ಆನಂದಪುರ ಸಮೀಪದ ಕೆಂಜಿಗಾಪುರದಲ್ಲಿ ಒಂಟಿ ಮನೆ ದರೋಡೆ – ಒಂದೇ ವಾರದಲ್ಲಿ ಎರಡು ಬಾರಿ ದರೋಡೆಗೊಳಗಾದ ಭಟ್ಟರ ಮನೆ|Robbery

ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಆತಂಕ ಮೂಡಿಸುವಂತಹ ದರೋಡೆ ಪ್ರಕರಣವೊಂದು ಸಾಗರ ಗ್ರಾಮಾಂತರ ಪೊಲೀಸ್ ಸ್ಟೇಷನ್​ ವ್ಯಾಪ್ತಿಯಲ್ಲಿ ನಡೆದಿದೆ.




ಆನಂದಪುರ ಸಮೀಪದ ಕೆಂಜಿಗಾಪುರ ಭಟ್ಟರೊಬ್ಬರ ಮನೆಯಲ್ಲಿ ರಾಬರಿ ನಡೆದಿದೆ. ಎಫ್​ಐಆರ್​ನಲ್ಲಿ ದಾಖಲಾಗಿರುವ ಪ್ರಕಾರ ಎರಡು ಸಲ ರಾಬರಿ ನಡೆದಿದೆ. ಸ್ಥಳೀಯರು ಹೇಳುವ ಪ್ರಕಾರ ಮೂರು ಸಲ ನಡೆದಿರಬಹುದು ಎನ್ನಲಾಗುತ್ತದೆ.  ಒಂದೇ ಮನೆಯನ್ನು ಟಾರ್ಗೆಟ್ ಮಾಡಿ ಕೇವಲ ಒಂದು ವಾರದಲ್ಲಿ ಎರಡು ಸಲ ರಾಬರಿ ಮಾಡಲಾಗಿದೆ.  ಹಿರಿಯ ವೃದ್ಧರನ್ನ ಕೈ ಕಾಲು ಕಟ್ಟಿ ರಾಬರಿ ಮಾಡಿ ಹೋಗುತ್ತಿರುವವರು ಯಾರು? ಈ ಬಗ್ಗೆ  ಪೊಲೀಸರಿಗೆ ಈಗಷ್ಟೆ ಮಾಹಿತಿ ಲಭ್ಯವಾಯಿತೇ ಎಂಬಿತ್ಯಾದಿ ಚರ್ಚೆಗಳು ಸ್ಥಳೀಯರಲ್ಲಿ ನಡೆಯುತ್ತಿದೆ.


ಶ್ರೀಧರ್​ ಭಟ್ಟರು ಎಂಬ 75 ವರ್ಷದ ಹಿರಿಯರು ನೀಡಿದ ಕಂಪ್ಲೇಂಟ್​ನ ಅಡಿಯಲ್ಲಿ ಐಪಿಸಿ 394 ಸೆಕ್ಷನ್​ ಅಡಿಯಲ್ಲಿ FIR ದಾಖಲಾಗಿದೆ. ಈ  ಪ್ರಕಾರ, ಮೊದಲ ರಾಬರಿ ಅಟೆಂಪ್ಟ್​ 12 -02-2023 ರಂದು ನಡೆದಿದೆ. ಅವತ್ತು ತಡರಾತ್ರಿ 3 ಗಂಟೆ ಸುಮಾರಿಗೆ ನಾಲ್ಕು ಜನ ಮನೆ ಹಂಚಿನಿಂದ ಇಳಿದು ಬಂದು, ವಯಸ್ಸಾದ ಭಟ್ಟರನ್ನು ಹಾಗೂ ಅವರ ಅಕ್ಕನ ಕೈಕಾಲು ಕಟ್ಟಿ ಹಾಕಿ ನಾಲ್ಕೈದು ಲಕ್ಷ ರೂಪಾಯಿ ರಾಬರಿ ಮಾಡಿ ಹೋಗಿದ್ದಾರೆ. ಮೇಲಾಗಿ ಪೊಲೀಸರಿಗೆ ತಿಳಿಸಿದರೇ ಕೊಲೆ ಮಾಡುತ್ತೇವೆ ಎಂದು ಜೀವ ಬೆದರಿಕೆ ಹಾಕಿದ್ದಾರೆ.




