Headlines

ಹೊನ್ನಾಳಿ ಶಾಸಕ ರೇಣುಕಾಚಾರ್ಯ ಸಹೋದರನ ಮಗ ನಾಪತ್ತೆ ಪ್ರಕರಣ : ಕಾರು ತುಂಗಾ ಕಾಲುವೆಯಲ್ಲಿ ಬಿದ್ದಿರುವ ಶಂಕೆ|honnali

ಹೊನ್ನಾಳಿ ಕ್ಷೇತ್ರದ ಶಾಸಕ ಎಂ.ಪಿ. ರೇಣುಕಾಚಾರ್ಯ ಸೋದರ ಪುತ್ರ ನಾಪತ್ತೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಚಂದ್ರಶೇಖರ್ ಕಾರು ತುಂಗಾ ಕಾಲುವೆಗೆ ಬಿದ್ದಿರುವ ಶಂಕೆ ವ್ಯಕ್ತವಾಗಿದೆ. ಹೌದು, ಕಳೆದ ಐದು ದಿನಗಳಿಂದ ನಾಪತ್ತೆಯಾಗಿರುವ ಚಂದ್ರಶೇಖತ್ ಪತ್ತೆಗೆ ಪೊಲಿಸರು ತೀವ್ರ ಹುಡುಕಾಟ ನಡೆಸಿದ್ದು, ಇದೀಗ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಹೊನ್ನಾಳಿ ತಾಲೂಕಿನ ಕಡದಕಟ್ಟೆ ಗ್ರಾಮದ ತುಂಗಾ ಕಾಲುವೆ ಬಳಿ ಚಂದ್ರಶೇಖರ್ ಕಾರು ಸಂಚರಿಸಿದೆ ಎಂಬ ಕುರುಹು ಪತ್ತೆಯಾಗಿದೆ. ಈ ಹಿನ್ನೆಲೆ ಪೊಲೀಸರು ಚಂದ್ರಶೇಖರ್ ಕಾರು ತುಂಗಾ ಕಾಲುವೆಗೆ…

Read More

ಕಾಸ್ಪಾಡಿ ತಿರುವಿನಲ್ಲಿ ಬೈಕ್ ಅಪಘಾತ : ಸವಾರ ಸ್ಥಳದಲ್ಲೇ ಸಾವು|Accident

ಸಾಗರ : ಬೈಕ್ ಅಪಘಾತದಲ್ಲಿ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಸಾಗರ ತಾಲೂಕಿನ ಕಾಸ್ಪಾಡಿ ಗ್ರಾಮದಲ್ಲಿ ನಡೆದಿದೆ. ಶಿವಮೊಗ್ಗ ತಾಲ್ಲೂಕಿನ ಹಾರನಹಳ್ಳಿ ಗ್ರಾಮದ ಹರೀಶ್ ಕುಮಾರ್ (42) ಎಂಬುವರು ಮೃತಪಟ್ಟ ದುರ್ಧೈವಿಯಾಗಿದ್ದಾರೆ. ಸಹೋದರಿಯ ಮನೆಗೆ ಹೋಗಿ ವಾಪಾಸ್ ಮನೆಗೆ ಬೈಕ್ ನಲ್ಲಿ ಮರಳುವಾಗ ಕಾಸ್ಪಾಡಿ ತಿರುವಿನಲ್ಲಿ ಬೈಕ್ ಮೇಲಿನ ನಿಯಂತ್ರಣ ಕಳೆದುಕೊಂಡು ಉರುಳಿ ಬಿದ್ದಿದ್ದಾರೆ.ತೀವ್ರ ಸ್ವರೂಪದ ಗಾಯವಾಗಿದ್ದರಿಂದ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಈ ಕುರಿತು ಸಾಗರ ಗ್ರಾಮಾಂತರ ಬುಧವಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಶಿಕ್ಷಣ ಕ್ಷೇತ್ರದಲ್ಲಿ ಶಿಕ್ಷಕರ ಪಾತ್ರವೂ ಅದ್ವಿತೀಯವಾದದ್ದು- : ಪ್ರದೀಪ್ ಎಸ್ ಹೆಬ್ಬೂರ್|Shivamogga

