Headlines

ರಾಷ್ಟ್ರೀಯ ಕ್ರೀಡಾಪಟು ಬೆಳ್ಳಿ ಭರತ್ ರಾಜ್ ಸ್ಮರಣಾರ್ಥ ವಾಲಿಬಾಲ್ ಪಂದ್ಯಾವಳಿ|volleyball

ರಿಪ್ಪನ್‌ಪೇಟೆ : ಇಲ್ಲಿನ ಸಮೀಪದ ಹಾರಂಬಳ್ಳಿಯಲ್ಲಿ ರಾಷ್ಟ್ರ ಮಟ್ಟದ ವಾಲಿಬಾಲ್ ಕ್ರೀಡಾಪಟು ದಿವಂಗತ ಭರತ್ ರಾಜ್ ( ಬೆಳ್ಳಿ ) ಸ್ಮರಣಾರ್ಥ ವರಸಿದ್ದಿ ವಿನಾಯಕ ವಾಲಿಬಾಲ್ ಕ್ಲಬ್ ಹಾರಂಬಳ್ಳಿ ವತಿಯಿಂದ ಪ್ರಥಮ ವರ್ಷದ ಗ್ರಾಮೀಣ ವಾಲಿಬಾಲ್ ಪಂದ್ಯಾವಳಿಯು ಭಾರಿ ಅದ್ದೂರಿಯಾಗಿ ನಡೆಯಿತು.




ವಾಲಿಬಾಲ್ ಪಂದ್ಯಾವಳಿಯನ್ನು ಯುವ ಉದ್ಯಮಿ ಹಾಗೂ ಆಮ್ ಆದ್ಮಿ ಪಕ್ಷದ ಮುಖಂಡರಾದ ಸಂತೋಷ್ ಆಶ್ರೀತಾ ಉದ್ಘಾಟಿಸಿ ಮಾತನಾಡಿ ಗ್ರಾಮೀಣ ಭಾಗದ ಯುವಕರು ಕ್ರೀಡಾಕೂಟದಲ್ಲಿ ತಮ್ಮನ್ನು ಹೆಚ್ಚಾಗಿ ತೊಡಗಿಸಿಕೊಂಡು ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಅಧ್ಬುತ ಸಾಧನೆ ತೋರಿ ಹುಟ್ಟಿದ ಊರಿಗೆ ಕೀರ್ತಿ ತರುವಲ್ಲಿ ಶ್ರಮಿಸಬೇಕು ಎಂದು ಕರೆ ನೀಡಿದರು.


ಮುಖ್ಯ ಅತಿಥಿ  ವೀರೇಶ್ ಆಲುವಳ್ಳಿ ಮಾತನಾಡಿ ಗ್ರಾಮೀಣ ಭಾಗದ ಪ್ರತಿಭೆ ಭರತ್ ( ಬೆಳ್ಳಿ) ರಾಷ್ಟ್ರ ಮಟ್ಟದ ವಾಲಿಬಾಲ್ ಆಟಗಾರನಾಗಿ ಬೆಳೆದು ಇನ್ನೂ ಉನ್ನತ ಮಟ್ಟದಲ್ಲಿ ಸಾಧನೆ ಮಾಡುತಿದ್ದ ಆದರೆ ಅಂತಹ ಪ್ರತಿಭಾವಂತ ಕ್ರೀಡಾಪಟುವಿನ ಜೀವನದಲ್ಲಿ ವಿಧಿಯಾಟ ನಡೆದು ಅಕಾಲಿಕ ಮರಣ ಹೊಂದಿರುವು ತುಂಬಾ ಬೇಸರದ ಸಂಗತಿ ಹಾಗೇಯೆ ಭರತ್ ಹೆಸರಿನಲ್ಲಿ ಪಂದ್ಯಾವಳಿಯನ್ನು ಆಯೋಜಿಸಿರುವುದು ಬಹಳ ಸಂತಸ ತಂದಿದೆ ಎಂದರು.


