Headlines

ಸಾಹಿತ್ಯಕ ಚಟುವಟಿಕೆಗಳು ನಿರಂತರವಾಗಿ ನಡೆಯುವಂತಾಗಲಿ : ಶಾಸಕ ಹರತಾಳು ಹಾಲಪ್ಪ

ರಿಪ್ಪನ್ ಪೇಟೆ : ಕನ್ನಡದ ಭಾಷೆ ಮತ್ತು ಸಾಹಿತ್ಯಕ ಚಟುವಟಿಕೆಗಳನ್ನು ನಡೆಸಲು ಕನ್ನಡದ ಮನಸ್ಸುಗಳನ್ನು ಜೋಡಿಸಿ ಸಂಘಟನಾತ್ಮಕವಾಗಿ ಕಾರ್ಯನಿರ್ವಹಿಸಬೇಕಾಗುತ್ತದೆ. ಈ ನಿಟ್ಟಿನಲ್ಲಿ ಹೊಸನಗರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ನೂತನ ಅಧ್ಯಕ್ಷ ತ.ಮ.ನರಸಿಂಹರವರು ಪ್ರಯತ್ನಿಸಿ ಕಾರ್ಯಚಟುವಟಿಕೆ ನಡೆಸಲಿ ಎಂದು ಮಾಜಿ ಸಚಿವ ಹಾಗೂ ಸಾಗರ ಕ್ಷೇತ್ರದ ಶಾಸಕ ಹಾಲಪ್ಪ ಹರತಾಳುರವರು ಹೇಳಿದರು.  ಅವರು ಇಂದು ರಿಪ್ಪನ್ ಪೇಟೆಯಲ್ಲಿ ಹೊಸನಗರ ತಾಲೂಕು  ಕನ್ನಡ ಸಾಹಿತ್ಯ ಪರಿಷತ್ತಿನ ನೂತನ ಅಧ್ಯಕ್ಷ ತ.ಮ.ನರಸಿಂಹರವರನ್ನು ಅವರ ಮನೆಯಂಗಳದಲ್ಲಿ ಸನ್ಮಾನಿಸಿ, ಗೌರವಿಸಿದರು. ಕನ್ನಡದ ಚಟುವಟಿಕೆಗಳು…

Read More

ಶಾಸಕ ಹಾಲಪ್ಪರಿಂದ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಕಾಮಗಾರಿ ವೀಕ್ಷಣೆ

ರಿಪ್ಪನ್ ಪೇಟೆ : ಸಾಗರ ಹೊಸನಗರ ಕ್ಷೇತ್ರದ ವಿಧಾನಸಭಾ ಸದಸ್ಯ ಹಾಗೂ ಎಂಎಸ್ಐಎಲ್ ಅಧ್ಯಕ್ಷ ಹರತಾಳು ಹಾಲಪ್ಪ ಇಂದು ರಿಪ್ಪನ್ ಪೇಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ  ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು ಹಾಗೂ ಕಾಮಗಾರಿಯನ್ನು ವೀಕ್ಷಣೆ ಮಾಡಿದರು.  ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಕೆರೆಹಳ್ಳಿ  ಹೋಬಳಿಯಲ್ಲಿ ಈಗಾಗಲೇ 200 ಕೋಟಿಗೂ ಅಧಿಕ  ಅಭಿವೃದ್ಧಿ ಕಾಮಗಾರಿಗಳು ನೆರವೇರಿದ್ದು ಈಗಾಗಲೇ  ಕೆಲವು ಕಾಮಗಾರಿಗಳು ಪೂರ್ಣಗೊಂಡಿದ್ದು ಕೆಲವು ಕಾಮಗಾರಿಗಳು ಪ್ರಗತಿಯಲ್ಲಿವೆ. ರಿಪ್ಪನ್ ಪೇಟೆ ಯ ಸರಕಾರಿ ಪ್ರಥಮದರ್ಜೆ  ಕಾಲೇಜಿನಿಂದ  ವಿನಾಯಕ ವೃತ್ತದವರೆಗೆ…

