ಶಿವಮೊಗ್ಗ : ಮದುವೆಯಾಗುವುದಾಗಿ ನಂಬಿಸಿ ಲಕ್ಷಾಂತರ ರೂಪಾಯಿ ವಂಚನೆ ಮಾಡಿದ ಆರೋಪದಲ್ಲಿ ಬೆಂಗಳೂರಿನ ಚಿತ್ರನಟಿ ಉಷಾ.ಆರ್ ಅವರನ್ನು ಬಂಧಿಸಲಾಗಿದೆ. ಶಿವಮೊಗ್ಗದ ಕಿರುತೆರೆ ನಟನಿಗೆ ವಂಚನೆ ಪ್ರಕರಣದಲ್ಲಿ ನಟಿಯನ್ನು ವಿನೋಬ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ನಟಿ ಉಷಾ ಎಂಬಾಕೆ ವಿರುದ್ಧ ವಾರೆಂಟ್ ಜಾರಿಯಾಗಿತ್ತು. ಬೆಂಗಳೂರಿನಲ್ಲಿ ನಟಿ ಉಷಾಳನ್ನು ಬಂಧಿಸಿದ್ದ ವಿನೋಬನಗರ ಠಾಣೆ ಪೊಲೀಸರು, ಮೆಗ್ಗಾನ್ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದರು. ಬಳಿಕ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದರು. ನಟಿ ಉಷಾ ವಿರುದ್ಧ ಶಿವಮೊಗ್ಗದ ಶರವಣನ್ ಎಂಬಾತ ವಂಚನೆ ದೂರು ನೀಡಿದ್ದರು.
ತನ್ನಿಂದ ಹಣ ಪಡೆದು ಉಷಾ ಮರಳಿಸಿಲ್ಲ ಎಂದು ಆರೋಪಿಸಿ ಶರವಣನ್ ಶಿವಮೊಗ್ಗ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ದರು. ವಿಚಾರಣೆಗೆ ನಟಿ ಉಷಾ ಹಾಜರಾಗದ ಹಿನ್ನೆಲೆ ನ್ಯಾಯಾಲಯವು ಜಾಮೀನು ರಹಿತ ಬಂಧನ ವಾರಂಟ್ ಜಾರಿಗೊಳಿಸಿತ್ತು.
ಸಲಗ ಸಿನಿಮಾದಲ್ಲಿ ಸಹ ಕಲಾವಿದೆಯಾಗಿ ಉಷಾ ಅಭಿನಯಿಸಿದ್ದರು. ಕಿರುತೆರೆ ಧಾರವಾಹಿಗಳಲ್ಲೂ ನಟಿಸುತ್ತಿದ್ದಾರೆ. ಶರವಣನ್ ಕೂಡ ಧಾರವಾಹಿಗಳಲ್ಲಿ ನಟಿಸಿದ್ದರು.



