ಚೀಲೂರಿನ ಗೋವಿನ ಕೋವಿಯ ಬಳಿಯಲ್ಲಿ ನಡೆದಿದ್ದ ಡಬ್ಬಲ್ ಅಟ್ಯಾಕ್ ಸಂಬಂಧ ದಾವಣಗೆರೆ ಪೊಲೀಸರು ಆಂಧ್ರದ ಗುಂಟೂರಿನ ರೈಲ್ವೆ ಸ್ಟೇಷನ್ನಲ್ಲಿ ಆರೋಪಿಗಳನ್ನ ಬಂಧಿಸಿದ್ದಾರೆ ಎಂಬ ಸುದ್ದಿ ಬೆಂಗಳೂರಿನ ಮೂಲಗಳಿಂದಲೇ ಲಭ್ಯವಾಗಿತ್ತು. ಆದರೆ , ಈ ಪ್ರಕರಣ ಇದೀಗ ರೋಚಕ ಟ್ವಿಸ್ಟ್ ಗಳನ್ನು ಪಡೆದುಕೊಳ್ಳುತ್ತಿದೆ.
ಪೊಲೀಸ್ ಹಾಗೂ ಭೂಗತ ಲೋಕದ ನಡುವಿನ ಮೈಂಡ್ ಗೇಮ್ ಆಗಿ ಬದಲಾಗುತ್ತಿದೆ. ಇದಕ್ಕೆ ಸಾಕ್ಷಿ ಎಂಬಂತೆ ದಾವಣೆಗೆರೆ ಪೊಲೀಸ್ ಮೂಲಗಳಿಂದ ಮಾಹಿತಿಯೊಂದು ಲಭ್ಯವಾಗಿದ್ದು, ಡಬ್ಬಲ್ ಅಟ್ಯಾಕ್ನ ಮಾಸ್ಟರ್ ಮೈಂಡ್ ತಮಿಳ್ ರಮೇಶ್ ಅರೆಸ್ಟ್ ಆಗಿಲ್ಲ ಎನ್ನಲಾಗುತ್ತಿದೆ. ಆರೋಪಿಗಳಿಬ್ಬರನ್ನು ಪೊಲೀಸರು ಬಂಧಿಸಲು ತೆರಳಿದ್ದು ನಿಜ ಆದರೆ, ಆ ಸಂದರ್ಭದಲ್ಲಿ ಇಬ್ಬರು ಎಸ್ಕೇಪ್ ಆಗಿದ್ದಾರೆ. ಅಷ್ಟರಲ್ಲಿ ಭೂಗತ ಲೋಕದ ಕಾಣದ ಕೈಗಳು ಮಾಧ್ಯಮಗಳಿಗೆ ಫೋಟೋ ಹಾಗೂ ಹೆಸರು ಸಮೇತ ಸುದ್ದಿಯೊಂದನ್ನ ರವಾನೆ ಮಾಡಿದೆ. ಸೀನ್ ಕ್ರಿಯೇಟ್ ಮಾಡ್ತಿರೋರು ಯಾರು?
ಚೀಲೂರಿನ ಕೇಸ್ನಲ್ಲಿ ದಾವಣಗೆರೆ ಪೊಲೀಸರು ಭೂಗತ ಲೋಕದ ಕ್ರೈಂ ಸಿನಿಮಾ ಸೀನ್ಗಳಿಗೆ ತಲೆಬಗ್ಗಿಸುತ್ತಿಲ್ಲ. ಈ ಮೊದಲು ಶಿಗ್ಗಾವಿ ಪೊಲೀಸರಿಗೆ ನಾಲ್ವರು ಸರೆಂಡರ್ ಆಗಿದ್ದರು. ಆ ಸೀನ್ನಲ್ಲಿ ನ್ಯಾಮತಿ ಪೊಲೀಸರು, ಪತ್ರಕರ್ತನೊಬ್ಬನನ್ನ ಲಿಫ್ಟ್ ಮಾಡಿ ಆರೋಪಿಗಳಿಗೆ ಶಾಕ್ ಕೊಟ್ಟಿದ್ದರು.
