ಪಿಯುಸಿ ಫಲಿತಾಂಶ ಪ್ರಕಟ : ತೀರ್ಥಹಳ್ಳಿಯ ಅನ್ವಿತಾ ರಾಜ್ಯಕ್ಕೆ ಎರಡನೇ ರ‍್ಯಾಂಕ್ – ಅಮೃತಾ ಕಾಲೇಜಿಗೆ 90.28% ಫಲಿತಾಂಶ
ಕರ್ನಾಟಕದಾದ್ಯಂತ ಯಶಸ್ವಿಯಾಗಿ ನಡೆದಿದ್ದ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟವಾಗಿದೆ. ಇಂದು ಬೆಂಗಳೂರಿನ ಮಲ್ಲೇಶ್ವರಂನ ಕಚೇರಿಯಲ್ಲಿ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಈ ಫಲಿತಾಂಶವನ್ನು ಬಿಡುಗಡೆ ಮಾಡಿದ್ದು, 7,26,195 ವಿದ್ಯಾರ್ಥಿಗಳ ಪೈಕಿ 5 ಲಕ್ಷದ 24 ಸಾವಿರ 209 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಕಲಾ ವಿಭಾಗದಲ್ಲಿ1,34,876 ಶ್ರ( ಶೇಕಡಾ 61.22ರಷ್ಟು) ವಿದ್ಯಾರ್ಥಿ ಪಾಸ್ ಆಗಿದ್ದರೆ, ವಾಣಿಜ್ಯ ವಿಭಾಗದಲ್ಲಿ 1,82,246 (ಶೇಕಡಾ 75.89ರಷ್ಟು) ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಇನ್ನು ವಿಜ್ಞಾನ ವಿಭಾಗದಲ್ಲಿ 2,07,087 (ಶೇಕಡಾ 85.71ರಷ್ಟು) ಪಾಸ್…