ಎರಡನೇ ಘಟನೆ

ಶ್ರೀಧರ್​ ಭಟ್ಟರು ಭಯದಲ್ಲಿ,  ಈ ವಿಷಯವನ್ನು ಯಾರಿಗೂ ಹೇಳಿರಲಿಲ್ಲ. ಈ ನಡುವೆ ದಿನಾಂಕ 20-02-23 ರಂದು ಮತ್ತೊಂದು ಸಲ ರಾಬರಿ ಇವರ ಮನೆಯಲ್ಲಿಯೇ ನಡೆದಿದೆ ಅಂದರೆ ಕೇವಲ ಏಳು ದಿನದ ಅಂತರದಲ್ಲಿ ಎರಡನೇ ಅಟೆಂಪ್ಟ್​ ಆಗಿದೆ. ಈ ಸಲ ಮನೆಯ ಕೊಟ್ಟಿಗೆ ಬಳಿ ಮೊದಲೇ ಅವಿತು ನಿಂತಿದ್ದ  ನಾಲ್ಕು ಜನ  ಶ್ರೀಧರ್ ಭಟ್ ರನ್ನ ಕಟ್ಟಿ ಹಾಕಿ ಅವರ ಅಕ್ಕನ ಮೇಲೆ ಹಲ್ಲೆ ಮಾಡಿ ಒಂದು ಲಕ್ಷ ರೂಪಾಯಿಯನ್ನ ರಾಬರಿ ಮಾಡಿಕೊಂಡು ಹೋಗಿದ್ದಾರೆ.

ಇನ್ನೂ  ನೀಡಿದ ದೂರಿನಲ್ಲಿ ಭಟ್ಟರು, ತಮಿಳು ನಾಡು ರಿಜಿಸ್ಟ್ರೇಷನ್ ನಂಬರ್ ಇರುವ ಕಾರಿನ ಬಗ್ಗೆ ಹೇಳಿದ್ದು, ಆ ಕಾರು ಮನೆಯ ಬಳಿ ನಿಂತಿತ್ತು. ಅವರನ್ನ ಕೇಳಿದಾಗ, ಹುಣ್ಣಿಮೆಯ ಪೂಜೆಗೆ ಬಂದಿದ್ದೇವೆ ಎಂದು ತಿಳಿಸಿದ್ದಾರೆ ಎಂದು ಕಂಪ್ಲೆಂಟ್ ಕೊಟ್ಟಿದ್ದಾರೆ. ಶಿವಮೊಗ್ಗ ಪೊಲೀಸ್ ಇಲಾಖೆ ವಿಮಾನ ನಿಲ್ದಾಣ ಉದ್ಘಾಟನೆಯ ಭದ್ರತೆಯಲ್ಲಿ ಬ್ಯುಸಿಯಾಗಿದೆ.ಇದರ ನಡುವೆ ಸಾಗರ ತಾಲ್ಲೂಕಿನಲ್ಲಿ ಈ ರಾಬರಿ ಪ್ರಕರಣ ಹೊರಕ್ಕೆ ಬಂದಿದೆ. ಒಂದೇ ಮನೆಯನ್ನು ವಾರದಲ್ಲಿಎರಡು ಸಲ ಟಾರ್ಗೆಟ್ ಮಾಡಿ ರಾಬರಿ ಮಾಡಿರುವುದು ಆತಂಕ ಮೂಡಿಸ್ತಿದೆ ಅಲ್ಲದೆ ಆರೋಪಿಗಳಿಗೆ ಜಾಗ, ಮನೆ, ವ್ಯಕ್ತಿಯ ಪರಿಚಯ ಇರುವ ಸಾಧ್ಯಸಾಧ್ಯತೆ ಹೇಳುತ್ತಿದೆ.  ಟಾಪ್ ಮೋಸ್ಟ್ ಕೇಸ್​ಗಳನ್ನು ಸುಲಭವಾಗಿ ಪರಿಹರಿಸಿರುವ ಶಿವಮೊಗ್ಗ ಪೊಲೀಸರು ಈ ಕೇಸನ್ನ ಶ್ರೀಘ್ರದಲ್ಲಿಯೇ  ಬಗೆಹರಿಸಬಹುದು.