ಶಿವಮೊಗ್ಗ: ಪುರದಾಳ್ ಗ್ರಾಮ ಪಂಚಾಯತ್ ಆವರಣದಲ್ಲಿ ಗ್ರಾಮ ಪಂಚಾಯಿತಿ ವತಿಯಿಂದ ಕನ್ನಡ ರಾಜ್ಯೋತ್ಸವ       ಪ್ರತಿಭಾ ಪುರಸ್ಕಾರ ಗುರುವಂದನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು,  ಗ್ರಾಮ ಪಂಚಾಯಿತಿ ಅನುದಾನದಡಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಫಲಾನುಭವಿಗಳಿಗೆ ಸೌಲಭ್ಯ ವಿತರಣೆ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ  2021-22ನೇ  ಸಾಲಿನಲ್ಲಿ     ಎಸ್ ಎಸ್ ಎಲ್ ಸಿ ಮತ್ತು ದ್ವಿತೀಯ ಪಿಯುಸಿ     ಯಲ್ಲಿ ಶೇಕಡಾ 90ಕ್ಕಿಂತ  ಹೆಚ್ಚಿನ ಅಂಕ ಪಡೆದ ಮತ್ತು ಕ್ರೀಡೆಯಲ್ಲಿ ರಾಜ್ಯವನ್ನು ಪ್ರತಿನಿಧಿಸಿದ ವಿದ್ಯಾರ್ಥಿನಿಗೆ ಅಭಿನಂದನೆ…

Read More

ಈಶ್ವರಪ್ಪ ರಾಜಕೀಯ ದಾಹಕ್ಕೆ ಇನ್ನೆಷ್ಟು ಅಮಾಯಕ ಯುವಕರ ಹೆಣ ಬೀಳಬೇಕು|Shivamogga

ಶಿವಮೊಗ್ಗ : ಮಾಜಿ ಸಚಿವ ಈಶ್ವರಪ್ಪ ನಾಲಗೆ ಬಿಗಿ ಹಿಡಿದು ಮಾತನಾಡಬೇಕು. ಇವರ ರಾಜಕೀಯ ದಾಹಕ್ಕೆ ಇನ್ನೆಷ್ಟು ಅಮಾಯಕ ಯುವಕರ ಹೆಣ ಬೀಳಬೇಕು ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹೆಚ್.ಎಸ್‌.ಸುಂದರೇಶ್ ಪ್ರಶ್ನಿಸಿದರು.  ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹೆಚ್.ಎಸ್.ಸುಂದರೇಶ್ ಅವರು, ಡಿ.ಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರಿಂದ ಕೋಮು ಗಲಭೆ ಆಗುತ್ತಿದೆ ಎಂದು ಈಶ್ವರಪ್ಪ ಆರೋಪಿಸಿದ್ದಾರೆ. ತಮ್ಮ ಹೇಳಿಕೆಗಳ ಮೂಲಕ ಈಶ್ವರಪ್ಪ ಅವರೆ ಯುವಕರನ್ನು ಪ್ರಚೋದಿಸುತ್ತಿದ್ದಾರೆ. ಇತಿಹಾಸದ ಅಧ್ಯಯನ ಇಲ್ಲದ ಯುವಕರು ಅವರು ಮಾತು ನಂಬುತ್ತಿದ್ದಾರೆ. ಶಿವಮೊಗ್ಗದಲ್ಲಿ ಪದೇ ಪದೆ ನಿಷೇಧಾಜ್ಞೆ ಜಾರಿಗೊಳಿಸಲಾಗುತ್ತಿದೆ….

Read More

ರಿಪ್ಪನ್‌ಪೇಟೆಯಲ್ಲಿ ಕೆಂಪೇಗೌಡ ಪವಿತ್ರ ಮೃತ್ತಿಕೆ ಸಂಗ್ರಹಣಾ ಅಭಿಯಾನ ರಥಕ್ಕೆ ಅದ್ದೂರಿ ಸ್ವಾಗತ|Ripponpet

ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನವೆಂಬರ್ 11 ರಂದು ಪ್ರಧಾನಿ ನರೇಂದ್ರ ಮೋದಿ ಅವರು 108 ಅಡಿಯ ಕೆಂಪೇಗೌಡರ ಕಂಚಿನ ಪ್ರತಿಮೆಯನ್ನು ಅನಾವರಣ ಮಾಡಲಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರತಿ ಗ್ರಾಪಂ ವ್ಯಾಪ್ತಿಯಲ್ಲಿ ಪ್ರಸಿದ್ಧ ದೇವಾಲಯಗಳು, ಪ್ರಸಿದ್ಧ ಸ್ಥಳಗಳಿಂದ ಪವಿತ್ರವಾದ ಮಣ್ಣನ್ನು ಸಂಗ್ರಹಿಸಲಾಗುತ್ತದೆ. ಅದನ್ನು ಕೆಂಪೇಗೌಡರ ಪುತ್ಥಳಿ ಕೆಳಗೆ ಇಡಲಾಗುವುದು. ಈ ಕಾರ್ಯಕ್ರಮವು ಸರ್ಕಾರದ ವತಿಯಿಂದ ನಡೆಯುತ್ತಿದ್ದು, ಪಕ್ಷಾತೀತವಾಗಿ, ಜಾತ್ಯತೀತವಾಗಿ ನಡೆಯುತ್ತಿದೆ. ಮೃತ್ತಿಕೆ ಸಂಗ್ರಹ ಅಭಿಯಾನ ರಥವು ರಿಪ್ಪನ್‌ಪೇಟೆ ಪಟ್ಟಣಕ್ಕೆ ಆಗಮಿಸುತ್ತಿದ್ದಂತೆಯೇ ತಾಲ್ಲೂಕು ಒಕ್ಕಲಿಗ ಸಂಘದ ಅಧ್ಯಕ್ಷ…

Read More

ರಿಪ್ಪನ್‌ಪೇಟೆ : ಅದ್ಧೂರಿ ಕನ್ನಡ ರಾಜ್ಯೋತ್ಸವ ಸಂಭ್ರಮಕ್ಕೆ ಮೆರುಗು ನೀಡಿದ ಜಾನಪದ ಕಲಾ ಪ್ರಕಾರ|Ripponpet

ರಿಪ್ಪನ್‌ಪೇಟೆ: ಪಟ್ಟಣದ  ಕಸ್ತೂರಿ ಕನ್ನಡ ಸಂಘ ಹಾಗೂ  ಡಾ.ಪುನಿತ್‌ ರಾಜ್‍ಕುಮಾರ್ ಅಭಿಮಾನಿ ಬಳಗ ಮಂಗಳವಾರ  ಆಯೋಜಿಸಿದ್ದ   67ನೇ ಕರ್ನಾಟಕ  ರಾಜ್ಯೋತ್ಸವದ  ಅದ್ಧೂರಿ ಕನ್ನಡ ನುಡಿ ಸಂಭ್ರಮಕ್ಕೆ  ಆಕರ್ಷಕ ಜಾನಪದ ಕಲಾ ಪ್ರಕಾರ ಗಳು ಭವ್ಯ ಮೆರವಣಿಗೆಗೆ ಮೆರಗು ನೀಡಿತ್ತು . ಹಿರಿಯ ಸಾಹಿತಿ ಹನುಮಂತ ಅನಂತ ಪಾಟೀಲ್    ಅವರು ತಾಯಿ ಭುವನೇಶ್ವರಿ ದೇವಿಯ ಭವ್ಯ ಶೋಭಾ ಯಾತ್ರಾ  ಮೆರವಣಿಗೆಗೆ ಚಾಲನೆ ನೀಡಿದರು. ಈ ಮೆರವಣಿಗೆಯಲ್ಲಿ ಹೆಗ್ಗೂಡಿನ ಮಹಿಳೆಯರ ಡೊಳ್ಳು ಕುಣಿತ, ಚಿಕ್ಕಮಗಳೂರಿನ ಮಹಿಳೆಯರ ವೀರಗಾಸೆ ನೃತ್ಯ, …

Read More

ನವೆಂಬರ 6ರಂದು ಮಳಲಿ ಮಠದಲ್ಲಿ ಕಾರ್ತಿಕ ದೀಪೋತ್ಸವ ಮತ್ತು ಜನಜಾಗೃತಿ ಧರ್ಮ ಸಮಾರಂಭ|ದೀಪೋತ್ಸವದ ಅಂಗವಾಗಿ ಭಕ್ತರಿಂದ ಮಠದ ಸ್ವಚ್ಚತಾ ಅಭಿಯಾನ|Malalimatt

