ವಾಟ್ಸಾಪ್ ನಲ್ಲಿ ಬೆತ್ತಲಾಗಿ ಹಣಕ್ಕಾಗಿ ಬೇಡಿಕೆ ಇಟ್ಟ ಸುಂದರಿ – ಹಣ ಕೊಡದಿದ್ದಕ್ಕೆ ಕಿಡ್ನಾಪ್ : ಪೊಲೀಸರ ಮಿಂಚಿನ ಕಾರ್ಯಾಚರಣೆಯಲ್ಲಿ ಐವರ ಬಂಧನ |honey trap

ವಾಟ್ಸಾಪ್ ನಲ್ಲಿ ಬೆತ್ತಲಾಗಿ ಹಣಕ್ಕಾಗಿ ಬೇಡಿಕೆ ಇಟ್ಟ ಸುಂದರಿ – ಹಣ ಕೊಡದಿದ್ದಕ್ಕೆ ಕಿಡ್ನಾಪ್ : ಪೊಲೀಸರ ಮಿಂಚಿನ ಕಾರ್ಯಾಚರಣೆಯಲ್ಲಿ ಐವರ ಬಂಧನ
ಶಿವಮೊಗ್ಗ : ಹನಿ ಟ್ರ್ಯಾಪ್(Honey trap) ಮೂಲಕ ಹಣಕ್ಕೆ ಬೇಡಿಕೆಯಿಡುತಿದ್ದ ನಟೋರಿಯಸ್ ಗ್ಯಾಂಗ್ ನ್ನು ಭದ್ರಾವತಿ(bhadravathi) ಹೊಸಮನೆ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಮದುವೆ ನಿಶ್ಚಯವಾಗಿದ್ದ ಭದ್ರಾವತಿ ಮೂಲದ ಯುವಕನಿಗೆ ವಾಟ್ಸಾಪ್(Whatsup) ನಲ್ಲಿ ಬೆತ್ತಲೆ ಕರೆ ಮಾಡಿ ಅದನ್ನು ರೆಕಾರ್ಡ್ ಮಾಡಿಕೊಂಡು  ಹಣಕ್ಕಾಗಿ ಬೇಡಿಕೆಯಿಟ್ಟು ನಂತರ ಕಿಡ್ನಾಪ್(kidnap) ಮಾಡಿ ಅಕ್ರಮ ಬಂಧನದಲ್ಲಿಟ್ಟಿದ್ದರು.ಈ ಹಿನ್ನಲೆಯಲ್ಲಿ ಭದ್ರಾವತಿ ಹೊಸಮನೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಮೈಸೂರು ಮೂಲದ ನಟೋರಿಯಸ್ ಸುಂದರಿ ಶ್ವೇತಾ ಗ್ಯಾಂಗ್ ನಲ್ಲಿ ಇದ್ದ ಹುಬ್ಬಳ್ಳಿ ಮೂಲದ ವಿನಾಯಕ,  ಮಹೇಶ್, ಯಲ್ಲಪ್ಪ ಹಾಗೂ ಅರುಣ್‌ ಕುಮಾರ್  ಬಂಧಿತ ಆರೋಪಿಗಳು.

ಬಂಧಿತರಿಂದ ಡಸ್ಟರ್ ಕಾರು ಸೇರಿದಂತೆ 7 ಮೊಬೈಲ್ ಫೋನ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಏನಿದು ಘಟನೆ :

ಭದ್ರಾವತಿ ಮೂಲದ ಶರತ್ ಕುಮಾರ್ ಎಂಬಾತ ಸುಮಾರು ಒಂದೂವರೆ ವರ್ಷದ ಹಿಂದೆ ಗೆಳಯರೊಂದಿಗೆ ಮೈಸೂರಿಗೆ ಪ್ರವಾಸಕ್ಕೆಂದು ಹೋದಾಗ ಮೈಸೂರಿನಲ್ಲಿ ಶ್ವೇತಾ ಎಂಬ ಹುಡುಗಿ ಪರಿಚಯ ಆಗಿದ್ದು ಅಂದಿನಿಂದ ಒಬ್ಬರಿಗೊಬ್ಬರು ಫೋನ್ ನಲ್ಲಿ ಮಾತನಾಡುತ್ತಿದ್ದು ಶರತ್ ವಾಟ್ಸ್ ಅಪ್ ನಲ್ಲ ಚಾಟಿಂಗ್ ಮಾಡುತ್ತಿದ್ದನು.