Read More

ಕೊಡಚಾದ್ರಿ ತಪ್ಪಲಿನಲ್ಲೊಬ್ಬ ಭ್ರಷ್ಟ ಪಿಡಿಒ : ಹಣ ಕೊಟ್ಟರೆ ಗ್ರಾಮ ಪಂಚಾಯತ್ ಕೂಡ ಮಾರಾಟ ಮಾಡುವಂತಹ ಭಂಡ ಪಿಡಿಒ

ಹೊಸನಗರ ತಾಲ್ಲೂಕಿನಲ್ಲಿ ಭೂ ಅಕ್ರಮ ಒತ್ತುವರಿದಾರರ ಚಟುವಟಿಕೆಗಳು ಎಗ್ಗಿಲ್ಲದೇ ನಡೆಯುತ್ತಿದ್ದು, ಕೆಲವು ಕಡೆಗಳಲ್ಲಿ ಅಧಿಕಾರಿಗಳೇ ಭೂ ಅಕ್ರಮ ಕಬಳಿಕೆಗೆ ಸಾಥ್ ನೀಡುತ್ತಾ ಸಾರ್ವಜನಿಕರಿಗೆ, ಸರ್ಕಾರಕ್ಕೆ ವಂಚನೆ ಮಾಡುತ್ತಿರುವುದು ವಿಪರ್ಯಾಸದ ಸಂಗತಿ. ಇತ್ತೀಚೆಗೆ ತಾಲ್ಲೂಕಿನ ಮೂಡುಗೊಪ್ಪ ಗ್ರಾಮ ಪಂಚಾಯ್ತಿಯ ಪಿಡಿಓ ಹಣದಾಸೆಗೆ ಬಿದ್ದು, ಬದುಕಿದ್ದವರೇ ಸತ್ತಿದ್ದಾರೆಂದು ವರದಿ ನೀಡಿ ಯಾರದ್ದೋ ಆಸ್ತಿಯನ್ನು ಮತ್ಯಾರಿಗೋ ಬರೆದುಕೊಟ್ಟಿದ್ದನ್ನು ಕೆಲ ಮಾಧ್ಯಮಗಳು ವರದಿ ಮಾಡಿತ್ತು. ಇದೀಗ ಅಂತಹದ್ದೇ ಮತ್ತೊಂದು ಘಟನೆ ಬೆಳಕಿಗೆ ಬಂದಿದ್ದು, ಈ ಅಕ್ರಮವನ್ನೂ ಕೂಡಾ ಅದೇ ಪಿಡಿಓ ಮಾಡಿದ್ದಾರೆ ಎನ್ನಲಾಗುತ್ತಿದೆ….

Read More

ರಿಪ್ಪನ್ ಪೇಟೆ : ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿರುವ ಶಾಸಕ ಹರತಾಳು ಹಾಲಪ್ಪ

ರಿಪ್ಪನ್ ಪೇಟೆ : ಸಾಗರ – ಹೊಸನಗರ ವಿಧಾನಸಭಾ ಕ್ಷೇತ್ರದ ಶಾಸಕರು ಮತ್ತು ಎಂಎಸ್ ಐಎಲ್ ಅಧ್ಯಕ್ಷರಾದ ಹರತಾಳು ಹಾಲಪ್ಪ ರವರು ಗುರುವಾರ ಕೆರೆಹಳ್ಳಿ ಹೋಬಳಿಯಾದ್ಯಂತ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಕಾರ್ಯಕ್ರಮಗಳ ಪಟ್ಟಿ : 10:00 AM:- ರಿಪ್ಪನಪೇಟೆ ಗ್ರಾ.ಪಂ, ಕುಕ್ಕಳಲೆ ರಸ್ತೆಯಿಂದ ನಿಂಗಪ್ಪ ಪುರುಷೋತ್ತಮ ಮನೆಯವರೆಗಿನ ಎಸ್.ಸಿ ಕಾಲೋನಿ ರಸ್ತೆ ಅಭಿವೃದ್ಧಿ ಕಾಮಗಾರಿ ವೀಕ್ಷಣೆ. (20 ಲಕ್ಷ) 10:30 AM:- ತಮ್ಮಡಿಕೊಪ್ಪ ಧನಂಜಯ್ ಇವರ ಮನೆ ಭೇಟಿ. 11:00…

Read More

ರಿಪ್ಪನ್ ಪೇಟೆ ಸರ್ಕಾರಿ ಆಸ್ಪತ್ರೆಯ ಕರ್ಮಕಾಂಡ, ಶುಶ್ರೂಷಕಿಯರಿಗೆ ವೈದ್ಯರಿಂದ ಮಾನಸಿಕ ಕಿರುಕುಳ : ಗ್ರಾಮ ಪಂಚಾಯಿತಿಗೆ ದೂರು……!!!!!