ನವೆಂಬರ್ 6 ರ ಭಾನುವಾರದಂದು ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕಿನ ಮಳಲಿ‌ಮಠ ಮಹಾಸಂಸ್ಥಾನದಲ್ಲಿ ಕಾರ್ತಿಕ ದೀಪೋತ್ಸವ ಮತ್ತು ಜನ ಜಾಗೃತಿ ಧರ್ಮ ಸಮಾರಂಭ ನಡೆಯಲಿದೆ ಎಂದು ಮಳಲಿಮಠದ ಡಾ.ಗುರುನಾಗಭೂಷಣ ಶಿವಾಚಾರ್ಯ ಮಹಾ ಸ್ವಾಮಿಜಿಗಳು ತಿಳಿಸಿದರು. ಈ ಸಂಧರ್ಭದಲ್ಲಿ ಮಾತನಾಡಿದ ಅವರು ಮಾನವ ಜೀವನದಲ್ಲಿ ಕತ್ತಲೆ ಬೆಳಕಿನಂತೆ ಸುಖ ದುಃಖಗಳು ಶಾಶ್ವತವಲ್ಲ. ಭೌತಿಕ ಬದುಕು ಸಮೃದ್ಧಗೊಂಡಂತೆ ಆಂತರಿಕ ಜೀವನ ಪರಿಶುದ್ಧಗೊಳ್ಳಲು ಆಧ್ಯಾತ್ಮದ ಬೆಳಕು ಮಾನವನಿಗೆ ಅನಿವಾರ್ಯವಾಗುತ್ತದೆ ಎಂದರು. ನವೆಂಬರ್ 06 ಭಾನುವಾರದಂದು ರಂದು ನಡೆಯುವ ಕಾರ್ತೀಕ ದೀಪೋತ್ಸವ ಹಾಗೂ…

Read More

ರಿಪ್ಪನ್‌ಪೇಟೆ : ಒಂಟಿ ಸಲಗನ ದಾಳಿಗೆ ಕಂಗಾಲಾದ ರೈತರು|Wild

ರಿಪ್ಪನ್‌ಪೇಟೆ : ಕೆರೆಹಳ್ಳಿ ಹೋಬಳಿ ವ್ಯಾಪ್ತಿಯ ಬೆಳ್ಳೂರು ಗ್ರಾಮ ಪಂಚಾಯ್ತಿಯ ಹಲವು ಗ್ರಾಮಗಳಲ್ಲಿ ಒಂಟಿ ಸಲಗನ ದಾಳಿಯಿಂದಾಗಿ ಭತ್ತ ಅಡಿಕೆ ತೋಟ ದ್ವಂಸಗೊಂಡಿದ್ದು ರೈತರನ್ನು ಕಂಗಾಲಾಗಿಸಿದೆ.   ಬೆಳ್ಳೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಗುಬ್ಬಿಗಾ ಗುಳಿಗುಳಿಶಂಕರದ ಅವಡೆ ಶಿವಪ್ಪ ಎಂಬುವರ ಭತ್ತದ ಗದ್ದೆ ಹಾಗೂ ಕಳಸೆ ಗಂಗಾಧರಗೌಡ ದೇವೇಂದ್ರಪ್ಪಗೌಡರ ಅಡಿಕೆ ತೋಟದಲ್ಲಿ ಬೃಹತ್ ಗಾತ್ರದ ಮರಗಳನ್ನು ದ್ವಂಸಗೊಳಿಸಿದ್ದು ರೈತರಲ್ಲಿ ಭಯ ಬೀತರನ್ನಾಗಿದೆ.  ಸಿರಿಗೆರೆ ಮತ್ತು ಮೂಗುಡ್ತಿ ವನ್ಯಜೀವಿ ವಿಭಾಗದ ಅರಣ್ಯ ವ್ಯಾಪ್ತಿಗೆ ಬರುವ ಕಳಸೆ ನರ‍್ಲಿಗೆ ಬೆಳ್ಳೊರು ಗುಬ್ಬಿಗಾ,ಗುಳುಗುಳಿ…

Read More

ಕೊನೆಗೂ ಬೋನಿಗೆ ಬಿದ್ದ ಗ್ರಾಮಸ್ಥರಲ್ಲಿ ಭಯ ಹುಟ್ಟಿಸಿದ್ದ ಚಿರತೆ : ನಿಟ್ಟುಸಿರು ಬಿಟ್ಟ ಜನತೆ|theleopard

