ಸಾಗರ ನಗರಸಭೆ ಉಪಾಧ್ಯಕ್ಷರ ಮನೆಯಲ್ಲಿ ಹಣ ತುಂಬುತ್ತಿರುವ ವಿಡಿಯೋ ವೈರಲ್ ಆಗಿದ್ದು, ಚುನಾವಣೆ ಆಯೋಗ ಎಫ್ಐಆರ್ ದಾಖಲಿಸಿಕೊಂಡಿದೆ.
ಸಾಗರ ನಗರಸಭೆ ಉಪಾಧ್ಯಕ್ಷ ಮಹೇಶ್ ವಿರುದ್ಧ ಎಪ್ಐಆರ್ ದಾಖಲಾಗಿದೆ. ಸಾಗರ ಶಾಸಕ ಹಾಗೂ ಬಿಜೆಪಿ ಅಭ್ಯರ್ಥಿ ಹರತಾಳು ಹಾಲಪ್ಪನವರ ಆಪ್ತನಾಗಿರುವ ಮಹೇಶ್ ಹಣವನ್ನ ಬ್ಯಾಗಿಗೆ ತುಂಬುತ್ತಿರುವ ವಿಡಿಯೋ ವೈರಲ್ ಆಗಿದೆ.
ಸಾಗರ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿ ದಾನಪ್ಪ ದೂರಿನ ಅನ್ವಯ ಎಫ್ಐಆರ್ ದಾಖಲಿಸಿದ್ದಾರೆ. ಎಫ್ಐಆರ್ ದಾಖಲಿಸಿಕೊಂಡು ಸಾಗರ ಠಾಣೆ ಪೋಲೀಸರು ತನಿಖೆ ಆರಂಭಿಸಿದ್ದಾರೆ.
ನಿನ್ನೆ ರಾತ್ರಿ ಮಹೇಶ್ ಬ್ಯಾಗಿಗೆ ಕಂತೆಗಟ್ಟಲೇ ಹಣ ತುಂಬುವ ವಿಡಿಯೋ ವೈರಲ್ ಆಗಿದೆ. ಇದರ ಬೆನ್ನಲ್ಲೇ ಮಹೇಶ್ ಮನೆ ಮೇಲೆ ಅಧಿಕಾರಿಗಳ ತಂಡ ದಾಳಿ ನಡೆಸಿದೆ. ಈ ವೇಳೆ ಯಾವುದೇ ಹಣ ಪತ್ತೆಯಾಗದ ಹಿನ್ನೆಲೆಯಲ್ಲಿ ಫ್ಲೈಯಿಂಗ್ ಸ್ಕ್ವಾಡ್ ವಾಪಾಸ್ ಆಗಿದ್ದಾರೆ.
ಬಳಿಕ ವಿಡಿಯೋ ಆದರಿಸಿ, ಇಂದು ಬೆಳಿಗ್ಗೆ ಫ್ಲೈಯಿಂಗ್ ಸ್ಕ್ವಾಡ್ ಪೊಲೀಸರಿಗೆ ದೂರು ನೀಡಿದ ಚುನಾವಣೆ ಸಂದರ್ಬದಲ್ಲಿ ಹಣ ಬಳಕೆಯಾಗುವ ಸಾಧ್ಯತೆ ಹಾಗೂ ಪಕ್ಷದಲ್ಲಿ ಹಣ ಹಂಚುವ ಸಾಧ್ಯೆತೆ ಹಿನ್ನಲೆಯಲ್ಲಿ ದೂರು ದಾಖಲಾಗಿದೆ.