ಇದರ ಬೆನ್ನಲ್ಲೆ ತಮಿಳ್ ರಮೇಶ್ ಹಾಗೂ ದೀಪು ಎಂಬಿಬ್ಬರು ಆರೆಸ್ಟ್ ಆಗಿದ್ದಾರೆ ಎಂಬ ಸುದ್ದಿಯನ್ನ ನಿನ್ನೆ ರಾತ್ರಿ ಡಬ್ಬಲ್ ಅಟ್ಯಾಕ್ ಕೃತ್ಯದ ಹಿಮ್ಮೇಳದಲ್ಲಿರುವವರು ಹರಿಬಿಟ್ಟಿದ್ದರು. ರಾಜಧಾನಿಯ ಸುದ್ದಿಮೂಲಗಳಲ್ಲಿಯೇ ಈ ಸುದ್ದಿ ಬಿತ್ತರವಾದ್ದರಿಂದ ಅದರ ಅಸಲಿಯತ್ತಿನ ಬಗ್ಗೆ ಅನುಮಾನ ಉಳಿದಿರಲಿಲ್ಲ. ಇದೀಗ ಮಲೆನಾಡು ಟುಡೆ ತಂಡ ವರದಿ ಸಂಬಂಧ ಕೆಲವೊಂದು ಮಾಹಿತಿ ಹೆಕ್ಕಲು ಮುಂದಾದ ಹೊತ್ತಿನಲ್ಲಿ ದಾವಣಗೆರೆ ಪೊಲೀಸ್ ಮೂಲಗಳು ಆರೋಪಿಗಳು ಅರೆಸ್ಟ್ ಆಗಿಲ್ಲ. ಇದೊಂದು ಸುಳ್ಳು ಮಾಹಿತಿ ಎನ್ನುತ್ತಿದ್ದಾರೆ.
ಹೆಸರು ಫೋಟೋ ಕೊಟ್ಟವರು ಯಾರು? ಯಾಕೆ?
ಆಂಧ್ರದ ಗುಂಟೂರು ಸ್ಟೇಷನ್ನಲ್ಲಿ ಇಬ್ಬರು ಅರೆಸ್ಟ್ ಆಗಿದ್ದಾರೆ ಅಂತಾ ಇಬ್ಬರ ಫೋಟೋಗಳನ್ನ ಮಾಧ್ಯಮಗಳಿಗೆ ಕಳುಹಿಸಿಕೊಟ್ಟವರು ಯಾರು ಎಂಬುದನ್ನ ತಿಳಿದುಕೊಳ್ಳಲು ಪೊಲೀಸರು ಮುಂದಾಗಿದ್ದಾರೆ. ಆದರೆ ಪೊಲೀಸರ ಪಿಸ್ತೂಲ್ ಭಯಕ್ಕೆ ಈ ರೀತಿ ಆಟ ಕಟ್ಟುತ್ತಿದ್ಧಾರೆ ಎಂಬ ವಿಚಾರ ಗೊತ್ತಾಗುತ್ತಿದೆ.
ಒಟ್ಟಾರೆ, ರಮೇಶ್ ಹಾಗೂ ದೀಪು ಬಂಧನದ ಕೇಸ್ ಕುತೂಹಲ ಮೂಡಿಸಿದ್ದು, ಕ್ಷಣಕ್ಷಣಕ್ಕೂ ದಾವಣಗೆರೆ ಪೊಲೀಸರು ಆರೋಪಿಗಳ ಗೇಮ್ಪ್ಲ್ಯಾನ್ಗಳನ್ನ ಫೇಲ್ ಮಾಡುತ್ತಿದ್ದಾರೆ.