ಮೈಸೂರಿನ ಶ್ವೇತಾ ಶರತ್ ಗೆ ವಿಡಿಯೋ ಕರೆ ಮಾಡಿದ್ದು, ವಿಡಿಯೋದಲ್ಲಿ ಅವಳು ತನ್ನ ಬಟ್ಟೆಯನ್ನು ಬಿಚ್ಚಿ ಬೆತ್ತಲೆಯಾಗಿದ್ದು ಮಾತನಾಡಿರುತ್ತಾಳೆ.ಸಂಪೂರ್ಣ ವಿಡಿಯೋ ರೆಕಾರ್ಡ ಮಾಡಿಕೊಂಡು 15 ದಿನಗಳ ನಂತರ ಬೆತ್ತಲೆಯಾಗಿದ್ದ ಮತ್ತು ಶರತ್ ವಿಡಿಯೋ ಕಾಲ್ ನಲ್ಲಿ ಮಾತನಾಡುತ್ತಿದ್ದ ವಿಡಿಯೋ ಸ್ಟ್ರೀನ್ ರೆಕಾರ್ಡ್ ನ್ನು ಸೆಂಡ್ ಮಾಡಿ ವಾಟ್ಸ್ ಅಪ್ ಕಾಲ್ ಮಾಡಿ ಹಣದ ಅವಶ್ಯಕತೆ ಇದೆ ಹಣ ಹಾಕು ಇಲ್ಲವಾದಲ್ಲಿ ಈ ವಿಡಿಯೋವನ್ನು ನಿಮ್ಮ ಮನೆಯವರಿಗೆ ಕಳುಹಿಸುತ್ತೇನೆಂದು ಹೆದರಿಸಿರುತ್ತಾಳೆ. ಅದಕ್ಕೆ ಹೆದರಿದ ಶರತ್ ಹಣ ಕೋಡುತ್ತೇನೆ ವಿಡಿಯೋ ಡಿಲಿಟ್ ಮಾಡು ಎಂದು ಹೇಳಿ ಹಂತ ಹಂತವಾಗಿ ಸುಮಾರು 25,000/-ರೂಗಳನ್ನು ಪೋನ್ ಪೇ ಮುಖಾಂತರ ಹಾಗೂ ನಗದು ಮುಖಾಂತರ ಹಣ ಕೊಟ್ಟಿದ್ದಾನೆ.ಆದರೂ ಮತ್ತೂ ಹಣ ಬೇಕು ಎಂದು ಬ್ಲಾಕ್ ಮೇಲ್ ಮಾಡುತಿದ್ದಳು.

ಹಣಕ್ಕಾಗಿ ಶರತ್ ಹಾಗೂ ಆತನ ಸ್ನೇಹಿತನ ಕಿಡ್ನಾಪ್

ದಿನಾಂಕ:17/11/2023 ರಂದು ಶ್ವೇತಾಳು ಶಿವಮೊಗ್ಗಕ್ಕೆ ಬಂದಿದ್ದು ಶರತ್ ಶಿವಮೊಗ್ಗ ಬಸ್ ನಿಲ್ದಾಣ ಹತ್ತಿರ ಹೋಗಿ ಶ್ವೇತಾಳನ್ನು ಭೇಟಿಯಾದಾಗ ಶ್ವೇತಾ ಹರ್ಷ ಫರ್ನ ಹೋಟೇಲ್ ಗೆ ಕರೆದುಕೊಂಡು ಹೋಗಿ ರೂಂ ಬುಕ್ ಮಾಡಿದ್ದಾಳೆ.