ಗ್ರಾಮಸ್ಥರಲ್ಲಿ ಭಯ ಹುಟ್ಟಿಸಿದ್ದ ಚಿರತೆ ಅರಣ್ಯ ಇಲಾಖೆಯ ಬೋನಿಗೆ ಬಿದ್ದಿದೆ. ಶಿವಮೊಗ್ಗ ತಾಲೂಕಿನ ಕೊಮ್ಮನಾಳು ಕ್ಯಾತಿನಕೊಪ್ಪ ರಸ್ತೆಯ ಸುತ್ತಮುತ್ತಲಿನ ಜಮೀನುಗಳಲ್ಲಿ ಕಳೆದೊಂದು ತಿಂಗಳಿನಿಂದ ಓಡಾಡುತ್ತಿದ್ದ ಚಿರತೆಯೊಂದು, ಅರಣ್ಯ ಇಲಾಖೆಯಿಟ್ಟಿದ್ದ ಬೋನಿಗೆ ಕೊನೆಗೂ ಬಿದ್ದಿದೆ. ಕ್ಯಾತಿನಕೊಪ್ಪ ಗ್ರಾಮದ ಹೊರವಲಯದಲ್ಲಿ ಚಿರತೆ ಕಾಣಿಸಿಕೊಂಡಿತ್ತು. ಇದು ಗ್ರಾಮಸ್ಥರಲ್ಲಿ ಭಯ ಉಂಟು ಮಾಡಿತ್ತು. ಚಿರತೆ ಸೆರೆ ಹಿಡಿಯುವಂತೆ ಗ್ರಾಮಸ್ಥರು ಅರಣ್ಯ ಇಲಾಖೆಗೆ ಒತ್ತಾಯಿಸಿದ್ದರು. ಇತ್ತೀಚೆಗೆ ಚಿರತೆ ಸೆರೆಗೆ ಅರಣ್ಯ ಇಲಾಖೆ ಕ್ರಮಕೈಗೊಂಡಿತ್ತು. ಸೋಮವಾರ ಮುಂಜಾನೆ ಬೋನಿಗೆ ಚಿರತೆ ಬಿದ್ದಿದೆ. ಸ್ಥಳಕ್ಕೆ ಅರಣ್ಯ ಇಲಾಖೆಯ…

Read More

ಶಿವಮೊಗ್ಗ : ಬಿಹೆಚ್ ರಸ್ತೆಯಲ್ಲಿ ನಡೆದುಕೊಂಡು ಹೋಗುತಿದ್ದ ವ್ಯಕ್ತಿಯ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ – ಆಸ್ಪತ್ರೆಗೆ ದಾಖಲು|Shivamogga

ಹಲವಾರು ಗಲಭೆಯ ಬಳಿಕ ಶಾಂತವಾಗಿರುವ ಶಿವಮೊಗ್ಗದಲ್ಲಿ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿ ಮೇಲೆ ಹರಿತವಾದ ವಸ್ತುವಿನಿಂದ ದುಷ್ಕರ್ಮಿಗಳು ದಾಳಿ ಮಾಡಿದ್ದಾರೆ. ಶಿವಮೊಗ್ಗ ಬಸ್ ನಿಲ್ದಾಣದ ಸಮೀಪದ ರಾಯಲ್ ಆರ್ಕೇಡ್ ಹೋಟೆಲ್ ಬಳಿ ಭಾನುವಾರ ರಾತ್ರಿ ಘಟನೆ ನಡೆದಿತ್ತು. ಸದ್ಯ ಗಾಯಾಳು ಅಶೋಕ್​ ಪ್ರಭು ಎಂಬವರನ್ನು ಮೆಗ್ಗಾನ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಸುಮಾರು ನಾಲ್ಕು ಜನರ ಗುಂಪಿನಿಂದ ಈ ದಾಳಿ ನಡೆದಿದೆ. ದುಷ್ಕರ್ಮಿಗಳ ಗುಂಪು ಮೊದಲೇ ರಸ್ತೆಯಲ್ಲಿ ನಿಂತುಕೊಂಡಿತ್ತು. ಈ ವೇಳೆ ಅಶೋಕ್ ಪ್ರಭು…

Read More
Exit mobile version