Headlines

ಕಾಂಗ್ರೆಸ್ ಸರ್ಕಾರ ಹಿಂದೂ ಹಾಗೂ ಬಡವರ ವಿರೋಧಿ ಸರ್ಕಾರ – ಕೆ ಎಸ್ ಈಶ್ವರಪ್ಪ|KSE

ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಒಂದು ತಿಂಗಳ ಒಳಗೆ ಹಿಂದೂ ಧರ್ಮ ವಿರೋಧಿ ಮತ್ತು ಬಡವರ ವಿರೋಧಿ ಸರ್ಕಾರ ಎಂದು ಸ್ಪಷ್ಟವಾಗಿ ಗೋಚರಿಸುತ್ತಿದೆ ಎಂದು ಮಾಜಿ ಸಚಿವ ಈಶ್ವರಪ್ಪ ವಾಗ್ದಾಳಿ ನಡೆಸಿದರು.

ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬಡವರಿಗೆ ಪ್ರತಿ ತಿಂಗಳಿಗೆ 10 ಕೆ ಜಿ ಅಕ್ಕಿ ಕೊಡುವುದಾಗಿ ಹೇಳಿ ಪ್ರಧಾನಿ ಮೋದಿ ಅಡ್ಡ ಬರ್ತಾ ಇದ್ದಾರೆ ಎಂಬ ಭಾವನೆಯನ್ನ ಕಾಂಗ್ರೆಸ್ ಆರೋಪಿಸುತ್ತಿದೆ. ಕೇಂದ್ರವನ್ನು ಕೇಳಿ ಕಾಂಗ್ರೆಸ್ ಗ್ಯಾರೆಂಟಿ ಘೋಷಣೆ ಮಾಡಿದ್ರಾ.ಎಂದು ಪ್ರಶ್ನಿಸಿದ ಈಶ್ವರಪ್ಪ ಬಡವರಿಗೆ ಮೋಸ ಆಗುತ್ತಿದೆ ಇದರ  ಶಾಪ ಕಾಂಗ್ರೆಸ್ ಗೆ ತಟ್ಟದೆ ಇರದು ಎಂದು ಹೇಳಿದರು.

ನಿರುದ್ಯೋಗ ಭತ್ಯೆ ಗ್ಯಾರೆಂಟಿ ಎಂದು ಈಗ ಈ ವರ್ಷದ ಯುವಕರಿಗೆ ಮಾತ್ರ ಗ್ಯಾರೆಂಟಿ ಎಂದಿದ್ದಾರೆ ವಿದ್ಯುತ್ ಉಚಿತವೆಂದು ಹೇಳಿ ದರ ಏರಿಸಿದೆ. ಕೈಗಾರಿಕೆಗಳು ಪ್ರತಿಭಟನೆ ಮಾಡಿತ್ತಿದ್ದಾರೆ.  ಈಗ ಬಿಜೆಪಿ ದರ ಏರಿಸಿದೆ ಎಂದು ಆರೋಪಿಸಿ ಪಲಾಯನ  ಮಾಡುತ್ತಿದ್ದಾರೆ ಆರೋಪಿಸಿದರು.

ಮಹಿಳೆಯರಿಗೆ ಉಚಿತ ಪ್ರಯಾಣವೆಂದು ಆಟೋ, ಖಾಸಗಿ ಬಸ್ ಇತರೆ ಸಾರಿಗೆ ಗಳು ಅನ್ಯಾಯವಾಗುತ್ತಿದೆ. ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ನೀಡಿರುವುದು ಸಂತೋಷ ಆದರೆ ಉಳಿದವರ ಪಾಡೇನು?, ಗೃಹಲಕ್ಷ್ಮೀ ಯೋಜನೆಯಲ್ಲಿ ಮಹಿಳೆಯರ ಅರ್ಜಿ ಪಡೆಯಲು ಇನ್ಬೂ ಆಗಿಲ್ಲ‌. ಯೋಜನೆ ಜಾರಿ ಮಾಡದೇ ಹೇಗೆ ಸುಮ್ಮನಿರ್ತಾರೆ ನೋಡ್ತೀವಿ ಎಂದು ಸವಾಲು ಎಸೆದಿದ್ದಾರೆ.

ಮಹಿಳೆಯರಿಗೆ ಮತ್ತು ಇತರರಿಗೆ ಅನ್ಯಾಯವಾಗುತ್ತಿದೆ. ಗೊಂದಲಗಳು ಹೆಚ್ಚಿದೆ. ಮೋಸ ಆಗಿದೆ. 10 ಕೆಜಿ ಅಕ್ಕಿಕೊಡಲು ಆಗದಿದ್ದರೆ ಹಣ ವನ್ನ ಅವರ ಬ್ಯಾಂಕ್ ಅಕೌಂಟ್ ಗೆ ಹಾಕಿ ಎಂದರು.