ರಾತ್ರಿ ಶ್ವೇತಾ ಳ ನಟೋರಿಯಸ್ ಗ್ಯಾಂಗ್ ಹೊಟೇಲ್ ಗೆ ಬಂದು ಶರತ್ ಹಾಗೂ ಅತನ ಸ್ನೇಹಿತ ಹರೀಶ್ ನನ್ನು ಹೊರಗಡೆ ಕರೆದುಕೊಂಡು ಬಂದು ಮೊಬೈಲ್ ಕಸಿದುಕೊಂಡು ಸ್ವಿಚ್ ಆಫ್ ಮಾಡಿ ಸಿಲ್ವರ್ ಕಲರ್ ಡಸ್ಟರ್ ಕಾರಿನಲ್ಲಿ ಮೈಸೂರಿಗೆ ಕರೆದುಕೊಂಡು‌ ಹೋಗುತ್ತಾರೆ.


ಮೈಸೂರಿಗೆ ಕರೆದುಕೊಂಡು ಹೋಗಿ ರೂಮಿನಲ್ಲಿ ಶರತ್ ಮತ್ತು ಹರೀಶನನ್ನು ಒತ್ತಾಯಪೂರ್ವಕವಾಗಿ ಕೂಡಿಹಾಕಿ ಮಧ್ಯೆದಲ್ಲಿ ಶ್ವೇತಾಳನ್ನು ಕೂರಿಸಿಕೊಂಡು ನಾವುಗಳು ಶ್ವೇತಾಳನ್ನು ಮಲಗಲು ಕರೆದಿದ್ದೇವೆ ಎಂದು ಹೇಳು ಎಂದು ಹೆದರಿಕೆ ಹೇಳಸಿ ವಿಡಿಯೋ ಮಾಡಿಕೊಂಡಿದ್ದಾರ್ವ್. ನಂತರ ಅವರಿಬ್ಬರ ಮೊಬೈಲ್ ನಲ್ಲಿನ ಪೋನ್ ನಂಬರ್ ನ್ನು ತೆಗೆದುಕೊಂಡು ನಿಮ್ಮ ಮನೆಗೆ ಫೋನ್ ಮಾಡಿ ಹೇಳುತ್ತೇನೆ. ಇಲ್ಲ ಅಂದರೆ ನಮಗೆ 20 ಲಕ್ಷ ಹಣವನ್ನು ಕೊಡು ಎಂದು ಬೆದರಿಸಿರುತ್ತಾರೆ. ನಂತರ ಶರತ್ ಮೈಸೂರಿನಲ್ಲಿ ಎ.ಟಿ.ಎಂ ನಲ್ಲಿ 20,000/- ಹಾಗೂ 49.000/ ರೂಗಳನ್ನು ಬಿಡಿಸಿ ಕೊಟ್ಟಿದ್ದಾನೆ.

ನಂತರ ತಾನು ಶ್ವೇತಾ ಳಿಂದ  25 ಲಕ್ಷ ಹಣ ಸಾಲ ಪಡೆದುಕೊಂಡಿದ್ದೆನು ಅದನ್ನು 25/11/2023 ರಂದು ಕೊಡುತ್ತೇನೆಂದು ಹೇಳಿಸಿ‌ ಸುಳ್ಳು ಅಗ್ರಿಮೆಂಟ್ ಮಾಡಿಸಿಕೊಂಡಿರುತ್ತಾರೆ. ಅವರಿಂದ ತಪ್ಪಿಸಿಕೊಂಡು ಬಂದ ಶರತ್ ಹಾಗೂ‌ ಹರೀಶ್ ಭದ್ರಾವತಿಯ ಹೊಸಮನೆ ಠಾಣೆಯಲ್ಲಿ  ದೂರು ಸಲ್ಲಿಸುತ್ತಾನೆ.