ರಿಪ್ಪನ್ ಪೇಟೆ : ಇಲ್ಲಿನ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರಾದ  ಡಾ. ಆಂಜನೇಯರವರು ನಮಗೆ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಶುಶ್ರೂಷಕಿಯರು ಗ್ರಾಮ ಪಂಚಾಯತ್ ನ ಆರೋಗ್ಯ ರಕ್ಷಾ ಸಮಿತಿಗೆ ದೂರು ನೀಡಿರುವ ಘಟನೆ ಇಂದು ನಡೆದಿದೆ. ಆಸ್ಪತ್ರೆಯ ವೈದ್ಯರು ಹೆಚ್ಚುವರಿ ಕೆಲಸ ನೀಡಿದಾಗ ವಿರೋದ ವ್ಯಕ್ತಪಡಿಸಿದರೆ ಏಕವಚನದಲ್ಲಿ ನಿಂದಿಸುವುದಲ್ಲದೇ ಸಾರ್ವಜನಿಕರ ಸಮ್ಮುಖದಲ್ಲಿ ಅಗೌರವ ಸೂಚಕ ಪದದಲ್ಲಿ ನಿಂದಿಸಿ,ಸಂಬಳ ಹಾಜರಾತಿಗೆ ಸಹಿ ಹಾಕುವುದಿಲ್ಲ ಎಂದು ಬೆದರಿಕೆ ಹಾಕುವ ಮೂಲಕ ಮಾನಸಿಕ ಕಿರುಕುಳ ನೀಡುತಿದ್ದಾರೆ. ಆದ್ದರಿಂದ ಗ್ರಾಮ…

Read More

ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಪುತ್ರಿ ರಾಜನಂದಿನಿಗೆ ಕೊಲೆ ಬೆದರಿಕೆ!!!!! ನಿಜವಾಗಲೂ ನಡೆದಿದ್ದೇನು ಗೊತ್ತಾ??? ಈ ಸುದ್ದಿ ನೋಡಿ

ಸಾಗರ:ಕಾಂಗ್ರೆಸ್ ಹಿರಿಯ ಮುಖಂಡ ಮಾಜಿ ಸಚಿವ.ಮಾಜಿ ವಿಧಾನಸಭಾಧ್ಯಕ್ಷ ಕಾಗೋಡು ತಿಮ್ಮಪ್ಪರವರ ಪುತ್ರಿ ರಾಜನಂದಿನಿಗೆ ಕೊಲೆ ಬೆದರಿಕೆ ಹಾಕಿ ಅವರ ಕಾರು ಚಾಲಕನಿಗೆ ಹಲ್ಲೆ ಮಾಡಲು ಯತ್ನಿಸಿದ ಘಟನೆ ಸಾಗರ ತಾಲೂಕಿನಲ್ಲಿ ನಡೆದಿದೆ. ಈ ಘಟನೆ ಮಂಜು ಅಂಡ್ ಟೀಂ ನಿಂದ ನಡೆದಿದೆ.ಎಂದು ತಿಳಿದು ಬಂದಿದೆ. ರಾಜನಂದಿನಿ ಅವರ ಕಾರು ಚಾಲಕ ಪ್ರಕಾಶ್ ಎಂಬುವರಿಗೆ ಅಡ್ಡಕಟ್ಟಿ, ಅವರಿಗೆ ಧಮ್ಕಿ ಹಾಕಿ ರಾಜನಂದಿನಿರವರನ್ನು ಮುಗಿಸುವುದಾಗಿ ಬೆದರಿಕೆ ಹಾಕಿದ್ದಾನೆ. ಅಲ್ಲದೆ ಪ್ರಕಾಶ್ ಕಾರನ್ನು ತ್ಯಾಗರ್ತಿಯಿಂದ ಮಳ್ಳಾ ಕ್ರಾಸ್ ವರೆಗೆ ಹಿಂಬಾಲಿಸಿಕೊಂಡು ಬಂದಿರುವ ಪ್ರಸಂಗ ವರದಿಯಾಗಿದೆ….