ಮತಾಂತರ ನಿಷೇಧ ಕಾಯ್ದೆ ರದ್ದಿನ ಬಗ್ಗೆ ಮಾತನಾಡುತ್ತಿದ್ದಾರೆ ಡಿಕೆಶಿ ಅವರು ತಮ್ಮ ಮನೆಯ ಮಕ್ಕಳು ಮತಾಂತರವಾಗಿದ್ರೆ ಸುಮ್ಮನಿರ್ತಿದ್ದರಾ? ಕೇರಳ ಸ್ಟೋರಿ ನೋಡುದ್ರಾ? ಮೋಸದಿಂದ ಮತಾಂತರ ಮಾಡಿ ಇತರೆ ಧರ್ಮಿಯರನ್ನ ಹೇಗೆ ನಡೆಸಿಕೊಳ್ಳಲಾಗುತ್ತಿದೆ ಎಂಬುದನ್ನ ಚಿತ್ರದಲ್ಲಿ ತೋರಿಸಲಾಗಿದೆ. ಇವುಗಳನ್ನ ನಿಯಂತ್ರಿಸದಿದ್ದರೆ ಲವ್ ಜಿಹಾದ್ ನಂತಹ ಕೃತ್ಯಗಳು ಹೆಚ್ಚಾಗುತ್ತೆ. ಇದನ್ನ ನಾವು ನಿಯಂತ್ರಿಸುದ್ವಿ ಆದರೆ ನೀವು ಮತಾಂತರ ಮಾಡಲು ಫ್ರೀ.. ಬಿಡುವ ಮೂಲಕ ರಾಜ್ಯದಲ್ಲಿ ಮುಂದಿನ ದಿನಗಳಲ್ಲಿ ಅವಾಂತರ ಸೃಷ್ಟಿಸಲು ಹೊರಟಿದ್ದೀರಿ.

ತಾಪಂ ಜಿಪಂ ಮತ್ತು ಲೋಕಸಭಾ ಚುನಾವಣೆಯಲ್ಲಿ ನಿಮಗೆ ಜನ ತಕ್ಕ ಪಾಠ ಕಲಿಸುತ್ತಾರೆ.  ವಾಪಾಸ್ ಪಡೆಯದಿದ್ದರೆ ಪ್ರತಿಭಟನೆ ಅನಿವಾರ್ಯವಾಗಿದೆ. ಸರ್ಕಾರಕ್ಕೆ ಸಮಯ ಕೊಡಬೇಕಿತ್ತು. ತಕ್ಷಣ ತೊಂದರೆ ಆದಾಗ ಪ್ರತಿಭಟನೆಯನ್ನ ಬಿಜೆಪಿ ನಡೆಸಿಕೊಂಡು ಬಂದಿದೆ. ಪಠ್ಯ ಪುಸ್ತಕದ ವಿರುದ್ಧ ಜನಜಾಗೃತಿ ಮಾಡುತ್ತೇವೆ. ಮತಾಂತರದ ಬಗ್ಗೆ ಹಿಂದೂ ಸಂಘಟನೆಗಳ ಜೊತೆ ಕೆಲಸ ಮಾಡುತ್ತೇವೆ ಎಂದರು.

ವಿಪಕ್ಷ ಸ್ಥಾನವನ್ನ ಯಾವಗ ಮಾಡಬೇಕು ನೋಡಿಕೊಂಡು ಮಾಡುತ್ತೇವೆ. ಅದನ್ನ ಕಾಂಗ್ರೆಸ್ ಹೇಳಿದ ತಕ್ಷಣ ನಾಡಬೇಕು ಎಂಬ ನಿಯಮವಿಲ್ಲ ಎಂದ ಈಶ್ವರಪ್ಪ‌ ಹೊಂದಾಣಿಕೆ ಕುರಿತು ಸಂಸದ ಪ್ರತಾಪ ಸಿಂಹ ಮತ್ತು ಸಿಟಿ ರವಿ ಪಕ್ಷದ ಹಿರಿಯ ನಾಯಕರ ವಿರುದ್ಧ ಮಾತನಾಡಿದ್ದಾರೆ. ಕಾಂಗ್ರೆಸ್ ಮತ್ತು ಬಿಜೆಪಿ ಯಾವ ಕ್ಷೇತ್ರದ‌ಲ್ಲಿ ಆಗಿದೆ. ಇದನ್ನ ಮಾಹಿತಿ ಪಡೆದು ಒಂದು ವೇಳೆ ಹೊಂದಾಣಿಕೆ ರಾಜಕಾರಣ ನಡೆದಿದೆ ಎಂಬ ಮಾಹಿತಿ ಲಭ್ಯವಾದರೆ ಅದರ ವಿರುದ್ಧವೂ ಕೇಂದ್ರ ನಾಯಕರ ಗಮನಕ್ಕೆ ತರಲಿದ್ದೇನೆ  ಎಂದರು.

Leave a Reply

Your email address will not be published. Required fields are marked *

Exit mobile version