ಹೊಸಮನೆ ಶಿವಾಜಿ ಸರ್ಕಲ್ ಪೊಲೀಸರು ಪ್ರಕರದ ತನಿಖೆ ನಡೆಸಿ ಶ್ವೇತಾ ಬಿನ್ ಜಗದೀಶನಾಯ್ಕ (26) ವಿನಯ್ ಬಿನ್ ದಿವಾಕರ (26) ಹುಬ್ಬಳ್ಳಿ ನಗರ, ಮಹೇಶ ಬಿನ್ ಈರಣ್ಣ ಬಾರಕೇರ್ , (27) ವಾಸ: ಹುಬ್ಬಳ್ಳಿ, ಅರುಣ್ ಕುಮಾರ ಚನ್ ಯಲ್ಲಪ್ಪ, (28) ಹುಬ್ಬಳ್ಳಿ, ಹೇಮಂತ ಸಾಯಿ (24) ರವರುಗಳನ್ನು ಹಾಗೂ ಕೃತ್ಯಕ್ಕೆ ಬಳಸಿದ ಡಸ್ಟರ್ ಕಾರಿನೊಂದಿಗೆ ವಶಕ್ಕೆ ಪಡೆದು ಠಾಣೆಗೆ ಕರೆತಂದು ಹಾಜರುಪಡಿಸಿದ್ದು ವಿಚಾರಣೆ ನಡೆಸಿ ದಸ್ತಗಿರಿ ಮಾಡಿ ನಂತರ ನ್ಯಾಯಾಲಯಕ್ಕೆ ಹಾಜಾರುಪಡಿಸಿ ನ್ಯಾಯಾಂಗ ಬಂಧನಕ್ಕೆ ನೀಡಿರುತ್ತಾರೆ.
ಈ ಕಾರ್ಯಾಚರಣೆಯಲ್ಲಿ ಭಾಗಿಯಾದ ಹೊಸಮನೆ ಶಿವಾಜಿ ಸರ್ಕಲ್‌ ಪೊಲೀಸ್ ಠಾಣೆಯ ಪಿಎಸ್‌ಐ ಆರ್ ಹೆಚ್ ಸಂಗೊಳ್ಳಿ, ಹಳೇನಗರ ಪೊಲೀಸ್ ಠಾಣೆಯ ಪಿಎಸ್‌ಐ ಶರಣಪ್ಪ ಹಂಡ್ರಗಲ್ ಸಿಬ್ಬಂದಿಗಳಾದ  ಆದರ್ಶ ಶೆಟ್ಟಿ, ಲೋಹಿತ್ ಹೆಚ್ ಪಿ, ಸುನೀತಾ, ಹನಮಂತ , ತೇಜಕುಮಾರ ರವರನ್ನು ಮಾನ್ಯ ಜಿಲ್ಲಾ ಪೊಲೀಸ್ ಅಧೀಕ್ಷಕರು ಹಾಗೂ ಮಾನ್ಯ ಹೆಚ್ಚುವರಿ ಪೊಲೀಸ್ ಅಧಿಕ್ಷಕರು ಅಭಿನಂದಿಸಿರುತ್ತಾರೆ.
ರಫ಼ಿ ರಿಪ್ಪನ್ ಪೇಟೆ

