕಾರ್ಡಿನ ಜೆರಾಕ್ಸ್, 3. ಸಣ್ಣ ಮಕ್ಕಳಾದಲ್ಲಿ ಜನನ ಪತ್ರದ ಜೆರಾಕ್ಸ್

ಹೆಚ್ಚಿನ ಮಾಹಿತಿಗಾಗಿ:

ಪ್ರಶಾಂತ್ ತಳಲೆ – 9663888395 , ಹರೀಶ್ – 9972259535 , ಪ್ರವೀಣ ಆಚಾರ್ – 7259619104 ,ರಾಜೇಶ ಎಮ್. ಮಳವಳ್ಳಿ (ಕೆ. ಎಸ್. ಹೆಗ್ಡೆ ಆಸ್ಪತ್ರೆ) -9353904882.

Leave a Reply

Your email address will not be published. Required fields are marked *

Exit mobile version