ಈ ಸಂಧರ್ಭದಲ್ಲಿ ಬೆಳ್ಳಿ ಭರತ್ ಪೋಷಕರಾದ ವಾಸುದೇವ್ , ಹಿರಿಯ ವಾಲಿಬಾಲ್ ಕ್ರೀಡಾಪಟು ಉಮೇಶ್ ರಿಪ್ಪನ್‌ಪೇಟೆ,ವರಸಿದ್ದಿ ವಿನಾಯಕ ಕ್ಲಬ್ ಅಧ್ಯಕ್ಷ ರವೀಂದ್ರ ಹೆಚ್ ಡಿ ,ರಾಜೇಂದ್ರ ,ಹಿರಿಯ ವಾಲಿಬಾಲ್ ಪಟು ಕೇಶವ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಸಮಾರೋಪ ಸಮಾರಂಭ :


ರಾಷ್ಟ್ರ ಮಟ್ಟದ ವಾಲಿಬಾಲ್ ಕ್ರೀಡಾಪಟು ದಿವಂಗತ ಭರತ್ ರಾಜ್ ( ಬೆಳ್ಳಿ ) ಸ್ಮರಣಾರ್ಥ ವರಸಿದ್ದಿ ವಿನಾಯಕ ವಾಲಿಬಾಲ್ ಕ್ಲಬ್ ಹಾರಂಬಳ್ಳಿ ವತಿಯಿಂದ ಪ್ರಥಮ ವರ್ಷದ ಗ್ರಾಮೀಣ ವಾಲಿಬಾಲ್ ಪಂದ್ಯಾವಳಿಯ ಸಮಾರೋಪ ಸಮಾರಂಭದಲ್ಲಿ ಮಾಜಿ ಶಾಸಕ ಹಾಗೂ ಕೆಪಿಸಿಸಿ ವಕ್ತಾರ ಬೇಳೂರು ಗೋಪಾಲಕೃಷ್ಣ ಭಾಗವಹಿಸಿ ಪಂದ್ಯಾವಳಿಯಲ್ಲಿ ವಿಜೇತರಾದ ತಂಡಗಳಿಗೆ ಬಹುಮಾನಗಳನ್ನು ವಿತರಿಸಿ ಮಾತನಾಡಿದ ಅವರು ಯುವ ಜನತೆ ವಾಲಿಬಾಲ್ ಸೇರಿದಂತೆ ಇನ್ನಿತರ ಯಾವುದೇ ಕ್ರೀಡೆಗಳ ಅಭ್ಯಾಸಗಳಿಂದ ಆರೋಗ್ಯದ ಸಮತೋಲನ ಕಾಪಾಡಿಕೊಳ್ಳಬಹುದು.ಆಟದಲ್ಲಿ ಸೋಲು ಗೆಲುವು ಒಂದೇ ನಾಣ್ಯದ ಎರಡು ಮುಖವಿದ್ದಂತೆ ಸೋಲಾಯಿತು ಎಂದು ಕುಗ್ಗಬೇಡಿ, ಗೆದ್ದೆವು ಎಂದು ಹಿಗ್ಗಬೇಡಿ. ಗೆದ್ದವರು ಮತಷ್ಟು ಪ್ರಯತ್ನ, ದೊಡ್ಡ ಮಟ್ಟದ ಸಾಧನೆ ಮಾಡಬೇಕು. ಸೋತವರು ನಿರಂತರ ಶ್ರಮವಹಿಸಿ ಗೆಲುವು ಸಾಧಿಸಬೇಕು ಎಂದು ಕಿವಿಮಾತು ಹೇಳಿದರು.



ರಾಷ್ಟ್ರ ಮಟ್ಟದ ವಾಲಿಬಾಲ್ ಕ್ರೀಡಾಪಟು ಭರತ್ ರಾಜ್ (ಬೆಳ್ಳಿ) ಎಂಬ ಬಾಲಕ 21-10-2021 ರಂದು ಹಾರಂಬಳ್ಳಿ ಮನೆಯ ಸಮೀಪ ಪ್ರಕೃತಿ ವಿಕೋಪದಲ್ಲಿ ಮೃತಪಟ್ಟಿದ್ದು ತುಂಬಾ ಬೇಸರದ ಸಂಗತಿ.ಆ ಯುವ ಪ್ರತಿಭೆಯ ಸ್ಮರಣಾರ್ಥ ವರಸಿದ್ದಿ ವಿನಾಯಕ ವಾಲಿಬಾಲ್ ಕ್ಲಬ್ ಪ್ರಥಮ ವರ್ಷದ ಪಂದ್ಯಾವಳಿಯನ್ನು ಬಹಳ ಅಚ್ಚುಕಟ್ಟಾಗಿ ಆಯೋಜಿಸಿದೆ.ಇದೇ ರೀತಿಯಲ್ಲಿ ಪ್ರತಿ ವರ್ಷ ಯುವ ಪ್ರತಿಬೆ ಬೆಳ್ಳಿ ಸ್ಮರಣಾರ್ಥ ಪಂದ್ಯಾವಳಿಯನ್ನು ನಡೆಸುವ ಮೂಲಕ ಮುಂದೆ ಬರುವ ಪ್ರತಿಭೆಗಳಿಗೆ ಸ್ಪೂರ್ತಿ ನೀಡಬೇಕಾಗಿದೆ ಎಂದರು.