ರಫ಼ಿ ರಿಪ್ಪನ್ ಪೇಟೆನಾನು ಪೋಸ್ಟ್ ಮ್ಯಾನ್ ನ್ಯೂಸ್ ಮಾದ್ಯಮದ ಹಿಂದೆ ಇರುವ ಒಬ್ಬ ಸ್ಥಳೀಯ ಸುದ್ದಿಪ್ರೇಮಿ ಪತ್ರಕರ್ತ. ಕಳೆದ ಐದು ವರ್ಷಗಳಿಂದ ಒಂದು ಕನಸನ್ನು ಜೀವಂತವಾಗಿಟ್ಟಿದ್ದೇನೆ — ನಮ್ಮೂರ ಸುದ್ದಿಗಳು ಲೋಕದವರೆಗೆ ತಲುಪಬೇಕು ಎಂಬದು. ಸ್ಥಳೀಯ ಪತ್ರಿಕೆಗಳಿಂದ ಆರಂಭಿಸಿ, ರಾಜ್ಯಮಟ್ಟದ ನ್ಯೂಸ್ ಚಾನೆಲ್‌ಗಳ ಬೆಂಗಳೂರು ಕಚೇರಿಯವರೆಗೆ ಮಾಧ್ಯಮದ ಎಲ್ಲಾ ಹಂತಗಳಲ್ಲಿ ಕೆಲಸ ಮಾಡಿದ ಅನುಭವ ನನ್ನದಾಗಿದೆ. ಆದರೆ ಅಲ್ಲಿ ಒಂದು ಖಾಲಿ ಅನಿಸಿತು — ನಿಜವಾದ ಸ್ಥಳೀಯ ಧ್ವನಿಗೆ ವೇದಿಕೆ ಇಲ್ಲ. ಅದಕ್ಕೆ ಪರ್ಯಾಯವಾಗಿ ಹುಟ್ಟಿತು “ಪೋಸ್ಟ್ ಮ್ಯಾನ್ ನ್ಯೂಸ್.” ಇಲ್ಲಿ ಸುದ್ದಿ ಅಂದ್ರೆ ಸುದ್ದಿ ಮಾತ್ರ. ಯಾರ ಪರವೂ ಅಲ್ಲ, ಯಾವ ಪಕ್ಷದ ಪರವೂ ಅಲ್ಲ. ನನ್ನ ನಿಲುವು ಸ್ಪಷ್ಟ — ಸುದ್ದಿ ಹೇಳಬೇಕು, ತೀರ್ಪು ಕೊಡಬಾರದು. ಕೆಲವೊಮ್ಮೆ ಓದುಗರ ಪ್ರತಿಕ್ರಿಯೆಗಳು ಬೇರೆ ಬಣ್ಣ ತೊಡುತ್ತವೆ, ಆದರೆ ನನ್ನ ಪ್ರತಿಕ್ರಿಯೆ ಕೆಲಸದ ಮೂಲಕವೇ. ಪೋಸ್ಟ್ ಮ್ಯಾನ್ ನ್ಯೂಸ್ ಇಂದು ಕೇವಲ ಒಂದು ಪೇಜ್ ಅಲ್ಲ, ಅದು ಒಂದು ಚಳವಳಿಯಾಗಿದೆ — ಪೋಸ್ಟ್ ಮ್ಯಾನ್ ನ್ಯೂಸ್‌ನ ಉದ್ದೇಶ ಕೇವಲ ವರದಿ ಮಾಡುವುದು ಅಲ್ಲ; ನಮ್ಮೂರ ಘಟನೆಗಳು, ಪ್ರತಿಭೆಗಳು, ಸಮಸ್ಯೆಗಳು, ಸಾಧನೆಗಳು — ಇವುಗಳನ್ನು ಹೊರಲೋಕಕ್ಕೆ ತಲುಪಿಸುವ ಸೇತುವೆಯಾಗಿರಬೇಕು. ಹಣ ಪಡೆದು ಸುದ್ದಿ ಮಾಡುವ ಅಭ್ಯಾಸವೂ ಇಲ್ಲ, ಹವ್ಯಾಸವೂ ಇಲ್ಲ. ಮುಂದಿನ ಹಂತದಲ್ಲಿ ನಾವು ಔಟ್‌ಸೋರ್ಸ್ ವ್ಯವಸ್ಥೆ ಮೂಲಕ ಸ್ಥಳೀಯ ವರದಿಗಾರರನ್ನು, ಕಥೆಗಾರರನ್ನು ಸೇರಿಸಿಕೊಂಡು ಈ ವೇದಿಕೆಯನ್ನು ಇನ್ನಷ್ಟು ಜೀವಂತಗೊಳಿಸುವ ಉದ್ದೇಶದಲ್ಲಿದ್ದೇವೆ. ನಮ್ಮ ಗುರಿ ಒಂದೇ — ಸಣ್ಣ ಊರುಗಳ ಸತ್ಯ ಕತೆಗಳು ದೊಡ್ಡ ಮಟ್ಟದಲ್ಲಿ ಲೋಕದ ಕಿವಿಗೆ ತಲುಪಬೇಕು. - ರಫ಼ಿ ರಿಪ್ಪನ್ ಪೇಟೆ ಸಂಪಾದಕರು , ಪೋಸ್ಟ್ ಮ್ಯಾನ್ ನ್ಯೂಸ್