Read More

ಮಂಗನಕಾಯಿಲೆಗೆ ಗ್ರಾಮಪಂಚಾಯಿತಿ ಸದಸ್ಯ ಬಲಿ!!!

ಸಾಗರ :  ತಾಲ್ಲೂಕಿನ ಅರಳಗೋಡಿನಲ್ಲಿ ಮಂಗನ ಕಾಯಿಲೆಗೆ ಅಲ್ಲಿನ ಗ್ರಾಮಪಂಚಾಯ್ತಿ ಸದಸ್ಯರೊಬ್ಬರು ಸಾವನ್ನಪ್ಪಿದ್ದಾರೆ. 55 ವರ್ಷದ ರಾಮಸ್ವಾಮಿ ಕರುಮನೆ ಎಂಬುವರು ಮೃತರು. ಕಳೆದ ಎಪ್ರಿಲ್​ 24 ರಂದು ಇವರಿಗೆ ಜ್ವರ ಕಾಣಿಸಿಕೊಂಡಿತ್ತು. ಹೀಗಾಗಿ ಸಾಗರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.  ಜ್ವರ ಇನ್ನೂ ಹೆಚ್ಚಾದ ಕಾರಣ ಹೀಗಾಗಿ ಮಣಿಪಾಲದ ಕಸ್ತೂರಿಬಾ ಆಸ್ಪತ್ರೆಗೆ ರವಾನಿಸಲಾಗಿತ್ತು. ಅಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರಾಮಸ್ವಾಮಿಯವರು ಇಂದು  ಮಧ್ಯಾಹ್ನ ದ  ಸುಮಾರಿಗೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.

Read More

ರಿಪ್ಪನ್ ಪೇಟೆ ಯಲ್ಲಿ ಸಡಗರ-ಸಂಭ್ರಮದಿಂದ ರಂಜಾನ್ ಆಚರಣೆ : ಪರಸ್ಪರ ಸಾಮರಸ್ಯದಿಂದ ಸಮಾಜದಲ್ಲಿ‌ನೆಮ್ಮದಿ ಸಾಧ್ಯ : ಮುನೀರ್ ಸಖಾಫ಼ಿ

ರಿಪ್ಪನ್ ಪೇಟೆ : ಪಟ್ಟಣದ ಮೊಹಿಯುದ್ದೀನ್ ಜುಮ್ಮಾ ಮಸೀದಿ ಹಾಗೂ ಮೆಕ್ಕಾ ಮಸ್ಜಿದ್ ನ ಮುಸ್ಲಿಂ ಬಾಂಧವರುಗಳು ಧರ್ಮಗುರುಗಳಾದ  ಮುನೀರ್ ಸಖಾಫಿ ಮತ್ತು ಮೆಹಬೂಬ್ ಆಲಾಮ್ ರವರ ನೇತೃತ್ವದಲ್ಲಿ  ರಂಜಾನ್ ಹಬ್ಬವನ್ನು ಸಡಗರ ಹಾಗೂ ಸಂಭ್ರಮದಿಂದ ಆಚರಿಸಿದರು. ಹೊಸನಗರ ರಸ್ತೆಯಿಂದ ಮೆರವಣಿಗೆ ಹೊರಟು ಸಾಗರ ರಸ್ತೆಯಲ್ಲಿರುವ ಈದ್ಗಾ ಮೈದಾನಕ್ಕೆ ತೆರಳಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.  ಕಳೆದ ಒಂದು ತಿಂಗಳಿನಿಂದ ಉಪವಾಸ ಹಾಗೂ ಧಾರ್ಮಿಕ ಆಚರಣೆಗಳ ವಿಧಿವಿಧಾನಗಳನ್ನು ಪಾಲಿಸಿದ ಅವರುಗಳು ಸೋಮವಾರ ಚಂದ್ರನ ದರ್ಶನ ಆದ ಹಿನ್ನೆಲೆಯಲ್ಲಿ  ಇಂದು…

