Headlines

ಜ.18 ರಂದು ಕೆಂಚನಾಲದ ಮಾರಿಕಾಂಬ ದೇವಿಯ ಜಾತ್ರಾ ಮಹೋತ್ಸವ – ಜಾತ್ರಾ ಮಹೋತ್ಸವಕ್ಕೆ ಹರಿದು ಬರಲಿರುವ ಜನ ಸಾಗರ

ರಿಪ್ಪನ್‌ಪೇಟೆ : ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ರಿಪ್ಪನ್ ಪೇಟೆ ಸಮೀಪದ  ಇತಿಹಾಸ ಪ್ರಸಿದ್ದ ಕೆಂಚನಾಲದ ಮಾರಿಕಾಂಬ ದೇವಿಯ ಜಾತ್ರಾ ಮಹೋತ್ಸವವು ಜನವರಿ ೧೮ ರಂದು ಬುಧವಾರ ಮುಂಜಾನೆ ಬ್ರಾಹ್ಮಿ ಮೂಹರ್ತದಲ್ಲಿ ಆರಂಭಗೊಳ್ಳಲಿದೆ ಎಂದು ದೇವಸ್ಥಾನ ಸೇವಾ ಸಮಿತಿ ಅಧ್ಯಕ್ಷರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವರ್ಷದಲ್ಲಿ ಮಳೆಗಾಲದಲ್ಲಿ ಮಂಗಳವಾರ ಬೇಸಿಗೆಯಲ್ಲಿ ಬುಧವಾರದೊಂದು ಬರುವ ಕೆಂಚನಾಲ ಮಾರಿಕಾಂಬ ದೇವಿ ಜಾತ್ರಾ ಮಹೋತ್ಸವಕ್ಕೆ ಸಕಲ ಸಿದ್ದತೆಗಳು ಭರದಿಂದ ಸಾಗಿದೆ.ಜಮೀನಿನಲ್ಲಿ ಹಾಕಿರುವ ಬೆಳೆ ಸಂವೃದ್ದವಾಗಿ ಯಾವುದೇ ರೋಗ ಕಾಣಿಸಿಕೊಳ್ಳದಂತೆ ಸಂತಾನ ಭಾಗ್ಯ ಹಾಗೂ ಮದುವೆ ಯೋಗ ಹೀಗೆ ಹತ್ತು ಹಲವು ಬೇಡಿಕೆಯನ್ನು ಹೊತ್ತು ಮಳೆಗಾಲದ ಜಾತ್ರೆಯಲ್ಲಿ ಹರಿಕೆ ಮಾಡಿಕೊಂಡು ಬೇಸಿಗೆ ಜಾತ್ರೆಯಲ್ಲಿ ಹರಿಕೆ ತೀರಿಸಲು ಭಕ್ತ ಸಮೂಹ ಹರಿದು ಬರುವುದು ಇಲ್ಲಿನ ವಿಶೇಷವಾಗಿದೆ.

ಒಂದೇ ದಿನದಲ್ಲಿ ಸುಮಾರು ೨೫  ಸಾವಿರಕ್ಕೂ ಅಧಿಕ ಸಂಖ್ಯೆಯಲ್ಲಿ ಜಿಲ್ಲೆ ಹೊರ ಜಿಲ್ಲೆಗಳಿಂದ ಭಕ್ತರು ಬಂದು ದೇವಿಯ ದರ್ಶನಾರ್ಶೀವಾದ ಪಡೆಯುತ್ತಾರೆ  ಎಂದು ಶ್ರೀ ಮಾರಿಕಾಂಬ ದೇವಸ್ಥಾನ ಸಮಿತಿಯ ಕೆ. ಎಂ. ಬಸಪ್ಪ.ಪರಮೇಶ್ವರಪ್ಪ,ನಂಜುಂಡ , ಕರಿಬಸಪ್ಪ,ಚಂದ್ರಪ್ಪ,ಮಂಜಪ್ಪ, ಮಹಾಲಕ್ಷ್ಮಮಮ್ಮ, ಸರೋಜಮ್ಮ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

Exit mobile version