ನಾನು ಪೋಸ್ಟ್ ಮ್ಯಾನ್ ನ್ಯೂಸ್ ಮಾದ್ಯಮದ ಹಿಂದೆ ಇರುವ ಒಬ್ಬ ಸ್ಥಳೀಯ ಸುದ್ದಿಪ್ರೇಮಿ ಪತ್ರಕರ್ತ. ಕಳೆದ ಐದು ವರ್ಷಗಳಿಂದ ಒಂದು ಕನಸನ್ನು ಜೀವಂತವಾಗಿಟ್ಟಿದ್ದೇನೆ — ನಮ್ಮೂರ ಸುದ್ದಿಗಳು ಲೋಕದವರೆಗೆ ತಲುಪಬೇಕು ಎಂಬದು. ಸ್ಥಳೀಯ ಪತ್ರಿಕೆಗಳಿಂದ ಆರಂಭಿಸಿ, ರಾಜ್ಯಮಟ್ಟದ ನ್ಯೂಸ್ ಚಾನೆಲ್‌ಗಳ ಬೆಂಗಳೂರು ಕಚೇರಿಯವರೆಗೆ ಮಾಧ್ಯಮದ ಎಲ್ಲಾ ಹಂತಗಳಲ್ಲಿ ಕೆಲಸ ಮಾಡಿದ ಅನುಭವ ನನ್ನದಾಗಿದೆ. ಆದರೆ ಅಲ್ಲಿ ಒಂದು ಖಾಲಿ ಅನಿಸಿತು — ನಿಜವಾದ ಸ್ಥಳೀಯ ಧ್ವನಿಗೆ ವೇದಿಕೆ ಇಲ್ಲ. ಅದಕ್ಕೆ ಪರ್ಯಾಯವಾಗಿ ಹುಟ್ಟಿತು “ಪೋಸ್ಟ್ ಮ್ಯಾನ್ ನ್ಯೂಸ್.” ಇಲ್ಲಿ ಸುದ್ದಿ ಅಂದ್ರೆ ಸುದ್ದಿ ಮಾತ್ರ. ಯಾರ ಪರವೂ ಅಲ್ಲ, ಯಾವ ಪಕ್ಷದ ಪರವೂ ಅಲ್ಲ. ನನ್ನ ನಿಲುವು ಸ್ಪಷ್ಟ — ಸುದ್ದಿ ಹೇಳಬೇಕು, ತೀರ್ಪು ಕೊಡಬಾರದು. ಕೆಲವೊಮ್ಮೆ ಓದುಗರ ಪ್ರತಿಕ್ರಿಯೆಗಳು ಬೇರೆ ಬಣ್ಣ ತೊಡುತ್ತವೆ, ಆದರೆ ನನ್ನ ಪ್ರತಿಕ್ರಿಯೆ ಕೆಲಸದ ಮೂಲಕವೇ. ಪೋಸ್ಟ್ ಮ್ಯಾನ್ ನ್ಯೂಸ್ ಇಂದು ಕೇವಲ ಒಂದು ಪೇಜ್ ಅಲ್ಲ, ಅದು ಒಂದು ಚಳವಳಿಯಾಗಿದೆ — ಪೋಸ್ಟ್ ಮ್ಯಾನ್ ನ್ಯೂಸ್‌ನ ಉದ್ದೇಶ ಕೇವಲ ವರದಿ ಮಾಡುವುದು ಅಲ್ಲ; ನಮ್ಮೂರ ಘಟನೆಗಳು, ಪ್ರತಿಭೆಗಳು, ಸಮಸ್ಯೆಗಳು, ಸಾಧನೆಗಳು — ಇವುಗಳನ್ನು ಹೊರಲೋಕಕ್ಕೆ ತಲುಪಿಸುವ ಸೇತುವೆಯಾಗಿರಬೇಕು. ಹಣ ಪಡೆದು ಸುದ್ದಿ ಮಾಡುವ ಅಭ್ಯಾಸವೂ ಇಲ್ಲ, ಹವ್ಯಾಸವೂ ಇಲ್ಲ. ಮುಂದಿನ ಹಂತದಲ್ಲಿ ನಾವು ಔಟ್‌ಸೋರ್ಸ್ ವ್ಯವಸ್ಥೆ ಮೂಲಕ ಸ್ಥಳೀಯ ವರದಿಗಾರರನ್ನು, ಕಥೆಗಾರರನ್ನು ಸೇರಿಸಿಕೊಂಡು ಈ ವೇದಿಕೆಯನ್ನು ಇನ್ನಷ್ಟು ಜೀವಂತಗೊಳಿಸುವ ಉದ್ದೇಶದಲ್ಲಿದ್ದೇವೆ. ನಮ್ಮ ಗುರಿ ಒಂದೇ — ಸಣ್ಣ ಊರುಗಳ ಸತ್ಯ ಕತೆಗಳು ದೊಡ್ಡ ಮಟ್ಟದಲ್ಲಿ ಲೋಕದ ಕಿವಿಗೆ ತಲುಪಬೇಕು. - ರಫ಼ಿ ರಿಪ್ಪನ್ ಪೇಟೆ ಸಂಪಾದಕರು , ಪೋಸ್ಟ್ ಮ್ಯಾನ್ ನ್ಯೂಸ್