ಈ ಪಂದ್ಯಾವಳಿಯಲ್ಲಿ ಪ್ರಥಮ ಬಹುಮಾನವನ್ನು ಗವಟೂರು ವಾಲಿಬಾಲ್ ಕ್ಲಬ್ ,ದ್ವಿತೀಯ ಬಹುಮಾನವನ್ನು ಜೀರಿಗೆಮನೆ ವಾಲಿಬಾಲ್ ಕ್ಲಬ್ , ತೃತೀಯ ಬಹುಮಾನ ತಳಲೆ ವಾಲಿಬಾಲ್ ಕ್ಲಬ್ ಪಡೆದುಕೊಂಡಿದೆ.




ಈ ಸಂಧರ್ಭದಲ್ಲಿ ಬೆಳ್ಳಿ ಭರತ್ ಪೋಷಕರಾದ ವಾಸುದೇವ್, ವರಸಿದ್ದಿ ವಿನಾಯಕ ವಾಲಿಬಾಲ್ ಕ್ಲಬ್ ಅಧ್ಯಕ್ಷ ರವೀಂದ್ರ ಹೆಚ್ ಡಿ ,ಅರಸಾಳು ಗ್ರಾಪಂ ಮಾಜಿ ಅಧ್ಯಕ್ಷ ಉಮಾಕರ್ ,ಹೆದ್ದಾರಿಪುರ ಗ್ರಾಪಂ ಸದಸ್ಯ ಚಂದ್ರಶೇಖರ್ , ರಿಪ್ಪನ್‌ಪೇಟೆ ಗ್ರಾಪಂ ಸದಸ್ಯ ಗಣಪತಿ ಮುಖಂಡರಾದ ಉಲ್ಲಾಸ್ ಸೇರಿದಂತೆ ಇನ್ನಿತರರು ಇದ್ದರು.



ಮಿಂಚಿ ಮರೆಯಾದ ಅದ್ಭುತ ಪ್ರತಿಭೆ ಬೆಳ್ಳಿ( ಭರತ್ ರಾಜ್)


ರಿಪ್ಪನ್ ಪೇಟೆ  ಪಟ್ಟಣದ ಮೇರಿ ಮಾತಾ ಪ್ರೌಢಶಾಲೆಯಲ್ಲಿ 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಈ ವಿದ್ಯಾರ್ಥಿ ಹಾರಂಬಳ್ಳಿ ಗ್ರಾಮದ ನಿವಾಸಿ ವಾಸುದೇವ್ ಎಂಬವರ ಪುತ್ರ ಭರತ್ ರಾಜ್ ಅಲಿಯಾಸ್ ಬೆಳ್ಳಿ ಎಂಬಾತ ತನ್ನ ಅದ್ಭುತ ಪ್ರತಿಭೆಯಿಂದ ರಿಪ್ಪನ್ ಪೇಟೆಯ ಮನೆಮಾತಾಗಿದ್ದ.

ಇತ್ತೀಚೆಗೆ ಆಕಸ್ಮಿಕವಾಗಿ ತಮ್ಮ ಮನೆಯ ಹತ್ತಿರ ಇರುವ ಕೃಷಿ ಹೊಂಡದಲ್ಲಿ ಕಾಲು ಜಾರಿ ಬಿದ್ದು ಬಾರದ ಲೋಕಕ್ಕೆ ಹೋಗಿದ್ದಾನೆ.ಇಡೀ ಶಾಲೆಯಲ್ಲಿ ಈತ ಅತ್ಯಂತ ಚಟುವಟಿಕೆಯಿಂದ ಇದ್ದ ವಿದ್ಯಾರ್ಥಿಯಾಗಿದ್ದ, ಎಲ್ಲಾ ಸ್ನೇಹಿತರ ಜೊತೆಗೆ ಉತ್ತಮ ಸಂಬಂಧ ಇಟ್ಟುಕೊಂಡು ಎಲ್ಲರ ಪ್ರೀತಿಗೆ ಪಾತ್ರನಾಗಿದ್ದ.