2021 ರಲ್ಲಿಯು ನಡೆದಿತ್ತು ರಾಬರಿ

ಇನ್ನೊಂದು ಅಚ್ಚರಿಯ ಸಂಗತಿ ಅಂದರೆ, ಇದೇ  ಶ್ರೀಧರ್​ ಭಟ್ರ ಮನೆಯಲ್ಲಿ 2012 ರಲ್ಲಿ ಹಾಡಹಗಲೇ ರಾಬರಿ ನಡೆದಿತ್ತು. ಅಂದು ಸಹ ಈ ವಿಷಯ ದೊಡ್ಡಮಟ್ಟಿಗೆ ಸದ್ದು ಮಾಡಿತ್ತು. ಕೆಂಜಿಗಾಪುರದ ಗ್ರಾಮದಲ್ಲಿ ಸುತ್ತಮುತ್ತ ಜನವಸತಿ ಇಲ್ಲದ ಒಂಟಿಮನೆಯಲ್ಲಿ ವಾಸಿಸುತ್ತಿರುವ ಶ್ರೀಧರ್​ ಭಟ್ ರ ಮನೆಗೆ ನುಗ್ಗಿದ್ದ  ನಾಲ್ಕು ಜನರು ಸ್ವಿಫ್ಟ್ ಕಾರಿನಲ್ಲಿ ಬಂದಿದ್ದರು. ಅಂದು ಭಟ್ಟರ ಸಹೋದರಿ ಮೇಲೆ ಹಲ್ಲೆ ಮಾಡಿ, 2 ಲಕ್ಷ ರೂಪಾಯಿ ದೋಚಿ ಹೋಗಿದ್ದರು. ಆಗಲೂ ಸಾಗರ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಕೇಸ್ ಮಾಡಿದ್ದರು.  ಇನ್ನೂ ಸ್ಥಳೀಯರ ಪ್ರಕಾರ, ಈ ಕೇಸ್​ಗೂ ಮೊದಲೇ ಎರಡು ಸಲ ಭಟ್ಟರ ಮನೆಯಲ್ಲಿ ರಾಬರಿ ಯತ್ನ ನಡೆದಿತ್ತು. ಇದೀಗ ಮತ್ತೆ ವಾರದಲ್ಲಿ ಎರಡು ಸಲ ಕೃತ್ಯ ನಡೆದಿದೆ. ಈ ಸಲ ಆರೋಪಿಗಳಿಗೆ ಪೊಲೀಸರು ಕೋಳ ತೊಡಿಸಲು ಶತಾಯಗತಾಯ ಪ್ರಯತ್ನಿಸ್ತಿದ್ದಾರೆ.