Recent Posts

ರಿಪ್ಪನ್‌ಪೇಟೆ ಪಟ್ಟಣದ ನಾಲ್ಕು ರಸ್ತೆಗಳಿಗೆ ಬೆಳಕಿನ ಭಾಗ್ಯ: ಬೇಳೂರು ಗೋಪಾಲಕೃಷ್ಣರಿಂದ ಚಾಲನೆ

ರಿಪ್ಪನ್‌ಪೇಟೆ ಪಟ್ಟಣದ ನಾಲ್ಕು ರಸ್ತೆಗಳಿಗೆ ಬೆಳಕಿನ ಭಾಗ್ಯ: ಬೇಳೂರು ಗೋಪಾಲಕೃಷ್ಣರಿಂದ ಚಾಲನೆ “ಕೊಟ್ಟ ಮಾತಿನಂತೆ ವಿದ್ಯುತ್ ದೀಪ ಅಳವಡಿಸಿದ್ದೇನೆ” —…

11 hours ago

ರಿಪ್ಪನ್‌ಪೇಟೆಯಲ್ಲಿ 59ನೇ ವರ್ಷದ ಗಣಪತಿ ಪ್ರತಿಷ್ಠಾಪನಾ ಭವ್ಯ ಮೆರವಣಿಗೆ

ರಿಪ್ಪನ್‌ಪೇಟೆಯಲ್ಲಿ 59ನೇ ವರ್ಷದ ಗಣಪತಿ ಪ್ರತಿಷ್ಠಾಪನಾ ಭವ್ಯ ಮೆರವಣಿಗೆ Ripponpete celebrates the 59th annual Ganapati festival with…

13 hours ago

ಕಾಡುಪ್ರಾಣಿ ತಪ್ಪಿಸಲು ಹೋಗಿ ವಿದ್ಯುತ್ ಕಂಬಕ್ಕೆ ಡಿಕ್ಕಿಯಾದ ಕಾರು – ತಪ್ಪಿದ ಭಾರಿ ಅನಾಹುತ

ಕಾಡುಪ್ರಾಣಿ ತಪ್ಪಿಸಲು ಹೋಗಿ ವಿದ್ಯುತ್ ಕಂಬಕ್ಕೆ ಡಿಕ್ಕಿಯಾದ ಕಾರು – ತಪ್ಪಿದ ಭಾರಿ ಅನಾಹುತ A car crashed into…

2 days ago

ರಿಪ್ಪನ್‌ಪೇಟೆಯಲ್ಲಿ 59ನೇ ಗಣೇಶೋತ್ಸವಕ್ಕೆ ಭರದ ಸಿದ್ದತೆ : ಸೆ.14ರಿಂದ 11 ದಿನಗಳ ಸಾಂಸ್ಕೃತಿಕ ಸಂಭ್ರಮ

ರಿಪ್ಪನ್‌ಪೇಟೆಯಲ್ಲಿ 59ನೇ ಗಣೇಶೋತ್ಸವಕ್ಕೆ ಭರದ ಸಿದ್ದತೆ : ಸೆ.14ರಿಂದ 11 ದಿನಗಳ ಸಾಂಸ್ಕೃತಿಕ ಸಂಭ್ರಮ Rippanpete Ganeshotsava 2026: Karnataka…

2 days ago

ಹೊಸನಗರದಲ್ಲಿ ಸೆ.14ರಿಂದ 28ರವರೆಗೆ 8ನೇ ವರ್ಷದ ಸಾರ್ವಜನಿಕ ಶ್ರೀಗಣೇಶೋತ್ಸವ: ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸಿದ್ಧತೆ

ಹೊಸನಗರದಲ್ಲಿ ಸೆ.14ರಿಂದ 28ರವರೆಗೆ 8ನೇ ವರ್ಷದ ಸಾರ್ವಜನಿಕ ಶ್ರೀಗಣೇಶೋತ್ಸವ: ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸಿದ್ಧತೆ Hosanagara Hindu Mahasabha…

2 days ago

ಜಿಂಕೆ ಮಾಂಸ ಸಾಗಾಟದ ಆರೋಪ: 34 ಕೆ.ಜಿ.ಗೂ ಅಧಿಕ ಮಾಂಸ ವಶ, ಓರ್ವ ಬಂಧನ

ಜಿಂಕೆ ಮಾಂಸ ಸಾಗಾಟದ ಆರೋಪ: 34 ಕೆ.ಜಿ.ಗೂ ಅಧಿಕ ಮಾಂಸ ವಶ, ಓರ್ವ ಬಂಧನ Forest mobile squad seizes…

3 days ago