ರಿಪ್ಪನ್ ಪೇಟೆ : ಹೋಬಳಿ ಮಟ್ಟದ ಕಾಲೇಜಿನ ವಿದ್ಯಾರ್ಥಿಗಳು ದೇಶದ ಪ್ರತಿಷ್ಠಿತ ಕಾಲೇಜುಗಳನ್ನು ಹಿಂದೆ ಸರಿಸಿ ತಮ್ಮ ಅವಿರತ ಪರಿಶ್ರಮದಿಂದ ಇಂದು ರಾಷ್ಟ್ರ ಮಟ್ಟದ ಲೀಡರ್ ಬೊರ್ಡ ನಲ್ಲಿ 10 ರಲ್ಲಿ 6 ಸ್ಥಾನಗಳನ್ನು ಅಂದರೆ ಶೇಕಡಾ ಅರವತ್ತು ಸ್ಥಾನವನ್ನು ಬಾಚಿಕೊಂಡಿದ್ದರು.
ಇಂದಿನ Ultra Technical ಯುಗದಲ್ಲಿ ಕಂಪನಿಗಳಿಗೆ ಬೇಕಾದಂತಹ ಟೆಕ್ನಾಲಜಿ ಗಳನ್ನು ಕಲಿಸುವ ವಿದ್ಯಾರ್ಥಿಗಳನ್ನು Industry ready ಅಥವಾ Job ready ಮಾಡುವ ಉದ್ದೇಶದಿಂದ ಕಾಲೇಜು ಶಿಕ್ಷಣ ಇಲಾಖೆ ಮತ್ತು ಇನ್ಫೋಸಿಸ್ ಸಹಯೋಗದಲ್ಲಿ ನಡೆಯುತ್ತಿರುವ ಡಿಜಿಟಲ್ ಸರ್ಟಿಫಿಕೇಟ್ ಕೋರ್ಸ್ ಗಳ
February 2022 ತಿಂಗಳ ಇನ್ಪೋಸಿಸ್ ಸ್ಪ್ರಿಂಗ್ ಬೋರ್ಡ್ ನಲ್ಲಿ ಅತಿ ಹೆಚ್ಚು ಅಂಕಗಳಿಸಿ ಅಖಿಲ ಭಾರತ ಸ್ಪರ್ಧೆಯಲ್ಲಿ ಕರ್ನಾಟಕದ ರಿಪ್ಪನ್ ಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಅಪೂರ್ವ ಸಾಧನೆಯನ್ನು ಮೆರೆದಿದ್ದರು.
ಇನ್ಫೋಸಿಸ್ ಸ್ಪ್ರಿಂಗ್ ಬೋರ್ಡ್ ಬೋರ್ಡ್ ಪ್ರತಿ ತಿಂಗಳು ಪ್ರಕಟಿಸುವ ಲಿಡರ್ ಬೋರ್ಡ್ ನಲ್ಲಿ ಕಾಲೇಜಿನ ಆರು ವಿದ್ಯಾರ್ಥಿಗಳು ಸ್ಥಾನ ಪಡೆದಿದ್ದರು.
1. ದ್ವೀತಿಯ ಬಿಬಿಎ ವಿದ್ಯಾರ್ಥಿನಿ ಚೈತ್ರ ಕೆ.ಸಿ ಒಟ್ಟು 300 ಸರ್ಟಿಫಿಕೇಟ್ ಗಳಿಸಿ 4000 ಅಂಕಗಳನ್ನು ಪಡೆದು ದೇಶದಲ್ಲೇ ಮೂರನೇ ಸ್ಥಾನ ಪಡೆದಿದ್ದಾರೆ.
2.ದ್ವೀತಿಯ ಬಿ.ಕಾಂ ವಿದ್ಯಾರ್ಥಿ ನವೀನ್. ಎನ್ ಒಟ್ಟು 265 ಸರ್ಟಿಫಿಕೇಟ್ ಗಳಿಸಿ 3600 ಅಂಕಗಳನ್ನು ಪಡೆದು ದೇಶದಲ್ಲೇ ನಾಲ್ಕನೆ ಸ್ಥಾನ ಪಡೆದಿದ್ದಾರೆ.
3.ಅಂತಿಮ ಬಿ.ಕಾಂ ವಿದ್ಯಾರ್ಥಿ ಮಾನಸ.ಕೆ.ಎಂ ಒಟ್ಟು 245 ಸರ್ಟಿಫಿಕೇಟ್ ಗಳಿಸಿ 3100 ಅಂಕಗಳನ್ನು ಪಡೆದು ದೇಶದಲ್ಲೇ ಏಳನೇ ಸ್ಥಾನ ಪಡೆದಿದ್ದಾರೆ.
4.ಪ್ರಥಮ ಬಿಕಾಂ ವಿದ್ಯಾರ್ಥಿ ನಿರಂಜನ್ ಒಟ್ಟು 256 ಸರ್ಟಿಫಿಕೇಟ್ ಗಳಿಸಿ 2700 ಅಂಕಗಳನ್ನು ಪಡೆದು ದೇಶದಲ್ಲೇ ಆರನೇ ಸ್ಥಾನ ಪಡೆದಿದ್ದಾರೆ.
5.ದ್ವೀತಿಯ ಬಿಬಿಎ ವಿದ್ಯಾರ್ಥಿ ತೀರ್ಥೇಶ್.ಟಿ ಒಟ್ಟು 213 ಸರ್ಟಿಫಿಕೇಟ್ ಗಳಿಸಿ 3000 ಅಂಕಗಳನ್ನು ಪಡೆದು ದೇಶದಲ್ಲೇ ಎಂಟನೇ ಸ್ಥಾನ ಪಡೆದಿದ್ದಾರೆ.
6.ದ್ವೀತಿಯ ಬಿಬಿಎ ವಿದ್ಯಾರ್ಥಿನಿ ನಿಸರ್ಗ ಒಟ್ಟು 212 ಸರ್ಟಿಫಿಕೇಟ್ ಗಳಿಸಿ 2600 ಅಂಕಗಳನ್ನು ಪಡೆದು ದೇಶದಲ್ಲೇ ಹತ್ತನೆ ಸ್ಥಾನ ಪಡೆದಿದ್ದಾರೆ.
ಈ ಸಾಧಕರ ಸಾಧನೆಯನ್ನು ಗುರುತಿಸಿ ಇನ್ಫೋಸಿಸ್ ಸಂಸ್ಥೆಯು ಸನ್ಮಾನಿಸಿ ಮುಂದಿನ ದಿನಗಳಲ್ಲಿ ಇನ್ನಷ್ಟು ಕೊರ್ಸ ಗಳನ್ನು ಮಾಡಿ ಉತ್ತಮ ಉದ್ಯೋಗ ಪಡೆದುಕೊಳ್ಳುವ ನಿಟ್ಟಿನಲ್ಲಿ ಯಶಸ್ವಿಯಾಗಿ ಎಂದು ಅಭಿನಂದಿಸಿದ್ದಾರೆ.
ವಿದ್ಯಾರ್ಥಿಗಳ ಈ ಅಭೂತಪೂರ್ವ ಸಾಧನೆಗೆ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಚಂದ್ರಶೇಖರ್ ಮತ್ತು ಪ್ಲೇಸ್ಮೆಂಟ್ ಮುಖ್ಯಸ್ಥರಾದ ಡಾ.ರವೀಶ್ ಮತ್ತು ಎಲ್ಲಾ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಅಭಿನಂದಿಸಿದ್ದಾರೆ.