ಈತ ತನ್ನ ಪ್ರಾಥಮಿಕ ವಿದ್ಯಾಭ್ಯಾಸವನ್ನು ರಿಪ್ಪನ್ ಪೇಟೆಯ ಗುಡ್ ಶಫರ್ಡ್ ಶಾಲೆಯಲ್ಲಿ ಹಾಗೂ ಹೈಸ್ಕೂಲ್ ವಿದ್ಯಾಭ್ಯಾಸವನ್ನು ಮೇರಿ ಮಾತಾ ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ.ವಿಧಿಯ ಆಟಕ್ಕೆ ಬಲಿಯಾಗಿ ಅದ್ಭುತ ಪ್ರತಿಭೆ ಬಾಳಿ ಬೆಳಕಾಗ ಬೇಕಿದ್ದ ಈತನ ಜೀವನದಲ್ಲಿ ವಿಧಿರಾಯ ಕರೆದುಕೊಂಡು ಹೋದ.

ಈತನ ಪ್ರತಿಭೆಗೆ ಬೆರಗಾದವರು ಅಷ್ಟಿಷ್ಟಲ್ಲ. ಈತ ಪ್ರಾಥಮಿಕ ಶಾಲೆಯಲ್ಲಿ ತಾಲೂಕು ,ಜಿಲ್ಲೆ, ವಿಭಾಗಿಯ ಮಟ್ಟ ,ಹಾಗೂ ರಾಜ್ಯ ಮಟ್ಟದಲ್ಲಿ ಕಬ್ಬಡ್ಡಿ ಹಾಗೂ ವಾಲಿಬಾಲ್ ಪಂದ್ಯಾವಳಿಯಲ್ಲಿ ಅಪ್ರತಿಮ ಸಾಧನೆ ತೋರಿಸಿ ಶಾಲೆಗೆ, ಊರಿಗೆ ,ಶಿಕ್ಷಕರಿಗೆ ಕೀರ್ತಿ ತಂದ ಹೆಸರು ಈತನಿಗೆ ಸಲ್ಲುತ್ತದೆ.

ವೈಯಕ್ತಿಕವಾಗಿ ಈತ ಅತ್ಯಂತ ನಯ ,ವಿನಯ ಸೌಮ್ಯ ಗುಣ ರಕ್ತಗತವಾಗಿ ಬಂದಿದೆ. ಈತನ  ಮೃದು ಸ್ವಭಾವ ಎಲ್ಲರನ್ನು ಪ್ರೀತಿ ಕೊಡಿಸುವಂತೆ ಮಾಡಿದೆ. ಈತನ ಮರಣ ಇಡೀ ಶಾಲೆಗೆ, ಶಿಕ್ಷಕರಿಗೆ, ಕ್ರೀಡಾ ರಂಗಕ್ಕೆ, ತುಂಬಲಾರದ ನಷ್ಟವಾಗಿದೆ.ಚಿಗುರುವ ಕುಡಿ ಅರಳುವ ಮುನ್ನವೇ ಬಾಡಿ ಹೋಗಿದ್ದು ಇಡೀ ಕುಟುಂಬಕ್ಕೆ ನುಂಗಲಾರದ ತುತ್ತಾಗಿದೆ.

ಈತನ ಪ್ರೀತಿಗೆ ,ಇವನ ನಯ, ವಿನಯ ಗುಣಗಳಿಗೆ , ಶಿಕ್ಷಕರು ಸಾರ್ವಜನಿಕರು, ಅಕ್ಕಪಕ್ಕದವರು, ಇವನನ್ನು, ಪ್ರೀತಿಯಿಂದ” ಬೆಳ್ಳಿ ”ಎಂದು ಕರೆಯುತ್ತಿದ್ದರು.



Leave a Reply

Your email address will not be published. Required fields are marked *

Exit mobile version