ಭೂಮಿ ಹಕ್ಕಿಗಾಗಿ- ಬಿಜೆಪಿ ಬೆಂಬಲಿಸಿ:  ಹಾಲಪ್ಪ ಎಚ್ ಹರತಾಳು
 ರಿಪ್ಪನ್ ಪೇಟೆ : ಮಲೆನಾಡಿನ ಜ್ವಲಂತ ಸಮಸ್ಯೆಯಾದ ಭೂ ಹಕ್ಕಿನ   ವಿಚಾರಧಾರೆಯನ್ನು ವಿಧಾನಸೌಧದ ಒಳಗೂ ಹಾಗೂ ಹೊರಗೂ ಸಮರ್ಥವಾಗಿ ಪ್ರತಿಪಾದಿಸಲು ಈ ಬಾರಿ ಸಾಗರ ವಿಧಾನ ಸಭಾ  ಕ್ಷೇತ್ರ ದಲ್ಲಿ ಮತ್ತೊಮ್ಮೆ ಬಿಜೆಪಿಯನ್ನು ಆಯ್ಕೆ ಮಾಡುವಂತೆ ಸಾಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹಾಗೂ ಹಾಲಿ ಶಾಸಕ ಹಾಲಪ್ಪ ಎಚ್.  ಹರತಾಳು ಮನವಿ ಮಾಡಿದರು.
 ಬಿಜೆಪಿ ಪಕ್ಷದ ಅಧಿಕೃತ ಅಭ್ಯರ್ಥಿಯಾಗಿ ಬಿ ಫಾರಂ ಪಡೆದ ನಂತರ ಪಟ್ಟಣದ ಪುರಾಣ ಪ್ರಸಿದ್ದ ಸಿದ್ದಿವಿನಾಯಕ ಮತ್ತು ಆನ್ನಪೂರ್ಣೇಶ್ವರಿ ಅಮ್ಮನವರ 6 ನೇ ವರ್ಷದ ಪ್ರತಿಷ್ಠಾ ವರ್ಧಂತ್ಯುತ್ಸವ ಕಾರ್ಯಕ್ರಮಕ್ಕೆ ಭೇಟಿ ನೀಡಿ ಚುನಾವಣೆಯಲ್ಲಿ ಯಾವುದೇ ವಿಘ್ನಗಳು ಬಾರದೇ  ಗೆಲುವು ಸುಲಲಿತವಾಗಲೆಂದು ವಿಘ್ನನಿವಾರಕನಲ್ಲಿ ವಿಶೇಷ ಪ್ರಾರ್ಥನೆ ನಲ್ಲಿಸಿ ದರ್ಶನಾರ್ಶೀವಾದ ಪಡೆದರು.
 ನಂತರ ಮಾದ್ಯಮದವರೊಂದಿಗೆ ಮಾತನಾಡಿ ಕ್ಷೇತ್ರದ ಸರ್ವಾಂಗಿಣ ಅಭಿವೃದ್ಧಿ ವಿಚಾರ ಮತ್ತು ಮಲೆನಾಡಿನ ಜ್ವಲಂತ ಸಮಸ್ಯೆಗಳ ಸೂಕ್ತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ  ವಿಧಾನಸೌದದಲ್ಲಿ ಪರಿಣಾಮಕಾರಿಯಾಗಿ ಚರ್ಚಿಸಲು  ಮತ್ತೊಮ್ಮೆ ಆಯ್ಕೆ ಮಾಡುವಂತೆ ಮತದಾರರಲ್ಲಿ ಮನವಿ ಮಾಡುತ್ತೇನೆ ಎಂದರು.
 ಶನಿವಾರ ಬೆಳಗ್ಗೆ 9 ಗಂಟೆಗೆ ಸಾಗರ ಗಣಪತಿ ದೇವಸ್ಥಾನದಲ್ಲಿ  ಪೂಜೆ  ಸಲ್ಲಿಸಿ, ತದನಂತರ ಮೆರವಣಿಗೆ ಮೂಲಕ ತೆರಳಿ ನಾಮಪತ್ರ ಸಲ್ಲಿಕೆ ಮಾಡುವುದಾಗಿ ತಿಳಿಸಿದರು.
 ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಆಲವಳ್ಳಿ ವೀರೇಶ್,ಎಂ ಬಿ ಮಂಜುನಾಥ್ ,ಪಿ ರಮೇಶ್ ,ನಾಗರತ್ನ ದೇವರಾಜ್ ,ಮೆಣಸೆ ಆನಂದ್ , ಉದ್ಯಮಿ ನಾಗರಾಜ್ ಶೆಟ್ಟಿ , ಮಂಜುಳಾ ಕೇತಾರ್ಜಿ ರಾವ್, ಮಹಾಲಕ್ಷ್ಮಿ ಅಣ್ಣಪ್ಪ,  ಮತ್ತು ಇತರರು ಇದ್ದರು.
 