ರಫ಼ಿ ರಿಪ್ಪನ್ ಪೇಟೆ

ನಾನು ಪೋಸ್ಟ್ ಮ್ಯಾನ್ ನ್ಯೂಸ್ ಮಾದ್ಯಮದ ಹಿಂದೆ ಇರುವ ಒಬ್ಬ ಸ್ಥಳೀಯ ಸುದ್ದಿಪ್ರೇಮಿ ಪತ್ರಕರ್ತ. ಕಳೆದ ಐದು ವರ್ಷಗಳಿಂದ ಒಂದು ಕನಸನ್ನು ಜೀವಂತವಾಗಿಟ್ಟಿದ್ದೇನೆ — ನಮ್ಮೂರ ಸುದ್ದಿಗಳು ಲೋಕದವರೆಗೆ ತಲುಪಬೇಕು ಎಂಬದು. ಸ್ಥಳೀಯ ಪತ್ರಿಕೆಗಳಿಂದ ಆರಂಭಿಸಿ, ರಾಜ್ಯಮಟ್ಟದ ನ್ಯೂಸ್ ಚಾನೆಲ್‌ಗಳ ಬೆಂಗಳೂರು ಕಚೇರಿಯವರೆಗೆ ಮಾಧ್ಯಮದ ಎಲ್ಲಾ ಹಂತಗಳಲ್ಲಿ ಕೆಲಸ ಮಾಡಿದ ಅನುಭವ ನನ್ನದಾಗಿದೆ. ಆದರೆ ಅಲ್ಲಿ ಒಂದು ಖಾಲಿ ಅನಿಸಿತು — ನಿಜವಾದ ಸ್ಥಳೀಯ ಧ್ವನಿಗೆ ವೇದಿಕೆ ಇಲ್ಲ. ಅದಕ್ಕೆ ಪರ್ಯಾಯವಾಗಿ ಹುಟ್ಟಿತು “ಪೋಸ್ಟ್ ಮ್ಯಾನ್ ನ್ಯೂಸ್.” ಇಲ್ಲಿ ಸುದ್ದಿ ಅಂದ್ರೆ ಸುದ್ದಿ ಮಾತ್ರ. ಯಾರ ಪರವೂ ಅಲ್ಲ, ಯಾವ ಪಕ್ಷದ ಪರವೂ ಅಲ್ಲ. ನನ್ನ ನಿಲುವು ಸ್ಪಷ್ಟ — ಸುದ್ದಿ ಹೇಳಬೇಕು, ತೀರ್ಪು ಕೊಡಬಾರದು. ಕೆಲವೊಮ್ಮೆ ಓದುಗರ ಪ್ರತಿಕ್ರಿಯೆಗಳು ಬೇರೆ ಬಣ್ಣ ತೊಡುತ್ತವೆ, ಆದರೆ ನನ್ನ ಪ್ರತಿಕ್ರಿಯೆ ಕೆಲಸದ ಮೂಲಕವೇ. ಪೋಸ್ಟ್ ಮ್ಯಾನ್ ನ್ಯೂಸ್ ಇಂದು ಕೇವಲ ಒಂದು ಪೇಜ್ ಅಲ್ಲ, ಅದು ಒಂದು ಚಳವಳಿಯಾಗಿದೆ — ಪೋಸ್ಟ್ ಮ್ಯಾನ್ ನ್ಯೂಸ್‌ನ ಉದ್ದೇಶ ಕೇವಲ ವರದಿ ಮಾಡುವುದು ಅಲ್ಲ; ನಮ್ಮೂರ ಘಟನೆಗಳು, ಪ್ರತಿಭೆಗಳು, ಸಮಸ್ಯೆಗಳು, ಸಾಧನೆಗಳು — ಇವುಗಳನ್ನು ಹೊರಲೋಕಕ್ಕೆ ತಲುಪಿಸುವ ಸೇತುವೆಯಾಗಿರಬೇಕು. ಹಣ ಪಡೆದು ಸುದ್ದಿ ಮಾಡುವ ಅಭ್ಯಾಸವೂ ಇಲ್ಲ, ಹವ್ಯಾಸವೂ ಇಲ್ಲ. ಮುಂದಿನ ಹಂತದಲ್ಲಿ ನಾವು ಔಟ್‌ಸೋರ್ಸ್ ವ್ಯವಸ್ಥೆ ಮೂಲಕ ಸ್ಥಳೀಯ ವರದಿಗಾರರನ್ನು, ಕಥೆಗಾರರನ್ನು ಸೇರಿಸಿಕೊಂಡು ಈ ವೇದಿಕೆಯನ್ನು ಇನ್ನಷ್ಟು ಜೀವಂತಗೊಳಿಸುವ ಉದ್ದೇಶದಲ್ಲಿದ್ದೇವೆ. ನಮ್ಮ ಗುರಿ ಒಂದೇ — ಸಣ್ಣ ಊರುಗಳ ಸತ್ಯ ಕತೆಗಳು ದೊಡ್ಡ ಮಟ್ಟದಲ್ಲಿ ಲೋಕದ ಕಿವಿಗೆ ತಲುಪಬೇಕು. - ರಫ಼ಿ ರಿಪ್ಪನ್ ಪೇಟೆ ಸಂಪಾದಕರು , ಪೋಸ್ಟ್ ಮ್ಯಾನ್ ನ್ಯೂಸ್