Read More

ರಿಪ್ಪನ್ ಪೇಟೆಯ ಬಿಬಿಎ,ಬಿ.ಕಾಂ ವಿದ್ಯಾರ್ಥಿಗಳಿಗೆ ಇನ್ಫೋಸಿಸ್ ಸಂಸ್ಥೆಯಿಂದ ಸನ್ಮಾನ :

ರಿಪ್ಪನ್ ಪೇಟೆ : ಹೋಬಳಿ ಮಟ್ಟದ ಕಾಲೇಜಿನ ವಿದ್ಯಾರ್ಥಿಗಳು ದೇಶದ ಪ್ರತಿಷ್ಠಿತ ಕಾಲೇಜುಗಳನ್ನು ಹಿಂದೆ ಸರಿಸಿ ತಮ್ಮ ಅವಿರತ ಪರಿಶ್ರಮದಿಂದ ಇಂದು ರಾಷ್ಟ್ರ ಮಟ್ಟದ ಲೀಡರ್ ಬೊರ್ಡ ನಲ್ಲಿ 10 ರಲ್ಲಿ 6 ಸ್ಥಾನಗಳನ್ನು ಅಂದರೆ ಶೇಕಡಾ ಅರವತ್ತು ಸ್ಥಾನವನ್ನು ಬಾಚಿಕೊಂಡಿದ್ದರು. ಇಂದಿನ Ultra Technical ಯುಗದಲ್ಲಿ ಕಂಪನಿಗಳಿಗೆ ಬೇಕಾದಂತಹ ಟೆಕ್ನಾಲಜಿ ಗಳನ್ನು ಕಲಿಸುವ ವಿದ್ಯಾರ್ಥಿಗಳನ್ನು Industry ready ಅಥವಾ Job ready ಮಾಡುವ ಉದ್ದೇಶದಿಂದ ಕಾಲೇಜು ಶಿಕ್ಷಣ ಇಲಾಖೆ ಮತ್ತು ಇನ್ಫೋಸಿಸ್ ಸಹಯೋಗದಲ್ಲಿ ನಡೆಯುತ್ತಿರುವ ಡಿಜಿಟಲ್…

Read More

ನಾಪತ್ತೆಯಾಗಿದ್ದ ವ್ಯಕ್ತಿ ಶವವಾಗಿ ಪತ್ತೆ : ಅನೈತಿಕ ಸಂಬಂಧ ಬಯಲಾಗುವ ಭಯಕ್ಕೆ ಸ್ನೇಹಿತನನ್ನೆ ಕೊಲೆ ಮಾಡಿ ಹೊಳೆಗೆ ಬಿಸಾಡಿದ !!!!!!!!!

ಜಮೀನು ಕೆಲಸಕ್ಕೆಂದು ಹೋದ ವ್ಯಕ್ತಿ ನಾಪತ್ತೆಯಾಗಿದ್ದ ಪ್ರಕರಣ ಹೊಸ ತಿರುವು ಪಡೆದುಕೊಂಡು ಕೊಲೆ ಪ್ರಕರಣವಾಗಿರುವ ಘಟನೆ ಸೊರಬ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಘಟನೆಯ ಹಿನ್ನಲೆ : ಏ.11 ರಂದು ಮನ್ಮನೆ ನಿವಾಸಿ ಲೇಖಪ್ಪ(36) ಜಮೀನು ಕೆಲಸಕ್ಕೆಂದು ಹೋದವನು ಮನೆಗೆ ವಾಪಾಸ್ ಬಾರದ ಹಿನ್ನಲೆಯಲ್ಲಿ ಏ.14ರಂದು ಸೊರಬ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣವೊಂದು ದಾಖಲಾಗಿತ್ತು. ಇಂದು ಕಡಸೂರು ಗ್ರಾಮದ ಹೊಳೆಯ ಸಮೀಪ ಲೇಖಪ್ಪನ ಮೃತದೇಹ ಪತ್ತೆಯಾಗಿದೆ. ಈ ಬಗ್ಗೆ ಲೇಖಪ್ಪನ ಸಹೋದರ ಗ್ರಾಮದಲ್ಲಿ ರಾಜಕೀಯ ವಿಚಾರವಾಗಿ ದ್ವೇಷ…

Read More
Exit mobile version