Share
Published by
ರಫ಼ಿ ರಿಪ್ಪನ್ ಪೇಟೆ

Recent Posts

ಚಾಲಕನ ನಿಯಂತ್ರಣ ತಪ್ಪಿ ಶಾಲಾ ಬಸ್ ಅಪಘಾತ – ತಪ್ಪಿದ ಭಾರಿ ಅನಾಹುತ

ಚಾಲಕನ ನಿಯಂತ್ರಣ ತಪ್ಪಿ ಶಾಲಾ ಬಸ್ ಅಪಘಾತ – ತಪ್ಪಿದ ಭಾರಿ ಅನಾಹುತ A school bus lost control…

5 hours ago

ಶಿಕ್ಷಕರ ಗೌರವದ ಹೆಸರಿನಲ್ಲಿ ರಾಜಕೀಯ ಬೇಡ; ಬಿಜೆಪಿ ವಿರುದ್ಧ ಕಾಂಗ್ರೆಸ್ ವಾಗ್ದಾಳಿ

ಶಿಕ್ಷಕರ ಗೌರವದ ಹೆಸರಿನಲ್ಲಿ ರಾಜಕೀಯ ಬೇಡ; ಬಿಜೆಪಿ ವಿರುದ್ಧ ಕಾಂಗ್ರೆಸ್ ವಾಗ್ದಾಳಿ Congress leaders in Sagar have hit…

7 hours ago

ಶಿಕ್ಷಣ ಸೇವೆಗೆ ಸಂದ ಪ್ರತಿಷ್ಠಿತ ಗೌರವ; ಅರಸಾಳಿನ ಸುಮಾ ಎಸ್.ಗೆ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ

ಶಿಕ್ಷಣ ಸೇವೆಗೆ ಸಂದ ಪ್ರತಿಷ್ಠಿತ ಗೌರವ; ಅರಸಾಳಿನ ಸುಮಾ ಎಸ್.ಗೆ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ Summa S.…

10 hours ago

ರಿಪ್ಪನ್‌ಪೇಟೆ ಸುತ್ತಮುತ್ತ ನಾಳೆ ಕರೆಂಟ್ ಇಲ್ಲ! ಯಾವೆಲ್ಲ ಪ್ರದೇಶಗಳಿಗೆ ವಿದ್ಯುತ್ ವ್ಯತ್ಯಯ? ಈ ಸುದ್ದಿ ನೋಡಿ

ರಿಪ್ಪನ್‌ಪೇಟೆ ಸುತ್ತಮುತ್ತ ನಾಳೆ ಕರೆಂಟ್ ಇಲ್ಲ! ಯಾವೆಲ್ಲ ಪ್ರದೇಶಗಳಿಗೆ ವಿದ್ಯುತ್ ವ್ಯತ್ಯಯ? ಈ ಸುದ್ದಿ ನೋಡಿ Power outage in…

15 hours ago

ಹಿರಿಯ ನಾಗರಿಕರಿಂದ ನಿವೃತ್ತ ಸರ್ಕಾರಿ ನೌಕರರಿಗೆ ವಿಶೇಷ ಸನ್ಮಾನ

ಹಿರಿಯ ನಾಗರಿಕರಿಂದ ನಿವೃತ್ತ ಸರ್ಕಾರಿ ನೌಕರರಿಗೆ ವಿಶೇಷ ಸನ್ಮಾನ Retired government employees were specially honoured by senior…

17 hours ago

ದೇಶದ ಅಭಿವೃದ್ಧಿಯಲ್ಲಿ ಶಿಕ್ಷಕರ ಪಾತ್ರ ಅತ್ಯಂತ ಮಹತ್ವದ್ದು: ಶಾಸಕ ಬೇಳೂರು ಗೋಪಾಲಕೃಷ್ಣ

ದೇಶದ ಅಭಿವೃದ್ಧಿಯಲ್ಲಿ ಶಿಕ್ಷಕರ ಪಾತ್ರ ಅತ್ಯಂತ ಮಹತ್ವದ್ದು: ಶಾಸಕ ಬೇಳೂರು ಗೋಪಾಲಕೃಷ್ಣ ಶಾಲೆ ಬಿಟ್ಟ ಮಕ್ಕಳನ್ನು ಮರಳಿ ಕರೆತಂದರೆ ₹10…

1 day ago